ಇಸ್ಲಾಮಾಬಾದ್(ಜೂ. 15)  ಜೂಜಾಟದಲ್ಲಿ ನಿರತವಾಗಿದೆ ಎಂದು ಕತ್ತೆಯೊಂದನ್ನು ಬಂಧಿಸಿ ಅದರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದ ಪಾಕಿಸ್ತಾನದಿಂದ ಮತ್ತೊಂದು ಭಯಂಕರ ಹೇಳಿಕೆ ಬಂದಿದೆ.

ಸೋಶಿಯಲ್ ಮೀಡಿಯಾ ಸರಿಯಾಗಿಯೇ ಪ್ರತಿಕ್ರಿಯೆ ನೀಡಿದ್ದು ಟೀಕಾ ಪ್ರಹಾರವಾಗಿದೆ. ಎರಡು ದಶಕದಿಂದ ಪಾಕಿಸ್ತಾನದ ಅಸೆಂಬ್ಲಿ ಸದಸ್ಯರಾಗಿರುವ ಫಜಲ್ ಉರ್ ರಹಮಾನ್ ಅಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಬೀಜಿಂಗ್‌ನಲ್ಲಿಯೂ ಕೊರೋನಾ, ಕಾರಣ ಏನಣ್ಣ

ಜಾಸ್ತಿ ನಿದ್ರೆ ಮಾಡಿದರೆ ಅವರಿಗೆ ಕೊರೋನಾ ತಗಲುವುದೇ ಇಲ್ಲ. ನಾವು ಮಲಗಿರುವಾಗ ಕೊರೋನಾ ವೈರಸ್ ಸಹ ನಿದ್ರಿಸುತ್ತ ಇರುತ್ತದೆ ಎಂದು ಹೇಳಿಕೆ ನೀಡಿ ನಗೆಪಾಟಲಿಗೆ ಗುರಿಯಾಗಿದ್ದಾರೆ.

ವೈದ್ಯರು ಸಹ ಜಾಸ್ತಿ ನಿದ್ರೆ ಮಾಡಲು ಹೇಳಿದ್ದಾರೆ. ನಾವು ಸತ್ತರೇ ಅದರೊಂದಿಗೆ ವೈರಸ್ ಸಹ ಸಾಯುತ್ತದೆ. ನಾವು ನಿದ್ರಿಸಿದರೆ ಅದು ನಿದ್ರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಭಿನ್ನ ಭಿನ್ನ ಕಮೆಂಟ್ ಬಂದಿದೆ.