ಅಮೆರಿಕವನ್ನು ದ್ವೇಷಿಸುವ ದೇಶಗಳಿಗೆ ವಿದೇಶಿ ನೆರವಿನ ಪ್ರತಿ ಸೆಂಟ್‌ ಅನ್ನೂ ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಇದು ಚೀನಾ, ಪಾಕಿಸ್ತಾನ ಮತ್ತು ಇತರ ಎದುರಾಳಿಗಳನ್ನು ಒಳಗೊಂಡಿರುತ್ತದೆ. ಏಕೆಂದರೆ ಬಲಿಷ್ಠ ಅಮೆರಿಕವು ಕೆಟ್ಟ ವ್ಯಕ್ತಿಗಳಿಗೆ ಹಣ ನೀಡಲ್ಲ ಎಂದು ಅವರು ಹೇಳಿದ್ದಾರೆ.

ವಾಷಿಂಗ್ಟನ್‌ (ಫೆಬ್ರವರಿ 26,2023): ಭಾರತೀಯ ಮೂಲದ ಅಮೆರಿಕದ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ನಿಕ್ಕಿ ಹ್ಯಾಲೆ ಚೀನಾ, ಪಾಕ್‌ ವಿರುದ್ಧ ಕಿಡಿಕಾರಿದ್ದಾರೆ. ತಾನು ಅಧಿಕಾರಕ್ಕೆ ಬಂದರೆ, ಅಮೆರಿಕವನ್ನು ದ್ವೇಷಿಸುವ ದೇಶಗಳಿಗೆ ವಿದೇಶಿ ನೆರವಿನ ಪ್ರತಿ ಸೆಂಟ್‌ ಅನ್ನೂ ಕಡಿತಗೊಳಿಸುವುದಾಗಿ ಹೇಳಿದ್ದಾರೆ. ಇದು ಚೀನಾ, ಪಾಕಿಸ್ತಾನ ಮತ್ತು ಇತರ ಎದುರಾಳಿಗಳನ್ನು ಒಳಗೊಂಡಿರುತ್ತದೆ. ಏಕೆಂದರೆ ಬಲಿಷ್ಠ ಅಮೆರಿಕವು ಕೆಟ್ಟ ವ್ಯಕ್ತಿಗಳಿಗೆ ಹಣ ನೀಡಲ್ಲ ಎಂದು ಅವರು ಹೇಳಿದ್ದಾರೆ.

"ನಮ್ಮನ್ನು ದ್ವೇಷಿಸುವ ದೇಶಗಳಿಗೆ (Country) ವಿದೇಶಿ ನೆರವಿನ (Foreign Aid) ಪ್ರತಿ ಸೆಂಟ್‌ (Cent) ಅನ್ನೂ ನಾನು ಕಡಿತಗೊಳಿಸುತ್ತೇನೆ. ಬಲಿಷ್ಠ ಅಮೆರಿಕ (America) ಕೆಟ್ಟ ವ್ಯಕ್ತಿಗಳಿಗೆ ಹಣ ನೀಡಲ್ಲ. ಹೆಮ್ಮೆಯ ಅಮೆರಿಕ ನಮ್ಮ ಜನರ ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡುವುದಿಲ್ಲ. ಮತ್ತು ನಮ್ಮ ನಂಬಿಕೆಗೆ ಅರ್ಹರಾದ ಏಕೈಕ ನಾಯಕರು ನಮ್ಮ ಶತ್ರುಗಳ ವಿರುದ್ಧ ನಿಲ್ಲುವವರು ಮತ್ತು ನಮ್ಮ ಸ್ನೇಹಿತರ (Friend) ಪಕ್ಕದಲ್ಲಿ ನಿಲ್ಲುವವರು" ಎಂದು ದಕ್ಷಿಣ ಕೆರೊಲಿನಾದ (South Carolina) ಮಾಜಿ ಗವರ್ನರ್ ಮತ್ತು ಯುಎನ್‌ನಲ್ಲಿನ ಮಾಜಿ ಯುಎಸ್ ರಾಯಭಾರಿ ನಿಕ್ಕಿ ಹ್ಯಾಲೆ (Nikki Haley) ನ್ಯೂಯಾರ್ಕ್ ಪೋಸ್ಟ್‌ನಲ್ಲಿ ಆಪ್‌ - ಎಡ್‌ನಲ್ಲಿ ಬರೆದಿದ್ದಾರೆ.

