ಹಜ್ ಮುಸ್ಲಿಮರ ಪವಿತ್ರ ಯಾತ್ರೆ. ಸೌದಿ ಅರೆಬಿಯಾದ ಮೆಕ್ಕಗೆ ಭಾರತ ಸೇರಿದಂತೆ ಎಲ್ಲಾ ದೇಶಗಳಿಂದ ಮುಸ್ಲಿಮರು ಯಾತ್ರೆ ಕೈಗೊಳ್ಳುತ್ತಾರೆ. ಇದೀಗ ಈ ಯಾತ್ರೆಯ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ. ಪ್ರಮುಖವಾಗಿ ಮಹಿಳೆಯರಿಗೆ, ಪುರುಷ ರಕ್ಷಕನಿಲ್ಲದೆ ಯಾತ್ರೆಗೆ ಅವಕಾಶ ಮಾಡಿದೆ. 

ನವದೆಹಲಿ(ಅ.13): ಪ್ರತಿಯೊಬ್ಬ ಮುಸ್ಲಿಮ್ ಹಜ್ ಯಾತ್ರೆಗೆ ಹಾತೊರೆಯುತ್ತಾರೆ. ಇಸ್ಲಾಂ ಧರ್ಮದ ಪ್ರಮುಖ ಯಾತ್ರೆ ಇದಾಗಿದೆ. ಹಜ್ ಇಸ್ಲಾಂನ 5 ಸ್ತಂಭಗಳಲ್ಲಿ ಒಂದಾಗಿದೆ. ಪ್ರವಾದಿ ಮೊಹಮ್ಮದರ ಜೀವನಯಾತ್ರೆಯ ಪ್ರಮುಖ ಘಟ್ಟ ಹಜ್. ಹೀಗಾಗಿ ಇಸ್ಲಾಂನಲ್ಲಿ ಹಜ್‌ಗೆ ಅದರದ್ದೇ ಆದ ವಿಶೇಷ ಮಹತ್ವವಿದೆ. ಇದೀಗ ಹಜ್ ಯಾತ್ರೆಯ ನಿಯಮದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹಜ್ ಯಾತ್ರೆ ಮಾಡುವ ಮಹಿಳೆಯರು ರಕ್ಷಕ ಪುರುಷನ ಜೊತೆ ಯಾತ್ರೆ ಮಾಡಬೇಕಿತ್ತು. ಇದೀಗ ಈ ನಿಮಯ ಬದಲಿಸಲಾಗಿದೆ. ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೆ ಹಜ್ ಯಾತ್ರೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮಹಿಳೆಯರು ಸೌದಿ ಅರೆಬಿಯಾದ ಮೆಕ್ಕಾಗೆ ಯಾವುದೇ ಪುರುಷ ರಕ್ಷಕನಿಲ್ಲದೆ ತೆರಳಿ ಹಜ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ಹಜ್ ಯಾತ್ರೆ ಸೇವಾ ಸಲಹೆಗಾರ ಅಹಮ್ಮದ್ ಸಲೇಹ್ ಹಲಾಬಿ ಹೇಳಿದ್ದಾರೆ.

ಮುಸ್ಲಿಮ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಲು ಸುರಕ್ಷಿತ, ನಂಬಿಕಸ್ಥ ರಕ್ಷಕ ಅಥವಾ ಮಹ್ರಮ್ ಕರೆತರುವುದು ಕಡ್ಡಾಯವಾಗಿತ್ತು. ಇದರಿಂದ ಹಲವು ಮಹಿಳೆಯರು ಹಜ್ ಯಾತ್ರೆಯಿಂದ ವಂಚಿತರಾಗುತ್ತಾರೆ. ಇಷ್ಟೇ ಅಲ್ಲ ಹಜ್ ಯಾತ್ರೆಯ ವೆಚ್ಚವೂ ಅಧಿಕವಾಗುತ್ತಿದೆ. ಹೀಗಾಗಿ ಮುಸ್ಲಿಮ್ ಮಹಿಳೆಯರು ಹಜ್ ಯಾತ್ರೆಗಾಗಿ ಹೆಚ್ಚಿನ ಹರಸಾಹಸ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಹಜ್ ಯಾತ್ರೆ ವೇಳೆ ಪುರುಷ ರಕ್ಷಕರ ಕರೆತರುವ ನಿಯಮ ಬದಲಿಸಲಾಗಿದೆ. ಹಜ್ ಯಾತ್ರೆಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಲಾಗಿದೆ ಎಂದು ಹಜ್ ಕಮಿಟಿ ಹೇಳಿದೆ.

ಕಾಲ್ನಡಿಗೆಯಲ್ಲೇ ಪವಿತ್ರ ಹಜ್ ಯಾತ್ರೆ: ಕೇರಳದ ಯುವಕನಿಗೆ ಉಡುಪಿಯಲ್ಲಿ ಸ್ವಾಗತ

ಮಹಿಳೆಯ ಸುರಕ್ಷತೆಗೆ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಇನ್ನು ಸಾರಿಗೆ ವ್ಯವಸ್ಥೆ, ಉಳಿದುಕೊಳ್ಳಲು ವ್ಯವಸ್ಥೆ ಎಲ್ಲವೂ ಅತ್ಯಂತ ಸುರಕ್ಷಿತವಾಗಿದೆ. ಹೀಗಾಗಿ ಮಹಿಳೆಯರು ಯಾವುದೇ ಆತಂಕವಿಲ್ಲದೆ ಹಜ್ ಯಾತ್ರೆ ಕೈಗೊಳ್ಳಲುಸಾಧ್ಯವಿದೆ ಎಂದು ಹಜ್ ಕಮಿಟಿ ಹೇಳಿದೆ.

ಇಮಾನ್‌, ನಮಾಜ್‌, ರೋಜಾ, ಜಕಾತ್‌ ಹಾಗೂ ಹಜ್‌ ಎಂಬ ಇಸ್ಲಾಂ ಧರ್ಮದ ಪ್ರಮುಖ ಪಂಚತತ್ವಗಳ ಮಹತ್ವ ಹಾಗೂ ಇವುಗಳ ಆಚರಣೆಯಿಂದಾಗುವ ಪ್ರಯೋಜನ ಕುರಿತು ಜನರಲ್ಲಿ ಅರಿವು ಮೂಡಿಸುವಂಥ ವಿಶೇಷ ಸಂದರ್ಭ ಪವಿತ್ರ ರಂಜಾನ್‌ ತಿಂಗಳದ್ದಾಗಿದೆ. ನಿರಾಕಾರ ಏಕದೇವೋಪಾಸನೆಯ ‘ಇಮಾನ್‌’, ಮಾನಸಿಕ ನೆಮ್ಮದಿ ನೀಡಿ ಶಾಂತಿ ಸಮೃದ್ಧಿ ತರುವ ಪ್ರಾರ್ಥನೆ ‘ನಮಾಜ್‌’, ದೈಹಿಕ ಸ್ವಾಸ್ಥ್ಯ, ಮನಶುದ್ಧಿ, ಕಷ್ಟಸಹಿಷ್ಣುತೆಗೆ ಸಹಕಾರಿಯಾಗುವ ‘ರೋಜಾ’, ಎಲ್ಲರಿಗೂ ಬದುಕುವ ಹಕ್ಕಿದೆ ಎಂದು ಹೇಳುವ ‘ಜಕಾತ್‌’ ಹಾಗೂ ಜೀವನದಲ್ಲಿ ಒಮ್ಮೆಯಾದರೂ ಪವಿತ್ರ ಸ್ಥಳ ಕಾಬಾ ದರ್ಶನ ಕಲ್ಪಿಸುವ ‘ಹಜ್‌’ ಯಾತ್ರೆ ಇವು ಮುಸಲ್ಮಾನರು ಆಚರಿಸಬೇಕಾದ ಪಂಚ ಮಹಾ ಪುಣ್ಯತತ್ವಗಳು.

ಹಜ್‌ ಯಾತ್ರೆಗೆ ಕೂಡಿಟ್ಟ ಹಣದಿಂದ ಬಡವರ ಹೊಟ್ಟೆ ತುಂಬಿಸಿದ ಅಬ್ದುಲ್..!

ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮಹಮ್ಮದರು ಕೆಡುಕಿನಿಂದ ಸಮಾಜವನ್ನು ಮುಕ್ತಗೊಳಿಸಲು ತಮ್ಮದೇ ಆದ ತತ್ವಾದರ್ಶಗಳ ತಳಹದಿಯ ಮೇಲೆ ಇಸ್ಲಾಂ ಧರ್ಮವನ್ನು ಸ್ಥಾಪಿಸಿದರು. ಈ ಸಮಾಜದ ಪಾವಿತ್ರ್ಯತೆಯನ್ನು ಕಾಪಾಡಲು ಸೂಕ್ತ ವ್ಯಕ್ತಿತ್ವವನ್ನು, ವ್ಯಕ್ತಿಗಳನ್ನು ನಿರ್ಮಿಸಲು ‘ರಂಜಾನ್‌’ ಎಂಬ ಈ ಪವಿತ್ರ ತಿಂಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೊಂದು ರೀತಿ ಪಾಪ ಕಳೆದು ಪುಣ್ಯ ಗಳಿಸಲು ತರಬೇತುಗೊಳಿಸುವ ಒಂದು ತಿಂಗಳ ಕಾರ್ಯಾಗಾರ. ಇಲ್ಲಿ ಉಪವಾಸವೇ ಬ್ರಹ್ಮಾಸ್ತ್ರ. ಇದರಿಂದ ಏನನ್ನು ಬೇಕಾದರೂ ಗೆಲ್ಲಬಹುದು. ಉಪವಾಸ ವ್ರತಾನುಷ್ಠಾನಕ್ಕೆ ಅಲ್ಲಾಹು ಆಯ್ಕೆ ಮಾಡಿರುವ ಈ ತಿಂಗಳಿಗೆ ‘ರಂಜಾನ್‌’ ಹೆಸರು ಬಂದಿರುವುದು ಕೂಡ ಬಹು ಅರ್ಥಪೂರ್ಣವಾಗಿದೆ