ವಾಷಿಂಗ್ಸನ್[ಅ.12]: ಡೆಬ್ರಾ ಲೈವರ್ ಹಾಗೂ ಆಕೆಯ ಪತಿ ಮಾರ್ಟಿನ್ ಲಂಡನ್ ನಿವಾಸಿಗಳು. 60 ವರ್ಷದ ಡೆಬ್ರಾಗೆ ಸಮುದ್ರ ತಟದಲ್ಲಿ ಸಿಗುವ ಚಿಪ್ಪು, ಶಂಖ ಮೊದಲದುವುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಹೀಗಿರುವಾಗ ಇಬ್ಬರೂ ತಮ್ಮ 42ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ವಿನ್ ಚೆಲ್ಸೀ ಬೀಚ್ ಗೆ ತೆರಳಿದ್ದರು. 

ಬೀಚ್ ತಲುಪಿದ್ದ ಡೆಬ್ರಾ ಎಂದಿನಂತೆ ಚಿಪ್ಪುಗಳನ್ನು ಆಯುವಲ್ಲಿ ತಲ್ಲೀನರಾಗಿದ್ದರು. ಹೀಗಿರುವಾಗ ಅಲ್ಲೊಂದು ಶಾಕಿಂಗ್ ಘಟನೆ ನಡೆದಿದೆ. ಇದ್ದಕ್ಕಿದ್ದಂತೆಯೇ ಮನುಷ್ಯನ ಮುಖವನ್ನು ಹೋಲುವ ಚಿಪ್ಪೊಂದು ಪತ್ತೆಯಾಗಿದ್ದು, ಇದು ಜಾಗತಿಕ ಉಗ್ರ ಒಸಾಮಾ ಬಿನ್ ಲಾಡೆನ್ ರಂತೆ ಕಾಣುತ್ತಿತ್ತು.

ಈ ಕುರಿತಾಗಿ ಪ್ರತಿಕ್ರಿಯಿಸಿರುವ ದಂಪತಿ 'ಈ ಚಿಪ್ಪು ನೋಡಿ ಶಾಕ್ ಆಯ್ತು. ಆದರೆ ನಗು ಕೂಡಾ ತಡೆಯಲಾಗಲಿಲ್ಲ. ಇದೊಂದು ಪುಟ್ಟ ಮೊಮೆಂಟೋದಂತೆ ಕಂಡು ಬರುತ್ತಿತ್ತು. ಇನ್ನು ಈ ಚಿಪ್ಪು ಒಸಾಮಾ ಬಿನ್ ಲಾಡೆನ್ ಮುಖವನ್ನು ಹೋಲುತ್ತಿದ್ದು, ಅತ್ತ ಒಸಾಮ ಮೃತ ದೇಹವನ್ನು ಸಮುದ್ರದಾಳದಲ್ಲೇ ಧಫನ ಮಾಡಲಾಗಿತ್ತು ಎಂಬುವುದು ಇನ್ನೂ ಅಚ್ಚರಿಯ ವಿಚಾರ' ಎಂದಿದ್ದಾರೆ.

ಇನ್ನು ಮನುಷ್ಯನ ಮುಖವನ್ನು ಹೋಲುವ ಚಿಪ್ಪು ಸಿಗುವುದು ಬಹಳ ಅಪರೂಪ. ಸದ್ಯ ಈ ಫೋಟೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಚ್ಚರಿ ಮೂಡಿಸುತ್ತಿದೆ.