ಇದನ್ನು ಓದಿ: ಅಮೆರಿಕ ಅಧ್ಯಕ್ಷ ಚುನಾವಣೆ: ಟ್ರಂಪ್‌ ವಿರುದ್ಧ ಭಾರತೀಯ ಮೂಲದ ನಿಕ್ಕಿ ಹ್ಯಾಲೆ ಸ್ಪರ್ಧೆ

ಅಮೆರಿಕ ಕಳೆದ ವರ್ಷ ವಿದೇಶಿ ನೆರವಿಗಾಗಿ 46 ಬಿಲಿಯನ್‌ ಡಾಲರ್‌ ಖರ್ಚು ಮಾಡಿದೆ ಎಂದು ನಿಕ್ಕಿ ಹ್ಯಾಲೆ ಹೇಳಿಕೊಂಡಿದ್ದಾರೆ. ಇದು ಇಲ್ಲಿಯವರೆಗೆ ಯಾವುದೇ ದೇಶಕ್ಕಿಂತ ಅತಿ ಹೆಚ್ಚಾಗಿದೆ. ತೆರಿಗೆದಾರರು ಆ ಹಣ ಎಲ್ಲಿಗೆ ಹೋಗುತ್ತಿದೆ ಮತ್ತು ಅದು ಏನು ಮಾಡುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಅರ್ಹರು. ಅದರಲ್ಲಿ ಹೆಚ್ಚಿನವು ಅಮೆರಿಕದ ವಿರೋಧಿ ರಾಷ್ಟ್ರಗಳಿಗೆ ಮತ್ತು ಕಾರಣಗಳಿಗಾಗಿ ಫಂಡ್‌ ಹೋಗುವುದನ್ನು ಕಂಡು ಅವರು ಆಘಾತಕ್ಕೊಳಗಾಗುತ್ತಾರೆ ಎಂದೂ ಅವರು ಬರೆದಿದ್ದಾರೆ.

ನಿಕ್ಕಿ ಹ್ಯಾಲೆ ಫೆಬ್ರವರಿ 15 ರಂದು ಶ್ವೇತಭವನಕ್ಕಾಗಿ ತನ್ನ 2024 ರ ಅಧ್ಯಕ್ಷೀಯ ಚುನಾವಣೆಗೆ ಪ್ರಚಾರವನ್ನು ಪ್ರಾರಂಭಿಸಿದರು (ಸ್ಥಳೀಯ ಸಮಯ). ಬ್ಯಾಲೆಟ್ ಬಾಕ್ಸ್‌ನಲ್ಲಿ ಗೆಲ್ಲಬಹುದಾದ ರಿಪಬ್ಲಿಕನ್ ನಾಯಕರ "ಹೊಸ ತಲೆಮಾರಿನ" ಭಾಗವಾಗಿ ಮತದಾರರಿಗೆ ತನ್ನನ್ನು ತಾನು ಪರಿಚಯಿಸಿಕೊಂಡರು. ನಿಕ್ಕಿ ಹ್ಯಾಲಿ ಈಗ ರಿಪಬ್ಲಿಕನ್ ಪಕ್ಷದಿಂದ ಅಧ್ಯಕ್ಷೀಯ ಬಿಡ್‌ಗೆ ಸ್ಪರ್ಧಿಸಿದ ಮೊದಲ ಭಾರತೀಯ ಅಮೆರಿಕನ್ ಮಹಿಳೆಯಾಗಿದ್ದಾರೆ. ದಕ್ಷಿಣ ಕೆರೊಲಿನಾದ ಮಾಜಿ ಗವರ್ನರ್ ಮತ್ತು ವಿಶ್ವಸಂಸ್ಥೆಯ ಯುಎಸ್ ರಾಯಭಾರಿಯಾಗಿ ವೇದಿಕೆಗೆ ಬಂದಂತೆ, ಹ್ಯಾಲಿ ರಿಪಬ್ಲಿಕನ್ ಪಕ್ಷಕ್ಕೆ ಹೊಸ ಭವಿಷ್ಯವನ್ನು ರೂಪಿಸುವ ಭಾರತೀಯ ವಲಸಿಗರ ಹೆಮ್ಮೆಯ ಪುತ್ರಿ ಎಂದು ಪರಿಚಯಿಸಿಕೊಂಡಿದ್ದರು.

ಇದನ್ನೂ ಓದಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ರಹಸ್ಯವಾಗಿ ಉಕ್ರೇನ್‌ಗೆ ಭೇಟಿ ನೀಡಿದ್ದು ಹೇಗೆ?

ಇರಾನ್‌ನಲ್ಲಿರುವ ಕೊಲೆಗಡುಕರಿಗೆ ಆ ಸರ್ಕಾರವು ಹತ್ತಿರವಾಗುತ್ತಿದ್ದರೂ ಸಹ ಮತ್ತು ನಮ್ಮ ಪಡೆಗಳ ಮೇಲೆ ದಾಳಿಗಳನ್ನು ಪ್ರಾರಂಭಿಸಿದರೂ, ಕಳೆದ ಕೆಲವು ವರ್ಷಗಳಿಂದ ಅಮೆರಿಕ ಇರಾನ್‌ಗೆ 2 ಬಿಲಿಯನ್‌ ಡಾಲರ್‌ಗಿಂತ ಹೆಚ್ಚಿನ ಹಣವನ್ನು ನೀಡಿದೆ ಎಂದು ಆಪ್-ಎಡ್‌ನಲ್ಲಿ ನಿಕ್ಕಿ ಹ್ಯಾಲಿ ಉದಾಹರಣೆಗಳನ್ನು ಉಲ್ಲೇಖಿಸುತ್ತಾ ಹೇಳಿದರು. ಅಲ್ಲದೆ, ಬೈಡೆನ್‌ ಆಡಳಿತವು ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯವನ್ನು ಪುನಾರಂಭಿಸಿದೆ. ಹಾಗೂ, ವಿಶ್ವಸಂಸ್ಥೆಯಲ್ಲಿ ಅತ್ಯಂತ ಅಮೆರಿಕ ವಿರೋಧಿ ಮತದಾನದ ದಾಖಲೆಗಳನ್ನು ಹೊಂದಿರುವ ದೇಶವಾದ ಜಿಂಬಾಬ್ವೆಗೆ ನೂರಾರು ಮಿಲಿಯನ್ ಡಾಲರ್‌ಗಳನ್ನು ನೀಡಿದೆ. ಹಾಗೆ, ಚೀನಾ ಅಮೆರಿಕನ್ನರಿಗೆ ಒಡ್ಡುವ ಸ್ಪಷ್ಟ ಬೆದರಿಕೆಯ ಹೊರತಾಗಿಯೂ, ಅಮೆರಿಕದ ತೆರಿಗೆದಾರರು ಈಗಲೂ ಹಾಸ್ಯಾಸ್ಪದ ಪರಿಸರ ಕಾರ್ಯಕ್ರಮಗಳಿಗಾಗಿ ಕಮ್ಯುನಿಸ್ಟ್ ಚೀನಾಕ್ಕೆ ಹಣ ನೀಡುತ್ತಾರೆ ಎಂದೂ ನಿಕ್ಕಿ ಹ್ಯಾಲೆ ಪ್ರಸ್ತಾಪಿಸಿದ್ದಾರೆ.

ರಿಪಬ್ಲಿಕನ್ ನಾಯಕಿ ನಿಕ್ಕಿ ಹ್ಯಾಲೆ ನಂತರ, ಮತ್ತೊಬ್ಬರು ಭಾರತೀಯ-ಅಮೆರಿಕ ಮೂಲದ, ಆರೋಗ್ಯ ಮತ್ತು ತಂತ್ರಜ್ಞಾನ ಕ್ಷೇತ್ರದ ಉದ್ಯಮಿ ವಿವೇಕ್ ರಾಮಸ್ವಾಮಿ ಬುಧವಾರ ತಮ್ಮ 2024 ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ದಿಸುವುದಾಗಿ ಘೋಷಿಸಿದರು.
ಇದನ್ನೂ ಓದಿ: ಜಪಾನ್‌ ಬಳಿ ಉತ್ತರ ಕೊರಿಯಾ ಕ್ಷಿಪಣಿ ಪತನ: ತೀವ್ರ ಆತಂಕ