ಜಿಂಕೆಗಳಿಗಾಗಿ ಪಾರ್ಕ್‌ನಲ್ಲಿ ಗಿಟಾರ್‌ ನುಡಿಸುವ ಹುಡುಗಿ ಸಂಗೀತಾದ ಮೋಡಿಗೆ ಓಡೋಡಿ ಬರುವ ಜಿಂಕೆಗಳು ಸುಂದರ ದೃಶ್ಯ ಕ್ಯಾಮರಾದಲ್ಲಿ ಸೆರೆ

ಪಾರ್ಕ್‌ನಲ್ಲಿ ಮಹಿಳೆಯೊಬ್ಬರು ಸಂಗೀತಾ ನುಡಿಸುತ್ತಿದ್ದು, ಇದರ ಧ್ವನಿ ಜಿಂಕೆಗಳು ತಲೆದೂಗಿ ಹತ್ತಿರ ಬರುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಈ ವಿಡಿಯೋಗೆ ವಾಹ್‌ ಎಂದಿದ್ದಾರೆ.

ಸಂಗೀತವು ದಣಿದ ಆತ್ಮಕ್ಕೆ ಔಷಧಿ ಇದ್ದಂತೆ ಮತ್ತು ಅದರಲ್ಲಿ ಯಾವುದೇ ಸಂದೇಹವಿಲ್ಲ. ಉತ್ತಮ ಸಂಗೀತವು ಅತ್ಯಂತ ದುಃಖಕರವಾದ ಚಿತ್ತಸ್ಥಿತಿಗಳನ್ನು ಮೇಲಕ್ಕೆತ್ತಬಲ್ಲದು ಮತ್ತು ಮನಸ್ಸು ಮತ್ತು ಆತ್ಮ ಎರಡನ್ನೂ ಮೋಡಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಮನುಷ್ಯರಿಗೆ ಖಂಡಿತವಾಗಿಯೂ ಒಳ್ಳೆಯದ್ದು, ಆದರೆ ಪ್ರಾಣಿಗಳು ಕೂಡ ಸಂಗೀತದ ಮೋಡಿಗೆ ಒಳಗಾಗುವುದನ್ನು ನೀವು ಎಂದಾದರೂ ನೋಡಿದ್ದೀರಾ? ಇಲ್ಲೊಂದು ವಿಡಿಯೋದಲ್ಲಿ ಮಹಿಳೆಯೊಬ್ಬರು ಪಾರ್ಕ್‌ನ ಮಧ್ಯದಲ್ಲಿ ಕುಳಿತು ಸಂಗೀತಾ ನುಡಿಸುತ್ತಿದ್ದು, ಇದನ್ನು ಕೇಳುವ ಜಿಂಕೆಗಳು ನಿಧಾನಕ್ಕೆ ಸ್ವಲ್ಪ ಸ್ವಲ್ಪವೇ ಮಹಿಳೆಯ ಹತ್ತಿರ ಹತ್ತಿರ ಬರಲು ಶುರು ಮಾಡುತ್ತವೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

View post on Instagram

ವೈರಲ್ ಕ್ಲಿಪ್ ಅನ್ನು ಡಯಾನಾ( Diana) ಎಂಬ ಸ್ಪ್ಯಾನಿಷ್ (Spanish) ಸೆಲ್ಲೋಯಿಸ್ಟ್( ಸೆಲ್ಲೋ ಎಂದರೆ ಗಿಟಾರ್‌ ರೀತಿಯ ಸಂಗೀತಾ ಸಾಧನ) ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅವಳು ತನ್ಮಯಳಾಗಿ ವಾದ್ಯವನ್ನು ಅತ್ಯಂತ ಸುಂದರವಾಗಿ ನುಡಿಸುವುದನ್ನು ಕಾಣಬಹುದು. ಈ ಸಂಗೀತಾವನ್ನು ನುಡಿಸುತ್ತಿರುವಾಗಲೇ ಅತ್ತ ಕಣ್ಣಾಡಿಸಿದ ಆಕೆ ಎರಡು ಜಿಂಕೆಗಳು ತನ್ನತ್ತ ಬರುವುದನ್ನು ಕಂಡಳು. ಆಶ್ಚರ್ಯವೆಂದರೆ ಹೆದರಿ ಓಡಿ ಹೋಗುವ ಬದಲು ಈ ಪ್ರಾಣಿಗಳು ನಿಂತು ಸಂಗೀತವನ್ನು ತದೇಕಚಿತ್ತದಿಂದ ಆಲಿಸಿದವು. 

