Asianet Suvarna News Asianet Suvarna News

WWE ರಿಂಗ್‌ನಲ್ಲಿ ನಾಟು ನಾಟು ಹಾಡಿಗೆ ಕುಣಿದಾಡಿದ ರಸ್ಲರ್‌ಗಳು: ವೈರಲ್ ವೀಡಿಯೋ

ರಿಂಗ್‌ನೊಳಗೆ ಸದಾ ಕಿತ್ತಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ರಸ್ಲರ್‌ಗಳು ಇಂದು ರಿಂಗ್‌ನೊಳಗೆ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದು, ಇವರ ವೀಡಿಯೋ  ಈಗ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Wrestlers Dance to Natu Natu Song in WWE Ring Viral Video akb
Author
First Published Sep 17, 2023, 3:38 PM IST

ರಿಂಗ್‌ನೊಳಗೆ ಸದಾ ಕಿತ್ತಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ರಸ್ಲರ್‌ಗಳು ಇಂದು ರಿಂಗ್‌ನೊಳಗೆ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದ್ದು, ಇವರ ವೀಡಿಯೋ  ಈಗ  ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಆರ್‌ಆರ್‌ಆರ್‌ನ ನಾಚೋ ನಾಚೋ ಹಾಡಿಗೆ ಈ WWE ಸ್ಪರ್ಧಿಗಳು ಒಬ್ಬರನ್ನೊಬ್ಬರು ಹಿಡಿದುಕೊಂಡು ಕುಣಿದಾಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ರಸ್ಲಿಂಗ್ ಶೋದಲ್ಲಿ ಈ ರಸ್ಲರ್‌ಗಳ ಡಾನ್ಸ್ ವೀಡಿಯೋ ಸೆರೆ ಆಗಿದೆ. 

ಸುಮಾರು ಆರು ವರ್ಷಗಳ ಸುಧೀರ್ಘ ಸಮಯದ ನಂತರ ರಸ್ಲಿಂಗ್ ಟೀಮ್‌ ಭಾರತಕ್ಕೆ ಬಂದಿದ್ದು, ಮುತ್ತಿನ ನಗರಿ ಹೈದರಾಬಾದ್‌ನಲ್ಲಿ (Hyderabad) ಮೂರು ಗಂಟೆಯ ಲೈವ್ ಶೋ ನಡೆಯಿತು. ಈ ಲೈವ್ ಶೋ ಡ್ರಾಮಾ, ಹೊಡೆದಾಟ ಹಾಗೂ ಅನಿರೀಕ್ಷಿತ ದೃಶ್ಯಗಳಿಂದ  ಜನರಿಗೆ ಮನೋರಂಜನೆ ನೀಡಿತ್ತು. ಈ ವೇಳೆ ರಸ್ಲರ್‌ಗಳು ರಿಂಗ್‌ನಲ್ಲಿ ಮಾಡಿದ ನೃತ್ಯದ ವೀಡಿಯೋ ಒಂದು ವಾರದಿಂದ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಸಾಕಷ್ಟು ವೈರಲ್ ಆಗಿದೆ.  

epicwrestlingmoments ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ಅಪ್‌ಲೋಡ್ ಆಗಿದ್ದು, ಇದೊಂದು ಸೂಪರ್‌ ಕ್ಷಣ ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಲಾಗಿದೆ. ಈ ವೀಡಿಯೋದಲ್ಲಿ ರಸ್ಲರ್‌ಗಳಾದ ಡ್ರೂ ಮ್ಯಾಕ್‌ಇಂಟೈರ್, ಜಿಂದರ್ ಮಹಲ್, ಸಾಮಿ ಝೈನ್ ಮತ್ತು ಕೆವಿನ್ ಓವೆನ್ಸ್ WWE ಸೂಪರ್‌ಸ್ಟಾರ್ ಸ್ಪೆಕ್ಟಾಕಲ್‌ನ ಆರ್‌ಆರ್‌ಆರ್‌ನ ನಾಚೊ ನಾಚೊ ಹಾಡಿಗೆ ಡಾನ್ಸ್‌ ಹೆಜ್ಜೆ ಹಾಕಿದರು. 

