ಉತ್ತಮ ಪೋಷಕರಾಗಲು ಹೀಗಾ ಮಾಡೋದು? ಮಕ್ಕಳೆದುರು ಬೆತ್ತಲೆಯಾಗಿ ಇರುತ್ತೇನೆ ಎಂದು ಟ್ರೋಲ್ ಆದ ಮಹಿಳೆ!
* ಉತ್ತಮ ಪೋಷಕರಾಗಲು ಮಕ್ಕಳೆದುರು ಬೆತ್ತಲೆಯಾಗಿ ಇರುತ್ತೇನೆ ಎಂದು ಟ್ರೋಲ್ ಆದ ಮಹಿಳೆ
* ಮಕ್ಕಳನ್ನು ನೋಡಿಕೊಳ್ಳಲು ಮತ್ತು ಉತ್ತಮ ಪೋಷಕರಾಗಲು ಹೆತ್ತವರ ಸಾಹಸ
ನವದೆಹಲಿ(ಫೆ.20): ಮಕ್ಕಳನ್ನು ನೋಡಿಕೊಳ್ಳಲು ಮತ್ತು ಉತ್ತಮ ಪೋಷಕರಾಗಲು ಪ್ರತಿಯೊಬ್ಬ ತಂದೆ, ತಾಯಿ ಯತ್ನಿಸುತ್ತಾರೆ. ಆದರೆ ಇದರಲ್ಲಿ ಯಾರೂ ಪರಿಪೂರ್ಣರಾಗಿರುವುದಿಲ್ಲ ಎಂಬುವುದು ಕೂಡಾ ನಿಜ. ತನಗೆ ಸರಿ ಎಂದು ಅನಿಸಿದ್ದನ್ನು ಮಾಡುತ್ತಾರೆ. ಆದರೆ ಸಾಮಾನ್ಯವಾಗಿ, ಪ್ರತಿಯೊಬ್ಬರೂ ಮಕ್ಕಳಿಗೆ ಸೂಕ್ತವಾದ ವಿಷಯಗಳನ್ನು ಆಯ್ಕೆ ಮಾಡುತ್ತಾರೆ. ಹೊಸ ಪ್ರಯೋಗಗಳನ್ನು ಮಾಡುವವರೂ ಇದ್ದಾರೆ, ಆದರೆ ಅದರ ಹಿಂದೆ ಸರಿಯಾದ ತರ್ಕವನ್ನು ನೀಡುವ ಬದಲು ಅವರು ವಿಚಿತ್ರವಾದ ವಾದಗಳನ್ನು ನೀಡಲು ಪ್ರಾರಂಭಿಸುತ್ತಾರೆ. ಹೀಗಿರುವಾಗ ಇಂತಹ ವಿಚಿತ್ರ ಕೃತ್ಯಗಳು ಜನರೆದುರು ತೆರೆದುಕೊಂಡರೆ? ಹೌದು ಪೇಜ್ ವಿಟ್ನಿ ಎಂಬ ಮಹಿಳೆಯ ವಿಷಯದಲ್ಲೂ ಅದೇ ಸಂಭವಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೇಜ್ ವಿಟ್ನಿಯನ್ನು ತೀವ್ರವಾಗಿ ಟ್ರೋಲ್ ಮಾಡಲಾಗುತ್ತಿದೆ. ಹಾಗೆ ಮಾಡಲು ಕಾರಣವಿದೆ. ವಾಸ್ತವವಾಗಿ, ಜನರು ಅವರನ್ನು ಟೀಕಿಸುತ್ತಿದ್ದಾರೆ ಏಕೆಂದರೆ ಪೇಜ್ ವಿಟ್ನಿ ತನ್ನ ಮಕ್ಕಳ ಮುಂದೆ ಬಟ್ಟೆ ಇಲ್ಲದೆ ಬದುಕುತ್ತಾಳೆ. ಮಹಿಳೆ ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್ ಖಾತೆಯಲ್ಲಿ ಆಘಾತಕಾರಿ ವಿಚಾರ ಬಹಿರಂಗಪಡಿಸಿದ್ದಾರೆ. ಪೇಜ್ ಬಗ್ಗೆತಿಳಿದ ನಂತರ ಜನರು ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಬಟ್ಟೆ ಏನು ಎಂದು ಮಕ್ಕಳಿಗೆ ಇನ್ನೂ ತಿಳಿದಿಲ್ಲ.
ರಿಯಲ್ ಟೈಂ ಅನುಭವವನ್ನು ಅವರು ತಮ್ಮ ವೀಡಿಯೋದಲ್ಲಿ ಹಂಚಿಕೊಂಡಿದ್ದಾರೆ. ತನಗೆ ಇಬ್ಬರು ಮಲ-ಮಕ್ಕಳಿದ್ದಾರೆ ಎಂದು ಹೇಳಿದ್ದು, ದೊಡ್ಡವನಿಗೆ 3 ವರ್ಷ ಮತ್ತು ಕಿರಿಯನಿಗೆ ಒಂದು ವರ್ಷ ವಯಸ್ಸಾಗಿದೆ ಎಂದೂ ಹೇಳಿದ್ದಾರೆ. ಖಾತೆಯಲ್ಲಿ ಕೊಟ್ಟ ಮಾಹಿತಿ ಅನ್ವಯ, ಅವರು ಎರಡೂ ಗಂಡುಮಕ್ಕಳ ಮುಂದೆ ಬಟ್ಟೆ ಇಲ್ಲದೆ ವಾಸಿಸುತ್ತಾಳೆ. ಈ ಇಬ್ಬರು ಮಕ್ಕಳ ಮುಂದೆ ಆಕೆ ಬಟ್ಟೆ ತೊಡುವ ಸಂದರ್ಭಗಳು ಕಡಿಮೆ. ಆದರೆ, ಆಕೆಯನ್ನು ಟ್ರೋಲ್ ಮಾಡಿದಾಗ, ಮಕ್ಕಳು ತುಂಬಾ ಚಿಕ್ಕವರು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಯಸ್ಕ ಜನರು ಮಾಡುವ ರೀತಿಯಲ್ಲಿ ಅವರು ಇನ್ನೂ ಮಾನವ ದೇಹವನ್ನು ನೋಡುವುದಿಲ್ಲ ಅಥವಾ ಅರ್ಥಮಾಡಿಕೊಳ್ಳುವುದಿಲ್ಲ. ಮಕ್ಕಳು ತುಂಬಾ ಚಿಕ್ಕವರಾಗಿದ್ದು, ಬಟ್ಟೆ ಏನು ಯಾಕೆ ಎಂದು ಅವರಿಗೆ ಇನ್ನೂ ತಿಳಿದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಮುಂದೆ ಬಟ್ಟೆ ಇಲ್ಲದೆ ಬದುಕಲು ತೊಂದರೆಯಾಗಬಾರದು ಎಂದೂ ಹೇಳಿದ್ದಾರೆ.
ನಾನು ಐದು ವರ್ಷದವನಿದ್ದಾಗ ಬಟ್ಟೆ ಧರಿಸುತ್ತೇನೆ
ಖಾತೆಯಲ್ಲಿ ಕೊಟ್ಟ ಮಾಹಿತಿ ಅನ್ವಯ ಮಕ್ಕಳಿಗೆ ಐದು ವರ್ಷ ವಯಸ್ಸಾದಾಗ, ನಾನು ಅವರ ಮುಂದೆ ಬಟ್ಟೆ ಧರಿಸಲು ಪ್ರಾರಂಭಿಸುತ್ತೇನೆ. ಆಗ ಮಕ್ಕಳು ಎಲ್ಲದರ ಬಗ್ಗೆ ಗಮನ ಹರಿಸಲು ಪ್ರಾರಂಭಿಸುತ್ತಾರೆ. ಅವರು ದೊಡ್ಡವರಾದಾಗ ಬಟ್ಟೆ ತೊಡದೆ ಸಮಸ್ಯೆ ಎದುರಾದರೆ ಅಡ್ಡಿಪಡಿಸುತ್ತಾರೆ. ನಂತರ ನಾನು ಧರಿಸಲು ಪ್ರಾರಂಭಿಸುತ್ತೇನೆ ಎಂದಿದ್ದಾರೆ. ಆದರೆ, ಈಗ ಸಾಮಾಜಿಕ ಜಾಲತಾಣ ಬಳಕೆದಾರರು ಈ ಮಹಿಳೆಯನ್ನು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಕೆಲವು ಪೋಷಕರು ತಮ್ಮ ಮಕ್ಕಳು ಚಿಕ್ಕವರಾಗಿದ್ದರೆ ಈ ರೀತಿ ಮಾಡುತ್ತಿರಲಿಲ್ಲ ಎಂದು ಹೇಳಿದರು. ಇದು ತಪ್ಪು, ಮಕ್ಕಳ ಮುಂದೆ ತಾಯಿ ಈ ರೀತಿ ಮಾಡಬಾರದು ಎಂದು ಕೆಲವು ಪೋಷಕರು ಹೇಳಿದ್ದಾರೆ.
ಹದಿಹರೆಯದವರು ನಿಮ್ಮ ಮಾತು ಕೇಳಬೇಕು ಅಂದರೆ ಹೀಗೆ ಮಾಡಿ..
ಸಾಮಾನ್ಯವಾಗಿ ಹೆಚ್ಚಿನ ತಂದೆತಾಯಿಯರು (parents) ತಮ್ಮ ಮಕ್ಕಳು ಹದಿಹರೆಯದ (Teenagers) ವಯಸ್ಸಿಗೆ ಕಾಲಿಟ್ಟಾಗ ಅವರ ಭವಿಷ್ಯದ ಕುರಿತು ಹೆಚ್ಚಿನ ಚಿಂತೆ ಮಾಡುತ್ತಾರೆ. ಇಂತಹ ವಯಸ್ಸಿನಲ್ಲಿ ಮಕ್ಕಳು ಕೈ ತಪ್ಪಿ ಹೋಗುವ ಭಯ ಹೆಚ್ಚಿರುತ್ತದೆ. ಹದಿ ಹರೆಯದ ವಯಸ್ಸಿನಲ್ಲಿ ದೈಹಿಕ ಹಾಗೂ ಮಾನಸಿಕವಾಗಿ ಹಲವಾರು ಬದಲಾವಣೆಗಳನ್ನು ಮಕ್ಕಳು ಎದುರಿಸುತ್ತಾರೆ. ಅದಕ್ಕಾಗಿಯೇ ಮಕ್ಕಳು ಒಂದು ವಯಸ್ಸನ್ನು ದಾಟಿದಮೇಲೆ ಅವರನ್ನು ಸ್ನೇಹಿತರಂತೆ ಕಾಣಬೇಕು ಎಂದು ಹಿರಿಯರು ಹೇಳುತ್ತಾರೆ.
ಇಂತಹ ಸಮಯದಲ್ಲಿ ನಿಮ್ಮ ಮಾತುಕತೆ ಅಥವಾ ನಡತೆಯಲ್ಲಿ ಸ್ವಲ್ಪ ಏರಿಳಿತವಾದರೂ ಅದು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಇಂತಹ ವಯೋಮಾನದ ಮಕ್ಕಳನ್ನು ಸಂಭಾಳಿಸುವಾಗ ಎಚ್ಚರಿಕೆಯಿಂದ (Careful) ಇರಬೇಕು.ಇಂತಹ ಸಮಯದಲ್ಲಿ ನಿಮ್ಮ ಮಕ್ಕಳ ಜೊತೆಗೆ ನೀವು ಹೇಗೆ ನಡೆದುಕೊಳ್ಳಬೇಕು ಎಂಬುದರ ಕುರಿತಾಗಿ ಕೆಲವು ಸಲಹೆಗಳನ್ನು ಪಾಲಿಸಿ..
ಅವರ ಮಾತುಗಳನ್ನು ಆಲಿಸಿ
ನೀವು ನಿಮ್ಮ ಪಾಡಿಗೆ ಬುದ್ಧಿಮಾತುಗಳನ್ನು ಹೇಳುವುದನ್ನು ಕಡಿಮೆ ಮಾಡಿ, ಅವರ ಮನಸ್ಸಿನಲ್ಲಿ ಯಾವ ಯೋಚನೆಗಳು ಹರಿದಾಡುತ್ತಿದೆ ಎಂಬುದರ ಕುರಿತು ಗಮನ ನೀಡಿ. ಪ್ರತಿಬಾರಿಯೂ ಹಿರಿಯರು ಹೇಳಿದ ಮಾತುಗಳನ್ನೇ ಕಿರಿಯರು ಕೇಳಬೇಕು ಎಂಬ ಆಲೋಚನೆಯನ್ನು ಬದಿಗಿಟ್ಟು, ಅವರ ಅಭಿಪ್ರಾಯಗಳಿಗೂ ಮನ್ನಣೆ ನೀಡಿ. ನೀವು ಅವರ ಮಾತುಗಳಿಗೆ ಕಿವಿಗೊಡುತ್ತೀರ (Listen) ಎಂದಾದಾಗ ಅವರು ಕೂಡ ನಿಮ್ಮ ಮಾತುಗಳಿಗೆ ಗೌರವ (Respect) ನೀಡುತ್ತಾರೆ. ಅವರು ಹೇಳಿದ್ದೆಲ್ಲವನ್ನೂ ನೀವು ಆಲಿಸುತ್ತಿದ್ದೀರ ಎಂದ ಮಾತ್ರಕ್ಕೆ ಅವರು ಹೇಳಿದ ಮಾತುಗಳೆಲ್ಲ ಸರಿ ಇದೆ ಎಂದರ್ಥವಲ್ಲ, ಬದಲಿಗೆ ಅವರ ದಾರಿಯಲ್ಲಿ ನೀವು ಹೋಗಿ ಅವರಿಗೆ ಮಾರ್ಗದರ್ಶನ ನೀಡಬೇಕು.
Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ !
ಅವರ ಮೇಲೆ ನಂಬಿಕೆ ಇಟ್ಟು, ಸ್ನೇಹಿತರೊಂದಿಗೆ (Friends) ಬೆರೆಯಲು ಬಿಡಿ.
ಹದಿಹರೆಯದವರು ತೆಗೆದುಕೊಳ್ಳುವ ನಿರ್ಧಾರದಲ್ಲಿ ದೃಢತೆ ಕಡಿಮೆ ಇರಬಹುದು. ಆದರೆ, ಅವರು ಮಾಡಿದ್ದೆಲ್ಲವೂ ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಅವರು ಮಾಡುವ ಪ್ರತಿ ಕೆಲಸಕ್ಕೂ ನೀವು ದೂರು ಹೇಳುವ ಬದಲಾಗಿ ಅವರ ಮೇಲೆ ನಂಬಿಕೆ (Trust) ಇರಿಸಿ ಹಾಗೂ ನೀವು ಅವರನ್ನು ನಂಬಿರುವ ಬಗ್ಗೆ ಅವರಿಗೆ ಮನವರಿಕೆ ಮಾಡಿಸಿ. ಆಗ ನೀವು ಅವರ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರಣಕ್ಕಾದರೂ ಅವರು ತಪ್ಪು ಹಾದಿ ತುಳಿಯುವ ಯೋಚನೆ ಮಾಡುವುದಿಲ್ಲ. ಇನ್ನು ಪದೇಪದೇ ಸ್ನೇಹಿತರೊಂದಿಗೆ ಹೊರಗೆ ಹೋಗಬೇಡಿ ಎಂದು ಬೈಯುವ ಬದಲಾಗಿ ಅವರ ಸ್ನೇಹಿತರನ್ನು ನಿಮ್ಮ ಮನೆಗೆ ಬರಮಾಡಿಕೊಳ್ಳಿ ಅವರ ಸ್ನೇಹ ಬಳಗ ಯಾವ ರೀತಿಯಲ್ಲಿದೆ ಎಂಬುದರ ಬಗ್ಗೆ ನೀವೇ ತಿಳಿದುಕೊಳ್ಳಿ. ಅವರು ತಪ್ಪು ಹಾದಿ ತಿಳಿಯದಂತೆ ಕಾಳಜಿವಹಿಸಿ.
