Asianet Suvarna News Asianet Suvarna News

ಲೂಟಿ ಹೊಡೆದ ಬ್ರಿಟಿಷರಿಗೇಕೆ ಶಿಕ್ಷೆ ಇಲ್ಲ?: ಕಂಗನಾ!

* ಸ್ವಾತಂತ್ರ್ಯ ಯೋಧರಿಗೆ ಅವಮಾನ ಎಂದವರಿಗೆ ನಟಿ ಸವಾಲ್‌

* ಲೂಟಿ ಹೊಡೆದ ಬ್ರಿಟಿಷರಿಗೇಕೆ ಶಿಕ್ಷೆ ಇಲ್ಲ?: ಕಂಗನಾ

* ಚರ್ಚಿಲ್‌ರನ್ನೇಕೆ ಭಾರತದ ಕೋರ್ಟಲ್ಲಿ ವಿಚಾರಣೆಗೆ ಒಳಪಡಿಸಲಿಲ್ಲ?

* ಇದು ಕೂಡಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಘೋರ ಅಪಮಾನ

Kangana Ranaut questions why Churchill was never tried in independent India courts for his crimes pod
Author
Bangalore, First Published Nov 15, 2021, 7:52 AM IST

ನವದೆಹಲಿ(ನ.15): 1947ರಲ್ಲಿ ಸಿಕ್ಕಿದ್ದು ಭಿಕ್ಷೆ, 2014ರಲ್ಲಿ ಸಿಕ್ಕಿದ್ದೇ ನಿಜವಾದ ಸ್ವಾತಂತ್ರ್ಯ (Independence) ಎಂಬ ತಮ್ಮ ಹೇಳಿಕೆ ಸ್ವಾತಂತ್ರ್ಯ ಯೋಧರಿಗೆ ಮಾಡಿದ ಅವಮಾನ ಎಂಬ ಟೀಕೆಗಳಿಗೆ ಇದೀಗ ನಟಿ ಕಂಗನಾ ರಾಣಾವತ್‌ (kangana Ranaut) ತಿರುಗೇಟು ನೀಡಿದ್ದಾರೆ. ಭಾರತದಲ್ಲಿ ಅಸಂಖ್ಯ ಅಪರಾಧಗಳಿಗೆ ಕಾರಣವಾದ ಬ್ರಿಟಿಷರನ್ನು (British), ಘಟನೆಗೆ ಹೊಣೆ ಮಾಡದೇ ಇರುವುದು ಕೂಡಾ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ (Freedom Fighters) ಮಾಡಿದ ಅವಮಾನ ಎಂದು ಕಂಗನಾ ಇನ್ಸಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಬಿಬಿಸಿ ಪ್ರಕಟಿಸಿದ್ದ ಲೇಖನವೊಂದರ ಸ್ಕ್ರೀನ್‌ಶಾಟ್‌ ಹಾಕಿರುವ ಕಂಗನಾ ‘ಇದು 2015ರಲ್ಲಿ ಬಿಬಿಸಿ ಪ್ರಕಟಿಸಿದ್ದ ಲೇಖನ. ಇದರಲ್ಲಿ ಭಾರತದಲ್ಲಿ ನಡೆದ ಘಟನಾವಳಿಗಳಿಗೆ ಬ್ರಿಟನ್‌ (Britain) ಯಾವುದೇ ಪರಿಹಾರ ನೀಡಬೇಕಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಅದೇಕೆ ಮತ್ತು ಹೇಗೆ ಈ ಬಿಳಿಯ ವಸಾಹತುಗಾರರು ಮತ್ತು ಅವರ ಪರ ಅನುಕಂಪ ಹೊಂದಿದವವರು ಈ ಯುಗದಲ್ಲೂ ಇಂಥ ಅವಿವೇಕ ಮಾಡಿ ಬಚಾವ್‌ ಆಗುತ್ತಾರೆ? ಇದೆಕ್ಕೆಲ್ಲಾ ಕಾರಣ, ಈ ದೇಶವನ್ನು ಕಟ್ಟಿದವರು ಭಾರತದಲ್ಲಿ ನಡೆಸಿದ ಅಸಂಖ್ಯ ಕ್ರೌರ್ಯಕ್ಕೆ, ನಮ್ಮ ಸಂಪತ್ತು ಲೂಟಿ ಹೊಡೆದಿದ್ದಕ್ಕೆ, ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆ ಮಾಡಿದ್ದಕ್ಕೆ, ದೇಶವನ್ನು ವಿಭಜನೆ (Partition) ಮಾಡಿದ್ದಕ್ಕೆ ಬ್ರಿಟಿಷರನ್ನು ಹೊಣೆ ಮಾಡದೇ ಇದ್ದದ್ದು. ಎರಡನೇ ಮಹಾಯುದ್ಧದ ಬಳಿಕ ಬ್ರಿಟೀಷರು ಸ್ವಲ್ಪ ವಿರಾಮ ಪಡೆದು ಭಾರತವನ್ನು ತೊರೆದು ತಮ್ಮ ದೇಶಕ್ಕೆ ಮರಳಿದರು. ವಿನ್‌ಸ್ಟನ್‌ ಚರ್ಚಿಲ್‌ (Winston Churchill) ಅವರನ್ನು ಎರಡನೇ ಮಹಾಯದ್ಧದ ಹೀರೋ ಎಂದು ಬಣ್ಣಿಸಲಾಯಿತು. ಈ ವ್ಯಕ್ತಿಯೇ ಬಂಗಾಳದ ಕ್ಷಾಮಕ್ಕೆ ಕಾರಣನಾದವನು. ಆತನನ್ನು ಎಂದಾದರೂ ಈ ಅಪರಾಧಕ್ಕಾಗಿ ಸ್ವತಂತ್ರ ಭಾರತದ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತೇ? ಇಲ್ಲ’ ಎಂದು ನಟಿ ಪ್ರಶ್ನಿಸಿದ್ದಾರೆ.

ಇನ್ನು, ಭಾರತ ಮತ್ತು ಪಾಕಿಸ್ತಾನವನ್ನು ವಿಭಜಿಸುವ ರಾರ‍ಯಡ್‌ಕ್ಲಿಫ್‌ ಲೈನ್‌ ಮತ್ತು ದೇಶ ವಿಭಜನೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ಪ್ರಸ್ತಾಪಿಸಿರುವ ಕಂಗನಾ ‘ಎಂದೂ ಭಾರತಕ್ಕೆ ಭೇಟಿ ನೀಡಿರದ ಸಿರಿಲ್‌ ರಾರ‍ಯಡ್‌ಕ್ಲಿಫ್‌ ಎಂಬ ಬ್ರಿಟನ್‌ (Britain) ವ್ಯಕ್ತಿಯನ್ನು ಬ್ರಿಟೀಷರು ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಗುರುತಿಸಲು ಕರೆತಂದರು. ಆತನಿಗೆ 5 ವಾರಗಳ ಕಾಲ ನೀಡಲಾಗಿತ್ತು. ಹೀಗೆ ಗಡಿ ರೇಖೆ ಗುರುತಿಸಲು ನಿಯಮ ರೂಪಿಸಿದ ಸಮಿತಿಯಲ್ಲಿ ಭಾರತೀಯ ನ್ಯಾಷನಲ್‌ ಕಾಂಗ್ರೆಸ್‌ ಮತ್ತು ಮುಸ್ಲಿಂ ಲೀಗ್‌ನ ಸದಸ್ಯರು ಇದ್ದರು. ದೇಶ ವಿಭಜನೆ ವೇಳೆ ನಡೆದ ಹಿಂಸಾಚಾರ ಲಕ್ಷಾಂತರ ಜನರ ಸಾವಿಗೆ ಕಾರಣವಾಯ್ತು. ಈ ಘೋರ ದುರಂತದಲ್ಲಿ ಸಾವನ್ನಪ್ಪಿದವರು ಸ್ವಾತಂತ್ರ್ಯವನ್ನು ಪಡೆದರೇ? ಈ ಗಡಿ ರೇಖೆಗೆ ಒಪ್ಪಿಕೊಂಡ ಬ್ರಿಟೀಷರು ಅಥವಾ ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ ಅನ್ನು ದೇಶ ವಿಭಜನೆ ಬಳಿಕ ನಡೆದ ಹಿಂಸಾಚಾರಕ್ಕೆ ಹೊಣೆಗಾರರನ್ನಾಗಿ ಮಾಡಲಾಯಿತೇ? ಇಲ್ಲ’ ಎಂದು ಪ್ರಸ್ತಾಪಿಸಿದ್ದಾರೆ.