ಏಳು ದಿನಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ.  6.1 ಮಿಲಿಯನ್‌ಗೂಹೆಚ್ಚು ಜನರು ಈ ವೀಡಿಯೋವನ್ನು ವೀಕ್ಷಿಸಿದ್ದಾರೆ. ಹಲವರು ಈ ವೀಡಿಯೊವನ್ನು ಮೆಚ್ಚಿದ್ದು, ಹಲವರು ಕಾಮೆಂಟ್ ಮಾಡಿದ್ದಾರೆ.  ಇದು ಆರ್‌ಆರ್‌ಆರ್ ಪವರ್‌ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಭಾರತೀಯ ಹಾಡುಗಳು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಆಸ್ಕರ್ ಪ್ರಶಸ್ತಿ ಬಂದ ಹಾಡು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.  ಭಾರತಕ್ಕೆ ಇದೊಂದು ಹೆಮ್ಮೆಯ ಕ್ಷಣ ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ. 

ಆಸ್ಕರ್‌ ಪ್ರಶಸ್ತಿ ವಿಜೇತ ಆರ್‌ಆರ್‌ಆರ್‌ ಸಿನಿಮಾದ  ನಾಟು ನಾಟು ಹಾಡಲ್ಲಿ ಜೂನಿಯರ್ ಎನ್‌ಟಿಆರ್ (NTR) ಹಾಗೂ ರಾಮ್‌ಚರಣ್‌ ತೇಜ್ (Ramcharan Tej) ನಟಿಸಿದ್ದು, ಹಿಂದಿಯಲ್ಲಿ ನಾಚೋ ನಾಚೋ ಎಂದು ಬಿಡುಗಡೆಯಾಗಿದೆ. ಈ ಹಾಡನ್ನು  ವಿಶಾಲ್ ಮಿಶ್ರಾ (Vishal Mishra) ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. ಈ ಹಾಡಿಗೆ ರಿಯಾ ಮುಖರ್ಜಿ (Riya Mukharji) ಸಾಹಿತ್ಯ ಬರೆದರೆ  ಎಂಎಂ ಕ್ರೀಂ ಸಂಗೀತ ಸಂಯೋಜಿಸಿದ್ದಾರೆ. ಉಕ್ರೇನ್‌ನ ರಷ್ಯಾದ ಮಿಲಿಟರಿ ಆಕ್ರಮಣ ಪ್ರಾರಂಭವಾಗುವ ಮುನ್ನ  ಕೆಲವು ತಿಂಗಳ ಮೊದಲು ಕೈವ್‌ನಲ್ಲಿರುವ ಮಾರಿಯಿನ್ಸ್ಕಿ ಅರಮನೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿತ್ತು. 

RRR ಹಾಡು ನಾತು ನಾತು, ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಮೇಲೆ ಚಿತ್ರಿಸಲಾಗಿದೆ, ಹಿಂದಿಯಲ್ಲಿ ನಾಚೋ ನಾಚೋ ಎಂದು ಬಿಡುಗಡೆಯಾಯಿತು. ಇದನ್ನು ವಿಶಾಲ್ ಮಿಶ್ರಾ ಮತ್ತು ರಾಹುಲ್ ಸಿಪ್ಲಿಗುಂಜ್ ಹಾಡಿದ್ದಾರೆ. ಈ ಹಾಡಿಗೆ ರಿಯಾ ಮುಖರ್ಜಿ ಸಾಹಿತ್ಯ ಬರೆದರೆ, ಎಂಎಂ ಕ್ರೀಂ ಸಂಗೀತ ಸಂಯೋಜಿಸಿದ್ದಾರೆ. ಉಕ್ರೇನ್‌ನ ರಷ್ಯಾದ ಮಿಲಿಟರಿ ಆಕ್ರಮಣ ಪ್ರಾರಂಭವಾಗುವ ಕೆಲವು ತಿಂಗಳ ಮೊದಲು ಕೈವ್‌ನಲ್ಲಿರುವ ಮಾರಿಯಿನ್ಸ್ಕಿ ಅರಮನೆಯಲ್ಲಿ (ಉಕ್ರೇನ್ ಅಧ್ಯಕ್ಷೀಯ ಅರಮನೆ) ಹಾಡನ್ನು ಚಿತ್ರೀಕರಿಸಲಾಯಿತು.

 

Follow Us:
Download App:
  • android
  • ios