ಬೆಂಗಳೂರು (ಅ.30): ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ, ಮಾಜಿ ಲೋಕಾಯುಕ್ತರೂ ಆಗಿದ್ದ ನಂಜೇಗೌಡ ವೆಂಕಟಾಚಲ ಅವರು ನಗರದ ರಾಮಯ್ಯ ಆಸ್ಫತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿಸಿದ್ದಾರೆ. 

"

ತಾವು ವಿಚಾರಣೆ ನಡೆಸುತ್ತಿದ್ದ ಪ್ರತಿಯೊಂದೂ ಪ್ರಕರಣದಲ್ಲಿಯೂ ವಿಶೇಷ ರೀತಿ ಕ್ರಮ ಕೈಗೊಳ್ಳುತ್ತಿದ್ದ ವೆಂಕಟಾಚಲ ಅವರ ಕಾರ್ಯವೈಖರಿಯೇ ವಿಭಿನ್ನವಾಗಿರುತ್ತಿತ್ತು. ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ ಇವರು ತಪ್ಪಿತಸ್ಥರನ್ನು ರೆಡ್ ಹ್ಯಾಂಡ್ ಆಗಿಯೇ ಹಿಡಿದು, ಪಾಠ ಕಲಿಸುತ್ತಿದ್ದರು. ಲೋಕಾಯುಕ್ತಕ್ಕೆ ಬರುತ್ತಿದ್ದ 20-25 ಪ್ರಕರಣಗಳ ಸಂಖ್ಯೆ ಇವರ ಕಾಲದಲ್ಲಿ 200-250ಕ್ಕೆ ಹೆಚ್ಚಾದವು. ತಮ್ಮ ಅಧಿಕಾರವಧಿಯಲ್ಲಿ ರಾಜಕಾರಣಿಗಳ ಭ್ರಷ್ಟ ಪ್ರಕರಣಗಳನ್ನು ಬಯಲುಗೊಳಿಸಿದ್ದರಿಂದ ಸಹಜವಾಗಿಯೇ ಇವರು ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. 

ಕನ್ನಡದಲ್ಲಿ ಲೋಕಾಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವರಲ್ಲಿ ಇವರೂ ಒಬ್ಬರು. ಕೋಲಾರದ ಮುಳಬಾಗಿಲಿನ ಮಿಟ್ಟೂರು ಗ್ರಾಮದಲ್ಲಿ ಜನಿಸಿದ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದ್ದರು. ನಂತರ ಬೆಂಗಳೂರಿನಲ್ಲಿ ಬಿಎಸ್ಸಿ ಹಾಗೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಬಿ ಪದವಿ ಪಡೆದಿದ್ದರು.

ವಯಾಲಿಕಾವಲ್ ಮನೆಯಲ್ಲಿ ವೆಂಕಟಚಲ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ, ಎಂದು ಕುಟುಂಬದ ಮೂಲಗಳು ತಿಳಿಸಿವೆ.  ಪುತ್ರರೊಬ್ಬರ ಅಮೆರಿಕಕ್ಕೆ ತೆರಳಿದ್ದು, ಅವರು ಆಗಮಿಸಿದ ನಂತರ ಅಂತಿಮ ಸಂಸ್ಕಾರದ ಬಗ್ಗೆ ನಿರ್ಧರಿಸಲಾಗುವುದೆಂದು ಕುಟುಂಬಸ್ಥರು ಹೇಳಿದ್ದಾರೆ. 

ವೆಂಕಟಾಚಲ ನಿಧನಕ್ಕೆ ಗಣ್ಯರ ಸಂತಾಪ

ಸಂಸದ ರಾಜೀವ್ ಚಂದ್ರಶೇಖರ್ ಸಂತಾಪ:

"

ಸಿದ್ದರಾಮಯ್ಯ ಕಂಬನಿ:
'ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರ ನಿಧನದ ಸುದ್ದಿ‌ ಕೇಳಿ ನೋವಾಯಿತು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು,' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವೆಂಕಟಾಚಲ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದೇವೇಗೌಡ ಸಂತಾಪ: