Asianet Suvarna News Asianet Suvarna News

ಮಲಗಿದ್ದ ಸಿಂಹವ ತಿವಿದೆಬ್ಬಿಸಿ ಎತ್ತಿ ಎಸೆದ ಕಾಡುಕೋಣಗಳು: ವೈರಲ್ ವಿಡಿಯೊ

ಅದೇ ರೀತಿ ಇಲ್ಲೊಂದು ಕಡೆ ಕಾಡುಕೋಣ/ಕಾಡೆಮ್ಮೆಗಳ ಗುಂಪೊಂದು ಮಲಗಿದ್ದ ವಯಸ್ಸಾದ ಅಸಹಾಯಕ ಸಿಂಹವನ್ನು ಕೊಂಬಿನಲ್ಲಿ ತಿವಿದು ಬಡಿದೆಬ್ಬಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

wild buffaloes attacks on old lion, watch rare video of wildlife akb
Author
First Published Nov 25, 2022, 3:50 PM IST

ಸಾಮಾನ್ಯವಾಗಿ ಕಾಡುಪ್ರಾಣಿಗಳ ಪರಸ್ಪರ ಒಡನಾಟ ನೋಡಲು ಸಿಗುವುದು ಬಲು ಅಪರೂಪ. ಆದಾಗ್ಯೂ ಕೆಲ ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ಸಮಯದಲ್ಲಿ ಕೆಲವು ಜಿಯೋಗ್ರಾಫಿಕ್ ಚಾನೆಲ್‌ಗಳು ಸೆರೆ ಹಿಡಿದ ವಿಡಿಯೋಗಳು ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಕಾಡುಕೋಣ/ಕಾಡೆಮ್ಮೆಗಳ ಗುಂಪೊಂದು ಮಲಗಿದ್ದ ವಯಸ್ಸಾದ ಅಸಹಾಯಕ ಸಿಂಹವನ್ನು ಕೊಂಬಿನಲ್ಲಿ ತಿವಿದು ಬಡಿದೆಬ್ಬಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಸಾಮಾನ್ಯವಾಗಿ ಸಿಂಹಗಳ ಸುದ್ದಿಗೆ ಬೇರಾವ ಪ್ರಾಣಿಗಳು ಹೋಗುವುದಿಲ್ಲ. ಸಿಂಹಗಳು ಅಷ್ಟೇ ಹಸಿದಿದ್ದರಷ್ಟೇ ಬೇರೆ ಪ್ರಾಣಿಗಳ ಮೇಲೆ ಬೇಟೆಯಾಡಿ ತಮ್ಮ ಹೊಟ್ಟೆ ತುಂಬಿಸುತ್ತವೆ. ಆದರೆ ಇಲ್ಲಿ ಈ ಕಾಡುಕೋಣಗಳಿಗೆ ಸಿಂಹವೇನು ಆಹಾರವಲ್ಲ. ಕಾಡುಕೋಣಗಳು ಸಸ್ಯಹಾರಿ ಪ್ರಾಣಿಗಳಾಗಿದ್ದು, ಸಿಂಹದ ಸುದ್ದಿಗೆ ಹೋಗುವುದಿಲ್ಲ. ಆದರೂ ಇಲ್ಲಿ ವಿಚಿತ್ರವೆಂಬಂತೆ ಮಲಗಿದ್ದ ಅಸಹಾಯಕ ಸಿಂಹದ ಮೇಲೆ ಕಾಡುಕೋಣಗಳ ಹಿಂಡು ತಮ್ಮ ದರ್ಪ ತೋರಿದ್ದು, ಅದನ್ನು ಕೊಂಬಿನಲ್ಲಿ ತಿವಿದಿದ್ದಲ್ಲದೇ, ಮೇಲೆತ್ತಿ ಕೆಳಗೆಸೆದು ಅದರ ಮೇಲೆ ಹಲ್ಲೆ ನಡೆಸಿವೆ. ಕಾಡುಕೋಣಗಳ ಉಪದ್ರ ತಡೆಯಲಾಗದೇ ಸಿಂಹ ಪೊದೆಯೊಂದನ್ನು ಸೇರಲು ನೋಡುತ್ತದೆ. ಆದರೂ ಬಿಡದೇ ಕಾಡುಕೋಣಗಳು ಅಲ್ಲಿಗೂ ದಾಳಿ ಇಟ್ಟು ಸಿಂಹವನ್ನು ಮೇಲೆ ಕೆಳಗೆ ಮಾಡುತ್ತವೆ. ಆದರೆ ಅಷ್ಟರಲ್ಲಿ ಸಿಂಹದ ಪರಿವಾರ ಅಲ್ಲಿಗೆ ಬಂದಿದ್ದು, ಅವುಗಳನ್ನು ನೋಡಿ ಕಾಡುಕೋಣಗಳು ಸುಮ್ಮನಾಗಿವೆ.  \

 

ಹುಲಿಗಳ ಭೀಕರ ಕಾದಾಟ... ವಿಡಿಯೋ ವೈರಲ್

ಡಿಯಾನೋ ವೈಲ್ಡ್‌ಲೈಫ್ ಫೋಟೋಗ್ರಾಫಿ (Photography) ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ಆ ವಿಡಿಯೋದ ದೃಶ್ಯಗಳ ಬಗ್ಗೆ ಅವರು ಹಲವು ವಿವರಗಳನ್ನು ನೀಡಿದ್ದಾರೆ. ಹೀಗೆ ಕಾಡು ಕೋಣಗಳ ಹಿಂಡಿನಿಂದ ದಾಳಿಗೊಳಗಾದ ವಯಸ್ಸಾದ ಸಿಂಹದ ಹೆಸರು ಡಾರ್ಕ್ ಮನೆ ಅವೊಕ (Dark Mane Avoca). ತನ್ನ ಪರಿವಾರ ಬರುವುದಕ್ಕೂ ಮೊದಲು 15 ನಿಮಿಷಗಳ ಕಾಲ ಈ ಸಿಂಹವನ್ನು ಕಾಡುಕೋಣಗಳು ಕಾಡಿಸಿವೆ. ಈ ವಿಡಿಯೋವನ್ನು 1.5 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಸೊಂಡಿಲಿನಿಂದ ಪತ್ರಕರ್ತನ ಕಿವಿಹಿಂಡಿ ಮೂಗೆಳೆದ ಆನೆಮರಿ

ಆದರೆ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media)  ವೈರಲ್ ಆಗುತ್ತಿದ್ದಂತೆ ಅನೇಕರು ಸಿಂಹದ ಬಗ್ಗೆ ಕರುಣೆ ವ್ಯಕ್ತಪಡಿಸಿದ್ದಾರೆ. ಕಾಡುಕೋಣಗಳಿಂದ ಈ ರೀತಿ ಮಾರಕ ದಾಳಿಯೇ ಎಂದು ಕೆಲವರು ಪ್ರಶ್ನಿಸಿದ್ದಾರೆ. ಕಾಡುಕೋಣಗಳ ದಾಳಿಯ ನಂತರ ಸಿಂಹದ ಆರೋಗ್ಯ ಹೇಗಿದೆ. ಅದು ಆರೋಗ್ಯವಾಗಿದೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಆದರೆ ಸಿಂಹದ ನೆರವಿಗೆ ಯಾರು ಧಾವಿಸಿ ಬರಲಿಲ್ಲವೇಕೆ. ಕಾಡುಕೋಣಗಳೇನು (buffalo) ಸಿಂಹವನ್ನು (Lion) ತಿನ್ನುವುದಿಲ್ಲ. ಹೀಗಾಗಿ ಕೊಲ್ಲುವುದಕ್ಕಾಗಿಯೇ ದಾಳಿ ಮಾಡಿವೆ ಎಂದು ಕೆಲವರು ಹೇಳಿದ್ದಾರೆ. 

ರಸ್ತೆ ಬದಿಯ ಸ್ಟಾಲ್‌ಗೆ ಭೇಟಿ ನೀಡಿ ಬೃಹತ್ ಸಾರಂಗ: ಅಪರೂಪದ ದೃಶ್ಯ ಸೆರೆ

ಒಟ್ಟಿನಲ್ಲಿ ಅದ್ಯಾಕೆ ಈ ಕಾಡುಕೋಣಗಳಿಗೆ ಈ ಬುದ್ಧಿಬಂತು ಗೊತ್ತಿಲ್ಲ. ಬಹುಶಃ ಸಿಂಹ ಸಶಕ್ತವಾಗಿದ್ದಾಗ ಮಾಡುತ್ತಿದ್ದ ದಾಳಿಯಿಂದ ಸಿಟ್ಟಿಗೆದ್ದು, ಕಾಡುಕೋಣಗಳು ಅದರ ಮೇಲೆ ದಾಳಿ ನಡೆಸಲು ಮುಂದಾಗಿರಬೇಕು ಎಂದೆನಿಸುತ್ತಿದೆ ಒಟ್ಟಿನಲ್ಲಿ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಎಂಬಂತೆ ಇಷ್ಟು ದಿನ ತಮ್ಮನ್ನು ಕಾಡುತ್ತಿದ್ದ ಸಿಂಹದ ಮೇಲೆ ಇವು ಸೇಡು ತೀರಿಸಿಕೊಳುತ್ತಿದೆ. 

Follow Us:
Download App:
  • android
  • ios