ಸಿಂಹವನ್ನು ಎತ್ತಿಕೊಂಡು ಹೋದ ಮಹಿಳೆ... ವಿಡಿಯೋ ನೋಡಿದ ನೆಟ್ಟಿಗರಿಂದ ಹಾಸ್ಯದ ಸುರಿಮಳೆ

ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಎರಡು ಜಿಂಕೆಗಳಿಗಾಗಿ ಸಂಗೀತಾ ಕಚೇರಿ ಎಂದು ಶೀರ್ಷಿಕೆ ಬರೆದು ಈ ವಿಡಿಯೋವನ್ನು ಡಯಾನಾ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಕೂಡ ಫುಲ್‌ ಖುಷಿಯಾಗಿದ್ದಾರೆ. ನಿಸರ್ಗ ನಿಮ್ಮ ಸಂಗೀತವನ್ನು ಒಪ್ಪುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಇದು ಅದ್ಭುತವಾಗಿದೆ, ಸಂಗೀತ, ಜಿಂಕೆ ಮತ್ತು ಈ ದೃಶ್ಯಾವಳಿಗಳು ನನ್ನನ್ನು ಸಂತೋಷದ ಸ್ಥಳಕ್ಕೆ ಕರೆದೊಯ್ದವು ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಸಮಯ ಆನಂದಮಯ.. ಕ್ಯಾಮರಾದಲ್ಲಿ ಸೆರೆಯಾಯ್ತು ಟೈಗರ್‌ಗಳ ಸರಸ..!

ಇತ್ತೀಚೆಗೆ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಅಪರೂಪದ ದೃಶ್ಯವೊಂದು ಕ್ಯಾಮರಾದಲ್ಲಿ ಸೆರೆ ಆಗಿತ್ತು. ತಾಯಿ ಆನೆಯೊಂದು ಮರಿಯಾನೆಗೆ ತಿನ್ನಿಸುತ್ತಿರುವ ದೃಶ್ಯ ಇದಾಗಿತ್ತು. ತಾಯಿ ಆನೆ ಹಾಗೂ ಮರಿಯಾನೆ ಹುಲ್ಲುಗಾವಲಿನ ಪ್ರದೇಶದಲ್ಲಿ ಜೊತೆಯಾಗಿ ಸಾಗುತ್ತಿವೆ. ತಾಯಿಯನ್ನು ಜೊತೆ ಜೊತೆಯಾಗಿ ಪುಟ್ಟ ಮರಿ ಹಿಂಬಾಲಿಸುತ್ತಿದೆ. ತಾಯಿ ಆನೆ ಹುಲ್ಲನ್ನು ಕಿತ್ತು ಅತ್ತಿತ್ತ ಅಲ್ಲಾಡಿಸುತ್ತ ಸ್ವಚ್ಛಗೊಳಿಸಿ ಅದನ್ನು ಬಾಯಿಗೆ ತುಂಬಿಸುತ್ತಿದೆ. ಬರಿ ಆನೆಗಳಲ್ಲದೇ ಎರಡು ಮೂರು ಬಗೆಯ ಹಕ್ಕಿಗಳು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿವೆ. 

ಈ ಮುದ್ದಾದ ವಿಡಿಯೋವನ್ನು ಪ್ರವಾಸಿ ಮಾರ್ಗದರ್ಶಕ ಬಿಟುಪನ್‌ ಕೊಲೊಂಗ್‌ (Bitupan Kolong) ಅವರು ರೆಕಾರ್ಡ್ ಮಾಡಿದ್ದರು. ಈ ಅಪರೂಪದ ವಿಡಿಯೋವನ್ನು 44 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಬಹುತೇಕ ನೋಡಿದವರೆಲ್ಲಾ ಈ ವಿಡಿಯೋವನ್ನು ಇಷ್ಟ ಪಟ್ಟಿದ್ದಾರೆ. ಈ ವಿಡಿಯೋವನ್ನು ರೆಕಾರ್ಡ್‌ ಮಾಡಿದ ಪ್ರವಾಸಿ ಮಾರ್ಗದರ್ಶಕನಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಾಣಿಗಳಲ್ಲೇ ಅತ್ಯಂತ ಬುದ್ಧಿವಂತ ಪ್ರಾಣಿ ಆನೆ. ಪ್ರಾಣಿಗಳಿಗೆ ಬಾಯಿ ಬಾರದಿರಬಹುದು. ಆದರೆ ಅವು ಬುದ್ದಿವಂತಿಕೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ಮನುಷ್ಯನಿಗಿಂತ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ.