Asianet Suvarna News Asianet Suvarna News

ಪ್ರಿನ್ಸ್ ವಿಲಿಯಂ ಮುಂದೆ ಪರೇಡ್ ವೇಳೆ ತಲೆ ತಿರುಗಿ ಬಿದ್ದ ಬ್ರಿಟಿಷ್ ಯೋಧ: video ವೈರಲ್

ಬಿಸಿಲಿನ  ತಾಪದ ನಡುವೆ  ಮಾರ್ಚಿಂಗ್ ಮಾಡುತ್ತಿದ್ದ ಬ್ರಿಟಿಷ್ ಸೈನಿಕರು ಪ್ರಿನ್ಸ್ ವಿಲಿಯಂನ ಮುಂದೆಯೇ ಮೂರ್ಛೆ ಹೋದ ಘಟನೆ ನಡೆದಿದೆ. 

Scorching heat Soldiers fainted down while marching in front of Prince William: Video goes viral akb
Author
First Published Jun 11, 2023, 12:15 PM IST | Last Updated Jun 11, 2023, 12:17 PM IST

ಲಂಡನ್: ಬಿಸಿಲಿನ  ತಾಪದ ನಡುವೆ  ಮಾರ್ಚಿಂಗ್ ಮಾಡುತ್ತಿದ್ದ ಬ್ರಿಟಿಷ್ ಸೈನಿಕರು ಪ್ರಿನ್ಸ್ ವಿಲಿಯಂನ ಮುಂದೆಯೇ ಮೂರ್ಛೆ ಹೋದ ಘಟನೆ ನಡೆದಿದೆ. ಸುಮಾರು 30 ಡಿಗ್ರಿ ಸೆಲ್ಸಿಯಸ್ ಲಂಡನ್ ಶಾಖವನ್ನು ತಡೆದುಕೊಳ್ಳಲಾಗದೇ ಸೈನಿಕರು ತಲೆ ತಿರುಗಿ ಬೀಳುತ್ತಿರುವ ವೀಡಿಯೋಗಳು ವೈರಲ್ ಆಗಿದೆ. ಇಲ್ಲಿ ಸೈನಿಕರು ಉಣ್ಣೆಯ ಟವೆಲ್ ಮತ್ತು ಕರಡಿ ಚರ್ಮದ ಟೋಪಿಗಳನ್ನು(bearskin hats) ಧರಿಸುವುದರಿಂದ ಇವು ಬಿಸಿಲಿನ ತಾಪದ ಜೊತೆದೇಹದ ಉಷ್ಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಪರಿಣಾಮ ಯೋಧರು ಮೆರವಣಿಗೆ ಮಧ್ಯೆಯೇ ತಲೆ ತಿರುಗಿ ಬಿದ್ದಿದ್ದಾರೆ. 

ಶನಿವಾರ ವಾರ್ಷಿಕ ಟ್ರೂಪಿಂಗ್ ದಿ ಕಲರ್ ಪರೇಡ್‌ಗಾಗಿ ಪ್ರಿನ್ಸ್ ವಿಲಿಯಂ ಅವರ ಮುಂದೆ ಸೈನಿಕರು ಅಂತಿಮ ಪೂರ್ವಾಭ್ಯಾಸ ನೀಡುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.  ಈ ವೇಳೆ ಸುಮಾರು 30 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಇದರೊಂದಿಗೆ ಸೈನಿಕರು ಉಣ್ಣೆಯ ಬಟ್ಟೆ ಮತ್ತು ಕರಡಿ ಚರ್ಮದ ಟೋಪಿಗಳನ್ನು ಧರಿಸಿದ್ದರು. ಶನಿವಾರದಂದು ಲಂಡನ್‌ನಲ್ಲಿ ತಾಪಮಾನವು 30 C ಗೆ ತಲುಪಿತ್ತು.

ಕೋರ್ಟಿಗೆ ಪ್ರಿನ್ಸ್‌ ಹ್ಯಾರಿ ಹಾಜ​ರು: ರಾಜ​ಮ​ನೆ​ತ​ನದವರು ಕೋರ್ಟ್‌ಗೆ ಬರ್ತಿರೋದು 100 ವರ್ಷದಲ್ಲೇ ಮೊದಲು

