ನವದೆಹಲಿ(ಜ.21): ವಿಶ್ವದ ಅತೀ ದೊಡ್ಡ ಕೊರೋನಾ ಲಸಿಕೆ ಅಭಿಯಾನ ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಈ ಲಸಿಕಾ ಅಭಿಯಾನ ಯಾವುದೇ ಅಡೆ ತಡೆ ಇಲ್ಲದೆ, ಹೆಚ್ಚಿನ ಆತಂಕಗಳಿಲ್ಲದೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡಲಾಗುತ್ತಿದೆ. ಇನ್ನು ಎರಡನೆ ಹಂತದಲ್ಲಿ ಪ್ರಧಾನಿ, ಮುಖ್ಯಮಂತ್ರಿಗಳಿಗೆ ಲಸಿಕೆ ಸಿಗಲಿದೆ.

ಭೂತಾನ್‌, ಮಾಲ್ಡೀವ್ಸ್‌ಗೆ ಭಾರತದಿಂದ ಮೊದಲ ಕೊರೋನಾ ಲಸಿಕೆ ಪೂರೈಕೆ!

ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟ ಎಲ್ಲಾ ಸಚಿವರು, ಶಾಸಕರು, ಸಂಸದರು ಮುಖ್ಯಮಂತ್ರಿ, ಪ್ರಧಾನಿಗಳಿಗೆ ಲಸಿಕೆ ನೀಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಇಷ್ಟೇ ಅಲ್ಲ 50 ವರ್ಷಕ್ಕಿಂತ ಮೇಲ್ಪಟ್ಟು ಆರೋಗ್ಯ ಸಮಸ್ಯೆ  ಎದುರಿಸುತ್ತಿರುವ ವ್ಯಕ್ತಿಗಳಿಗೂ ಲಸಿಕೆ ನೀಡಲು ಕೇಂದ್ರ ತಯಾರಿ ಮಾಡಿಕೊಳ್ಳುತ್ತಿದೆ ಅನ್ನೋ ಮಾಹಿತಿ ಮೂಲಗಳು ಬಹಿರಂಗ ಪಡಿಸಿವೆ.

ಗರ್ಭಿಣಿಯರು ಹಾಗೂ ತಾಯಂದಿರಿಗೆ ಕೊರೋನಾ ಲಸಿಕೆ ಹಾಕಬಹುದಾ...?.

ಜನವರಿ 16 ರಂದು ಮೋದಿ ಲಸಿಕೆ ವಿತರಣೆಗೆ ಚಾಲನೆ ನೀಡಿದ್ದರು. ಇದುವರೆಗಿನ ಅಂಕಿ ಅಂಶಗಳ ಪ್ರಕಾರ, ಕರ್ನಾಟಕ ಲಸಿಕೆ ವಿತರಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕೆಲ ರಾಜ್ಯಗಳಲ್ಲಿ ಲಸಿಕೆ ಪಡೆಯಲು ಹಿಂದೇಟು ಹಾಕಿದ ಘಟನೆಗಳು ನಡೆದಿದೆ. 

ಲಸಿಕೆ ಅಭಿಯಾನಕ್ಕೂ ಮೊದಲು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಮೋದಿ ಸಭೆ ನಡೆಸಿದ್ದರು. ಈ ವೇಳೆ ನಿಮ್ಮ ಸರದಿ ಬರುವ ವರೆಗೂ ಕಾಯಬೇಕು. ಬದಲಾಗಿ ಕೊರೋನಾ ವಾರಿಯರ್ಸ್‌ಗೆ ಲಸಿಕೆ ನೀಡುವಾಗ ಮಂತ್ರಿಗಳು, ರಾಜಕಾರಣಿಗಳು ಲಸಿಕೆ ಪಡೆಯಬಾರದು ಎಂದು ಕಟ್ಟು ನಿಟ್ಟಾಗಿ ಹೇಳಿದ್ದರು.