ಅಮೆರಿಕದಲ್ಲಿ ಸಾಂಸ್ಕೃತಿಕ ಉತ್ಸವ: ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು: ರವಿಶಂಕರ್‌ ಗುರೂಜಿ

'ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ', 17,000 ಕಲಾವಿದರನ್ನು ಒಳಗೊಂಡ  'ಸಾಂಸ್ಕೃತಿಕ ಒಲಿಂಪಿಕ್ಸ್'ನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ವಹಿಸಲಿದ್ದಾರೆ.

world culture festival 2023 ravishankar guruji washington dc gvd

ಬೆಂಗಳೂರು (ಅ.01): 'ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ', 17,000 ಕಲಾವಿದರನ್ನು ಒಳಗೊಂಡ  'ಸಾಂಸ್ಕೃತಿಕ ಒಲಿಂಪಿಕ್ಸ್'ನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ವಹಿಸಲಿದ್ದಾರೆ. ಈ ವಾರದ ಕೊನೆಯಂದು ಇಡೀ ಜಗತ್ತಿನ ಕಣ್ಣುಗಳು ವಾಷಿಂಗ್ಟನ್ ಡಿಸಿಯ ಮೇಲೆ ಇರಲಿದೆ ಮತ್ತು ಅದು ಒಳ್ಳೆಯ ಕಾರಣಕ್ಕಾಗಿ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1,2023 ಯವರೆಗೆ ಯುಎಸ್ ನ ರಾಜಧಾನಿಯು ಅವಿಸ್ಮರಣೇಯವಾದಂತಹ ವೈವಿಧ್ಯತೆಯ ಹಾಗೂ ಏಕತೆಯ ಉತ್ಸವಕ್ಕೆ ಆತಿಥ್ಯೇಯವನ್ನು ವಹಿಸಲಿದೆ. ಇದು ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಾಂಸ್ಕೃತಿಕ ಉತ್ಸವದ ನಾಲ್ಕನೆಯ ಆವೃತ್ತಿಯಾಗಲಿದೆ. ವಿಶ್ವ ವಿಖ್ಯಾತ ಯುಎಸ್ ಕ್ಯಾಪಿಟಾಲ್ ನ ಹಿನ್ನಲೆಯನ್ನು ಹೊಂದಿರುವ ವೇದಿಕೆಯೇ ಒಃದು ಫುಟ್ಬಾಲ್ ನ ಆಟದ ಮೈದಾನದಷ್ಟಿದೆ. 

ಈ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದು, ಎಲ್ಲರೂ ನ್ಯಾಷನಲ್ ಮಾಲ್ನಲ್ಲಿ ಸೇರಲಿದ್ದಾರೆ. ಅರ್ಧ ಮಿಲಿಯನ್ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಈ ಉತ್ಸವವು ವ್ಯಾಪಕವಾದ ಜಾಗತಿಕ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು  ನಡೆಯಲಿವೆ: ಪಾರಂಪರಿಕ ಚೀನಾದ ಸಾಂಸ್ಕೃತಿಕ ಪ್ರದರ್ಶನ. ಇದರಲ್ಲಿ 1,000 ಹಾಡುಗಾರರು ಮತ್ತು ನರ್ತಕರು ಭಾಗವಹಿಸಲಿದ್ದಾರೆ.   

ಜೆಡಿಎಸ್- ಬಿಜೆಪಿ ಮೈತ್ರಿ ಪವಿತ್ರವೋ ಅಪವಿತ್ರವೋ ಜನರೇ ನಿರ್ಧರಿಸಲಿದ್ದಾರೆ: ಸಂಸದ ಡಿ.ಕೆ.ಸುರೇಶ್

7,000 ನರ್ತಕರನ್ನೊಳಗೊಂಡ ಗರ್ಭನೃತ್ಯ ವೈಭವ: ನೇರ ಸ್ವರಮೇಳದ ಸಹಿತ 700 ಭಾರತೀಯ ಶಾಸ್ತ್ರೀಯ ನರ್ತಕರು.  ಹಿಪ್ ಹಾಪ್ ನ 50ನೆಯ ವರ್ಷದ ಸಂಭ್ರಮ, ಕುರ್ಟಿಸ್ ಬ್ಲೋ, ಎಸ್ ಹೆಚ್ ಎ- ರಾಕ್, ಸೀಕ್ವೆನ್ಸ್ ಗರ್ಲ್ಸ್, ಡಿಜೆಕೂಲ್ ಮತ್ತಿನ್ನಿತರ ಹಿಪ್ ಹಾಪ್ ನ ಖ್ಯಾತ ನಾಮರು. ಇವರೊಂದಿಗೆ , ಕಿಂಗ್ ಚಾರ್ಲ್ಸ್ ಹಾಗೂ ಕೆಲ್ಲಿ ಫಾರ್ಮನ್ ರವರಿಂದ ಸಂಯೋಜಿಸಲ್ಪಟ್ಟ ನೃತ್ಯ ಸಂಯೋಜನೆಯಲ್ಲಿ 100 ಬ್ರೇಕ್ ಡಾನ್ಸ್ ನ ನರ್ತಕರು ತಮ್ಮ ಚೊಚ್ಚಲ ಪ್ರದರ್ಶನವನ್ನು ನೀಡಲಿದ್ದಾರೆ. ತಮ್ಮ ಪಾರಂಪರಿಕ ನೃತ್ಯವಾದ ಹೋಪಾಕ್ ನೃತ್ಯ ಪ್ರದರ್ಶನವನ್ನು ನೀಡಲಿರುವ 1000 ಯೂಕ್ರೇನ್ ನ ನರ್ತಕರು. ಗ್ರಾಮಿ ಪ್ರಶಸ್ತಿ ವಿಜೇತರಾದ ಮಿಕ್ಕಿ ಫ್ರೀ ಯವಲ ನೇತೃತ್ವದಲ್ಲಿ 1000 ಗಿಟಾರ್ ವಾದ್ಯ. ಬಾಬ್ ಮಾರ್ಲೆಯವರ ಖ್ಯಾತ " ಒನ್ ಲವ್" ನ ಮರುಸೃಷ್ಟಿ, ಅವರ ಮೊಮ್ಮಗನಾದ ಸ್ಕಿಪ್ ಮಾರ್ಲಿನ್ ರವರಿಂದ.        

        

ನ್ಯಾಷನಲ್ ಮಾಲ್ನಲ್ಲಿ , 1963ಯಲ್ಲಿ, ಮಾರ್ಟಿನ್ ಲೂಥರ್ ಕಿಂಗ್ ತಮ್ಮ ಖ್ಯಾತ " ಐ ಹಾವ್ ಎ ಡ್ರೀಮ್" ಭಾಷಣವನ್ನು ನೀಡಿ, ಜಗತ್ತಿಗೆ ಸಮನ್ವಯತೆಯ, ಏಕತೆಯ ಸಂದೇಶವನ್ನು ಸಾರಿದರು. ಅದಕ್ಕಿಂತಲೂ ನೂರು ವರ್ಷಗಳ ಹಿಂದೆ ಚಿಕಾಗೋವಿನಲ್ಲಿ ನಡೆದ ಪ್ರಥಮ ವಿಶ್ವ ಧಾರ್ಮಿಕ ಸಂಸತ್ತಿನಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಮಿಂಚಿನ ಭಾಷಣವನ್ನು ನೀಡಿ, ಸಭಿಕರನ್ನು ತಮ್ಮ ತುದಿಯ ಮೇಲೆ ನಿಲ್ಲುವಂತೆ ಮಾಡಿದರು. ಜಗತ್ತಿನ ದೊಡ್ಡ ಧರ್ಮಗಳ ಪ್ರತಿನಿಧಿಗಳನ್ನು ಸಹೋದರ, ಸಹೋದರಿಯರೆ ಎಂದು ಕರೆದು, ಧಾರ್ಮಿಕ ದ್ವಂದ್ವತೆಯನ್ನು, ಅಸಹಿಷ್ಣುತೆಯನ್ನು ಕೊನೆಗಾಣಿಸಬೇಕೆಂಬ ಕರೆಯನ್ನು ನೀಡಿದರು.                            

 ಸೆಪ್ಟೆಂಬರ್ 29, 2023 ಯಂದು ನ್ಯಾಪನಲ್ ಮಾಲ್ನಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರರು " ಒಂದೇ ಜಾಗತಿಕ ಕುಟುಂಬ" ದ ಫಲಕದಡಿ ಎಲ್ಲಾ ಗಡಿಗಳ, ಧರ್ಮಗಳ,  ಪಂಥಗಳ, 180 ದೇಶಗಳ  ಜನರನ್ನು ಒಗ್ಗೂಡಿಸಿ, ಎಲ್ಲರ ನಡುವೆಯೂ ಇರುವ ವಿಭನೆಗಳನ್ನು ಜೋಡಿಸುವ  ಸೇತುವೆಯಾಗಲಿದ್ದಾರೆ. ಆಹಾರದಂತಹ ಒಗ್ಗೂಡಿಸುವ ವಿಷಯ ಮತ್ತೊಂದಿಲ್ಲ. ಈ ಉತ್ಸವದಲ್ಲಿ ಜಗತ್ತಿನ ಎಲ್ಲೆಡೆಯ ಆಹಾರಗಳ ಮೇಳವೂ ನಡೆಯಲಿದೆ. ಈ ಉತ್ಸವದ ವಿಶೇಷತೆಯೆಂದರೆ, ಚಿಗುರುತ್ತಿರುವ ಕಲಾವಿದರಿಗೆ, ಪ್ರದರ್ಶಕರಿಗೆ, ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುತ್ತಿರುವುದು.    

ಈ ಉತ್ಸವದಲ್ಲಿ ಭಾಗವಹಿಸಲಿರುವ ಗಣ್ಯ ಭಾಷಣಕಾರರು: ವಿಶ್ವ ಸಂಸ್ಥೆಯ 8ನೆಯ ಸೆಕ್ರೆಟರಿ ಜೆನರಲ್ ಆದ  ಹೆಚ್. ಇ. ಬನ್ ಕೀ ಮೂನ್, ಹೆಚ್. ಇ. ಎಸ್. ಜಯಶಂಕರ್, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರು, ಅಮೆರಿಕ ರಿಕದ ಸರ್ಜನ್ ಜೆನರಲ್ ಡಾ. ವಿವೇಕ್ ಮೂರ್ತಿ, ಯುಎಸ್ ನ ಸಂಸದರಾದ ಹಾನ್. ರಿಕ್ ಸ್ಕಾಟ್, ಹಾನ್. ನಾನ್ಸಿ ಪೆಲೋಸಿ, ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್, ಇತರ ಮಾಜಿ ಹಾಗೂ ಹಾಲಿ ರಾಜ್ಯಗಳ ನಾಯಕರು, ಇತರ ನಾಯಕರು. ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ", 17,000 ಕಲಾವಿದರನ್ನು ಒಳಗೊಂಡ  "ಸಾಂಸ್ಕೃತಿಕ ಒಲಿಂಪಿಕ್ಸ್" ನ ಮುಂದಾಳತ್ವವನ್ನು ಗುರುದೇವ್ ಶ್ರೀ ಶ್ರೀ ರವಿಶಂಕರ್ ವಹಿಸಲಿದ್ದಾರೆ.

