MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • World News
  • ಹಂಟಾ ವೈರಸ್ ಪೀಡಿತ ಹಡಗಿನಲ್ಲಿದ್ದ ಇಬ್ಬರು ಭಾರತೀಯರು ಸ್ಪೇನ್‌ನಿಂದ ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್

ಹಂಟಾ ವೈರಸ್ ಪೀಡಿತ ಹಡಗಿನಲ್ಲಿದ್ದ ಇಬ್ಬರು ಭಾರತೀಯರು ಸ್ಪೇನ್‌ನಿಂದ ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್

ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಸಿಬ್ಬಂದಿಯನ್ನು ನೆದರ್‌ಲ್ಯಾಂಡ್ಸ್‌ಗೆ ಸ್ಥಳಾಂತರಿಸಲಾಗಿದೆ. ಸ್ಪೇನ್‌ನಲ್ಲಿ ಹಡಗು ನಿಂತ ನಂತರ, ಆರೋಗ್ಯವಂತರಾಗಿದ್ದರೂ ಮುನ್ನೆಚ್ಚರಿಕಾ ಕ್ರಮವಾಗಿ ಇಬ್ಬರನ್ನೂ ಹೆಚ್ಚಿನ ಮೇಲ್ವಿಚಾರಣೆ ಮತ್ತು ಕ್ವಾರಂಟೈನ್‌ಗಾಗಿ ಕಳುಹಿಸಲಾಗಿದೆ.

2 Min read
Author : Mahmad Rafik
Published : May 11 2026, 09:59 AM IST
Share this Photo Gallery
  • FB
  • TW
  • Linkdin
  • Whatsapp
15
ಭಾರತೀಯರು ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್
Image Credit : AI meta

ಭಾರತೀಯರು ನೆದರ್‌ಲ್ಯಾಂಡ್ಸ್‌ಗೆ ಶಿಫ್ಟ್

ಹಂಟಾ ವೈರಸ್ ಪೀಡಿತ ಕ್ರೂಸ್ ಹಡಗಿನಲ್ಲಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ನೆದರ್‌ಲ್ಯಾಂಡ್‌ಗೆ ಶಿಫ್ಟ್ ಮಾಡಲಾಗಿದೆ. ಎಂವಿ ಹೊಂಡಿಯಸ್‌ನಿಂದ ಹಡಗನ್ನು ಸ್ಥಳಾಂತರಿಸಿದ್ದು, ಭಾನುವಾರ ಸ್ಪೇನ್ ತಲುಪಿದೆ. ಹಡಗು ಸ್ಪೇನ್ ತಲುಪಿದ ಕೂಡಲೇ WHO ಯ ಪ್ರೋಟೋಕಾಲ್‌ಗಳ ಪ್ರಕಾರ ಸ್ಪೇನ್ ಸರ್ಕಾರದ ಆರೋಗ್ಯ ಅಧಿಕಾರಿಗಳು, ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದಾರೆ.,

Add Asianetnews Kannada as a Preferred SourcegooglePreferred
25
ಇಬ್ಬರು ಭಾರತೀಯರ ಆರೋಗ್ಯ
Image Credit : AI meta

ಇಬ್ಬರು ಭಾರತೀಯರ ಆರೋಗ್ಯ

ಇದೇ ಹಡಗಿನಲ್ಲಿ ಇಬ್ಬರು ಭಾರತೀಯ ಪ್ರಜೆಗಳಿದ್ದರು. ವರದಿಗಳ ಪ್ರಕಾರ, ಇಬ್ಬರು ಭಾರತೀಯರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ಹೆಚ್ಚಿನ ಆರೋಗ್ಯ ಮೇಲ್ವಿಚಾರಣೆಗಾಗಿ ನೆದರ್‌ಲ್ಯಾಂಡ್ಸ್‌ಗೆ ಕಳುಹಿಸಲಾಗಿದೆ. ಸ್ಪೇನ್‌ನ ಭಾರತೀಯ ರಾಯಭಾರಿ ಸ್ಪ್ಯಾನಿಷ್ ಅಧಿಕಾರಿಗಳು, ಇಬ್ಬರು ಭಾರತೀಯರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಆರೋಗ್ಯದ ಕುರಿತ ಕ್ಷಣ ಕ್ಷಣದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.

