Asianet Suvarna News Asianet Suvarna News

ಶಿಶು ಆಹಾರ ಕೊರತೆಯಿಂದ ಕಂಗೆಟ್ಟ ಅಮೆರಿಕಾ: ಆಹಾರವಿಲ್ಲದೇ ಶಿಶುಗಳ ಸಾವು

  • ಅಮೆರಿಕಾದಲ್ಲಿ ನವಜಾತ ಶಿಶುಗಳಿಗೆ ಸಂಕಷ್ಟ
  • ಶಿಶು ಆಹಾರ ಕೊರತೆಯಿಂದ ಕಂಗೆಟ್ಟ ಅಮೆರಿಕಾ
  • ಚಿಂತೆಗೀಡಾದ ಸಾವಿರಾರು ತಾಯಂದಿರು
Whats behind the baby formula shortage in America akb
Author
New York, First Published May 13, 2022, 12:26 PM IST

ವಾಷಿಂಗ್ಟನ್‌: ಅಮೆರಿಕಾ ಈಗ ಹೊಸ ಸಂಕಷ್ಟವೊಂದನ್ನು ಎದುರಿಸುತ್ತಿದೆ. ಅಮೆರಿಕಾದಲ್ಲಿ ಶಿಶು ಪೂರಕಾ ಆಹಾರದ ಕೊರತೆ ಉಂಟಾಗಿದ್ದು, ಇದರಿಂದ ಲಕ್ಷಾಂತರ ಮಕ್ಕಳ ಪೋಷಕರು ಚಿಂತೆಗೀಡಾಗಿದ್ದಾರೆ. ದೇಶಾದ್ಯಂತ ಈ ಸಮಸ್ಯೆ ಎದುರಾಗಿದ್ದು, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ ಇದಕ್ಕೆ ಪ್ರತಿಪಕ್ಷ ರಿಪಬ್ಲಿಕ್ ಪಕ್ಷವನ್ನು ದೂರುತ್ತಾ ಕುಳಿತಿದ್ದಾರೆ. ಡಾಟಾಸೆಂಬ್ಲಿ ಮಾಹಿತಿ ಪ್ರಕಾರ ಕಳೆದ ವಾರ ಅಮೆರಿಕಾದಲ್ಲಿ ಅಂದಾಜು ಶೇ. 43 ರಷ್ಟು ಶಿಶು ಆಹಾರದ(baby formula) ಕೊರತೆ ಕಂಡು ಬಂದಿತ್ತು. ಡಾಟಾಸೆಂಬ್ಲಿ ಈ ಮಾಹಿತಿ ಪಡೆಯಲು ಸುಮಾರು 11,000 ಕ್ಕೂ ಚಿಲ್ಲರೆ ವ್ಯಾಪಾರಸ್ಥರಿಂದ ಮಾಹಿತಿ ಸಂಗ್ರಹಿಸಿದೆ. 

ಅಮೆರಿಕಾ (America) ಆಡಳಿತವೂ ದಶಕಗಳಲ್ಲಿಯೇ ಅತಿ ಹೆಚ್ಚು ಹಣದುಬ್ಬರದ ಸ್ಥಿತಿ ಎದುರಿಸುತ್ತಿರುವುದರಿಂದ ಈಗಾಗಲೇ ಜನರ ಆಕ್ರೋಶಕ್ಕೆ ಕಾರಣವಾಗಿದೆ. ದೇಶವೂ ತಾನು ಬಳಸುವ ಶಿಶು ಆಹಾರದ 98 ಪ್ರತಿಶತವನ್ನು ದೇಶೀಯವಾಗಿಯೇ ಉತ್ಪಾದಿಸುತ್ತಿದೆ. ಆದರೆ ಈಗ ಕೊರತೆಯಾಗಿದ್ದು ಬೇರೆ ದೇಶಗಳಿಂದ ಆಮದಿಗೆ ಚಿಂತನೆ ನಡೆಸುತ್ತಿದೆ. ರೇಷನ್‌ ಕಾರ್ಡ್‌ಗಳ ಮೂಲಕ ಶಿಶು ಹಾಲನ್ನು ಖರೀದಿಸುವ ಬಡ ಕುಟುಂಬಗಳ ಮೇಲೆ ಇದರ ಪರಿಣಾಮ ಉಂಟಾಗದಂತೆ ಮಾಡಲು ಆಡಳಿತವೂ ರಾಜ್ಯಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಆರು ತಿಂಗಳ ನಂತರ ಮಗುವಿಗೆ ಯಾವ ರೀತಿಯ ಆಹಾರ ಕೊಡಬೇಕು..?

ದೇಶಾದ್ಯಂತ ಇರುವ ಎಲ್ಲಾ ಕುಟುಂಬಗಳಿಗೆ ಈ ಶಿಶು ಆಹಾರದ ಪೂರೈಕೆಯಾಗುವಂತೆ ಮಾಡಲು ಕೂಡಲೇ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಮೆರಿಕಾ ಅಧ್ಯಕ್ಷ ಬೈಡೆನ್‌ ಅಧಿಕಾರಿಗಳಿಗೆ ಹೇಳಿದ್ದಾರೆ. ಇದು ತಿಂಗಳಿಂದ ಕೆಲಸ ಮಾಡುತ್ತಿದೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಾಕಿ (Jen Psaki) ವರದಿಗಾರರಿಗೆ ಹೇಳಿದ್ದಾರೆ. ನಾವು ನಿಮ್ಮ ಮನವಿಯನ್ನು ಆಲಿಸುತ್ತಿದ್ದೇವೆ. ನಾವು ನಮ್ಮಿಂದ ಸಾಧ್ಯವಾಗುವ ಎಲ್ಲವನ್ನು ಮಾಡುತ್ತೇವೆ. ನಿಮ್ಮ ಕಪಾಟಿನಲ್ಲಿ ಶಿಶು ಆಹಾರ ಇರುವಂತಾಗಲು ನಾವು ಎಲ್ಲವನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಸಾಮಾನ್ಯಕ್ಕಿಂತ ಹೆಚ್ಚಿನ ಬೆಲೆಗೆ ಆನ್‌ಲೈನ್‌ನಲ್ಲಿ ಶಿಶು ಹಾಲನ್ನು ಮರು ಮಾರಾಟ ಮಾಡುವುದು ಸೇರಿದಂತೆ ಕೊರತೆಗೆ ಸಂಬಂಧಿಸಿದ ದುರುಪಯೋಗಗಳನ್ನು ಪರಿಶೀಲಿಸಲು ಬಿಡೆನ್ ಫೆಡರಲ್ ಟ್ರೇಡ್ ಕಮಿಷನ್ ಅವರನ್ನು ಕೇಳಿದ್ದಾರೆ.

ಅಲ್ಲದೇ ಶಿಶು ಆಹಾರ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳನ್ನು ಭೇಟಿಯಾದ ಅಧ್ಯಕ್ಷ ಬೈಡೆನ್ (Joe Biden)ಈ ಕೊರತೆಯ ಕಾರಣದ ಬಗ್ಗೆ ಚರ್ಚಿಸಿದ್ದಾರೆ. ಆದಾಗ್ಯೂ, ಪರಿಸ್ಥಿತಿ ಸುಧಾರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಅಧಿಕಾರಿಗಳಿಗೂ ತಿಳಿದಿಲ್ಲ. ಆದರೆ ನವೆಂಬರ್‌ನ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿಡಿತವನ್ನು ಹಿಮ್ಮೆಟ್ಟಿಸುವತ್ತ ದೃಷ್ಟಿ ನೆಟ್ಟಿರುವ ರಿಪಬ್ಲಿಕ್‌ ಪಾರ್ಟಿಗೆ ಮಾತ್ರ ಹೊಸ ವಿಚಾರ ಸಿಕ್ಕಂತಾಗಿದೆ. ಹೌಸ್ ರಿಪಬ್ಲಿಕನ್ (Republic) ನಾಯಕತ್ವದ ಭಾಗವಾಗಿರುವ ಎಲಿಸ್ ಸ್ಟೆಫಾನಿಕ್ (Elise Stefanik) ಅವರು ಫೆಬ್ರವರಿಯಲ್ಲಿ ತಾವು ಅಮೆರಿಕಾ ಆಹಾರ ಮತ್ತು ಔಷಧ ಆಡಳಿತವನ್ನು ಸಂಪರ್ಕಿಸಿದ್ದಾಗಿ ಆದರೆ ಈ ಬಗ್ಗೆ ತಮಗೆ ಯಾವುದೇ ವಸ್ತುನಿಷ್ಠ ಪ್ರತಿಕ್ರಿಯೆ ಸಿಗಲಿಲ್ಲ. ಅಧ್ಯಕ್ಷ ಜೋ ಬೈಡೆನ್ ಅವರು ಈ ಬಗ್ಗೆ ಯಾವುದೇ ಯೋಜನೆ ಹೊಂದಿಲ್ಲ, ಈ ಕೊರತೆಯ ಬಗ್ಗೆ ಅವರು ನಕ್ಕು ಸುಮ್ಮನಾಗಿದ್ದಾರೆ ಇದು ನಾಚಿಕೆಗೇಡು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. 