ಈ ವಾರದ ಕೊನೆಯಂದು ಇಡೀ ಜಗತ್ತಿನ ಕಣ್ಣುಗಳು ವಾಷಿಂಗ್ಟನ್ ಡಿ ಸಿಯ ಮೇಲೆ ಇರಲಿಲ್ಲ ದೆ ಮತ್ತು ಅದು ಒಳ್ಳೆಯ ಕಾರಣಕ್ಕಾಗಿ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 1,2023 ಯವರೆಗೆ ಯುಎಸ್ ನ ರಾಜಧಾನಿಯು ಅವಿಸ್ಮರಣೇಯವಾದಂತಹ ವೈವಿಧ್ಯತೆಯ ಹಾಗೂ ಏಕತೆಯ ಉತ್ಸವಕ್ಕೆ ಆತಿಥ್ಯೇಯವನ್ನು ವಹಿಸಲಿದೆ. ಇದು ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಾಂಸ್ಕೃತಿಕ ಉತ್ಸವದ ನಾಲ್ಕನೆಯ ಆವೃತ್ತಿಯಾಗಲಿದೆ.                        

ವಿಶ್ವ ವಿಖ್ಯಾತ ಯುಎಸ್ ಕ್ಯಾಪಿಟಾಲ್ ನ ಹಿನ್ನಲೆಯನ್ನು ಹೊಂದಿರುವ ವೇದಿಕೆಯೇ ಒಃದು ಫುಟ್ಬಾಲ್ ನ ಆಟದ ಮೈದಾನದಷ್ಟಿದೆ. ಈ ಉತ್ಸವದಲ್ಲಿ 17,000 ಕಲಾವಿದರು, ಅನೇಕ ರಾಜ್ಯಗಳ ಮುಖ್ಯಸ್ಥರು, 100ಕ್ಕಿಂತಲೂ ಹೆಚ್ಚು ದೇಶಗಳ ಚಿಂತಕರು ಭಾಗವಹಿಸಲಿದ್ದು, ಎಲ್ಲರೂ ನ್ಯಾಷನಲ್ ಮಾಲ್ನಲ್ಲಿ ಸೇರಲಿದ್ದಾರೆ. ಅರ್ಧ ಮಿಲಿಯನ್ ಜನರು ಈ ಉತ್ಸವದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದರಿಂದಾಗಿ ಈ ಉತ್ಸವವು ವ್ಯಾಪಕವಾದ ಜಾಗತಿಕ ಉತ್ಸವವಾಗಲಿದೆ. ಈ ಉತ್ಸವದಲ್ಲಿ 50 ಪ್ರದರ್ಶನಗಳು  ನಡೆಯಲಿವೆ: * ಪಾರಂಪರಿಕ ಚೀನಾದ ಸಾಂಸ್ಕೃತಿಕ ಪ್ರದರ್ಶನ. ಇದರಲ್ಲಿ 1,000 ಹಾಡುಗಾರರು ಮತ್ತು ನರ್ತಕರು ಭಾಗವಹಿಸಲಿದ್ದಾರೆ.  

ಆತ್ಮೀಯ ಸಂಪಾದಕರೇ, ಆರ್ಟ್ ಆಫ್ ಲಿವಿಂಗ್ ಆಯೋಜಿಸಿರುವ ೪ನೇ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಳ್ಳಲು ಇಂದು ವಾಷಿಂಗ್ಟನ್ ಡಿಸಿಯ ನ್ಯಾಷನಲ್ ಮಾಲ್ ನಲ್ಲಿ ಅಭೂತಪೂರ್ವವಾಗಿ ದಾಖಲೆಯ 1 ಮಿಲಿಯನ್ ಜನರು ಒಟ್ಟು ಸೇರಿದರು ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ. 180 ದೇಶಗಳ ಜನರು ಈ ಜಗತ್ತಿನಲ್ಲಿ ಮಾನವೀಯತೆ, ಶಾಂತಿ ಮತ್ತು ಸಂಸ್ಕೃತಿಗಳ ಅತಿ ದೊಡ್ಡ ಹಬ್ಬಕ್ಕಾಗಿ ಸಂಗಮವಾದುದು, ನಿಜಕ್ಕೂ ವಿಶ್ವ ವಿವಿಧ ಸಂಸ್ಕೃತಿಗಳು ಒಂದು ಹೂಗುಚ್ಛವನ್ನು ಹೋಲುತ್ತಿತ್ತು.

ಈ ಸಮಾರಂಭದಲ್ಲಿ ಜಾಗತಿಕ ಗಣ್ಯರಾದ, ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ, ಎಚ್.ಇ. ಬಾನ್ ಕಿ-ಮೂನ್; ಡಿಸಿ ಯ ಮೇಯರ್ ಮುರಿಯಲ್ ಬೌಸರ್; ಭಾರತದ ವಿದೇಶಾಂಗ ಸಚಿವ ಶ್ರೀ ಎಸ್ ಜೈಶಂಕರ್; ಬಿಷಪ್ ಎಮೆರಿಟಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಚಾನ್ಸೆಲರ್ ಎಮೆರಿಟಸ್; ಇವರ ಜೊತೆಗೆ ಅಮೇರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ ನಂತಹ ಮನಮೋಹಕ ಸಂಗೀತ ಮತ್ತು ಮನಮೋಹಕ ಪ್ರದರ್ಶನಗಳನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು ಇತರ 200 ಕಲಾವಿದರು ನೀಡಿದರು. 1000 ಜನರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು  ಪಂಚಭೂತಂ ಎಂಬ ಪ್ರದರ್ಶನವು ನಡೆಯಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದನವು ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯದಿಂದ ಪ್ರದರ್ಶನಗಳು ನಡೆದವು.

ವಸುದೈವ ಕುಟುಂಬಕಮ್ (ಇಡೀ ವಿಶ್ವವೇ ಒಂದು ಕುಟುಂಬ): ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಾಂಸ್ಕೃತಿಕ ಉತ್ಸವ 2023 ರಲ್ಲಿ ಸಂಗೀತ, ನೃತ್ಯಗಳ ಮೂಲಕ ಏಕತೆ, ಸಾಮರಸ್ಯದ ಜಾಗತಿಕ ಸಂದೇಶವನ್ನು ಕಳುಹಿಸುತ್ತಿದೆ

1ಮಿಲಿಯನ್ ಜನರು ಈ ಭವ್ಯವಾದ ಸಾಂಸ್ಕೃತಿಕ ಉತ್ಸವದ ಸಂಭ್ರಮದಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಸೆಪ್ಟೆಂಬರ್ 29, 2023: ವಾಷಿಂಗ್ಟನ್ ಡಿಸಿ ಯ ಪ್ರತಿಷ್ಠಿತ ನ್ಯಾಷನಲ್ ಮಾಲ್, ಅಭೂತಪೂರ್ವವಾಗಿ ದಾಖಲೆಯ 1 ಮಿಲಿಯನ್ ಜನರು  ಆರ್ಟ್ ಆಫ್ ಲಿವಿಂಗ್ ನ ವಿಶ್ವ ಸಾಂಸ್ಕೃತಿಕ ಭವ್ಯ ಉತ್ಸವದಲ್ಲಿ ಭಾಗಿಯಾಗಿ ಅದ್ಭುತಕ್ಕೆ ಸಾಕ್ಷಿಯಾಗಿದ್ದಾರೆ. 180 ದೇಶಗಳಿಂದ ಜನರು ಈ ಜಗತ್ತಿನಲ್ಲಿ ಮಾನವೀಯತೆ, ಶಾಂತಿ ಮತ್ತು ಸಂಸ್ಕೃತಿಗಳ ಅತಿ ದೊಡ್ಡ ಹಬ್ಬಕ್ಕಾಗಿ ಸಂಗಮವಾದುದು, ನಿಜಕ್ಕೂ ವಿಶ್ವ  ವಿವಿಧ ಸಂಸ್ಕೃತಿಗಳು ಒಂದು ಹೂಗುಚ್ಛವನ್ನು ಹೋಲುತ್ತಿತ್ತು. ಕಾರ್ಯಕ್ರಮದಲ್ಲಿ ಜಾಗತಿಕ ಗಣ್ಯರು, ರೋಮಾಂಚನಗೊಳಿಸುವ ಸಂಗೀತ ಮತ್ತು ವರ್ಣರಂಜಿತ ನೃತ್ಯ ಪ್ರದರ್ಶನಗಳನ್ನು ಗ್ರ್ಯಾಮಿ ಪ್ರಶಸ್ತಿ ವಿಜೇತರು ಮತ್ತು ಇತರ ಹೆಸರಾಂತ ಕಲಾವಿದರು – ವಸುದೈವ ಕುಟುಂಬಕಮ್ (ಇಡೀ ವಿಶ್ವವೇ ಒಂದು ಕುಟುಂಬ) ಸಂದೇಶದೊಂದಿಗೆ ಒಂದುಗೂಡಿದ್ದರು. 

ಜಾಗತಿಕ ಮಾನವತಾವಾದಿ ಮತ್ತು ಶಾಂತಿದೂತರಾದ, ದಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಮಾತನಾಡಿ “ನಮ್ಮ ವೈವಿಧ್ಯತೆಯನ್ನು ಆಚರಿಸಲು ಇದು ಒಂದು ಸುಂದರ ಸಂದರ್ಭವಾಗಿದೆ. ನಮ್ಮ ಜಗತ್ತು ತುಂಬಾ ವೈವಿಧ್ಯಮಯವಾಗಿದೆ, ಆದರೂ ನಮ್ಮ ಮಾನವೀಯ ಮೌಲ್ಯಗಳಲ್ಲಿ ಏಕತೆ ಇದೆ. ಇಂದು, ಈ ಸಂದರ್ಭದಲ್ಲಿ, ಸಮಾಜದಲ್ಲಿ ಹೆಚ್ಚಿನ ಸಂತೋಷವನ್ನು ತರಲು ನಾವು ಬದ್ಧರಾಗೋಣ. ಎಲ್ಲರ ಮುಖದಲ್ಲೂ ನಗು ಮೂಡಿಸೋಣ. ಅದು ಮಾನವೀಯತೆ. ಅದರಿಂದಲೇ ನಾವೆಲ್ಲರೂ ಮಾಡಲ್ಪಟ್ಟಿರುವುದು. ಜ್ಞಾನದ ಬೆಂಬಲವಿಲ್ಲದಿದ್ದರೆ ಯಾವುದೇ ಆಚರಣೆಯು ಸತ್ವವನ್ನು ಹೊಂದಿರುವುದಿಲ್ಲ ಮತ್ತು ಆ ಜ್ಞಾನವು ನಮ್ಮೆಲ್ಲರೊಳಗಿದೆ. ನಾವೆಲ್ಲರೂ ವಿಭಿನ್ನವಾಗಿದ್ದರೂ,ನಾವೆಲ್ಲರೂ ಒಂದೇ ಎಂದು ಗುರುತಿಸುವುದು ಜಾಣ್ಮೆಯಾಗಿದೆ. ಮತ್ತೊಮ್ಮೆ ಎಲ್ಲರಿಗೂ ಹೇಳುತ್ತೇವೆ - ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸೇರಿದವರು. ನಾವೆಲ್ಲರೂ ವಿಶ್ವ ಕುಟುಂಬಕ್ಕೆ ಸೇರಿದವರು. ನಮ್ಮ ಜೀವನವನ್ನು ಸಂಭ್ರಮಿಸೋಣ. ಸವಾಲುಗಳನ್ನು ದಿಟ್ಟತನದಂದ ಸ್ವೀಕರಿಸಿ ಎದುರಿಸೋಣ ಮತ್ತು ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕನಸನ್ನು ಕಾಣೋಣ.”

