ವಿಶ್ವದ ಅತಿ ಹಿರಿಯಜ್ಜಿ 123 ವರ್ಷದ ಟ್ಯಾಂಜಿಲ್ಯಾ ಇನ್ನಿಲ್ಲ

ಮನುಷ್ಯ ಅಬ್ಬಬ್ಬಾ ಎಂದರೆ ನೂರು ವರ್ಷ ಬದುಕುತ್ತಾನೆ. ಆದರೆ, ಅಲ್ಲಿ ಇಲ್ಲಿ 110, 120 ವರ್ಷ ಬದುಕಿದವರ ನಿದರ್ಶನಗಳೂ ಇವೆ. ಹಾಗೆ ಬದುಕಿದ ವಿಶ್ವದ ಹಿರಿಯರಲ್ಲಿ ರಷ್ಯಾದ ಟ್ಯಾಂಜಿಲ್ಯಾ ಸಹ ಒಬ್ಬರು. ಅವರು ವಯೋಸಹಜ ಅನಾರೋಗ್ಯದಿಂದ ಅಸುನೀಗಿದ್ದಾರೆ.

Worlds oldest lady 123 year old grand may dies at 123

ಮಾಸ್ಕೋ (ಅ.31): ವಿಶ್ವದ ಹಿರಿಯ ವ್ಯಕ್ತಿ ಎಂದೇ ನಂಬಲಾದ 123 ವರ್ಷದ ಮಹಿಳೆ ಟಾಂಜಿಲ್ಯಾ ಬಿಸೆಂಬೆಯೆವಾ ದಕ್ಷಿಣ ರಷ್ಯಾದಲ್ಲಿ ಮೃತಪಟ್ಟಿದ್ದಾರೆ. ಕುಟುಂಬಸ್ಥರು ಆಸ್ಟ್ರಾಖಾನ್‌ ಎಂಬಲ್ಲಿ ಬೆಸೆಂಬೆಯೆವಾ ಅಂತ್ಯಕ್ರಿಯೆ ನಡೆಸಿದ್ದಾರೆ. ಬೆಸೆಂಬೆಯೆವಾ 14 ಮಾರ್ಚ್ 1896ರಲ್ಲಿ, ಎರಡನೇ ತ್ಸಾರ್‌ ನಿಕೋಲಸ್‌ ರಾಜನ ಪಟ್ಟಾಭಿಷೇಕಕ್ಕೆ 2 ತಿಂಗಳ ಮುಂಚೆ ಜನಿಸಿದ್ದರು ಎನ್ನಲಾಗಿದೆ.

ಟಾಂಜಿಲ್ಯಾಗೆ 4 ಮಕ್ಕಳಿದ್ದು, 10 ಮೊಮ್ಮಕ್ಕಳು, 13 ಮರಿಮೊಮ್ಮಕ್ಕಳನ್ನು ಕಂಡಿದ್ದಾರೆ. ಇಬ್ಬರು ಗಿರಿಮೊಮ್ಮಕ್ಕಳೂ ಇದ್ದಾರೆ. ರಷ್ಯಾದ ವಿಶ್ವದಾಖಲೆ ಪುಸ್ತಕದಲ್ಲಿ 2016ರಲ್ಲಿಯೇ ಬೆಸೆಂಬೆಯೆವಾ ಅವರು 120 ವರ್ಷದ ಹಿರಿಯ ವ್ಯಕ್ತಿ ಎಂದು ದಾಖಲಾಗಿದ್ದರು.

ಭ್ರಷ್ಟರಿಗೆ ದುಸ್ವಪ್ನರಾಗಿದ್ದ ಎನ್. ವೆಂಕಟಾಚಲ ಇನ್ನಿಲ್ಲ

ಮಾರ್ಚ್ 14, 1896ರಲ್ಲಿ ಜನಿಸಿದ್ದ ಈ ಅಜ್ಜಿಯ ಸಾವಿನ ಬಗ್ಗೆ ಮಗ ಇಸ್ಲಾಮ್‌ಘಾಜಿ ರಷ್ಯಾ ಮಾಧ್ಯಮಕ್ಕೆ ಖಚಿತಪಡಿಸಿದ್ದಾರೆ. ಎಲ್ಲರ ಪ್ರೀತಿ ಪಾತ್ರಕ್ಕೆ ಪಾತ್ರರಾಗಿದ್ದ ಈ ಅಜ್ಜಿಯ ಧನಾತ್ಮಕ ಚಿಂತನೆಗಳೇ ಇವರ ದೀರ್ಘಾಯುಷ್ಯಕ್ಕೆ ಕಾರಣವೆಂದು ಮಗ ಹೇಳುತ್ತಾರೆ. ರಷ್ಯಾ ಕ್ರಾಂತಿಗೂ ಮುನ್ನ ಜನಿಸಿದ ಅ ಅಜ್ಜಿ ಅತ್ಯಂತ ಶ್ರಮ ಜೀವಿಯೂ ಹೌದು. ಇವರ ಕುಟುಂಬದ ರುದ್ರ ಭೂಮಿಯಲ್ಲಿಯೇ ಅಂತ್ಯ ಸಂಸ್ಕಾರ ನಡೆದಿದ್ದು, ಕುಟುಂಬದ ಎಲ್ಲ ಸದಸ್ಯರೂ ಪಾಲ್ಗೊಂಡಿದ್ದರು. 

ಕಳೆದ ಜನವರಿಯಲ್ಲಿ ಅಸುನೀಗಿದ 127 ವರ್ಷದ ರಷ್ಯಾದ ನಾನು ಶಾವೋವಾ ಇದುವರೆಗೆ ಜಗತ್ತಿನಲ್ಲಿ ಅತೀ ಬದುಕಿದ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

 

Latest Videos
Follow Us:
Download App:
  • android
  • ios