ಹೆಚ್ಚು ಸಮಯ (Time) ಜೊತೆಗೆ ಕಳೆಯಿರಿ
ನಿಮ್ಮ ಕೆಲಸ ಕಾರ್ಯಗಳು ಯಾವಾಗಲೂ ಇರುವಂತಹದು. ಆದರೆ, ನಿಮ್ಮ ಹದಿಹರೆಯದ ಮಕ್ಕಳಿಗಾಗಿ ಹೆಚ್ಚಿನ ಸಮಯವನ್ನು ನೀಡಿ ಅವರೊಂದಿಗೆ ಮಾತನಾಡಿ, ಆಟವಾಡಿ, ಸಿನಿಮಾ ನೋಡಿ, ಹೊರಗೆ ಹೋಗಿ ಹೀಗೆ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಅವರೊಂದಿಗೆ ಕಳೆಯಲು ಪ್ರಯತ್ನಿಸಿ. ಆಗ, ಅವರ ಮನಸ್ಸಿನ ಇಚ್ಛೆಗಳು ಏನು ಎಂಬ ಕಲ್ಪನೆ ನಿಮಗೆ ಬರುತ್ತದೆ. ಅವರ ಇಷ್ಟ-ಕಷ್ಟಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಇದರ ಜೊತೆಗೆ, ಅವರಿಗೂ ಕೂಡ ನಿಮ್ಮ ಬಗ್ಗೆ ಪ್ರೀತಿ (Love) ಗೌರವ ಹೆಚ್ಚುತ್ತದೆ.
Personality Development: ಸ್ವಭಾವ ಬದಲಾಯಿಸ್ಕೊಳ್ಳಿ ಎಲ್ಲಾ ಸರಿಯಾಗುತ್ತೆ
ಅವರ ಮಿತಿಯನ್ನು ತಿಳಿಸಿಕೊಡಿ
ನೀವು ಅದರೊಂದಿಗೆ ಬಹಳ ಸ್ನೇಹದಿಂದ ಇದ್ದೀರ. ಆದರೆ, ಅದನ್ನೇ ಅವರು ಅಡ್ವಾಂಟೇಜ್ (Advantage) ಆಗಿ ತೆಗೆದುಕೊಂಡು ತಪ್ಪು ದಾರಿ ತುಳಿಯಬಾರದು. ಅದಕ್ಕಾಗಿ ನಿಮ್ಮದೇ ದಾರಿಯಲ್ಲಿ ಅವರ ಮಿತಿ ಯಾವುದು, ಯಾವುದು ತಪ್ಪು, ಯಾವುದು ಸರಿ ಎಂಬುದರ ಅರಿವನ್ನು ಮೂಡಿಸಿ. ಸರಿ ದಾರಿಯಲ್ಲಿ ನಡೆಯಯುವಂತೆ ನೋಡಿಕೊಳ್ಳಿ.