ನೀನು ಕಾಡಿನ ರಾಜನೇ ಇರಬಹುದು ಆದರೆ... ಸಿಂಹವನ್ನು ಕೈಯಲ್ಲಿ ಹಿಡಿದು ಎತ್ತಿಕೊಂಡು ಹೋದ ಮಹಿಳೆ ಕುವೈತ್‌ನ ಸಬಹಿಯಾ ನಗರದಲ್ಲಿ ನಡೆದ ಘಟನೆ

ಕುವೈತ್‌(ಜ.4): ಮಹಿಳೆಯೊಬ್ಬಳು ಸಿಂಹವನ್ನು ತನ್ನೆರಡು ಕೈಯಲ್ಲಿ ಎತ್ತಿಕೊಂಡು ಹೋಗುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ತಿಳಿದು ಬಂದಿಲ್ಲ. ಆದರೆ ಇದು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯದ ಹೊಳೆ ಸೃಷ್ಟಿಸಿದ್ದಂತು ನಿಜ. ಇಂಟರ್‌ನೆಟ್‌ನಲ್ಲಿ ಇತ್ತೀಚೆಗೆ ನಾವು ನೋಡುತ್ತಿರುವುದೆಲ್ಲವೂ ಸತ್ಯ ಎಂದು ಹೇಳಲಾಗದು. ಅದರಲ್ಲೂ ಮಹಿಳೆಯೊಬ್ಬರು ಸಿಂಹವನ್ನು ತನ್ನೆರಡು ಕೈಯಲ್ಲಿ ಹಿಡಿದು ಎತ್ತಿಕೊಂಡು ಹೋಗುವುದೆಂದರೆ ನಂಬಲು ಸಾಧ್ಯವೇ ಇಲ್ಲ. ಅದಾಗ್ಯೂ ಈ ಸುದ್ದಿ ನೆಟಿಜನ್‌ಗಳಿಗೆ ಉಂಟಾದ ಗೊಂದಲದ ಹೊರತಾಗಿಯೂ ನಿಜವಾದದು ಎಂದು ತಿಳಿದು ಬಂದಿದೆ.

ಈ ವಿಡಿಯೋದಲ್ಲಿ ಹಿಜಾಬ್‌ ಧರಿಸಿರುವ ಸಣ್ಣ ವಯಸ್ಸಿನ ಮಹಿಳೆಯೊಬ್ಬರು ರಸ್ತೆಯಲ್ಲಿ ಓಡಾಡುತ್ತಿದ್ದ ಸಿಂಹವನ್ನು ಅದು ಹೊರಳಾಡುತ್ತಿದ್ದರು, ತನ್ನೆರಡು ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಅನೇಕರು ಈ ವಿಡಿಯೋದ ಸತ್ಯಾಸತ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದರು. ಅಲ್ಲದೇ ಈ ವಿಡಿಯೋ ದೃಶ್ಯಾವಳಿಗಳು ಕೂಡ ಅಷ್ಟೊಂದು ಸ್ಪಷ್ಟವಾಗಿರಲಿಲ್ಲ. ಹೀಗಾಗಿ ಜೊತೆ ಜೊತೆಗೆ ಹಾಸ್ಯ ಹಾಗೂ ತಮಾಷೆಯ ಟ್ರೋಲ್‌ಗಳು ಹರಿದಾಡುತ್ತಿದ್ದವು.

Scroll to load tweet…

ಕೊನೆಗೂ ಈ ವಿಡಿಯೋದ ಬಗ್ಗೆ ಪರಾಮರ್ಶೆ ನಡೆಸಿದಾಗ ಇದು ನಿಜವಾಗಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಇದು 2022 ರ ಅಂದರೆ ಕೇವಲ ಮೂರು ದಿನಗಳ ಹಿಂದೆ ಅಂದರೆ ಜನವರಿ 1 ರಂದು ಕುವೈತ್‌ನ (Kuwait) ಸಬಹಿಯಾ (Sabahiya) ಎಂಬ ಪ್ರದೇಶದಲ್ಲಿ ನಡೆದ ಘಟನೆಯಾಗಿದೆ. ಕುವೈತ್‌ನ ಪತ್ರಿಕೆಯಾದ ಅಲ್‌ ಅನ್ಬಾ ( Al-Anba) ಪ್ರಕಾರ, ಸಿಂಹವನ್ನು ಎತ್ತಿಕೊಂಡು ಹೋದ ಮಹಿಳೆ ಹಾಗೂ ಆಕೆಯ ತಂದೆ ಆ ಸಿಂಹವನ್ನು ತನ್ನ ಮನೆಯಲ್ಲಿ ಸಾಕು ಪ್ರಾಣಿಯಂತೆ ಸಾಕುತ್ತಿದ್ದರು. ಇದು ಅವರ ಮನೆಯಿಂದ ತಪ್ಪಿಸಿಕೊಂಡ ನಂತರದ ವಿಡಿಯೋ ಇದಾಗಿದೆ. ಮಹಿಳೆಯ ಮನೆಯಿಂದ ತಪ್ಪಿಸಿಕೊಂಡ ಸಿಂಹವೂ ಅಲ್ಲಿನ ಬೀದಿಗಳಲ್ಲಿ ಓಡಾಡಿ ಜನರ ಭೀತಿಗೆ ಕಾರಣವಾಗಿತ್ತು. 

Bull Drives off lions: ದಾಳಿ ಮಾಡಲು ಬಂದ ಸಿಂಹಗಳ ಬೆನ್ನಟ್ಟಿದ ಎತ್ತು

ನಂತರದಲ್ಲಿ ಅಲ್ಲಿನ ಅರಣ್ಯ ಪೊಲೀಸರು ಸ್ಥಳಕ್ಕೆ ತೆರಳಿ ಆ ಮಹಿಳೆಗೆ ಸಹಾಯ ಮಾಡಿದ್ದರು. ಆ ಸಂದರ್ಭದಲ್ಲೇ ಆಕೆ ಆ ಸಿಂಹದ ಮಾಲಕಿ ಎಂಬುದು ತಿಳಿದು ಬಂದಿತ್ತು. ನಂತರ ಸಿಂಹವನ್ನು ವಾಪಸ್ ಆಕೆಗೆ ಸಾಕಲು ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ವಿಡಿಯೋದಲ್ಲಿ ಆಕೆಯಿಂದ ತಪ್ಪಿಸಿಕೊಳ್ಳಲು ಸಿಂಹವೂ ಹೊರಳಾಡುತ್ತಿರುವುದು ಕಂಡು ಬಂದಿದೆ. ಕೋಪಗೊಂಡಿದ್ದಾಗ ಸಿಂಹ (lion) ವನ್ನು ಹೀಗೆ ತೋಳುಗಳಲ್ಲಿ ಹಿಡಿದಿಟ್ಟುಕೊಂಡಿದ್ದು ತುಂಬಾ ಅಪಾಯಕಾರಿ. ಅಲ್ಲದೇ ಬಹುಶಃ ಇದು ಸಿಂಹದ ಮರಿ ಇರಬಹುದು ಎಂದು ವಿಡಿಯೋ ನೋಡಿದವರು ಊಹೆ ಮಾಡಿದ್ದಾರೆ. 

Road Block By Lions:ರಸ್ತೆ ಮಧ್ಯೆ ಸಿಂಹಗಳ ಆಟ.. ರೋಚಕ ದೃಶ್ಯ ಕಣ್ತುಂಬಿಸಿಕೊಂಡ ಪ್ರವಾಸಿಗರು

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪುರುಷರ ಶೌಚಾಲಯದಿಂದ ಹೆಣ್ಣು ಸಿಂಹವೊಂದು ಹೊರಗೆ ಬರುತ್ತಿದ್ದ ದೃಶ್ಯ ವೈರಲ್‌ ಆಗಿತ್ತು. ಒಂದು ನಿಮಿಷದ ಆ ವಿಡಿಯೋದಲ್ಲಿ ಗಂಭೀರ ಹೆಜ್ಜೆ ಇಟ್ಟುಕೊಂಡು ಹೆಣ್ಣು ಸಿಂಹ ಪುರುಷರ ಶೌಚಾಲಯದಿಂದ ಹೊರಗೆ ಬರುತ್ತದೆ. ಆ ಕಡೆ ಈ ಇ ಕಡೆ ನೋಡಿ ನಂತರ ಅಲ್ಲಿಂದ ತೆರಳುತ್ತದೆ.
ಈ ವಿಡಿಯೋವನ್ನು ಹಂಚಿಕೊಂಡಿದ್ದ WildLense Eco Foundationಬೇರೆಯರ ಶೌಚಾಲಯ ಬಳಕೆ ಮಾಡುವ ಮುನ್ನ ಜಾಗೃತೆ ಎಂದು ಕ್ಯಾಪ್ಷನ್‌ ನೀಡಿತ್ತು.