ವಿಮಾನದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ ಸವಿನೆನಪಿಗಾಗಿ ಮಗುವಿಗೆ ಸ್ಕೈ ಎಂದು ಹೆಸರು ಅಮೆರಿಕಾದ ಫ್ಲೋರಿಡಾದಲ್ಲಿ ಘಟನೆ

ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ ಘಟನೆ ಅಮೆರಿಕಾದ ಫ್ಲೋರಿಡಾದಲ್ಲಿ ನಡೆದಿದೆ. ಮೇ 17 ರಂದು ಫ್ಲೋರಿಡಾಕ್ಕೆ ತೆರಳುತ್ತಿದ್ದ ಫ್ರಾಂಟಿಯರ್ ಏರ್‌ಲೈನ್ಸ್‌ಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. ಅಮೆರಿಕಾ ಮೂಲದ ಏರ್‌ಲೈನ್ಸ್ ಆಗಿರುವ ಫ್ರಾಂಟಿಯರ್ ಏರ್‌ಲೈನ್ಸ್‌ ಈ ವಿಚಾರವನ್ನು ತನ್ನ ಅಧಿಕೃತ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಮಧ್ಯ ಆಗಾಸದಲ್ಲಿ ವಿಮಾನದ ಶೌಚಾಲಯದಲ್ಲಿ ಮಹಿಳೆಯೊಬ್ಬರು ಆರೋಗ್ಯಯುತ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅದು ತಿಳಿಸಿದೆ.

ವಿಮಾನದ ಅಂಟೆಂಡೆಂಟ್ ಡಿಯಾನಾ ಗೆರಾಲ್ದೊ (Diana Geraldo) ಅವರು ಈ ಮಹಿಳಾ ಪ್ಯಾಸೆಂಜರ್‌ಗೆ ಹೆರಿಗೆ ಸಮಯದಲ್ಲಿ ಸಹಾಯ ಮಾಡಿದರು ಎಂದು ತಿಳಿದು ಬಂದಿದೆ. ಶಕೆರಿಯಾ ಮಾರ್ಟಿನ್‌ (Shakeria Martin) ಎಂಬುವರೇ ಫ್ಲೈಟ್‌ನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ. ಅವರಿಗೆ ಡೆನೆವರ್‌ದಿಂದ (Denver) ಒರ್ಲಾಂಡೊಗೆ (Orlando)ಹೊರಟಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಅನಿರೀಕ್ಷಿತ ಹಾಗೂ ಅವಧಿಪೂರ್ವವೇ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನ ಹತ್ತಿದ ಪ್ರಾರಂಭದಲ್ಲಿ ಶಕೆರಿಯಾ ಮಾರ್ಟಿನ್‌ ಆರೋಗ್ಯವಾಗಿಯೇ ಇದ್ದರು. ಅಲ್ಲದೇ ವಿಮಾನದಲ್ಲಿ ಸಣ್ಣ ನಿದ್ದೆಗೂ ಜಾರಿದ್ದರು. ಆದರೆ ಸ್ವಲ್ಪಹೊತ್ತಿನಲ್ಲೇ ತಡೆಯಲಾಗದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ವಿಮಾನದಲ್ಲಿ ಹೀಗಾಗುವುದು ಎಂಬ ನಿರೀಕ್ಷೆ ಅವರಿಗೆ ಇರಲಿಲ್ಲ. 

ನಂತರ ಗಗನಸಖಿ ಅವರನ್ನು ವಿಮಾನದ ಹಿಂಭಾಗದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಅಲ್ಲದೇ ಮಗುವಿಗೆ ಜನ್ಮ ನೀಡಲು ಅವರಿಗೆ ಸಹಾಯ ಮಾಡಿದ್ದಾರೆ. ವಿಮಾನವನ್ನು ಚಲಾಯಿಸುತ್ತಿದ್ದ ಪೈಲಟ್‌ ಕ್ಯಾಪ್ಟನ್‌ ಚೆರಿಸ್ ನ್ಯೆ (Captain Chris Nye) ಈ ಬಗ್ಗೆ ಮಾತನಾಡಿದ್ದು, ಮಹಿಳೆ ವಿಮಾನದಲ್ಲೇ ಮಗುವಿಗೆ ಜನ್ಮ ನೀಡಿದ್ದರಿಂದ ಮೂರು ಗಂಟೆ ಪ್ರಯಾಣದ ವಿಮಾನವನ್ನು ಪ್ಲೋರಿಡಾದ (Florida) ಪೆನ್ಸಕೊಲಾ ವಿಮಾನ ನಿಲ್ದಾಣಕ್ಕೆ (Pensacola Airport) ತಿರುಗಿಸಲಾಯಿತು. ಅಲ್ಲಿ ವೈದ್ಯರ ತಂಡ ಹೊಸ ಮಗು ತಾಯಿಗಾಗಿ ಕಾಯುತ್ತಿತ್ತು. ಅಲ್ಲಿ ತಾಯಿ ಹಾಗೂ ಮಗುವನ್ನು ಬಿಟ್ಟ ನಂತರ ನಾವು ಮತ್ತೆ ಒರ್ಲಾಂಡೊಗೆ (Orlando) ಪ್ರಯಾಣ ಬೆಳೆಸಿದೆವು ಎಂದು ಹೇಳಿದರು.

ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ವಿಮಾನದ ಎಲ್ಲಾ ಸಿಬ್ಬಂದಿ ಈ ಸಂದರ್ಭದಲ್ಲಿ ಆಕೆಯ ನೆರವಾಗಿ ಬಂದಿದ್ದಾರೆ. ಎಲ್ಲರೂ ಉತ್ತಮ ಕೆಲಸ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ತಾಯಿ ಈ ಮಗುವಿಗೆ ಮಧ್ಯದ ಹೆಸರನ್ನು ಸ್ಕೈ ಎಂದು ಇಟ್ಟಿದ್ದಾರೆ . ಇಂತಹ ವಿಭಿನ್ನವಾದ ಸಂದರ್ಭದಲ್ಲಿ ಆಕೆ ಹುಟ್ಟಿದನ್ನು ಸದಾ ನೆನಪಿಸಲು ಹೀಗೆ ಹೆಸರಿಡಲಾಗಿದೆ ಎಂದು ತಿಳಿದು ಬಂದಿದೆ. 

ನಡು ಆಗಸದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