* ಭಾರತದ ದೇಶೀಯ ಲಸಿಕೆ ಕೋವ್ಯಾಕ್ಸಿನ್‌* ಕೋವ್ಯಾಕ್ಸಿನ್‌ಗೆ ಬುಧವಾರವೇ ಮಾನ್ಯತೆ ಸಿಗಬಹುದೆಂಬ ಆಸೆಗೆ ತಣ್ಣೀರು 

ವಿಶ್ವಸಂಸ್ಥೆ/ಜಿನೇವಾ(ಅ.27): ಭಾರತದ ದೇಶೀಯ ಲಸಿಕೆ ಕೋವ್ಯಾಕ್ಸಿನ್‌ಗೆ(Covaxin) ಬುಧವಾರ ಅಂತಾರಾಷ್ಟ್ರೀಯ ಮಾನ್ಯತೆ ಸಿಗಬಹುದು ಎಂಬ ಆಕಾಂಕ್ಷೆ ಹುಸಿಯಾಗಿದೆ. ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲು ಈ ಲಸಿಕೆ ಉತ್ಪಾದಕ ಕಂಪನಿ ಹೈದರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಸಂಸ್ಥೆಯಿಂದ(Bharat Biotech) ವಿಶ್ವ ಆರೋಗ್ಯ ಸಂಸ್ಥೆ(World Health Organisation) ಮತ್ತಷ್ಟು ಸ್ಪಷ್ಟೀಕರಣಗಳನ್ನು ಬಯಸಿದೆ.

ಭಾರತ್‌ ಬಯೋಟೆಕ್‌ ಸಂಸ್ಥೆ ಕೋವ್ಯಾಕ್ಸಿನ್‌ ಕುರಿತಾಗಿ ಸಲ್ಲಿಸಿದ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಸಲಹಾ(ಟ್ಯಾಗ್‌-ಇಯುಎಲ್‌) ಗುಂಪಿನ ತಜ್ಞರು ಮಂಗಳವಾರ ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಈ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡಲು ಹೆಚ್ಚುವರಿ ಸ್ಪಷ್ಟೀಕರಣ ನೀಡುವಂತೆ ಡಬ್ಲ್ಯುಎಚ್‌ಒ(WHO) ಕೇಳಿದೆ.

100 ಕೋಟಿ ಲಸಿಕೆ ಸಾಧನೆ: ಧಾರವಾಡ ವಲಯದ ಮೂರು ಸ್ಮಾರಕ ದೀಪಾಲಂಕಾರಕ್ಕೆ ಆಯ್ಕೆ

ಈ ವಾರಾಂತ್ಯದಲ್ಲಿ ಹೆಚ್ಚುವರಿ ಮಾಹಿತಿಗಳನ್ನು ಡಬ್ಲ್ಯುಎಚ್‌ಒಗೆ ಭಾರತ್‌ ಬಯೋಟೆಕ್‌ ಪೂರೈಸುವ ಸಾಧ್ಯತೆಯಿದ್ದು, ನ.3ರಂದು ಮತ್ತೆ ಸಭೆ ನಡೆಸಲಿರುವ ಡಬ್ಲ್ಯುಎಚ್‌ಒ ಅಂದು ಕೋವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಅವಕಾಶ ನೀಡುವ ನಿರೀಕ್ಷೆಯಿದೆ.

ಈ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್‌ಗೆ ವಿಶ್ವ ಮನ್ನಣೆ ಸಿಗಲು ಅಲ್ಲಿವರೆಗೆ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

ಟ್ಯಾಗ್‌-ಇಯುಎಲ್‌ ಸ್ವಾಯತ್ತ ಸಲಹಾ ಗುಂಪು ಆಗಿದ್ದು, ಲಸಿಕೆಗಳ ಸುರಕ್ಷತೆ ಆಧರಿಸಿ ಆ ಲಸಿಕೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತುರ್ತಾಗಿ ಬಳಸಲು ಅವಕಾಶ ನೀಡುವ ಕುರಿತಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ಶಿಫಾರಸು ಮಾಡುತ್ತದೆ.

