Asianet Suvarna News Asianet Suvarna News

ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ ನಡುವೆ ಪ್ಯಾಂಟ್ ಬಿಚ್ಚಿದ ಮಹಿಳೆ, ವಿಡಿಯೋ ವೈರಲ್!

ವಿಮಾನ ಟೇಕ್ ಆಫ್ ಆಗಿ ಕೆಲ ಹೊತ್ತಾಗಿದೆ. ಆಕ್ರೋಶಗೊಂಡ ಮಹಿಳೆಯೊಬ್ಬರು ಏಕಾಏಕಿ ಎಲ್ಲಾ ಪ್ರಯಾಣಿಕರ ಮುಂದೆ ಪ್ಯಾಂಟ್ ಬಿಚ್ಚಿ ಮೂತ್ರ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

Women remove pant to urinate on Flight floor Infront of other passengers Florida Video goes viral ckm
Author
First Published Nov 23, 2023, 9:24 PM IST

ಫ್ಲೋರಿಡಾ(ನ.23) ಪ್ರಯಾಣಿಕರ ನಡುವೆ ಗುದ್ದಾಟ, ಅನುಚಿತ ವರ್ತನೆ, ಮೂತ್ರ ವಿಸರ್ಜನೆ ಸೇರಿದಂತೆ ಹಲವು ಘಟನೆಗಳು ಮತ್ತೆ ಮತ್ತೆ  ವರದಿಯಾಗುತ್ತಿದೆ. ಈ ಬಾರಿ ಭಿನ್ನ ಹಾಗೂ ಅಚ್ಚರಿ ಪ್ರಕರಣ ವರದಿಯಾಗಿದೆ. ವಿಮಾನ ಪ್ರಯಾಣದ ನಡುವೆ ವಿಮಾನ ಶೌಚಾಲಯ ಬಳಸಲು ಮುಂದಾದ ಮಹಿಳೆಯನ್ನು ಗಗನಸಖಿಯರು ತಡೆದಿದ್ದಾರೆ. ಈ ಹೊತ್ತಲ್ಲಿ ಶೌಚಾಲಯ ಬಳಸಬೇಡಿ, 2 ನಿಮಿಷ ಕಾಯಿರಿ ಎಂದು ಗಗನಸಖಿ ಮನವಿ ಮಾಡಿದ್ದಾರೆ. ಇಷ್ಟಕ್ಕೇ ಕೆರಳಿ ಕೆಂಡವಾದ ಮಹಿಳೆ ವಿಮಾನದ ಎಲ್ಲಾ ಪ್ರಯಾಣಿಕರ ಮುಂದೆ ಪ್ಯಾಂಚ್ ಬಿಚ್ಚಿದ್ದಾಳೆ. ಬಳಿ ವಿಮಾನದ ಪ್ಲೋರ್ ಮೇಲೆ ಮೂತ್ರ ವಿಸರ್ಜನೆಗೆ ಮುಂದಾಗಿದ್ದಾಳೆ. ಈ ವಿಡಿಯೋ ವೈರಲ್ ಆಗಿದೆ. ಜೊತೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.

ಫ್ಲೋರಿಡಾದಿಂದ ಫೆಲಡೆಲ್ಫಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ. ಫ್ಲೋರಿಡಾ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗಿದೆ. ಕೆಲ ಹೊತ್ತಿನ ಬಳಿಕ ಮಹಿಳೆ ದಿಢೀರ್ ಎದ್ದು ವಿಮಾನದ ಶೌಚಾಲಯ ಬಳಸಲು ಮುಂದಾಗಿದ್ದಾರೆ. ಆ ಸಮಯದಲ್ಲಿ ಶೌಚಾಲಯದೊಳಗೆ ಬೇರೆ ಪ್ರಯಾಣಿಕ ಇದ್ದ ಕಾರಣ ಸ್ವಲ್ಪ ಹೊತ್ತು ಕಾಯಲು ಮನವಿ ಮಾಡಿದ್ದಾರೆ.

ಆತನ ಕೈ ನನ್ನ ತೊಡೆ ಮೇಲಿತ್ತು, ಬೆಂಗಳೂರು ವಿಮಾನದಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ದೂರು!

ಸಿಬ್ಬಂದಿಗಳ ಮನವಿ ಮಹಿಳೆಯ ಪಿತ್ತ ನೆತ್ತಿಗೇರಿಸಿದೆ. ಈ ತಕ್ಷಣವೇ ಶೌಚಾಲಯ ಬಳಸಲು ಮಹಿಳೆ ಪಟ್ಟು ಹಿಡಿದಿದ್ದಾರೆ. ಆದರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಸೀಟಿನಿಂದ ಎದ್ದು ಈಗಲೇ ರದ್ದಾಂತ ಶುರು ಮಾಡಿದ್ದ ಮಹಿಳೆ, ಏಕಾಏಕಿ ಎಲ್ಲಾ ಪ್ರಯಾಣಿಕರೇ ನನ್ನನ್ನು ಕ್ಷಮಿಸಿ ಎಂದು ವಿಮಾನದ ಫ್ಲೋರ್ ಮೇಲೆ ನಿಂತು ಪ್ಯಾಂಟ್ ಬಿಚ್ಚಿದ್ದಾರೆ. ಬಳಿಕ ಫ್ಲೋರ್‌ನಲ್ಲೇ ಮೂತ್ರ ವಿಸರ್ಜನೆಗೆ ಮುಂದಾಗಿದ್ದಾರೆ.

 

 

 

ಮಕ್ಕಳು ಸೇರಿದಂತೆ ಎಲ್ಲಾ ಪ್ರಯಾಣಿಕರ ಮುಂದೆ ಮಹಿಳೆ ಈ ರೀತಿ ವರ್ತಿಸಿದ್ದಾರೆ. ಇದೇ ವಿಮಾನದಲ್ಲಿ ಬೇರೆ ಪ್ರಯಾಣಿಕರು ಈ ಘಟನೆಯನ್ನು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ. ಹಲವು ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

ವಿಮಾನ ಮಿಸ್ ಆಯ್ತು ಅಂತ ರನ್‌ವೇಲಿ ಓಡಿದ ಮಹಿಳೆ: ವೀಡಿಯೋ ವೈರಲ್, ಮಹಿಳೆ ಅಂದರ್‌

ಇದು ದುರಾದೃಷ್ಟಕರ ಘಟನೆ, ಮಹಿಳೆಯ ವರ್ತನೆ ಸರಿಯಿಲ್ಲ. ಮಕ್ಕಳು ಸೇರಿದಂತೆ ಇಡಿ ವಿಮಾನದ ಪ್ರಯಾಣಿಕರ ಮುಂದೆ ಬೆತ್ತಲಾಗುವುದು, ಮೂರ್ತ ವಿಸರ್ಜನೆ ಮಾಡುವುದು ಅತ್ಯಂತ ಕೆಟ್ಟ ವರ್ತನೆಯಾಗಿದೆ.  ಈ ದುರದೃಷ್ಟಕರ ಘಟನೆಯನ್ನು ನೋಡಬೇಕಾಗಿ ಬಂದ ಪ್ರಯಾಣಿಕರ ಬಗ್ಗೆ ಅನುಕಂಪವಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

Follow Us:
Download App:
  • android
  • ios