ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ!
ವಿಶ್ವವೇ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿದೆ. ಎಲ್ಲಾ ದೇಶಗಳು ಲಸಿಕೆಗಾಗಿ ಕಾಯುತ್ತಿವೆ. ಭಾರತದಲ್ಲಿ ಈಗಾಗಲೇ ಲಸಿಕೆ ವಿತರಣೆ ಕಾರ್ಯ ನಡೆಯುತ್ತದೆ. ಕೊರೋನಾ ವಿರುದ್ದ ಭಾರತದ ಹೋರಾಟ ಇಷ್ಟಕ್ಕೆ ಸಿಮೀತವಾಗಿಲ್ಲ. ಇದೀಗ ಭಾರತ ಇತರ ದೇಶಗಳಿಗೂ ಲಸಿಕೆ ಪೂರೈಕೆ ಮಾಡುತ್ತಿದೆ. ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ಕೆ ಇದೀಗ ವಿಶ್ವ ಆರೋಗ್ಯ ಸಂಸ್ಥೆ ಧನ್ಯವಾದ ಹೇಳಿದೆ.
ಜಿನೆವಾ(ಜ.23): ಕೊರೋನಾ ಲಸಿಕೆ ಪೂರೈಸಿದ ಕಾರಣಕ್ಕೆ ಬ್ರೇಜಿಲ್ ದೇಶ ಸಂಜೀವಿನ ಹಿಡಿದು ಹನುಮಂತ ಭಾರತದಿಂದ ಬ್ರಿಜಿಲ್‌ಗೆ ಹಾರುವ ಫೋಟೋ ಮೂಲಕ ಧನ್ಯವಾದ ಹೇಳಿತ್ತು. ಇಂಡೋನೇಷಿಯಾ ಸೇರಿದಂತೆ ನೆರೆ ರಾಷ್ಟ್ರಗಳಿಗೆ ಭಾರತದ ಲಸಿಕೆ ತಲುಪಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವದಿಂದಲೇ ಕೊರೋನಾ ಹೊಡೆದೋಡಿಸಲು ನೆರವಾಗುತ್ತಿದ್ದಾರೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಂಜೀವಿನಿ ಹೊತ್ತ ಹನುಮಂತನ ಫೋಟೋ ಜೊತೆ ಮೋದಿಗೆ ಥ್ಯಾಂಕ್ಸ್ ಹೇಳಿದ ಬ್ರೆಜಿಲ್ ಅಧ್ಯಕ್ಷ
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವಕ್ಕೆ ನೆರವಾಗುತ್ತಿರುವ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೋಸ್ ಅಧನೊಮ್ ಗೆಬ್ರಿಯೆಸಸ್ ಧನ್ಯವಾದ ಹೇಳಿದ್ದಾರೆ.
ಜಾಗತಿಕ ಕೊರೋನಾ ವೈರಸ್ ವಿರುದ್ಧ ಹೋರಾಡಲು ನೀವು ನೀಡುತ್ತಿರುವ ನಿರಂತರರ ಬೆಂಬಲ ಹಾಗೂ ನೆರವಿಗೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ಒಗ್ಗಟ್ಟಾಗಿ ನಿಂತು ಹೋರಾಡಿದರೆ ಮಾತ್ರ ಕೊರೋನಾ ವಿರುದ್ಧ ಯಶಸ್ಸು ಸಾಧ್ಯ. ಕೊರೋನಾ ಅಪಾಯದಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯ ಎಂದು ಗೆಬ್ರಿಯೆಸಸ್ ಟ್ವೀಟ್ ಮಾಡಿದ್ದಾರೆ.
ಕೊರೋನಾ ವಿರುದ್ಧ ವಿಶ್ವದ ಅತೀ ದೊಡ್ಡ ವ್ಯಾಕ್ಸಿನೇಷನ್‌ಗೆ ಚಾಲನೆ ನೀಡಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಗೆ ವಿಶ್ವದ ನಾಯಕರು ಶ್ಲಾಘಿಸಿದ್ದರು. ಇದೀಗ ಇತರ ದೇಶಗಳಿಗೆ ಭಾರತದ ಕೊರೋನಾ ಲಸಿಕೆ ತಲುಪುತ್ತಿದೆ. ಈ ಮೂಲಕ ವಿಶ್ವ ಇದೀಗ ಕೊರೋನಾ ವಿರುದ್ಧ ಹೋರಾಡಲು ಶಕ್ತವಾಗುತ್ತಿದೆ.
ಮುಂದಿನ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ?.
ಭಾರತದ ಈ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆಯೇ ತಲೆಬಾಗಿದೆ. ಬ್ರೆಜಿಲ್ ದೇಶಕ್ಕೆ ಕೊರೋನಾ ಲಸಿಕೆ ನೀಡಿ ನೆರವಾದ ಕಾರಣಕ್ಕೆ ಪ್ರದಾನಿ ಮೋದಿಗೆ ಬ್ರೆಜಿಲ್ ಅಧ್ಯಕ್ಷ ವಿಶೇಷ ರೀತಿಯಲ್ಲಿ ಧನ್ಯವಾದ ಹೇಳಿದ್ದಾರೆ. ಭಾರತದಿಂದ ಸಂಜೀವಿನಿ ಬೆಟ್ಟ ಹೊತ್ತು ಬ್ರೆಜಿಲ್‌ನತ್ತ ಹಾರುವ ಹನುಂತನ ಫೋಟೋ ಹಾಕಿ ಹಿಂದಿಯಲ್ಲಿ ಧನ್ಯವಾದ ಭಾರತ ಎಂದಿದ್ದಾರೆ.