12,428 ಹೊಸ ಕೇಸ್‌: ಫೆಬ್ರುವರಿ ಬಳಿಕದ ಕನಿಷ್ಠ

ಮಂಗಳವಾರ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 12,428 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ಇದು ಕಳೆದ 238 ದಿನಗಳ ಕನಿಷ್ಠ ಸಂಖ್ಯೆಯಾಗಿದೆ. ಅಂದರೆ ಫೆಬ್ರುವರಿ ಬಳಿಕ ಅತಿ ಕನಿಷ್ಠ ಪ್ರಮಾಣ ಇದಾಗಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 3.42 ಕೋಟಿಗೆ ಏರಿದೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಯಶಸ್ಸು, ವಿಶ್ವಕ್ಕೆ ಮಾದರಿ!

ಮತ್ತೊಂದೆಡೆ ಮಂಗಳವಾರ ಸೋಂಕಿಗೆ 356 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸೋಂಕಿಗೆ ಬಲಿಯಾದವರ ಒಟ್ಟು ಸಂಖ್ಯೆ 4.55 ಲಕ್ಷಕ್ಕೆ ತಲುಪಿದೆ. ಹೊಸ ಸೋಂಕಿತರೂ ಸೇರಿ ಸಕ್ರಿಯ ಸೋಂಕಿನ ಪ್ರಮಾಣ 1.63 ಲಕ್ಷಕ್ಕೆ ಇಳಿಕೆಯಾಗಿದೆ. ಚೇತರಿಕೆ ಪ್ರಮಾಣ ಶೇ.98.18ರಷ್ಟಿದೆ. ಈ ನಡುವೆ 3.35 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಲಸಿಕೆ ಪಡೀರಿ: ಟೀವಿ, ಮೊಬೈಲ್‌ ಗೆಲ್ಲಿ

ಭಾಷಣ, ಹಾಡು ಸ್ಪರ್ಧೆ ಅಥವಾ ಕ್ರೀಡಾಕೂಟಗಳಲ್ಲಿ ಗೆದ್ದರೆ ಬಹುಮಾನದ ರೂಪದಲ್ಲಿ ಟಿವಿ, ಮೊಬೈಲ್‌ ಕೊಡುವುದನ್ನು ನೋಡಿದ್ದೀರಿ. ಆದರೆ ಕೋವಿಡ್‌ ಲಸಿಕೆ(Vaccine) ಪಡೆಯುವವರಿಗೆ ಇಂತಹದ್ದೇ ಭರವಸೆ ನೀಡಿದ್ದು ಮಣಿಪುರದ(manipur) ಇಂಫಾಲ(Imphal) ಪಶ್ವಿಮ ಜಿಲ್ಲೆಯಲ್ಲಿ ವರದಿಯಾಗಿದೆ.

ಲಸಿಕೀಕರಣ(Vaccination) ಹೆಚ್ಚಿಸಲು ಜಿಲ್ಲಾಡಳಿತವು ಮೆಗಾ ಲಸಿಕಾ ಅಭಿಯಾನ ಕೈಗೊಂಡಿದ್ದು, ‘ಲಸಿಕೆ ಪಡೆದುಕೊಳ್ಳಿ, ಬಹುಮಾನ ಗೆಲ್ಲಿರಿ’ ಎಂದು ಘೋಷ ವಾಕ್ಯದೊಂದಿಗೆ ಅ.24, ಅ.31 ಹಾಗೂ ನ.7ರಂದು ಅಭಿಯಾನ ನಡೆಸಲಿದೆ.

2 ವರ್ಷ ಮೇಲಿನ ಮಕ್ಕಳಿಗೂ ಬಂತು ವ್ಯಾಕ್ಸಿನ್: ಕೋವ್ಯಾಕ್ಸಿನ್‌ ಲಸಿಕೆಗೆ ಗ್ರೀನ್‌ ಸಿಗ್ನಲ್!

ಲಸಿಕೆ ಹಾಕಿಸಿ ಡ್ರಾದಲ್ಲಿ ಗೆದ್ದರೆ ಮೊದಲ ಬಹುಮಾನವಾಗಿ ಟಿವಿ, ದ್ವಿತೀಯ ಮೊಬೈಲ್‌, ತೃತೀಯ ಬಹುಮಾನವಾಗಿ ಬ್ಲಾಂಕೆಟ್‌ ಗೆಲ್ಲಬಹುದು. ಜೊತೆಗೆ, 10 ಮಂದಿಗೆ ಸಮಾಧಾನಕಾರ ಬಹುಮಾನವೂ ಸಿಗಲಿದೆ.