Asianet Suvarna News Asianet Suvarna News

Singer Rihanna: ಭಾರತದಲ್ಲಿ ವಿವಾದವೆಬ್ಬಿಸಿತ್ತು ಬಾರ್ಬಡೋಸ್‌ ರಾಷ್ಟ್ರೀಯ ಹೀರೋ ಟ್ವೀಟ್! ಯಾರೀಕೆ ರಿಹಾನಾ?

  • ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನಾರನ್ನು ರಾಷ್ಟ್ರೀಯ ಹೀರೋ ಎಂದು ಘೋಷಿಸಿದ ಬಾರ್ಬಡೋಸ್
  • ವಿಶ್ವದ ಶ್ರೇಷ್ಠ ಗಾಯಕರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿರುವ ರಿಹಾನಾ
  • 1.7 ಬಿಲಿಯನ್ ಡಾಲರ್ ಒಡತಿ ಸಿಂಗರ್ ರಿಹಾನಾ
who is Singer Rihanna declared as Barbados national hero
Author
Bengaluru, First Published Dec 3, 2021, 5:51 PM IST

ಬ್ರಿಡ್ಜ್‌ಟೌನ್ (ಡಿ.3): ದೇಶದ ಪ್ರಮುಖ ಸ್ಥಾನದಲ್ಲಿದ್ದ ಬ್ರಿಟನ್ ರಾಣಿ ಎಲಿಜಬೆತ್ ಅವರನ್ನು ಸ್ಥಾನದಿಂದ ಕಿತ್ತೆಸೆದು  ಬಾರ್ಬಡೋಸ್ (Barbados)ಎಂಬ ಪುಟ್ಟ ದೇಶವೊಂದು ಹೊಸ ಗಣರಾಜ್ಯ (Republic) ರಾಷ್ಟ್ರವಾಗಿ ಹೊರಹೊಮ್ಮಿದ ಬೆನ್ನಲ್ಲೇ ನೂತನ ಪ್ರಧಾನಿ ಮಿಯಾ ಮೊಟ್ಟೆಲಿ (Mia Mottley)  ಅವರು ದ್ವೀಪರಾಷ್ಟ್ರದ ಅತ್ಯಂತ ಜನಪ್ರಿಯ ಪ್ರಜೆ, ಅಂತರಾಷ್ಟ್ರೀಯ ಪಾಪ್ ತಾರೆ ರಿಹಾನಾರನ್ನು(singer rihanna) ರಾಷ್ಟ್ರೀಯ ಹೀರೋ ಎಂದು ಘೋಷಿಸಿದ್ದಾರೆ.

ಕಡುಬಡತನದಲ್ಲಿ ಬಾರ್ಬಡೋಸ್ ನಲ್ಲಿ ಹುಟ್ಟಿ ವಿಶ್ವದ ಶ್ರೇಷ್ಠ ಗಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದ ರಿಹಾನಾಗೆ ತನ್ನ ದೇಶ ಎಂದರೆ ಎಲ್ಲಿಲ್ಲದ ಪ್ರೀತಿ.  ತನ್ನ ದೇಶದ ಮೇಲೆ ಇಟ್ಟಿರುವ ಅಭಿಮಾನ, ಪ್ರೀತಿಯನ್ನು ಗುರುತಿಸಿ ಮಾತ್ರವಲ್ಲ ಗಾಯನ ಲೋಕದಲ್ಲಿ ಆಕೆ ಮಾಡಿದ ಸಾಧನೆಯನ್ನು ಪ್ರಶಂಶಿಸಿ ರಿಹಾನಾಳಿಗೆ ನ್ಯಾಷನಲ್ ಹೀರೋ ಪಟ್ಟ ಕಟ್ಟಲಾಗಿದೆ.

ರಿಹಾನಾ ಯಾರು?
ಕೆರೆಬಿಯನ್ ದ್ವೀಪ ಸಮೂಹದ ಬಾರ್ಬಡೋಸ್ ಎಂಬ ದೇಶದಲ್ಲಿ ಹುಟ್ಟಿದ ರಾಬಿನ್ ರಿಹಾನಾ ಫೆಂಟಿ ಈಗ ಪಾಪ್ ತಾರೆ. ಅಪ್ಪ ಕುಡಿದು  ದಿನವೂ ಈಕೆಯ ತಾಯಿಯನ್ನು ಹೊಡೆಯುತ್ತಿದ್ದ. ಬಡತನದ ಬೇಗೆಯಲ್ಲಿದ್ದ ರಿಹಾನಾ ಸಣ್ಣ ವಯಸ್ಸಿನಲ್ಲೇ ಬಟ್ಟೆ ವ್ಯಾಪಾರ ಶುರು ಮಾಡಿದ್ದಳು. ಕುಡುಕ ತಂದೆ ಕೊಕೈನ್‍ಗೆ ಅಡಿಕ್ಟ್ ಆಗಿದ್ದ. ಪ್ರತಿನಿತ್ಯ ಮನೆಯಲ್ಲಿ ಜಗಳ ತಪ್ಪುತ್ತಿರಲಿಲ್ಲ. ಕೊನೆಗೊಂದು ದಿನ ರಿಹಾನಾ ತನ್ನ ಹದಿನಾಲ್ಕು ವರ್ಷದಲ್ಲಿ ಅಪ್ಪ-ಅಮ್ಮನಿಂದ ಬೇರೆಯಾದರು.

ಮೊದಲ ಬ್ರಿಟಿಷ್ ಹಡಗು ಬಂದು 400 ವರ್ಷ: ಕೊನೆಗೂ ಬಾರ್ಬಡೋಸ್‌ ಗಣರಾಜ್ಯ

ಅಲ್ಲಿಂದ ಆಕೆಯ ಜೀವನವೇ ಬದಲಾಯ್ತು. ಗೊತ್ತಿದ್ದ ಗೆಳೆಯರ ಸಂಗೀತದ ತಂಡವೊಂದನ್ನು ಕಟ್ಟಿ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದಳು. ಜಗತ್ತಿನ ಪಾಪ್ ಗಾಯಕಿಯಾಗಿ ಖ್ಯಾತಿ ಗಳಿಸಿದಳು. ಈಗ ಈಕೆ ಹಲವು ಗ್ರಾಮ್ಯಿ ಪ್ರಶಸ್ತಿ ಪಡೆದಿರುವ ಪ್ರಸಿದ್ಧ ಗಾಯಕಿ ಮಾತ್ರವಲ್ಲ, ಹೋರಾಟಗಾರ್ತಿ ಕೂಡ ಹೌದು. ಜತೆಗೆ ಯಶಸ್ವಿ ಉದ್ಯಮಿಯೂ ಆಗಿರುವ ರಿಹಾನಾ ಬ್ಯೂಟಿ ಮತ್ತು ಫ್ಯಾಶನ್ ಗೆ ಸಂಬಂಧಿಸಿದಂತೆ "ಫೆಂಟಿಬ್ಯೂಟಿ" ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ.  ಕಳೆದ ಆಗಸ್ಟ್ ನಲ್ಲಿ ಫೋರ್ಬ್ಸ್ ಅಂದಾಜಿಸಿರುವ ಇವರ ಆದಾಯ 1.7 ಬಿಲಿಯನ್ ಡಾಲರ್. ಈಗ ಈಕೆಗೆ 33 ವರ್ಷ.

ಲೂಟಿ ಹೊಡೆದ ಬ್ರಿಟಿಷರಿಗೇಕೆ ಶಿಕ್ಷೆ ಇಲ್ಲ?: ಕಂಗನಾ!

ವದಂತಿ ಮತ್ತು ರಿಹಾನಾ:
ಬಾರ್ಬಡೋಸ್‌ನ  ರಾಷ್ಟ್ರೀಯ ಹೀರೋ ಎಂದು ಘೋಷಿಸಲ್ಪಟ್ಟ ಸಮಾರಂಭದಲ್ಲಿ ಕಾಣಿಸಿಕೊಂಡಾಗ ರಿಯಾನಾ  ಅವರು ಕಿತ್ತಳೆ ಬಣ್ಣದ ಉಡುಪು ಧರಿಸಿದ್ದರು. ಆ ವೇಳೆ ಗಾಯಕಿ ಗರ್ಭಿಣಿ ಎಂದು ಅಭಿಮಾನಿಗಳು ಭಾವಿಸಿದ್ದರು. ಗೆಳೆಯ ಗೆಳೆಯ ರಾಕಿಯ ಮಗುವಿಗೆ ತಾಯಿಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತು.  ಆದರೆ ಈ ವದಂತಿಯನ್ನು ಗಾಯಕಿ ತಳ್ಳಿ ಹಾಕಿದ್ದಾರೆ. 

ರಾಣಿ ಎಲಿಜಬೆತ್‌ ತೆರೆಮರೆಯತ್ತ, ಬ್ರಿಟನ್‌ಗೆ ಶೀಘ್ರ ಹೊಸ ರಾಣಿಯ ಪಟ್ಟಾಭಿಷೇಕ.?