Related Articles

Related image1
ಕೊರೋನಾ ರೀತಿ ಮಹಾಮಾರಿ ‘ಹಂಟು ವೈರಸ್‌’ ಪತ್ತೆ: ವಿಶ್ವಾದ್ಯಂತ ಆತಂಕ, ಸೋಂಕಿತರಿಗಾಗಿ WHO ಹುಡುಕಾಟ
Related image2
ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸ್ಫೋಟ: ಮೂವರು ಸಾವು, ಸೋಂಕು ನಿಯಂತ್ರಣಕ್ಕೆ ಹರಸಾಹಸ
35
150 ಜನರು ಪ್ರಯಾಣಿಸುತ್ತಿದ್ದ ಹಡಗು
Image Credit : AI meta

150 ಜನರು ಪ್ರಯಾಣಿಸುತ್ತಿದ್ದ ಹಡಗು

ಸ್ಪೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ನೀಡಿದ ಮಾಹಿತಿ ಪ್ರಕಾರ, ವೈರಸ್ ಪೀಡಿತ ಹಡಗಿನಲ್ಲಿ ಇಬ್ಬರು ಭಾರತೀಯರು ಸೇರಿದಂತೆ 150 ಜನರಿದ್ದರು. 150 ಜನರನ್ನು ಹೊತ್ತ ಡಚ್ ಧ್ವಜದ ಹಡಗು ಎಂವಿ ಹೊಂಡಿಯಸ್ ಭಾನುವಾರ ಸ್ಪೇನ್ ತಲುಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹಡಗನ್ನು ಸ್ಪೇನ್‌ನ ಕ್ಯಾನರಿ ದ್ವೀಪಗಳ ಕರಾವಳಿಯಿಂದ ಸ್ವಲ್ಪ ದೂರದಲ್ಲಿ ಲಂಗರು ಹಾಕಲಾಗಿದೆ.

45
ಭಾರತೀಯರು ಹಡಗಿನ ಉದ್ಯೋಗಿಗಳು
Image Credit : Gemini

ಭಾರತೀಯರು ಹಡಗಿನ ಉದ್ಯೋಗಿಗಳು

ಇಬ್ಬರು ಭಾರತೀಯರ ಹಡಗಿನ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಾಗಿ ಪ್ರಯಾಣಿಸುತ್ತಿದ್ದರು. WHO ಮತ್ತು ಸ್ಪ್ಯಾನಿಷ್ ಆರೋಗ್ಯ ಇಲಾಖೆ ರೂಪಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಪಾಲನೆ ಮಾಡಿ ಎಲ್ಲಾ 150 ಜನರನ್ನು ಹಡಗಿನಿಂದ ಹೊರಗೆ ಕರೆದುಕೊಂಡು ಬರಲಾಗಿದೆ. ಸ್ಪ್ಯಾನಿಷ್ ರಾಷ್ಟ್ರೀಯ ತುರ್ತು ಮಾನಿಟರಿಂಗ್ ಮತ್ತು ಸಮನ್ವಯ ಕೇಂದ್ರ (CENEM) ನೀಡಿದ ಮಾಹಿತಿ ಪ್ರಕಾರ, ಇಬ್ಬರು ಭಾರತೀಯರಲ್ಲಿ ಹಂಟಾ ವೈರಸ್‌ನ ಯಾವುದೇ ಗುಣಲಕ್ಷಣಗಳು ಕಂಡು ಬಂದಿಲ್ಲ. ಸದ್ಯ ಇಬ್ಬರನ್ನು ನೆದರ್‌ಲ್ಯಾಂಡ್ಸ್‌ಗೆ ಕಳುಹಿಸಲಾಗಿದ್ದು, ಸಂಬಂಧಿತ ಆರೋಗ್ಯ ಸುರಕ್ಷತಾ ಶಿಷ್ಟಾಚಾರಗಳ ಅಡಿಯಲ್ಲಿ ಅಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ.

