Asianet Suvarna News Asianet Suvarna News

2 ವರ್ಷ ಮೇಲಿನ ಮಕ್ಕಳಿಗೂ ಬಂತು ವ್ಯಾಕ್ಸಿನ್: ಕೋವ್ಯಾಕ್ಸಿನ್‌ ಲಸಿಕೆಗೆ ಗ್ರೀನ್‌ ಸಿಗ್ನಲ್!

* ಕೊರೋನಾ ನಿಯಂತ್ರಿಸಲು ಮಕ್ಕಳಿಗೆ ಲಸಿಕೆ

* ಕೋವ್ಯಾಕ್ಸಿನ್ ಲಸಿಕೆಗೆ ಅನುಮೋದನೆ ನೀಡಿದ ಡಿಸಿಜಿಐ

* ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ

Covaxin Recommended By Expert Panel For Children From Two To 18 Years pod
Author
Bangalore, First Published Oct 12, 2021, 3:35 PM IST

ನವದೆಹಲಿ(ಅ.10): ಕೊರೋನಾ(Coronavirus) ಲಗ್ಗೆ ಇಟ್ಟಾಗಿನಿಂದಲೂ ಹೆತ್ತವರಿಗೆ ಮಕ್ಕಳ ಕಾಳಜಿ ಬಹಳಷ್ಟು ಕಾಡಿತ್ತು. ಅಲ್ಲದೇ ಕೊರೋನಾ ನಿಯಂತ್ರಿಸಲು ಲಸಿಕೆ(Vaccine) ಬಂದಿದ್ದರೂ, ಮಕ್ಕಳಿಗೆ ಲಸಿಕೆ ತಯಾರಾಗದ ವಿಚಾರ ಮತ್ತಷ್ಟು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಆದರೀಗ ಈ ಎಲ್ಲಾ ಚಿಂತೆ ಕೊನೆಯಾಗುವ ಸಮಯ ಸನ್ನಿಹಿತವಾಗಿದೆ.

ಹೌದು 2 - 18 ವರ್ಷ ವಯೋಮಾನದ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ನೀಡಲು ಡಿಸಿಜಿಐ(Drugs Standard Control Organisation) ಮಂಗಳವಾರ ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿದೆ. ಈ ಮೂಲಕ ಕೋವ್ಯಾಕ್ಸಿನ್ ಮುಖ್ಯವಾಗಿ ಮಕ್ಕಳಿಗೆ ನೀಡಬಹುದಾದ ದೇಶದ ಮೊದಲ ಕೋವಿಡ್ ಲಸಿಕೆಯಾಗಲಿದೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು ಈ ತಿಂಗಳ ಆರಂಭದಲ್ಲಿ ಈ ದತ್ತಾಂಶವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಸಲ್ಲಿಸಿತ್ತು.

"

ಈ ದತ್ತಾಂಶಗಳ ಆಧಾರದ ಮೇಲೆ ವಿವರವಾಗಿ ಚರ್ಚೆ ನಡೆದ ಬಳಿಕ 2 ರಿಂದ 18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ. ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ನೀಡಲಾಗುವುದು. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 20 ದಿನಗಳ ಅಂತರವಿರಬೇಕು ಎನ್ನಲಾಗಿದೆ. 

ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ

ಅತ್ತ ತಜ್ಞರ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 2-18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ ಎನ್ನಲಾಗಿದೆಯಾದರೂ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಈ ಕುರಿತಂತೆ ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. 

ಇನ್ನು ಅತ್ತ ಇತರ ಕಂಪನಿಗಳು ಕೂಡಾ ಮಕ್ಕಳಿಗೆ ನೀಡುವ ಲಸಿಕೆ ಕುರಿತು ವೈದ್ಯಕೀಯ ಸಂಶೋಧನೆಯ ಪ್ರಯೋಗದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.

"

Follow Us:
Download App:
  • android
  • ios