ಗ್ರ್ಯಾಮಿ ಪ್ರಶಸ್ತಿ ವಿಜೇತೆ ಚಂದ್ರಿಕಾ ಟಂಡನ್ ಮತ್ತು 200 ಕಲಾವಿದರಿಂದ ಅಮೇರಿಕಾ ದಿ ಬ್ಯೂಟಿಫುಲ್ ಮತ್ತು ವಂದೇ ಮಾತರಂ ಗಾಯನ ಮಾಡಿದರು. 1000 ಜನರನ್ನು ಒಳಗೊಂಡ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಕಛೇರಿಯು  ಪಂಚಭೂತಂ ಎಂಬ ಪ್ರದರ್ಶನವು ನಡೆಯಿತು. ಗ್ರ್ಯಾಮಿ ಪ್ರಶಸ್ತಿ ವಿಜೇತ ಮಿಕ್ಕಿ ಫ್ರೀ ಅವರ ನೇತೃತ್ವದಲ್ಲಿ 1000 ಗಿಟಾರ್ ವಾದನವು ನಡೆಯಿತು. ಆಫ್ರಿಕಾ, ಜಪಾನ್ ಮತ್ತು ಮಧ್ಯಪ್ರಾಚ್ಯದಿಂದ ಪ್ರದರ್ಶನಗಳು ನಡೆದವು. ಅಂತಿಮವಾಗಿ, 'ಒನ್ ಲವ್’ ಆಚರಣೆಯೊಂದಿಗೆ, ಸ್ಕಿಪ್ ಮಾರ್ಲೆಯವರ ರೆಗ್ಗೀ ರಿದಮ್ಸ್ ಪ್ರದರ್ಶನದೊಂದಿಗೆ ಮೊದಲ ದಿನದ ಕಾರ್ಯಕ್ರಮವು ಮುಕ್ತಾಯಗೊಂಡಿತು. 
 
“ನಾವೆಲ್ಲರೂ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ನಮ್ಮ ಭೂಮಿಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಸವಾಲುಗಳನ್ನು ನಾವು ಎದುರಿಸುವುದು ಸಹಜ. ನೈಸರ್ಗಿಕ ವಿಕೋಪಗಳಾಗಲಿ, ಮಾನವ ನಿರ್ಮಿತವಾದವುಗಳಾಗಲಿ, ಘರ್ಷಣೆಗಳಾಗಲಿ ಅಥವಾ ಅಡೆತಡೆಗಳಾಗಲಿ, ಪರಸ್ಪರ ಅವಲಂಬಿತ ಜಗತ್ತಿನಲ್ಲಿ, ನಾವು ಯಾವಾಗಲೂ ಒಬ್ಬರಿಗೊಬ್ಬರು ಇರುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರ್ಟ್ ಆಫ್ ಲಿವಿಂಗ್ ಒಂದು ಸ್ಪೂರ್ತಿದಾಯಕ ಉದಾಹರಣೆಯಾಗಿದೆ ಮತ್ತು ಉಕ್ರೇನ್ ಸಂಘರ್ಷದ ಸಂದರ್ಭದಲ್ಲಿ ಅವರು ಇತ್ತೀಚೆಗೆ ಬೀರಿದ ಪ್ರಭಾವವನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಇಂದು, ಅವರ ಸಂದೇಶ, ನಿಮ್ಮ ಸಂದೇಶ, ನಮ್ಮ ಸಂದೇಶವು ಕಾಳಜಿ, ಹಂಚಿಕೊಳ್ಳುವಿಕೆ, ಔದಾರ್ಯ, ತಿಳುವಳಿಕೆಯ ಸದ್ಭಾವನೆ ಮತ್ತು ಸಹಕಾರವಾಗಿರಬೇಕು. ಇದುವೇ ನಮ್ಮೆಲ್ಲರನ್ನೂ ಇಲ್ಲಿ ಒಟ್ಟುಗೂಡಿಸಿರುವುದು” ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ವ್ಯಕ್ತಪಡಿಸಿದರು.

ವಿಶ್ವ ಸಾಂಸ್ಕೃತಿಕ ಉತ್ಸವದ ಮೊದಲ ದಿನದಂದು, ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಹೆಚ್.ಇ. ಬಾನ್ ಕಿ-ಮೂನ್; ಡಿಸಿಯ ಮೇಯರ್ ಮುರಿಯಲ್ ಬೌಸರ್; ಮಿಚಿಗನ್ ಕಾಂಗ್ರೆಸಿಗ ಶ್ರೀ ಥಾನೆದರ್; ಜಪಾನಿನ ಶಿಕ್ಷಣ, ಸಂಸ್ಕೃತಿ, ಕ್ರೀಡೆ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಮಾಜಿ ಸಚಿವ, ಸಂಸದ ಶ್ರೀ ಹಕುಬುನ್ ಶಿಮೊಮುರಾ; ಯುಎನ್‌ಇಪಿಯ ಮಾಜಿ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಯುಎನ್‌ಇಪಿಯ ಕಾರ್ಯನಿರ್ವಾಹಕ ನಿರ್ದೇಶಕ ಎರಿಕ್ ಸೋಲ್‌ಹೈಮ್, ಹಾಗೆಯೇ ಮಾಜಿ ಅಂತಾರಾಷ್ಟ್ರೀಯ ಅಭಿವೃದ್ಧಿ ನಾರ್ವೆ ಸಚಿವರು ಮತ್ತು ಇತರ ಜಾಗತಿಕ ಗಣ್ಯರು, ಅನೇಕ ಜಾಗತಿಕ ಸವಾಲುಗಳನ್ನು ಎದುರಿಸುತ್ತಿರುವ ಸಂಘರ್ಷದ ಜಗತ್ತಿನಲ್ಲಿ ಏಕತೆ, ಶಾಂತಿ ಮತ್ತು ಸಾಮರಸ್ಯದ ಸಹಬಾಳ್ವೆಗಾಗಿ ತಮ್ಮ ಸಾಮಾನ್ಯ ದೃಷ್ಟಿಯನ್ನು ಹಂಚಿಕೊಂಡರು. 

ದಿ ರೆವರೆಂಡ್ ಬಿಷಪ್ ಎಮೆರಿಟಸ್ ಮಾರ್ಸೆಲೊ ಸ್ಯಾಂಚೆಜ್ ಸೊರೊಂಡೋ ಮೂಲಕ ಪೋಪ್ ಅವರು, ಪಾಂಟಿಫಿಕಲ್ ಅಕಾಡೆಮಿ ಆಫ್ ಸೈನ್ಸಸ್‌ನ ಚಾನ್ಸೆಲರ್ ಎಮೆರಿಟಸ್; ಹೋಲಿ ಸೀ, ಈ ಸಂದರ್ಭದಲ್ಲಿ ಗೌರವಾನ್ವಿತ ಸಂದೇಶವನ್ನು ಹೀಗೆಂದು ಹಂಚಿಕೊಂಡರು, “ವಿಶ್ವ ಶಾಂತಿಯನ್ನು ಹೊಂದಲು, ನಮ್ಮಲ್ಲಿ ಆಂತರಿಕ ಶಾಂತಿಯಿರಬೇಕು. ಶಾಂತಿಯನ್ನು ಸಂವಹನ ಮಾಡಲು, ನಾವು ಶಾಂತಿಯಿಂದ ಬದುಕಬೇಕು, ಮತ್ತು ಶಾಂತಿಯಿಂದ ಬದುಕಲು, ನಮಗೆ ಆರ್ಟ್ ಆಫ್ ಲಿವಿಂಗ್ ಅಗತ್ಯವಿದೆ. ಶಾಂತಿಯಿಂದ ಬದುಕುವ ಕಲೆಯನ್ನು ಹೊಂದಲು, ನಾವು ದೇವರೊಂದಿಗೆ ಸಂವಹನವನ್ನು ಹೊಂದಿರಬೇಕು. ದೇವರು ಮಾನವನಿಗೆ ಶತ್ರುವಲ್ಲ. ದೇವರು ಒಬ್ಬ ಸ್ನೇಹಿತ, ದೇವರು ಅಂದರೆ ಪ್ರೀತಿ. ದೇವರನ್ನು ಹೊಂದಲು, ನಾವು ಧ್ಯಾನಕ್ಕೆ, ಪ್ರಾರ್ಥನೆಗೆ ಹಿಂತಿರುಗಬೇಕಾಗಿದೆ. ನಾವು ನಮ್ಮ ಮೂಲಕ್ಕೆ ಹಿಂತಿರುಗಬೇಕಾಗಿದೆ. ಆದ್ದರಿಂದ, ಈ ಸೂಕ್ಷ್ಮ ಕ್ಷಣದಲ್ಲಿ, ನಾವು ದೇವರನ್ನು ಪ್ರಾರ್ಥಿಸಬೇಕಾಗಿದೆ. ಪೋಪ್ ಫ್ರಾನ್ಸಿಸ್ ಅವರ ಹೆಸರಿನಲ್ಲಿ ನಾವು, ಎಲ್ಲಾ ಮಾನವರ ಭ್ರಾತೃತ್ವದಲ್ಲಿ, ನಾನು ನಿಮ್ಮನ್ನು ಆಶೀರ್ವದಿಸುತ್ತೇನೆ ಮತ್ತು ನಾನು ಈ ದೊಡ್ಡ ಸಭೆಯನ್ನು ಆಶೀರ್ವದಿಸುತ್ತೇನೆ ಮತ್ತು ಈ ಜೀವನ ಕ್ರಮವು ನಿಜವಾಗಿಯೂ ನಮ್ಮ ಮಾನವೀಯತೆಯ ಭವಿಷ್ಯವಾಗಿರಲಿದೆ ಎಂದು ನಾನು ಭಾವಿಸುತ್ತೇನೆ."

ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರಿಂದ ಪ್ರೇರಿತರಾಗಿ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಆಯೋಜಿಸಿದ ವಿಶ್ವ ಸಾಂಸ್ಕೃತಿಕ ಉತ್ಸವವು ಗಡಿಗಳನ್ನು ಮೀರಿದ್ದು, ಮಾನವೀಯತೆ ಮತ್ತು ಸಹೋದರತ್ವದ ಎಳೆಯಲ್ಲಿ ಒಟ್ಟಿಗೆ ಕಟ್ಟಿದ ಸಂಸ್ಕೃತಿಗಳ ಶ್ರೀಮಂತಿಕೆಯನ್ನು ಆಚರಿಸಿತು. ಸಂಗೀತ ಮತ್ತು ನೃತ್ಯದ ಮೂಲಕ ಸ್ಥಳೀಯ ಸಂಪ್ರದಾಯಗಳ ಸಂರಕ್ಷಣೆಗಾಗಿ ವಿಶ್ವ ಸಾಂಸ್ಕೃತಿಕ ಉತ್ಸವವು ವೇದಿಕೆಯನ್ನು ಒದಗಿಸುತ್ತದೆ, ಹಾಗೆಯೇ ಪ್ರತಿಯೊಬ್ಬರೂ ಆನಂದಿಸಲು ಅವಕಾಶವನ್ನು ಒದಗಿಸುತ್ತದೆ. ಇದು ಪ್ರೀತಿ, ಸಹಾನುಭೂತಿ ಮತ್ತು ಸೌಹಾರ್ದತೆಯಂತಹ ಸಾರ್ವತ್ರಿಕ ಮಾನವೀಯ ಮೌಲ್ಯಗಳ ಪುನರುಜ್ಜೀವನದ ಆಂದೋಲನವಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ 8ನೇ ಪ್ರಧಾನ ಕಾರ್ಯದರ್ಶಿ ಮಹಾಮಹಿಮರಾದ ಬಾನ್ ಕಿ-ಮೂನ್, “ಸಂಸ್ಕೃತಿ ಸೇತುವೆಗಳನ್ನು ನಿರ್ಮಿಸುತ್ತದೆ, ಗೋಡೆಗಳನ್ನು ಒಡೆಯುತ್ತದೆ, ಮಾತುಕತೆ ಮತ್ತು ಪರಸ್ಪರ ತಿಳುವಳಿಕೆಯ ಮೂಲಕ ಜಗತ್ತನ್ನು ಒಟ್ಟುಗೂಡಿಸುತ್ತದೆ ಹಾಗೂ ಜನರು ಮತ್ತು ರಾಷ್ಟ್ರಗಳ ನಡುವೆ ಏಕತೆ ಮತ್ತು ಸಾಮರಸ್ಯವನ್ನು ಹೆಚ್ಚಿಸುತ್ತದೆ. ಸಂಸ್ಕೃತಿಯು ಎಲ್ಲಾ ಜಾಗತಿಕ ನಾಗರಿಕರ ನಡುವೆ ಪ್ರಬಲ ವಿನಿಮಯವನ್ನು ರಚಿಸಬಹುದು. ಇಂದು, ಪ್ರಪಂಚದ ಎಲ್ಲಾ ಸಾಂಸ್ಕೃತಿಕ ಶ್ರೀಮಂತಿಕೆಯು, ಯುನೈಟೆಡ್ ಸ್ಟೇಟ್ಸ್‌ನ ನ್ಯಾಷನಲ್ ಮಾಲ್‌ನಲ್ಲಿ ಒಟ್ಟುಗೂಡಿದೆ. ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಏಕತೆ ಮತ್ತು ವೈವಿಧ್ಯತೆಯ ಸ್ಪೂರ್ತಿದಾಯಕ ದೃಷ್ಟಿಕೋನವನ್ನು ನಾನು ಪ್ರಶಂಸಿಸುತ್ತೇನೆ. 

ನಮಗೆ ಇಂತಹ ಹೆಚ್ಚು ಹೆಚ್ಚು ಆಚರಣೆಗಳು, ಹೆಚ್ಚು ಒಗ್ಗೂಡುವಿಕೆ, ಹೆಚ್ಚು ಶಾಂತಿ ಮತ್ತು ಹೆಚ್ಚಿನ ಸಹಕಾರ, ಐಕ್ಯಭಾವ ಮತ್ತು ಪಾಲುದಾರಿಕೆಯ ಅಗತ್ಯವಿದೆ. ನಾವು ಈಗ ಎದುರಿಸುತ್ತಿರುವ ದೊಡ್ಡ ಸವಾಲುಗಳ ಮೇಲೆ ನಾವು ಹೀಗೆಯೇ ಮುನ್ನುಗ್ಗಿ ಮುಂದುವರಿಯುತ್ತೇವೆ. ಇದೇ ರೀತಿ ನಾವು ಶಾಂತಿಯನ್ನು ನಿರ್ಮಿಸುತ್ತೇವೆ, ಸಂಘರ್ಷಗಳನ್ನು ಪರಿಹರಿಸುತ್ತೇವೆ, ಹಸಿವನ್ನು ಕೊನೆಗೊಳಿಸುತ್ತೇವೆ, ಆರೋಗ್ಯಕರ ಜೀವನವನ್ನು ಖಚಿತಪಡಿಸಿಕೊಳ್ಳುತ್ತೇವೆ, ಗುಣಮಟ್ಟದ ಶಿಕ್ಷಣವನ್ನು ಮುನ್ನಡೆಸುತ್ತೇವೆ ಹಾಗೂ ಮಹಿಳೆಯರು ಮತ್ತು ಬಾಲಕಿಯರನ್ನು ಸಬಲೀಕರಣಗೊಳಿಸುತ್ತೇವೆ. ಹೀಗೆಯೇ ನಾವು ಯಾರೂ ಹಿಂದುಳಿಯದಂತೆ ಮುನ್ನಡೆಯಲಿರುವುದು.” ಸಾವಿರಾರು ರಾಷ್ಟ್ರಧ್ವಜಗಳು ಏಕತೆಯ ಉತ್ಸಾಹದಲ್ಲಿ ಗಾಳಿಯಲ್ಲಿ ಹಾರಾಡುತ್ತಿದ್ದಾಗ ನೆರೆದಿದ್ದ ಜನರ ಉತ್ಸಾಹ ಮತ್ತು ಸಂತೋಷವು ಸ್ಪಷ್ಟವಾಗಿತ್ತು ಮತ್ತು ಕಲಾವಿದರಲ್ಲಿ ಶಕ್ತಿಯ ಸಂಚಲನವೂ ಅಷ್ಟೇ ಹರಡಿತ್ತು.

"ಇದು ಬೃಹತ್ ಆಗಿದೆ ಮತ್ತು ತುಂಬಾ ಸುಂದರವಾಗಿದೆ" ಎಂದು ಮೋಹಿನಿಯಾಟ್ಟಂ ಪ್ರದರ್ಶನದ ನೃತ್ಯ ಸಂಯೋಜಕಿ ಬೀನಾ ಮೋಹನ್ ಹಂಚಿಕೊಂಡಿದ್ದಾರೆ. "ಈ ಪ್ರದರ್ಶನದ ಭಾಗವಾಗುವುದು ಒಂದು ಕನಸು, ಈ ಕಾರ್ಯವನ್ನು ಸಂಯೋಜಿಸುವುದು ನನಗೆ ಮತ್ತು ನನ್ನ ವಿದ್ಯಾರ್ಥಿಗಳಿಗೆ ನಂಬಲಾಗದ ಒಂದು ಅನುಭವವಾಗಿತ್ತು. ಪ್ರದರ್ಶನದ ನಂತರ, ಇದು ನಮಗೆ ತರುವ ಆತ್ಮವಿಶ್ವಾಸ, ಸಂತೋಷ ಮತ್ತು ಎಲ್ಲವೂ ಒಂದು ವಿಭಿನ್ನ ಭಾವನೆಯಾಗಿರಲಿದೆ" ಎಂದು ಅವರು ಹೇಳಿದರು. ವಿಶ್ವ ಸಾಂಸ್ಕೃತಿಕ ಉತ್ಸವದ ತಮ್ಮ ಭಾಷಣದಲ್ಲಿ ಮಿಚಿಗನ್ ಕಾಂಗ್ರೆಸಿಗರಾದ ಶ್ರೀ ಥಾನೇದಾರ್ ವರು, ಕರ್ನಾಟಕ ರಾಜ್ಯದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಮಾತನಾಡಿದರು, "ಎಂತಹ ಸುಂದರವಾದ ಸಂಜೆ ಮತ್ತು ಎಂತಹ ಸುಂದರ ಪ್ರದರ್ಶನಗಳು! ಮತ್ತು ನಾವು ಸ್ವಲ್ಪ ಮಳೆಯನ್ನು ನೋಡಿದ್ದೇವೆ, 

ಅದು ವಿಶ್ವ ಶಾಂತಿಯನ್ನು ಮತ್ತು ಹೊಸ ಆರಂಭವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ... ಕರ್ನಾಟಕದ ಬೆಳಗಾವಿಯಲ್ಲಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮನೆಯಲ್ಲಿ ಬೆಳೆದು, ಆ ರಾಜ್ಯವನ್ನು ಗುರುದೇವರೊಂದಿಗೆ ಹಂಚಿಕೊಂಡಿದ್ದ ನನಗೆ, ಇತ್ತೀಚೆಗೆ ಗುರುದೇವರೊಂದಿಗೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗಿದ್ದಕ್ಕೆ ತುಂಬಾ ಸಂತೋಷವಾಯಿತು." ವಿಶ್ವ ಸಾಂಸ್ಕೃತಿಕ ಉತ್ಸವ 2023 ತೆರೆದುಕೊಳ್ಳುತ್ತಿರುವಂತೆ, ಸಾಮರಸ್ಯ ಮತ್ತು ಸಹಕಾರದ ತಳಹದಿಯ ಮೇಲೆ ನಿರ್ಮಿಸಲಾಗುವ ಸಾಂಸ್ಕೃತಿಕ ಶ್ರೀಮಂತಿಕೆ, ಏಕತೆ ಮತ್ತು ಜಾಗತಿಕ ಆಚರಣೆಯ ಇನ್ನೆರಡು ದಿನಗಳನ್ನು ನಾವು ಕುತೂಹಲದಿಂದ ನಿರೀಕ್ಷಿಸುತ್ತಿದ್ದೇವೆ. ವಿಶ್ವ ಸಂಸ್ಕೃತಿ ಉತ್ಸವದಲ್ಲಿ ಭಾರತ: ಉತ್ಸವದಲ್ಲಿ ಈ ಹತ್ತು ಪ್ರದರ್ಶನಗಳನ್ನು ನೋಡಲು ಮರೆಯದಿರಿ ಒಟ್ಟು 50 ಪ್ರದರ್ಶನಗಳು, ವಿಶ್ವದ 17000 ಕಲಾವಿದರು ಹಾಗೂ 4.5 ಲಕ್ಷ ಪ್ರೇಕ್ಷಕರು ಭಾಗವಹಿಸುವ ಅಪೂರ್ವ ವಿಶ್ವ ಸಂಸ್ಕೃತಿ ಉತ್ಸವ – ಅಮೆರಿಕದ ವಾಷಿಂಗ್ಟನ್‌, ಡಿಸಿಯಲ್ಲಿ

ವಾಷಿಂಗ್ಟನ್‌ ಡಿಸಿಯ ಐತಿಕಾಸಿಕ ನ್ಯಾಷನಲ್‌ ಮಾಲ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವದಲ್ಲಿ 180 ದೇಶಗಳ  17000 ಜಾಗತಿಕ ಕಲಾವಿದರು ಒಂದೇ ವೇದಿಕೆಯಿಂದ ತಮ್ಮ ಪ್ರತಿಭೆಯ ಅಭೂತಪೂರ್ವ ಪ್ರದರ್ಶನ ನೀಡಲಿದ್ದಾರೆ. ಸಂಸ್ಕೃತಿ, ಸಂಪ್ರದಾಯ, ಕಲೆ ಮತ್ತು ಆಧ್ಯಾತ್ಮಿಕತೆಯ ಈ ಉತ್ಸವದಲ್ಲಿ ಅವರೆಲ್ಲರೂ ಹಿಪ್-ಹಾಪ್‌, ರೆಗ್ಗೇ, ಟ್ಯಾಂಗೋ, ಆಫ್ರಿಕನ್‌, ಉಕ್ರೇನಿಯನ್‌, ಚೈನೀಸ್‌, ಸೂಫಿ ಶೈಲಿ ಮುಂತಾದ ವಿವಿಧ ಕಲಾಪ್ರಕಾರಗಳಲ್ಲಿ ತಮಗಿರುವ ನೈಪುಣ್ಯವನ್ನು ಸೆಪ್ಟೆಂಬರ್‌ 29 ರಿಂದ ಅಕ್ಟೋಬರ್‌ 1 ರ ವರೆಗೆ ನಡೆಯುವ ಉತ್ಸವದ ಪ್ರಧಾನ ವೇದಿಕೆಯಿಂದ ಪರಿಚಯಿಸಲಿದ್ದಾರೆ.

ಸುಮಾರು 4.5 ಲಕ್ಷ ಜನರು ಭಾಗವಹಿಸಲಿರುವ ಈ ಉತ್ಸವದಲ್ಲಿ ಸಾಂಸ್ಕೃತಿಕ ತಂಡಗಳು ಭಾರತದ ಕಲಾಶ್ರೀಮಂತಿಕೆಯನ್ನು ಜಗತ್ತಿಗೆ ತೆರೆದು ತೋರಿಸಿ ಜನರ ಹೃದಯಗಳನ್ನು ಗೆಲ್ಲಲು ಉತ್ಸುಕವಾಗಿವೆ.  ಭಾರತೀಯ ವಿಭಾಗದಲ್ಲಿ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿಯ ಜೊತೆಗೆ 10000 ನರ್ತಕರು ಚಂಡೆಯ ಲಯಬದ್ಧ ನಾದದ ಹಿನ್ನೆಲೆಯಲ್ಲಿ ಕಣ್ಮನ ಸೆಳೆಯುವ ಸಾಂಪ್ರದಾಯಿಕ ಗರ್ಬಾ ನೃತ್ಯದಲ್ಲಿ ಭಾಗವಹಿಸಲಿದ್ದಾರೆ.  ಭಾರತದ ಹತ್ತು ಪ್ರಮುಖ ದೇಸೀ ಆಕರ್ಷಣೆಗಳು ಮತ್ತು ಅತಿಥಿಗಳ ಪಟ್ಟಿ ಈ ಕೆಳಗಿನಂತಿದೆ.

1. ಪಂಚಭೂತಮ್‌ : 850 ಕಲಾವಿದರಿಂದ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಿಂಫನಿ ಕಾರ್ಯಕ್ರಮ: ಭಾರತದ ಶಾಸ್ತ್ರೀಯ ವಾದ್ಯಗಳ ಧ್ವನಿವೈವಿಧ್ಯ ಮತ್ತು ನೃತ್ಯಪ್ರಕಾರದ ಸಮ್ಮಿಲನ, ಈ ಪಂಚಭೂತಮ್‌ ಕಾರ್ಯಕ್ರಮ. ಮೊದಲ ದಿನ, 250ಕ್ಕೂ ಹೆಚ್ಚು ನುರಿತ ಸಿತಾರ್‌, ವೀಣೆ, ತಬಲ, ಮೃದಂಗ, ಕೊಳಲು, ಘಟ, ಮತ್ತು ವಯೋಲಿನ್‌  ವಾದಕರ ಜೊತೆಗೆ 600 ಜನ ನರ್ತಕರಿಂದ ಭರತನಾಟ್ಯ, ಕಥಕ್‌, ಒಡಿಸ್ಸಿ, ಕೂಚಿಪುಡಿ ಮತ್ತು ಮೋಹಿನಿಯಾಟ್ಟಂ ನೃತ್ಯಗಳ ಮೂಲಕ ಪ್ರಕೃತಿಯ ಪಂಚತತ್ತ್ವಗಳನ್ನು ಚಿತ್ರಿಸುವ ಪ್ರದರ್ಶನ.

2. ನಾದಸ್ವರ – ಶಹನಾಯಿ ಸ್ವರಮೇಳ: ಭಾರತದಲ್ಲಿ ಶುಭಕಾರ್ಯಗಳಲ್ಲಿ ನುಡಿಸುವ ಶಹನಾಯಿ ಮತ್ತು ನಾದಸ್ವರವಾದನ – 30 ಕಲಾವಿದರಿಂದ. ಈ ಸಂಗೀತವಾದ್ಯಗಳ ಅಲೌಕಿಕ ನಾದದ ತರಂಗಗಳಲ್ಲಿ ಲೀನವಾಗುವ ಸದವಕಾಶ.  

3. ಏಕತೆಗಾಗಿ 10000 ಜನರಿಂದ ಗರ್ಬಾ ನೃತ್ಯ: ಏಕತೆಯನ್ನು ಪ್ರತಿಬಿಂಬಿಸುವ ಗರ್ಬಾ ನೃತ್ಯದಲ್ಲಿ 10000ಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ವೇಷಭೂಷಣಗಳು, ಹೊಂದಾಣಿಕೆಯ ಚಲನೆ, ಲಯಬದ್ಧ ಹೆಜ್ಜೆ ಮತ್ತು ಸಮಕಾಲೀನ ನೃತ್ಯಪ್ರಕಾರಗಳ ಸಂಯೋಜಿತ ಕಾರ್ಯಕ್ರಮದ ಮೂಲಕ ಬೆರಗುಗೊಳಿಸಲಿದ್ದಾರೆ. ಈ ನೃತ್ಯಪ್ರಕಾರವು ಹುಟ್ಟಿಸುವ ಅದಮ್ಯ ಶಕ್ತಿಯು ಗಡಿಗಳನ್ನು ಮೀರಿ ಸಮುದಾಯಗಳ ನಡುವೆ ಸಾಮರಸ್ಯವನ್ನು,  ಏಕತೆಯನ್ನು, ಪರಸ್ಪರ ಅರಿವನ್ನು ಮೂಡಿಸಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೇಕ್ಷಕರಿಗೂ ಮುಕ್ತ ಆಹ್ವಾನವಿರುತ್ತದೆ.

4. ಭಾಂಗ್ರಾ ಸಂಭ್ರಮ: ಪಂಜಾಬಿ ಜಾನಪದ ಹಾಡುಗಳು ಮತ್ತು ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ 200 ನರ್ತಕರು ವಾತಾವರಣಕ್ಕೆ ಚೈತನ್ಯ ತುಂಬಲಿದ್ದಾರೆ.

5. ಚಂಡೆ ಮೇಳ : ಕೇರಳದ ತಾಳವಾದ್ಯ ಮೇಳ: ಕೇರಳದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿನಿಧಿಸುವ ಸಾಂಪ್ರದಾಯಿಕ ತಾಳವಾದ್ಯ ಚಂಡೆಯ ನಿನಾದವನ್ನು ನಿಮ್ಮ ಮನಸ್ಸಿನಲ್ಲಿ ತುಂಬಿಕೊಳ್ಳಿರಿ. ನಿಮ್ಮ ಜ್ಞಾನೇಂದ್ರಿಯಗಳಿಗೆ ಅಪರೂಪದ ರಸದೌತಣ ಬಡಿಸುವ ಚಂಡೆಗಳ ಮೇಳದ ಆಕರ್ಷಣೆಯಿಂದ ನೀವು ತಪ್ಪಿಸಿಕೊಳ್ಳಲಾರಿರಿ.  

6. ವಂದೇ ಮಾತರಂ ಗಾಯನ: 350 ಕೊರಳುಗಳಿಂದ ಏಕಕಾಲದಲ್ಲಿ ಹೊಮ್ಮುವ ಭಾರತದ ಮೈ ನವಿರೇಳಿಸುವ “ವಂದೇ ಮಾತರಂ” ರಾಷ್ಟ್ರೀಯ ಹಾಡನ್ನು ರಚಿಸಿದವರು ಬಂಕಿಂ ಚಂದ್ರ ಚಟರ್ಜೀ. ಇದನ್ನು ಗ್ರಾಮಿ ಪ್ರಶಸ್ತಿಗೆ ನಾಮಾಂಕಿತರಾಗಿದ್ದ ಚಂದ್ರಿಕಾ ಟಂಡನ್‌ ನೇತೃತ್ವದಲ್ಲಿ ಹಾಡಲಾಗುವುದು.

7. ಗುರುದೇವ ಶ್ರೀ ಶ್ರೀ ರವಿ ಶಂಕರರ ಜೊತೆ ಜಾಗತಿಕ ಧ್ಯಾನ: 4.5 ಲಕ್ಷ ಜನರು ಏಕಕಾಲದಲ್ಲಿ ಮೌನವಾಗಿ ಧ್ಯಾನಮಾಡುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ. ಉತ್ಸವದ ಧ್ವನಿ ಮತ್ತು ಸಂಗೀತದ ಅಬ್ಬರಗಳಿಗೆ ವ್ಯತಿರಿಕ್ತವಾಗಿ ಮೌನವಾಗಿ ಶಾಂತಿ ಮತ್ತು ಸಮರಸಭರಿತ ಜಗತ್ತಿಗಾಗಿ ಧ್ಯಾನ ಮಾಡಲಾಗುತ್ತದೆ. ಈ ಕಾರ್ಯಕ್ರಮವನ್ನು ಆಧ್ಯಾತ್ಮಿಕ ವಿಶ್ವಗುರು ಶ್ರೀ ಶ್ರೀ ರವಿ‌ ಶಂಕರ್ ಸ್ವತಃ ನಡೆಸಿಕೊಡುತ್ತಾರೆ. ಜಗತ್ತಿನಾದ್ಯಂತ ಕೋಟ್ಯಂತರ ಜನರು ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ತಾವೂ ಭಾಗವಹಿಸಿ ವಿಶ್ವಶಾಂತಿ ಮತ್ತು ಸಾಮರಸ್ಯಕ್ಕಾಗಿ ಧ್ಯಾನ ಮಾಡಿ.

8. 300 ಕಲಾವಿದರಿಂದ ವಸುಧೈವಕುಟುಂಬಕಂ ವೃಂದಗಾಯನ: ಇಡೀ ಜಗತ್ತೇ ಒಂದು ಕುಟುಂಬ ಎಂದು ಸಾರುವ ವಸುಧೈವಕುಟುಂಬಕಮ್‌ ಪರಿಕಲ್ಪನೆಯನ್ನು ಉಪನಿಷತ್ತುಗಳಲ್ಲಿ ಕಾಣಬಹುದು. ವಿದುಷಿ ಸುಜಾತಾ ಘಾಣೇಕರ್‌ ರಚಿಸಿ ಸ್ವರಸಂಯೋಜನೆ ಮಾಡಿರುವ ಗೀತೆಯನ್ನು 300 ಜನ ಗಾಯಕರು ಹಾಡಲಿದ್ದಾರೆ. ಈ ಗೀತೆಯು ಹಂಸಧ್ವನಿ ರಾಗದಲ್ಲಿ ಮೂಡಿಬರಲಿದೆ.

9. ಅಲೌಕಿಕ ಅನುಭವ ನೀಡುವ ಆರ್ಟ್‌ ಆಫ್‌ ಲಿವಿಂಗ್‌ ಭಜನೆಗಳು: ಎಲ್ಲರೂ ಜೊತೆಗೂಡಿ ಹಾಡುವ ಕಾಲಾತೀತವಾದ ಪುರಾತನ ಭಜನೆಗಳು ಎಲ್ಲರನ್ನೂ ಅಧ್ಯಾತ್ಮದ ಆನಂದದಲ್ಲಿ ತೇಲಾಡಿಸುವುದರ ಜೊತೆಗೆ ಅತೀಂದ್ರಿಯ ಅನುಭವವನ್ನೂ ನೀಡುವುದರಲ್ಲಿ ಅನುಮಾನವಿಲ್ಲ. ಪಕ್ಕವಾದ್ಯ ಸಮೇತವಾದ ಉತ್ಕೃಷ್ಟ ಹಾಡುಗಾರಿಕೆಯು ಭಕ್ತಿಗೀತೆಗಳ ಲೋಕಕ್ಕೆ ತಮ್ಮನ್ನು ಕರೆದೊಯ್ಯುವುದರ ಜೊತೆಗೆ ಪ್ರಶಾಂತ ವಾತಾವರಣವನ್ನೂ ನಿರ್ಮಿಸುತ್ತದೆ.