ಈ ವಿಚಾರಕ್ಕೆ ಸಂಬಂಧಿಸಿದಂತೆ ಬ್ರಿಟನ್ ಪ್ರಿನ್ಸ್ (Prince William) ಟ್ವಿಟ್ ಮಾಡಿದ್ದು, ಇಂದು ಬೆಳಗ್ಗೆ ಶಾಖದ ನಡುವೆಯೂ ಈ ಪರೇಡ್‌ನಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಸೈನಿಕನಿಗೆ ದೊಡ್ಡ ಧನ್ಯವಾದಗಳು. ಇದೊಂದು ಕಷ್ಟದ ಪರಿಸ್ಥಿತಿಯಾಗಿದ್ದರೂ ನೀವೆಲ್ಲರೂ ನಿಜವಾಗಿಯೂ ಉತ್ತಮ ಕೆಲಸ ಮಾಡಿದ್ದೀರಿ. ಧನ್ಯವಾದಗಳುಎಂದು ಪ್ರಿನ್ಸ್ ವಿಲಿಯಂ ಟ್ವಿಟ್ ಮಾಡಿದ್ದಾರೆ. ಮುಂದುವರೆದು ಮತ್ತೊಂದು ಟ್ವಿಟ್ ಮಾಡಿದ್ದು, ಇವತ್ತಿನ ಈ ಕಠಿಣ ಪರಿಸ್ಥಿತಿಯ ಮಧ್ಯೆಯೂ ಇಂತಹದೊಂದು ಕಾರ್ಯಕ್ರಮವಾಗಲೂ ಅಭ್ಯಾಸದಲ್ಲಿ ಭಾಗವಹಿಸಿದ ಎಲ್ಲರಿಗೂ ಈ ಕಾರ್ಯಕ್ರಮದ ಕ್ರೆಡಿಟ್ ಹೋಗುತ್ತದೆ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನು ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಪ್ರಜ್ಞೆ ತಪ್ಪಿ ಯೋಧನೋರ್ವ ಕೆಳಗೆ ಬಿದ್ದಿದ್ದು, ಈ ವೇಳೆ ಆತನನ್ನು ಮೇಲೆತ್ತಲು ಸ್ಟ್ರೆಚರ್ ತೆಗೆದುಕೊಂಡು ಬಂದು ಆತನನ್ನು ಮೇಲೇಳಿಸುತ್ತಾರೆ. ಆದರೆ ಕೂಡಲೇಎದ್ದು ನಿಂತ ಆತ ಮತ್ತೆ ತನ್ನ ಕರ್ತವ್ಯ ನಿಭಾಯಿಸಲು ಮುಂದಾಗುತ್ತಾನೆ. ಆದರೆ ಆತನಿಗೆ ಮತ್ತೆ ಪ್ರಜ್ಞೆ ತಪ್ಪಿದ್ದು, ಆತನನ್ನು ಅಲ್ಲಿಂದ ಕರೆದೊಯ್ಯಲಾಗುತ್ತದೆ.

ಸಂಕಷ್ಟದಲ್ಲಿ ರಾಜ ಮನೆತನ: ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ ಸೊಸೆ

ಬ್ರಿಟನ್‌ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯು (UK Health Security Agency) ದಕ್ಷಿಣ ಇಂಗ್ಲೆಂಡ್‌ನಲ್ಲಿ (South England) ಬಿಸಿ ತಾಪಮಾನ ಹೆಚ್ಚಾಗುವ ಎಚ್ಚರಿಕೆಯನ್ನು ಈಗಾಗಲೇ ನೀಡಿದೆ ಎಂದು ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ.  ಇನ್ನು ಯೋಧರು ಸಿದ್ದಗೊಳ್ಳುತ್ತಿದ್ದ ಕಾರ್ಯಕ್ರಮವೂ 'ಟ್ರೂಪಿಂಗ್ ದಿ ಕಲರ್‌' ಕಾರ್ಯಕ್ರಮದ ಪೂರ್ವಾಭ್ಯಾಸವಾಗಿದ್ದು, ಇದು ರಾಜನ (monarch) ಅಧಿಕೃತ ಜನ್ಮದಿನವನ್ನು ಗುರುತಿಸಲು ಪ್ರತಿ ಜೂನ್‌ನಲ್ಲಿ ವಾರ್ಷಿಕ ಮಿಲಿಟರಿ ಮೆರವಣಿಗೆಯಾಗಿದೆ. ಜೂನ್ 17 ರಂದು ಕಿಂಗ್ ಚಾರ್ಲ್ಸ್ III ಈ ಸಮಾರಂಭವನ್ನು ನೋಡಿಕೊಳ್ಳುತ್ತಾರೆ.

 

Latest Videos
Follow Us:
Download App:
  • android
  • ios