ಬ್ರಿಟನ್‌ನ ಯುವರಾಣಿ ಕೇಟ್ ಮಿಡ್ಲಟನ್‌ ಕೆಲ ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಿರುವ ನಡುವೆಯೇ, ಕೇಟ್‌ರ ಪತ್ನಿ, ಬ್ರಿಟನ್‌ನ ಯುವರಾಜ ವಿಲಿಯಮ್ಸ್‌, ಮಾಜಿ ಮಾಡೆಲ್‌ ರೋಸ್‌ ಹ್ಯಾನ್ಬರಿ ಜೊತೆ ಲವ್ವಿಡವ್ವಿ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.  

ಲಂಡನ್‌ (ಮಾ.20): ಬ್ರಿಟನ್‌ನ ಯುವರಾಣಿ ಕೇಟ್ ಮಿಡ್ಲಟನ್‌ ಕೆಲ ಸಮಯದಿಂದ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವ ಕುರಿತು ನಾನಾ ವದಂತಿಗಳು ಹಬ್ಬಿರುವ ನಡುವೆಯೇ, ಕೇಟ್‌ರ ಪತ್ನಿ, ಬ್ರಿಟನ್‌ನ ಯುವರಾಜ ವಿಲಿಯಮ್ಸ್‌, ಮಾಜಿ ಮಾಡೆಲ್‌ ರೋಸ್‌ ಹ್ಯಾನ್ಬರಿ ಜೊತೆ ಲವ್ವಿಡವ್ವಿ ನಡೆಸಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಅಮೆರಿಕದ ಖ್ಯಾತ ಲೇಖಕ, ಟೀವಿ ಆ್ಯಂಕರ್‌ ಸ್ಟೆಫನ್‌ ಕಾಲಬರ್ಟ್‌ ಈ ಕುರಿತು ನೀಡಿರುವ ಸ್ಫೋಟಕ ಹೇಳಿಕೆ ಬ್ರಿಟನ್‌ನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. 

ರೋಸ್‌, ವಿಲಿಯಮ್ಸ್‌ ಮತ್ತು ಕೇಟ್‌ ಇಬ್ಬರಿಗೂ ಸ್ನೇಹಿತೆ. ಒಂದು ಸಮಯದಲ್ಲಿ ನೆರೆಮನೆಯಾಗಿದ್ದಾಕೆ. ವಿಲಯಮ್ಸ್‌ ಮತ್ತು ರೋಸ್‌ ನಡುವೆ ಸಂಬಂಧ ಕುರಿತು 2019ರಲ್ಲೇ ಸುದ್ದಿ ಹಬ್ಬಿತ್ತಾದರೂ ಬಳಿಕ ತಣ್ಣಗಾಗಿತ್ತು. ಇದೀಗ ಜೋಡಿ ಮತ್ತೆ ಕದ್ದುಮಚ್ಚಿ ಪ್ರೇಮ ಮುಂದುವರೆಸಿದೆ. ಇದು ವಿಲಿಯಮ್ಸ್‌ ಮತ್ತು ಕೇಟ್‌ ದಾಂಪತ್ಯದಲ್ಲಿ ಬಿರುಕಿಗೆ ಕಾರಣವಾಗಿದೆ ಎಂದು ಸ್ಟೆಫನ್‌ ತಮ್ಮ ಟೀವಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಆರೋಪಗಳು ಹಾಗೂ ಗಾಳಿ ಸುದ್ದಿ ಎಂದು ರೋಸ್‌ ಸ್ಪಷ್ಟನೆ ನೀಡಿದ್ದಾರೆ.

ಬ್ರಿಟನ್‌ ರಾಣಿಯ ರೇಂಜ್ ರೋವರ್ ಎಸ್‌ಯುವಿ ಕಾರು ಖರೀದಿಸಿದ ಭಾರತೀಯ: ಯೋಹಾನ್ ಪೂನವಾಲ್ಲಾ ಅವರು ಭಾರತದ ಸುಪ್ರಸಿದ್ಧ ಕಾರು ಸಂಗ್ರಾಹಕರಾಗಿದ್ದಾರೆ. ಅವರ ವಿಚಿತ್ರ ಮತ್ತು ಅತಿ ದುಬಾರಿ ಕಾರು ಖರೀದಿಗಾಗಿ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಪುಣೆಯ ಅತ್ಯಂತ ಶ್ರೀಮಂತ ವ್ಯಕ್ತಿ ಸೈರಸ್ ಪೂನವಾಲಾ ಅವರ ಸೋದರಳಿಯ ಯೋಹಾನ್ ಪೂನಾವಾಲಾ ಅವರು 100 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಮೌಲ್ಯದ ವಿಶೇಷ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಯೋಹಾನ್ ಪೂನಾವಾಲಾ ಅವರ ಸಂಗ್ರಹವು ಈಗಾಗಲೇ ಹಲವಾರು ಐತಿಹಾಸಿಕ ಕಾರುಗಳನ್ನು ಹೊಂದಿದ್ದರೂ, ಅವರು ದಿವಂಗತ ಯುಕೆ ಕ್ವೀನ್ ಎಲಿಜಬೆತ್ ಅವರ ರೇಂಜ್ ರೋವರ್ ಎಸ್‌ಯುವಿಯನ್ನು ಖರೀದಿಸಿದ್ದರಿಂದ ಅವರ ಸಂಗ್ರಹವು ಮತ್ತೊಮ್ಮೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಟ್ರೆಂಡಿಂಗ್ ಆಗಿದೆ. 

ಪ್ರಿನ್ಸ್ ವಿಲಿಯಂ ಮುಂದೆ ಪರೇಡ್ ವೇಳೆ ತಲೆ ತಿರುಗಿ ಬಿದ್ದ ಬ್ರಿಟಿಷ್ ಯೋಧ: video ವೈರಲ್

ವರದಿಯ ಪ್ರಕಾರ, ಯೋಹಾನ್ ಪೂನವಾಲಾ ಅವರು ಬ್ರಿಟಿಷ್ ಇತಿಹಾಸದ ಅನನ್ಯ ಭಾಗವನ್ನು ಬ್ರಾಮ್ಲಿ ಹರಾಜುದಾರರು ಹರಾಜಿಗೆ ಹಾಕಿದ ನಂತರ 2.25 ಕೋಟಿ ರೂ.ಗಿಂತ ಹೆಚ್ಚಿನ ಮೀಸಲು ಬೆಲೆಯೊಂದಿಗೆ ಖರೀದಿಸಿದರು. ಯೋಹಾನ್ ಹರಾಜು ಪ್ರಕ್ರಿಯೆಯನ್ನು ತಪ್ಪಿಸಿ ಖಾಸಗಿಯಾಗಿ ಕಾರನ್ನು ಖರೀದಿಸಿದರು. 2016 ರ ರೇಂಜ್ ರೋವರ್ SDV8 ಆಟೋಬಯೋಗ್ರಫಿ LWB ಆವೃತ್ತಿಯನ್ನು ಲೋಯಿರ್ ನೀಲಿ ಬಣ್ಣದಲ್ಲಿ ಯೋಹಾನ್ ಪೂನಾವಲ್ಲಾ ಖರೀದಿಸಿದ ದಂತದ ಹೊದಿಕೆಯೊಂದಿಗೆ ವಿಶೇಷವಾಗಿ ರಾಯಲ್ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ವಿಶಿಷ್ಟವಾದ ಮಾರ್ಪಾಡುಗಳನ್ನು ಹೊಂದಿದೆ.