55
ಶಿಫ್ಟ್ ಮಾಡಿದ್ದು ಹೇಗೆ?
Image Credit : Gemini And AI Meta

ಶಿಫ್ಟ್ ಮಾಡಿದ್ದು ಹೇಗೆ?

ಸ್ಪ್ಯಾನಿಷ್ ಸಿವಿಲ್ ಗಾರ್ಡ್‌ನ ಬೆಂಗಾವಲಿನೊಂದಿಗೆ ಸ್ಪೇನ್‌ನ ಮಿಲಿಟರಿ ತುರ್ತು ಘಟಕದಿಂದ ನಿರ್ವಹಿಸಲ್ಪಡುವ ಬಸ್‌ಗಳು, ಸ್ಥಳಾಂತರಗೊಂಡವರನ್ನು ಗ್ರಾನಡಿಲ್ಲಾ ಬಂದರಿನಿಂದ ನೇರವಾಗಿ ಟೆನೆರಿಫ್ ದಕ್ಷಿಣ ವಿಮಾನ ನಿಲ್ದಾಣದ ರನ್‌ವೇಗೆ ಕರೆದುಕೊಂಡು ಬಂದಿವೆ. ಇಲ್ಲಿಂದಲೇ ಸ್ಪ್ಯಾನಿಷ್ ಪ್ರಯಾಣಿಕರನ್ನು ಹೊತ್ತ ಮೊದಲ ವಿಮಾನವು ಭಾನುವಾರ ಸ್ಪ್ಯಾನಿಷ್ ಕ್ಯಾನರಿ ದ್ವೀಪಗಳಿಂದ ಮ್ಯಾಡ್ರಿಡ್‌ಗೆ ಹೊರಟಿತು. ಸ್ಪೇನ್‌ಗೆ ಭೇಟಿ ನೀಡಿರುವ WHO ಅಧಿಕಾರಿಗಳು, ಇದು ಕೋವಿಡ್ ರೂಪಾಂತರಿ ಅಲ್ಲ. ಸಾರ್ವಜನಿಕವಾಗಿ ಅಪಾಯವನ್ನುಂಟು ಮಾಡುವ ತೀವ್ರತೆ ಕಡಿಮೆ ಎಂದು ಹೇಳಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕೋವಿಡ್
ಹಂಟಾವೈರಸ್

Latest Videos
Recommended Stories
Recommended image1
ಅಮೆರಿಕನ್‌ ಟೆಕ್‌ ಕಂಪನಿಗಳಲ್ಲಿ ಉದ್ಯೋಗ ಕಟ್‌; ಇದು ತಾತ್ಕಾಲಿಕವಲ್ಲ, ಶಾಶ್ವತ ಬದಲಾವಣೆ
Recommended image2
ಬಾಹ್ಯಾಕಾಶದ 'ರಹಸ್ಯ' ಏಲಿಯನ್ಸ್‌ ಫೈಲ್‌ ಓಪನ್ ಮಾಡಿದ ಪೆಂಟಗನ್‌: ಚಂದ್ರನ ಮೇಲೆ ವಿಚಿತ್ರ ಬೆಳಕು ಕಂಡಿದ್ದ ಗಗನಯಾತ್ರಿಗಳು!
Recommended image3
ಹೋರ್ಮುಜಲ್ಲಿ ಮತ್ತೆ ಇರಾನ್‌, ಅಮೆರಿಕ ಪರಸ್ಪರ ಗುಂಡೇಟು; ಇರಾನಿಂದ ಕ್ಷಿಪಣಿ ದಾಳಿ: UAE ಆರೋಪ
Related Stories
Recommended image1
ಕೊರೋನಾ ರೀತಿ ಮಹಾಮಾರಿ ‘ಹಂಟು ವೈರಸ್‌’ ಪತ್ತೆ: ವಿಶ್ವಾದ್ಯಂತ ಆತಂಕ, ಸೋಂಕಿತರಿಗಾಗಿ WHO ಹುಡುಕಾಟ
Recommended image2
ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸ್ಫೋಟ: ಮೂವರು ಸಾವು, ಸೋಂಕು ನಿಯಂತ್ರಣಕ್ಕೆ ಹರಸಾಹಸ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved