100 ಕೋಟಿ ಲಸಿಕೆ ಸಾಧನೆ: ಧಾರವಾಡ ವಲಯದ ಮೂರು ಸ್ಮಾರಕ ದೀಪಾಲಂಕಾರಕ್ಕೆ ಆಯ್ಕೆ

*  ಪಟ್ಟದಕಲ್ಲು, ಐಹೊಳೆ, ವಿಜಯಪುರದ ಗೋಲಗುಂಬಜ ಆಯ್ಕೆ
*  ಸ್ಮಾರಕಗಳಿಗೆ ಅ. 14 ಸಂಜೆ 6ರಿಂದ ಅ. 15ರ ಬೆಳಗಿನ ವರೆಗೆ ಬೆಳಕಿನ ಅಭಿಯಾನ
*  ರಾಷ್ಟ್ರಧ್ವಜದ ಮಾದರಿಯ ದೀಪಾಲಂಕಾರ  
 

Three monument for Lighting in Dharwad Zone For 100 Crore vaccine Record in India grg

ಧಾರವಾಡ(ಅ.13):  ಭಾರತವು(India) ಕೊರೋನಾ ಮಹಾಮಾರಿಯ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿ, ಲಸಿಕಾ(Vaccine) ಅಭಿಯಾನದಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ 100 ಕೋಟಿ ಕೊರೋನಾ ಲಸಿಕೆ ಹಾಕಿರುವುದರ ಪ್ರತೀಕವಾಗಿ ಕೇಂದ್ರ ಸರ್ಕಾರದ(Central Government) ಸಂಸ್ಕೃತಿ ಮಂತ್ರಾಲಯವು ದೇಶಾದ್ಯಂತ 100 ಸ್ಮಾರಕಗಳನ್ನು(Monument) ಗುರುತಿಸಿ ಅವುಗಳಿಗೆ ರಾತ್ರಿ ದೀಪದ ಅಲಂಕಾರವನ್ನು ಮಾಡಲು ನಿರ್ಧರಿಸಿದೆ. ನೂರು ಸ್ಮಾರಕಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ(Dharwad) ವಲಯದ ಮೂರು ಸ್ಮಾರಕಗಳು ಆಯ್ಕೆಯಾಗಿವೆ ಎಂದು ಅಧೀಕ್ಷಣ ಪುರಾತತ್ವವಿದರಾದ ಡಾ. ವಿಠ್ಠಲ ಬಡಿಗೇರ ತಿಳಿಸಿದ್ದಾರೆ.

ವಿಶ್ವಪಾರಂಪರಿಕ ತಾಣವಾಗಿರುವ ಪಟ್ಟದ ಕಲ್ಲಿನ(Pattadakal) ಸಮೂಹ ದೇವಾಲಯಗಳ ಹತ್ತು ಸ್ಮಾರಕಗಳು, ಐಹೊಳೆಯ(Aihole) ಸಮೂಹ ದೇವಾಲಯಗಳು(Temple) ಹಾಗೂ ವಿಜಯಪುರದ(Vijayapura) ವಿಶ್ವಪ್ರಸಿದ್ಧ ಗೋಲಗುಂಬಜ(Gol Gumbaz) ಸ್ಮಾರಕಗಳು ದೀಪಾಲಂಕಾರಕ್ಕಾಗಿ ಸಜ್ಜಾಗುತ್ತಿವೆ. ಈ ಸ್ಮಾರಕಗಳಿಗೆ ಅ. 14 ಸಂಜೆ 6ರಿಂದ ಅ. 15ರ ಬೆಳಗಿನ ವರೆಗೆ ಬೆಳಕಿನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆಯ್ಕೆಯಾಗಿರುವ 100 ಸ್ಮಾರಕಗಳಿಗೆ ಮೂರು ಬಣ್ಣದ, ರಾಷ್ಟ್ರಧ್ವಜದ(National Flag) ಮಾದರಿಯ ದೀಪಾಲಂಕಾರವನ್ನು ಮಾಡಿ, ರಾಷ್ಟ್ರಗೀತೆಯನ್ನು(National Anthem) ನಿರಂತರವಾಗಿ ಕಡಿಮೆ ಧ್ವನಿಯಲ್ಲಿ ನುಡಿಸಲಾಗುವುದು.

ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಯಶಸ್ಸು, ವಿಶ್ವಕ್ಕೆ ಮಾದರಿ!

ಕೋವಿಡ್ ಲಸಿಕೆ ಪಡೆಯದೆ ಸಾವಿನ ಕದ ತಟ್ಟಿದ ಶೇ.99.5 ಮಂದಿ!

ಕೊರೋನಾ (Corona) ಲಸಿಕೆ ಪಡೆದವರಲ್ಲಿ ಸೋಂಕು ವಿಪರೀತಕ್ಕೆ ಹೋಗಿ ಸಾವು ಸಂಭವಿಸುವ ಪ್ರಮಾಣ ಅತ್ಯಂತ ಕಡಿಮೆ ಎನ್ನುವುದು ಇದೀಗ ಸಾಬೀತಾಗಿದೆ. ದಕ್ಷಿಣ ಕನ್ನಡ (Dakshinakannada) ಜಿಲ್ಲೆಯಲ್ಲಿ ಕೊರೋನಾ ಲಸಿಕೆ ನೀಡಿಕೆ ಆರಂಭವಾದ ಜ. 16ರಿಂದ ಅ.2ರವರೆಗೆ ಲಸಿಕೆ ಪಡೆದ ಕೇವಲ ಶೇ.0.5 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ. ಈ ಅವಧಿಯಲ್ಲಿ ಸಂಭವಿಸಿದ ಒಟ್ಟು ಕೊರೋನಾ ಸಾವಿನ (Death ) ಸಂಖ್ಯೆಯಲ್ಲಿ ಶೇ.99.5 ಮಂದಿ ಲಸಿಕೆ ಪಡೆಯದವರೇ ಆಗಿದ್ದಾರೆ.
 

Latest Videos
Follow Us:
Download App:
  • android
  • ios