Davanagere ಆಸ್ಪತ್ರೆಯಿಂದಲೇ ನವಜಾತ ಶಿಶು ನಾಪತ್ತೆ, ಪತ್ತೆಯಾಗದ ಖದೀಮರು!
ಈ ಆಹಾರ ಕೊರತೆಯಿಂದ ನವಜಾತ ಶಿಶುಗಳನ್ನು ಹೊಂದಿರುವ ಸಾವಿರಾರು ಪೋಷಕರು ಸಂಕಷ್ಟಕ್ಕೀಡಾಗಿದ್ದಾರೆ. ಎದೆಹಾಲು ಕೊರತೆ ಎದುರಿಸುತ್ತಿರುವ ಅನೇಕ ತಾಯಂದಿರು ಅಮೆರಿಕಾದಲ್ಲಿ ಶಿಶು ಆಹಾರವನ್ನೇ ಅವಲಂಬಿಸಿದ್ದರು. ಇದರಿಂದ ಅವರು ತೀವ್ರ ಚಿಂತೆಗೀಡಾಗಿದ್ದಾರೆ. ಮಗು ಹುಟ್ಟಿದ ಆರೂ ತಿಂಗಳವರೆಗೆ ಎದೆಹಾಲೇ ಶಿಶುವಿನ ಪ್ರಮುಖ ಆಹಾರವಾಗಿದೆ. ಆದರೆ ಕೆಲ ತಾಯಿಯರ ಆರೋಗ್ಯ ಪರಿಸ್ಥಿತಿಗಳು ಎದೆಹಾಲು ನೀಡಲು ಪೂರಕವಾಗದೇ ಇರುವಂತಹ ಸ್ಥಿತಿಯಲ್ಲಿ ಶಿಶುವಿಗೆ ತಾಯಂದಿರು ಪೂರಕ ಆಹಾರವನ್ನು ನೀಡಿ ಬದುಕಿಸಿಕೊಳ್ಳಬೇಕಿದೆ. ಆದರೆ ಈಗ ಶಿಶು ಆಹಾರ ಕೊರತೆಯಿಂದ ತಾಯಂದಿರು ಮಕ್ಕಳನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಫೆಬ್ರವರಿ 17ರ ನಂತರ ಅಮೆರಿಕಾದಲ್ಲಿ ಇಬ್ಬರು ನವಜಾತ ಶಿಶುಗಳು ಆಹಾರ ಕೊರತೆಯಿಂದ ಮೃತಪಟ್ಟ ನಂತರ ಪರಿಸ್ಥಿತಿ ಅಮೆರಿಕಾದಲ್ಲಿ ಬಿಗಡಾಯಿಸಿದೆ. ಪ್ರಸ್ತುತ ಪೂರೈಕೆ ಸರಪಳಿ ಸಮಸ್ಯೆಗಳು ಮತ್ತು ಕಾರ್ಮಿಕರ ಕೊರತೆಯಿಂದಾಗಿ ಈ ಸಮಸ್ಯೆ ಉಂಟಾಗಿದೆ ಎಂದು ತಿಳಿದು ಬಂದಿದೆ. 
 

Follow Us:
Download App:
  • android
  • ios