ರಿಹಾನಾ ಮತ್ತು ಭಾರತದಲ್ಲಿ ನಡೆದ ವಿವಾದ:
ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿ ಮತ್ತು ನೆರೆಯ ಹರಿಯಾಣದ ಪ್ರದೇಶದಲ್ಲಿ ಪ್ರತಿಭಟನೆ (Farmers protest) ನಡೆಸುತ್ತಿದ್ದರು. ಜನವರಿ 26, 2021ರಲ್ಲಿ ರೈತರು ಆಯೋಜಿಸಿದ್ದ 'ಟ್ರಾಕ್ಟರ್ ರ್ಯಾಲಿ' ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ನವದೆಹಲಿಗೆ ಪ್ರವೇಶಿಸಲು ಬ್ಯಾರಿಕೇಡ್‌ಗಳನ್ನು ಮುರಿದು ದೇಶದ ರಾಜಧಾನಿಯ ಹಲವಾರು ಭಾಗಗಳಲ್ಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ನಂತರ  ದೆಹಲಿಯ ನೆರೆಯ ರಾಜ್ಯ ಹರಿಯಾಣದ ಹಲವಾರು ಜಿಲ್ಲೆಗಳಲ್ಲಿ ಅಂತರ್ಜಾಲ ಸ್ಥಗಿತಗೊಳಿಸುವ ಕುರಿತ ಸುದ್ದಿಯನ್ನು ಹಂಚಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ರೈತರ ಹೋರಾಟದ ಕುರಿತಾಗಿ ಹಲವು ತಾರೆಯರು ಟ್ವೀಟ್ ಮಾಡಿದ್ದರು. ಅದರಲ್ಲಿ ರಿಹಾನಾ ಕೂಡ ಒಬ್ಬರು. ಭಾರತ ರೈತರ ಹೋರಾಟದ ಬಗ್ಗೆ ಟ್ವೀಟ್‌ ಮಾಡಿದಕ್ಕೆ ಆಗ ವಿವಾದ ವ್ಯಕ್ತವಾಗಿತ್ತು. ಈ ವಿಷಯದಲ್ಲಿ ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಸರ್ಕಾರ ಕೂಡ ಹೇಳಿತ್ತು

400 ವರ್ಷಗಳ ಬ್ರಿಟಿಷ್ ಆಡಳಿತ ಅಂತ್ಯ: 
400 ವರ್ಷಗಳ ಹಿಂದೆ ಮೊದಲ ಬಾರಿ ಬ್ರಿಟಿಷ್ (British)ಹಡಗು ಕೆರೆಬಿಯನ್ ದ್ವೀಪಕ್ಕೆ ಬಂದಾಗ ಆರಂಭವಾಗಿದ್ದ ಬ್ರಿಟಿಷ್ ಪ್ರಭುತ್ವ ಈಗ ಕೊನೆಗೂ ಕೊನೆಗೊಂಡಿದೆ. ಈ ಮೂಲಕ ದೇಶದ ಎಲ್ಲಾ ವಸಾಹತು ಸಂಬಂಧಗಳು ಕೊನೆಯಾಗಿವೆ. ಮಧ್ಯರಾತ್ರಿಯ ಮುಷ್ಕರದಲ್ಲಿ ರಾಜಧಾನಿ ಬ್ರಿಡ್ಜ್‌ಟೌನ್‌ನಲ್ಲಿ(Bridgetwon) ಚೇಂಬರ್ಲೇನ್ ಸೇತುವೆಯನ್ನು ಸುತ್ತುವ ಮೂಲಕ ನೂರಾರು ಜನರ ಹರ್ಷೋದ್ಗಾರದ ಮಧ್ಯೆ ಹೊಸ ಗಣರಾಜ್ಯವು ಹುಟ್ಟಿಕೊಂಡಿದೆ. ಕಿಕ್ಕಿರಿದ ಹೀರೋಸ್ ಸ್ಕ್ವೇರ್‌ನಲ್ಲಿ ಬಾರ್ಬಡೋಸ್‌ನ ರಾಷ್ಟ್ರಗೀತೆಯನ್ನು ನುಡಿಸಿದಾಗ 21 ಗನ್ ಸೆಲ್ಯೂಟ್ ಅನ್ನು ಗೌರವಪೂರ್ವಕವಾಗಿ ನೀಡಲಾಯಿತು. ಬಾರ್ಬಡೋಸ್‌ ಗಣರಾಜ್ಯವಾದ ನಂತರ ನೂತನ ಅಧ್ಯಕ್ಷರನ್ನಾಗಿ 72 ವರ್ಷದ ಸಾಂಡ್ರಾ ಮೇನಸ್ (sandra mason) ಅವನ್ನು ನೇಮಕ ಮಾಡಲಾಗಿದೆ. 

Follow Us:
Download App:
  • android
  • ios