ಬೋನಸ್:‌ ಹಾಡು ಮತ್ತು ಸಂಗೀತದ ಜೊತೆಗೆ ಭಾರತೀಯ ಮೂಲದ ಮುತ್ಸದ್ದಿಗಳು, ಧಾರ್ಮಿಕ ಮುಖಂಡರು ಕೂಡ ಉತ್ಸವದಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ಭಾರತದ ವಿದೇಶಾಂಗ ಸಚಿವ, ಶ್ರೀ ಎಸ್‌ ಜೈಶಂಕರ್‌, ಲೋಕಸಭೆಯ ಮಾಜಿ ಸಭಾಪತಿ, ಶ್ರೀಮತಿ ಸುಮಿತ್ರಾ ಮಹಾಜನ್‌, ಭಾರತದ ಮಾಜಿ ರಾಷ್ಟ್ರಪತಿ, ಶ್ರೀ ರಾಮನಾಥ್‌ ಕೋವಿಂದ್‌, ಅಮೆರಿಕದ ಪ್ರಧಾನ ಸರ್ಜನ್‌ ಡಾ. ವಿವೇಕ್‌ ಮೂರ್ತಿ, ನಾರ್ವೆ ದೇಶದ ಸಂಸದ ಹಿಮಾಂಶು ಗುಲಾಟಿ ಮುಂತಾದವರು ಸೇರಿದ್ದಾರೆ. ಇಡೀ ಜಗತ್ತು ಭಾರತದೆಡೆ ಗಮನ ಹರಿಸುತ್ತಿರುವ ಈ ಸಂದರ್ಭದಲ್ಲಿಇವರೆಲ್ಲರೂ ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ.

10. ಭಾರತದ ವಿದೇಶಾಂಗ ಮಂತ್ರಿ ಶ್ರೀ ಸುಬ್ರಹ್ಮಣ್ಯಂ ಜೈಶಂಕರ್‌ ಅವರಿಂದ ಭಾಷಣ: ನ್ಯಾಷನಲ್ ಮಾಲ್‌ನಲ್ಲಿ ನೇರವಾಗಿ ಮತ್ತು ಅಂತರ್ಜಾಲದ ಮೂಲಕ ನೂರು ಕೋಟಿಗೂ ಹೆಚ್ಚು ವೀಕ್ಷಕರು ಭಾರತದ ಹಿಂದಿನ ರಾಜತಾಂತ್ರಿಕ, ಇಂದಿನ ವಿದೇಶಾಂಗ ಮಂತ್ರಿ ಶ್ರೀ ಎಸ್‌ ಜೈಶಂಕರ್‌ ಅವರ ಮಾತುಗಳನ್ನು ಕೇಳಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ವಾಷಿಂಗ್ಟನ್ DC ನಲ್ಲಿ ವಿಶ್ವ ಸಂಸ್ಕೃತಿ ಉತ್ಸವದ ಕುರಿತಾಗಿ ತಿಳಿದಿಲ್ಲದ ಸಂಗತಿಗಳು. 17,000 ಜಾಗತಿಕ ಕಲಾವಿದರು ಒಂದೇ ವೇದಿಕೆಯಲ್ಲಿ ಒಟ್ಟಿಗೆ ಸೇರುವುದು ಸಣ್ಣ ವಿಷಯವಲ್ಲ, ಜೀವನ ಕಲಾ ಸಂಸ್ಥೆ ಯು ಆಯೋಜಿಸಿರುವ ವಿಶ್ವ ಸಂಸ್ಕೃತಿ ಉತ್ಸವ 2023 (WCF)ರ ಕುರಿತ ಕೆಲವು ಸಂಗತಿಗಳು ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ ಮತ್ತು ''ಪ್ರೀತಿ ಒಂದೇ" ಎನ್ನುವ ಸಂತ್ಯಾಂಶವನ್ನು  ನಂಬುವಂತೆ ಮಾಡುತ್ತದೆ. 

1. ವಿಶ್ವ ಸಂಸ್ಕೃತಿ ಉತ್ಸವ ದ ವೇದಿಕೆ ಎಷ್ಟು ದೊಡ್ಡದು ಎಂದು ಊಹಿಸಬಲ್ಲಿರಾ: ಅಮೇರಿಕಾದ ವಾಷಿಂಗ್ಟನ್ ಡಿ ಸಿ, ನ್ಯಾಷನಲ್ ಮಾಲ್‌ನಲ್ಲಿ ನಡೆಯಲಿರುವ ವಿಶ್ವ ಸಂಸ್ಕೃತಿ ಉತ್ಸವದ ನಾಲ್ಕನೇ ಆವೃತ್ತಿ , 17,000 ವೈವಿಧ್ಯಮಯ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ. ಅಮೇರಿಕಾದ ಸಾಂಪ್ರದಾಯಿಕ  US CAPITOL ಕಟ್ಟಡದ ಹಿನ್ನೆಲೆಯಲ್ಲಿ,  ಫುಟ್‌ಬಾಲ್ ಮೈದಾನದ ಗಾತ್ರದ ವಿಶಿಷ್ಟ ವೇದಿಕೆಯು ಸಾಕ್ಷಿಯಾಗಲಿದೆ . 180 ಅಡಿ ಅಗಲದ ಅರೆ-ಅಂಡಾಕಾರದ ಈ ವೇದಿಕೆಯು ನ್ಯಾಷನಲ್ ಮಾಲ್ ನಲ್ಲಿ   ಇದುವರೆಗೆ ನಿರ್ಮಿಸಲಾದ ಅತಿದೊಡ್ಡ ವೇದಿಕೆಯಾಗಿದೆ.  ಜೊತೆಗೆ 35000 ಚ.ಅಡಿ ನೃತ್ಯ ವೇದಿಕೆಯನ್ನೂ ಒಳಗೊಂಡಿದೆ.  ವಿಶ್ವ ಸಂಸ್ಕೃತಿ ಉತ್ಸವದ  ಈ ಮುಖ್ಯ ವೇದಿಕೆಯು, ಒಂದೇ ಸಮಯದಲ್ಲಿ ಸಾವಿರಾರು ನರ್ತಕರು, ಸಂಗೀತಗಾರರು ಮತ್ತು ಅತಿಥಿಗಳನ್ನು ಒಳಗೊಂಡ 50 ಪ್ರದರ್ಶನಗಳನ್ನು ನೀಡುತ್ತದೆ.

 2. ವೇದಿಕೆ ಹಂಚಿಕೊಳ್ಳಲು ಉಕ್ರೇನ್-ರಷ್ಯಾ/ ಭಾರತ-ಪಾಕ್?: ಜೀವನ ಕಲಾ ಸಂಸ್ಥೆಯ ವಿಶ್ವ ಸಂಸ್ಕೃತಿ ಉತ್ಸವ ಸಂಸ್ಕೃತಿ,ಕಲೆ ಮತ್ತು  ಸಂಪ್ರದಾಯಗಳ ಸಮ್ಮಿಲನವಾಗಲಿದೆ ಹಾಗೂ ಜನರು ತಮ್ಮ  ಜನಾಂಗ, ಧರ್ಮ ಮತ್ತು ರಾರ್ಷ್ಟ್ರೀಯತೆಯ ರೇಖೆಗಳನ್ನು ಮೀರಿ,  ಇಡೀ ವಿಶ್ವವೇ ಒಂದು ಕುಟುಂಬ  ಎನ್ನುವ ಪರಿಕಲ್ಪನೆಯಲ್ಲಿ ಒಂದಾಗುತ್ತಾರೆ. ಉಕ್ರೇನ್, ರಷ್ಯಾ, ಪಾಕಿಸ್ತಾನ, ಅಫ್ಘ್ಹಾನಿಸ್ತಾನ  ಸೇರಿದಂತೆ 180ಕ್ಕೂ ಹೆಚ್ಚು ದೇಶಗಳ ಜನರು ಸಂಧಿಸುತ್ತಾರೆ. ಒಗ್ಗಟ್ಟು ಮತ್ತು ಸೌಹಾರ್ದತೆಯ ವಿಶಿಷ್ಟ ಪ್ರದರ್ಶನದಲ್ಲಿ, ಸಂಘರ್ಷಗಳಿಗೆ   ಒಳಗಾಗಿರುವ ದೇಶಗಳ ಜನರು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು , ಮಾನವೀಯತೆಯನ್ನು ಮೆರೆಯಲು ಮತ್ತು ಶಾಂತಿಯನ್ನು ಮತ್ತಷ್ಟು ಹೆಚ್ಚಿಸುವ ದೃಷ್ಟಿಯಿಂದ ಒಟ್ಟಿಗೆ ಸೇರುತ್ತಾರೆ. 

3:10,000 ಕಲಾವಿದರಿಂದ ಪರಸ್ಪರ  ಸಂವಾದಾತ್ಮಕ ಗಾರ್ಬಾ ನೃತ್ಯ  ಪ್ರದರ್ಶನ: WCF ನಲ್ಲಿ ದೃಶ್ಯ ಮತ್ತು ಸಾಂಸ್ಕೃತಿಕ ರಸದೌತಣವು, ಸಾಂಪ್ರದಾಯಿಕ ಮತ್ತು ವರ್ಣರಂಜಿತ ಗಾರ್ಬಾ ನೃತ್ಯವನ್ನು ಸಹ ಒಳಗೊಂಡಿದೆ. 10,000 ಕಲಾವಿದರ ಪ್ರದರ್ಶನ, ಅಲ್ಲಿ ಪ್ರೇಕ್ಷಕರು ಜಮಾಯಿಸುವಂತೆ ಪ್ರೋತ್ಸಾಹಿಸುತ್ತದೆ. ಈ ಪ್ರಮಾಣದ ಪ್ರದರ್ಶನಕ್ಕಾಗಿ 10,000 ಕಲಾವಿದರು ಹೇಗೆ ತಯಾರಿ ನಡೆಸುತ್ತಾರೆ? "ನಾವು  ಜೂಮ್ ಅಪ್ಲಿಕೇಶನ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೇವೆ. ನಮಗೆ ಎರಡು ವೀಡಿಯೋಗಳನ್ನು ನೀಡಲಾಗಿದೆ- ಒಂದು ಸಂಪೂರ್ಣ ಪ್ರದರ್ಶನ ಮತ್ತು ಇನ್ನೊಂದು ನೃತ್ಯ ಸಂಯೋಜನೆಯ ಹಂತ-ಹಂತದ ವೀಡಿಯೋ . ಗುಜರಾತಿ ಸಮುದಾಯ ಅಷ್ಟೇ ಅಲ್ಲದೆ ವಿವಿಧ ಸಮುದಾಯಗಳ ಜನರು ಈ ಭವ್ಯವಾದ ಪ್ರದರ್ಶನದ ಭಾಗವಾಗಲಿದ್ದಾರೆ ಮತ್ತು ಪ್ರತಿಯೊಬ್ಬರೂ ಕಳೆದ 2 ವಾರಗಳಿಂದ ದಣಿವರಿಯದೆ ಅಭ್ಯಾಸ ಮಾಡುತ್ತಿದ್ದಾರೆ" ಎಂದು ಹೇಳಿದರು ಶ್ರೀ. ರಮೇಶ್ ಹನ್ಸೋರ, ಈ ನೃತ್ಯದಲ್ಲಿ ಭಾಗವಹಿಸಲಿರುವ  ಗುಜರಾತ್‌ನ ಅಂಕಲೇಶ್ವರದ ಉದ್ಯಮಿ.

4. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಮತ್ತು  WCFನಲ್ಲಿ ಸಾಮ್ಯತೆ ಏನು?: ಶಾಂತಿ ಮತ್ತು ಸ್ವಾತಂತ್ರ್ಯದಂತಹ ಪಾಲಿಸಬೇಕಾದ ಮೌಲ್ಯಗಳ ಬಗ್ಗೆ ನೀವು ಯೋಚಿಸಿದರೆ, ನೀವು ಸರಿ. ಈ ನ್ಯಾಷನಲ್ ಮಾಲ್ ನಲ್ಲೇ   ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ರ ಪ್ರಸಿದ್ಧವಾದ 'ಐ ಹ್ಯಾವ್ ಎ ಡ್ರೀಮ್' ಅನ್ನುವ ಭಾಷಣವು   1963 ರಲ್ಲಿ  ಜಗತ್ತಿಗೆ ಸಮಾನತೆ, ಸ್ವಾತಂತ್ರ್ಯ ಮತ್ತು ಏಕತೆಯ ಕರೆಯನ್ನು ನೀಡಿತು. ಅದಕ್ಕೂ  ಒಂದು ಶತಮಾನ  ಮೊದಲು, ಚಿಕಾಗೋದಲ್ಲಿ ನಡೆದ ಮೊದಲ ವಿಶ್ವ ಧರ್ಮ ಸಂಸತ್ತಿನಲ್ಲಿ, ಸ್ವಾಮಿ ವಿವೇಕಾನಂದರು ಪ್ರತಿಯೊಬ್ಬರೂ ಮೇಲೇಳುವಂತೆ ಮತ್ತು ಚಿಂತನೆಯ ನಾಯಕತ್ವದಲ್ಲಿ  ಭಾರತವು ಜಗತ್ತಿಗೆ ಏನು ನೀಡಲಿದೆ ಎಂಬುದನ್ನು ಗಮನಿಸುವಂತೆ ಐತಿಹಾಸಿಕ ಭಾಷಣವನ್ನು ಮಾಡಿದರು. ಅವರು ವಿಶ್ವದ ಪ್ರಮುಖ ಧರ್ಮಶ್ರದ್ಧೆಯ ಪ್ರತಿನಿಧಿಗಳನ್ನು  ಉದ್ದೇಶಿಸಿ  "ಸಹೋದರ ಮತ್ತು ಸಹೋದರಿಯರೇ" ಎಂದು ಸಂಬೋಧಿಸಿದರು, ಮತ್ತು ಧಾರ್ಮಿಕ ಮತಾಂಧತೆ ಮತ್ತು  ಅಸಹಿಷ್ಣುತೆಯ ಅಂತ್ಯಕ್ಕೆ ಕರೆ ನೀಡಿದರು . ಹಲವು ವರ್ಷಗಳ ನಂತರ, ಅದೇ ಸ್ಥಳದಿಂದ  ಮಾನವತಾವಾದಿ  ಗುರುದೇವ್ ಶ್ರೀ ಶ್ರೀ ರವಿಶಂಕರ್  ಅವರಿಂದ ಜಾಗತಿಕ  ಸಾಮರಸ್ಯದ ಸಂದೇಶವು ,ಧರ್ಮ, ಗಡಿ ಮತ್ತು ಜನಾಂಗಗಳ  ಸೇತುವೆಯಾಗಿ, 180 ದೇಶಗಳ ಜನರನ್ನು ಒಂದುಗೂಡಿಸುತ್ತದೆ .

5. ಸೂಪರ್ ಬೌಲ್‌ಗಿಂತ ಹೆಚ್ಚಿನ ಸಂಖ್ಯೆಯಲ್ಲಿ  ಪಾಲ್ಗೊಳ್ಳುವ ವೈಶಿಷ್ಟ್ಯ: ಅಮೆರಿಕದ ಅತ್ಯಂತ ಜನಪ್ರಿಯ ಕ್ರೀಡಾಕೂಟಗಳಲ್ಲಿ ಒಂದಾದ ಸೂಪರ್ ಬೌಲ್  ಸರಾಸರಿ  ವ60,000-70,000 ಅಭಿಮಾನಿಗಳ  ಹಾಜರಾತಿ ಹೊಂದಿರುತ್ತದೆ. 1980ರಲ್ಲಿ  ಕ್ಯಾಲಿಫೋರ್ನಿಯಾ ರಾಜ್ಯದ ಪಸಡೇನಾ ನಗರದ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಸೂಪರ್ ಬೌಲ್ ಆಟ ವೀಕ್ಷಿಸಲು     ಗರಿಷ್ಠ ಸುಮಾರು ಒಂದು ಲಕ್ಷ ಜನ  ಸೇರಿದ್ದರು. ವಿಶ್ವ ಸಂಸ್ಕೃತಿ ಉತ್ಸವ ವು ಪ್ರಪಂಚದಾದ್ಯಂತ ಸುಮಾರು 5 ಲಕ್ಷ ಜನರನ್ನು  ಸ್ವಾಗತಿಸಲು ಸಿದ್ಧವಾಗಿದೆ. ಉತ್ಸಾಹ ಮತ್ತು ಸಂಭ್ರಮಾಚರಣೆಯ  ಪ್ರತಿಬಿಂಬದ ಭಾಗವಾಗಿರಲು ಜಗತ್ತಿನಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ....

6. ಉಕ್ರೇನ್‌ನಿಂದ ಪ್ರೀತಿಯಿಂದ: 'ಸಂಗೀತದಿಂದ ಆರೋಗ್ಯ' WCF ನಲ್ಲಿ ಪ್ರಸ್ತುತಪಡಿಸಲಾಗುವ ಅನೇಕ ವೈವಿಧ್ಯಮಯ, ಶ್ರೀಮಂತ ಮತ್ತು ಅಸ್ಪಷ್ಟ ಕಲಾ ಪ್ರಕಾರಗಳಲ್ಲಿ ವೇದಿಕೆಯು ಉಕ್ರೇನಿನ ಸಾಂಪ್ರದಾಯಿಕ  ಹಾಡನ್ನು ಕೊಡುಗೆಯಾಗಿ ನೀಡಲಿದೆ. ಇದನ್ನು    ಉಕ್ರೇನಿನ ಹೆಸರಾಂತ  ಸಂಗೀತಗಾರ್ತಿ ಒಲೆನಾ ಅಸ್ತಾಶೆವಾ ಅವರು ಹಾಡಲಿದ್ದಾರೆ. ಒಲನಾ ಅಸ್ತಾಶೆವಾ ಅವರು ಯುದ್ಧದಿಂದಾಗಿ  ತಾಯ್ನಾಡನ್ನು ತೊರೆಯಬೇಕಾಯಿತು.  

 7. 'ಒನ್ ಲವ್' ಮೂಲಕ ಬಾಬ್ ಮಾರ್ಲಿ ಅವರಿಗೆ ಗೌರವಾರ್ಪಣೆ: ಬಹುಕಾಲ ನೆನಪಿನಲ್ಲಿರಬೇಕಾದ, ' ಸಾಂಪ್ರದಾಯಿಕ ಸಂಖ್ಯೆಗೆ ಅನುಗುಣವಾದ 'ಒನ್ ಲವ್' ಅನ್ನು ,ಸ್ಕಿಪ್ ಮಾರ್ಲಿ, (ಬಾಬ್ ಮಾರ್ಲಿಯ ಮೊಮ್ಮಗ) ಉತ್ಸವದ ಸಂಭ್ರಮವನ್ನು ಹೆಚ್ಚಿಸಲು ರಸದೌತಣ ನೀಡಲಿದ್ದಾರೆ.   ವಾಷಿಂಗ್ಟನ್, DC ನ 'ಗೇ ಮೆನ್ಸ್ ಕೋರಸ್' (ಪ್ರದರ್ಶನ ಮತ್ತು ಸಲಿಂಗಕಾಮಿ ಹಕ್ಕುಗಳ ವಕಾಲತ್ತು ಗುಂಪು) 'ಲಿಂಗ ಮತ್ತು ಗಡಿಗಳನ್ನು ಮೀರಿದ ಪ್ರೀತಿ' ಎನ್ನುವ ಸಂದೇಶದೊಂದಿಗೆ ವೇದಿಕೆಯಲ್ಲಿ ಪ್ರದರ್ಶನ ನೀಡಲು ಸಿದ್ಧವಾಗಿದೆ. ನ್ಯಾಷನಲ್ ಮಾಲ್ ನಲ್ಲಿ ನಡೆಯುತ್ತಿರುವ ವಿಶ್ವ ಸಾಂಸ್ಕೃತಿಕ ಉತ್ಸವದ ಎರಡನೆಯ ದಿನದಂದು, 180 ದೇಶಗಳಿಂದ ಬಂದಿದ್ದ ಜನರೆಲ್ಲರೂ ಸೇರಿ ಯೂಕ್ರೇನಿನ ಶಾಂತಿಗಾಗಿ, ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿದರು.     
                 
ಅಕ್ಟೋಬರ್ 1, 2023, ಬೆಂಗಳೂರು: ಎರಡನೆಯ ದಿನವೂ ಕೂಡ ನೂರಾರು ಬಾವುಟಗಳು ಹಾರುತ್ತಿದ್ದ ಹಿನ್ನೆಲೆಯಲ್ಲಿ, ಮತ್ತೊಮ್ಮೆ ಏಕತೆಯ ಭಾವವು ಎಲ್ಲೆಡೆ ರಾರಾಜಿಸಿತು.180 ದೇಶಗಳಿಂದ ಬಂದಿದ್ದ ಜನರು ಒಬ್ಬರನ್ನೊಬ್ಬರು ಕಲೆತು, ನೃತ್ಯ, ಸಂಗೀತ ಮತ್ತು ಆಹಾರದೊಡನೆ ಜಗತ್ತಿನ ವಿವಿಧ ಸಂಸ್ಕೃತಿಗಳನ್ನು ಸಂಭ್ರಮಿಸಿದರು. ಬೃಹತ್ ಪ್ರಮಾಣದಲ್ಲಿ ನಡೆದ ಈ ಉತ್ಸವವು, ವಿಶ್ವವನ್ನು ಒಗ್ಗೂಡಿಸಲು ಹೊರಟಿರುವ ಭಾರತದ ಸಂಕಲ್ಪ ಶಕ್ತಿಯನ್ನು ಎತ್ತಿ ತೋರಿಸುತ್ತಿತ್ತು. ಎರಡನೆಯ ದಿನವು, ವಾಷಿಂಗ್ಟನ್ ಡಿಸಿ ನ್ಯಾಷನಲ್ ಮಾಲಿನ ಐತಿಹಾಸಿಕ ಲಿಂಕನ್ ಸ್ಮಾರಕದ ಎದುರು, ಸಾವಿರಾರು ಜನ ತಮ್ಮ ತಮ್ಮ ಮ್ಯಾಟ್ ಹಾಸಿ ಯೋಗ ಮಾಡುವುದರೊಂದಿಗೆ ಪ್ರಾರಂಭವಾಯಿತು. ಅಲ್ಲಿ ನೆರೆದಿದ್ದ ಎಲ್ಲರಿಗೂ, ಗುರುದೇವ ಶ್ರೀ ಶ್ರೀ ರವಿಶಂಕರರು,  ಒಂದು ಅನುಪಮವಾದ ಉಸಿರಾಟ , ಯೋಗ  ಮತ್ತು ಧ್ಯಾನದ ಪ್ರಕ್ರಿಯೆಗಳನ್ನು ಹೇಳಿಕೊಟ್ಟರು. ಸಂಜೆಯ ವೇಳೆಗೆ ಮನಸೂರೆಗೊಳ್ಳುವಂತಹ ಪ್ರದರ್ಶನಗಳು ಜರುಗಿದವು. 