ಜೊತೆಗೆ, ಸ್ವಾತಂತ್ರ್ಯ ಸಿಕ್ಕ ಒಂದು ವರ್ಷದ ಬಳಿಕ ಆಗಿನ ಬಂಗಾಳದ ಗವರ್ನರ್‌ (Governor Of Bengal) ಅವರನ್ನು, ಗವರ್ನರ್‌ ಜನರಲ್‌ ಆಫ್‌ ಇಂಡಿಯಾ ಆಗಿ ನೇಮಿಸಲು ಅನುಮತಿ ಕೋರಿ ಪ್ರಧಾನಿ ಜವಾಹರ್‌ಲಾಲ್‌ ನೆಹರೂ (Jawaharlal Nehru) ಅವರು ಬ್ರಿಟನ್‌ ರಾಜಮನೆತನದ ಅನುಮತಿ ಕೋರಿದ ಪತ್ರದ ತುಣುಕೊಂದನ್ನೂ ಪೋಸ್ಟ್‌ ಮಾಡಿರುವ ಕಂಗನಾ, ‘ಇಂಥ ಪತ್ರಗಳು ಲಭ್ಯವಿರುವಾಗ, ಭಾರತದಲ್ಲಿ ನಡೆದ ಅಪರಾಧಗಳಿಗೆ ಬ್ರಿಟೀಷರನ್ನು ಹೊಣೆ ಮಾಡಲು ಇಂಡಿಯನ್‌ ನ್ಯಾಷನಲ್‌ ಕಾಂಗ್ರೆಸ್‌ (Indian National Congress) ಎಂದಾದರೂ ಪ್ರಯತ್ನಿಸಿತ್ತು ಎಂದು ಯಾರಾದರೂ ನಂಬಲು ಸಾಧ್ಯವೇ?’ ಎಂದು ಪ್ರಶ್ನಿಸಿದ್ದಾರೆ.

ಬ್ರಿಟೀಷರು ಮತ್ತು ನಮ್ಮ ದೇಶವನ್ನು ಕಟ್ಟಿದವರು ದೇಶವನ್ನೇ ವಿಭಜನೆ ಮಾಡಲಿದ್ದಾರೆ ಎಂಬುದು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದವರಿಗೆ ಗೊತ್ತಿತ್ತೇ? ಹೀಗಾಗಿ ಭಾರತದಲ್ಲಿ ನಡೆದ ಅಸಂಖ್ಯ ಅಪರಾಧಗಳಿಗೆ ಬ್ರಿಟೀಷರನ್ನು ಹೊಣೆಗಾರರನ್ನಾಗಿ ಮಾಡದೇ ಇರುವುದು ಕೂಡಾ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನದಂತೆ. ಹೀಗಾಗಿ ನನ್ನ ಈ ಹಿಂದಿನ ಹೇಳಿಕೆಯಲ್ಲಿ ತಪ್ಪೇನಿದೆ ಎಂದು ತಿಳಿಸಿ ಎಂದು ಟೀಕಾಕಾರರಿಗೆ ಸವಾಲು ಹಾಕಿದ್ದಾರೆ.

Follow Us:
Download App:
  • android
  • ios