ಗಣ್ಯರ ಸ್ಫೂರ್ತಿದಾಯಕವಾದ ಭಾಷಣಗಳು, ಮನುಷ್ಯರ ಬಾಂಧವ್ಯಗಳನ್ನು ಇನ್ನಷ್ಟು ಬೆಸೆಯುವಂತಿತ್ತು. ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ರವರು ಮಾತನಾಡಿ, " ಪರ್ವತ ಶ್ರೇಣಿಗಳು, ಕರಾವಳಿ ಬಯಲು, ನದಿಯ ತೀರ, ಮರುಭೂಮಿ ಪ್ರದೇಶ, ಹೀಗೆ ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ಜನರು ಇಲ್ಲಿ ಸೇರಿದ್ದಾರೆ. ಗುರುದೇವರು ಇಲ್ಲಿ ಒಂದು ಪುಟ್ಟ ಪ್ರಪಂಚವನ್ನೇ ನಿರ್ಮಿಸಿದ್ದಾರೆ." ಎಂದು ಹೇಳಿದರು.  ಅನೇಕ ಕಲಾರೂಪಗಳ ಪ್ರದರ್ಶನಗಳು ನಡೆದವು, ಅವುಗಳಲ್ಲಿ ಪಾರಂಪರಿಕ ಯೂಕ್ರೇನ್ ನ ಹಾಡಿನ ಪ್ರದರ್ಶನ ಕೂಡ ಒಂದು. ಇದನ್ನು ಯೂಕ್ರೇನ್ ನ ಖ್ಯಾತ ಸಂಗೀತಗಾರರಾದ ಒಲೇನ ಅಸ್ತಶೇವರವರು ನಡೆಸಿಕೊಟ್ಟರು. ಯುದ್ಧದ ಕಾರಣದಿಂದಾಗಿ ಇವರು ತಮ್ಮ ಮಾತೃಭೂಮಿಯನ್ನು ತೊರೆದಿದ್ದರು. ಮನಕುಲುಕುವ ಈ ಹಾಡಿನ ಪ್ರದರ್ಶನದ ನಂತರ, ಜನರೆಲ್ಲರೂ ಸೇರಿ ಯೂಕ್ರೇನಿನ ಶಾಂತಿಗಾಗಿ ಗುರುದೇವರ ಸಮ್ಮುಖದಲ್ಲಿ ಪ್ರಾರ್ಥಿಸಿದರು.       

ಎಲ್ಲರನ್ನೂ ಎಚ್ಚರಿಸುವಂತೆ ಬಿರುಸಿನ ಭಾಷಣ ಮಾಡಿದ ರೆವರೆಂಡ್ ಜೆರಾಲ್ಡ್ ದುರ್ಲೆಯವರು, "ಆರ್ಟ್ ಆಫ್ ಲಿವಿಂಗ್ ನ ಹೆಸರನ್ನು ಆರ್ಟ್ ಆಫ್ ಪ್ರೂಫ್ ಎಂದು ಬದಲಿಸಬೇಕು. ಏಕೆಂದರೆ, ನಾವು ಎಲ್ಲರನ್ನೂ ಪ್ರೀತಿಸಬಹುದು, ನಾವು ಎಲ್ಲರೊಂದಿಗೆ ಹಂಚಿಕೊಳ್ಳಬಹುದು ಎಂದು ಗುರುದೇವರು ಪ್ರೂವ್ ಮಾಡಿದ್ದಾರೆ." ಎಂದರು. ಅಮೆರಿಕದ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರಾದ ಟಿಮ್ ಡ್ರೇಪರ್ ರವರು ಮಾತನಾಡಿ, " ಅಮೆರಿಕನ್ನರಾದ ನಾವು ಇತರ ಜನರನ್ನು ಅನ್ಯಲೋಕದವರಂತೆ ಕಂಡಿದ್ದೇವೆ. ಅದು ಒಳ್ಳೆಯ ಬೆಳವಣಿಗೆ ಆಗಿರಲಿಲ್ಲ. 

ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್‌ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್‌

ಆದರೆ ಈಗ ಬದಲಾವಣೆ ಆರಂಭವಾಗಿದೆ ಮತ್ತು ಗುರುದೇವರ ನಾಯಕತ್ವದಲ್ಲಿ ಜನರನ್ನು ಒಂದಾಗಿ ತರುತ್ತಿದ್ದೇವೆ. ಈಗ ಭೂಮಿಯ ಮೇಲಿರುವ ಯಾರೂ ಕೂಡ ಏಲಿಯನ್ನರಲ್ಲ. ಆದರೆ ಈ ಭೂಮಿಯ ಮೇಲೆ ಯಾರಾದರೂ ಏಲಿಯನ್ನರು ಇದ್ದು, ನಿಮ್ಮ ನಾಯಕರ ಬಳಿಗೆ ಕರೆದೊಯ್ಯಿರಿ ಎಂದರೆ, ನಾನು ಅವರನ್ನು ಗುರುದೇವ್ ಶ್ರೀ ಶ್ರೀ ರವಿಶಂಕರರ ಬಳಿಗೆ ಕರೆದೊಯ್ಯುತ್ತೇನೆ "ಎಂದರು. ಮಾರಿಷಿಯಸ್ ನ ಅಧ್ಯಕ್ಷರಾದ ಪೃಥ್ವಿರಾಜ್ಸಿಂಗ್ ರೂಪನ್, ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ರಾಮನಾಥ ಕೋವಿಂದ್, ಜಪಾನಿನ ಮಾಜಿ ಪ್ರಧಾನಮಂತ್ರಿ ದಿವಂಗತ ಶಿಂಜೊ ಅಬೆಯವರ ಪತ್ನಿಯಾದ ಶ್ರೀಮತಿ ಅಕೀ ಅಬೆಯವರು, ಯುಎಸ್ ನ ಸರ್ಜನ್ ಜೆನೆರಲ್ ಡಾ. ವಿವೇಕ್ ಮೂರ್ತಿ, ಇನ್ನಿತರ ಗಣ್ಯರು ಎರಡನೇ ದಿನ ಉಪಸ್ಥಿತರಾಗಿದ್ದರು.
       
ಎರಡನೆಯ ಸಾಂಸ್ಕೃತಿಕ ಮಹೋತ್ಸವದಂದು, 10,000 ಜನರಿಂದ ಗರ್ಭ ನೃತ್ಯ ನಡೆಯಿತು ಮತ್ತು ಅವರೊಡನೆ ಗ್ರಾಮಿ ಪ್ರಶಸ್ತಿ ವಿಜೇತರಾದ, ಭಾರತೀಯ ಅಮೆರಿಕನ್ನರಾದ  ಫಾಲು ಶಾ ರವರು ತಮ್ಮ ಗಾಯನವನ್ನು ಇದರೊಡನೆ ಸೇರಿಸಿದರು. 200 ಜನರನ್ನೊಳಗೊಂಡ ಭಾಂಗ್ರ ನೃತ್ಯ, ಐರಿಶ್ ನ ಸ್ಟೆಪ್ ನೃತ್ಯ, ಆಫ್ಗಾನಿನ ಸುಮಧುರ ಸಂಗೀತ, 1000 ಚೀನಿ ಅಮೆರಿಕನ್ನರಿಂದ ವೈಭವಯುತವಾದ ನೃತ್ಯ ಹಾಗೂ ಗಾಯನ.   ಇದರೊಡನೆ ಕುಂಗ್ ಫೂ ಪ್ರದರ್ಶನವೂ  ನಡೆಯಿತು. ಭವ್ಯವಾದ ಡ್ರಾಗನ್ ಮತ್ತು ಸಿಂಹಗಳು ಕಲಾತ್ಮಕ ಕಲ್ಪನೆಯನ್ನು ಜೀವಂತವಾಗಿಸಿದವು. 

ಇಂಡೊನೇಷಿಯ, ಬ್ರೆಜಿಲ್, ಬೊಲಿವಿಯ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳ ಅವಿಸ್ಮರಣೀಯವಾದ ನೃತ್ಯಗಳು ನಡೆಸಿದವು. ಖ್ಯಾತ ಕುರ್ಟಿಸ್ ಬ್ಲೋ ರವರ ನೇತೃತ್ವದಲ್ಲಿ ಹಿಪ್ ಹಾಪ್ ಮತ್ತು ಬ್ರೇಕ್ ಡಾನ್ಸ್ ನ ಪ್ರದರ್ಶನ. 1200 ಹಾಡುಗಾರರ ಗಾಸ್ಪೆಲ್ ಕಾಯರ್, ಪಾಕಿಸ್ತಾನದ ಮನಮೋಹಕ ಪ್ರದರ್ಶನವು ನಡೆಯಿತು. ಸರ್ಜನ್ ಜೆನರಲ್ ಆದ  ಡಾ. ವಿವೇಕ್ ಮೂರ್ತಿಯವರು, " ಇಂದಿನ ವಿಶ್ವ ಸಾಂಸ್ಕೃತಿಕ ಉತ್ಸವದಂತಹ ಉತ್ಸವಗಳು ಬಹಳ ಮುಖ್ಯ. ನಾವೆಲ್ಲರೂ ಪರಸ್ಪರ ಹೊಂದಿರುವ ಸಂಬಂಧವು ಎಷ್ಟು ಅವಶ್ಯಕವಾದದ್ದು ಇದು ತೋರಿಸುತ್ತದೆ. ಇಂದಿನ ದಿನಗಳಲ್ಲಿ ಏಕಾಂಗಿತನ ಹಾಗೂ ಪ್ರತ್ಯೇಕತೆಯು ವಿಪರೀತ ಹೆಚ್ಚಾಗಿದ್ದು, ಈ ಸಂಬಂಧವನ್ನು ನೆನಪಿಸಿಕೊಳ್ಳಿವುದು ಅವಶ್ಯಕವಾಗಿದೆ. ಇದರಿಂದ ದೈಹಿಕ ಖಾಯಿಲೆಗಳು, ಡಿಮೆಂಷಿಯ, ಹೃದ್ರೋಗಗಳು ಹೆಚ್ಚುತ್ತಿವೆ. ಇವು ನಮ್ಮ ಸಮುದಾಯಗಳ ಒಳಿತನ್ನೇ ನಾಶಮಾಡುತ್ತಿವೆ" ಎಂದರು.

Latest Videos
Follow Us:
Download App:
  • android
  • ios