174 ಕೆಜಿ ತೂಕ ಇಳಿಸಿ ಸುದ್ದಿಯಾಗಿದ್ದ 37 ವರ್ಷದ ಗೇಬ್ರಿಯಲ್ ಸಾವು

174 ಕೆಜಿ ತೂಕ ಇಳಿಸಿಕೊಂಡು ಲಕ್ಷಾಂತರ ಜನರಿಗೆ ಪ್ರೇರಣೆಯಾಗಿದ್ದ ಬ್ರೆಜಿಲಿಯನ್ ಇನ್ಫ್ಲುಯೆನ್ಸರ್ ಗೇಬ್ರಿಯಲ್ ಫ್ರೀಟಾಸ್ ಹೃದಯಾಘಾತದಿಂದಾಗಿ 37 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ತಂದೆ ಮತ್ತು ಸಹೋದರನ ಸಾವಿನ ನಂತರ ಅವರ ತೂಕ ಮತ್ತೆ ಹೆಚ್ಚಾಗಿತ್ತು.

Weight Loss Inspiration Gabriel Freitas Dies Suddenly at 37

174 ಕೇಜಿ ತೂಕ ಇಳಿಸಿಕೊಂಡು ತೂಕ ಇಳಿಕೆ ಮಾಡುವ ಲಕ್ಷಾಂತರ ಜನರಿಗೆ  ಪ್ರೇರಣೆಯಾಗಿ ಸುದ್ದಿಯಾಗಿದ್ದ ಬ್ರೆಜಿಲಿಯನ್‌  ಇನ್‌ಫ್ಲುಯೆನ್ಸರ್‌ ಗೇಬ್ರಿಯಲ್  ಫ್ರೀಟಾಸ್ ಅವರು ಹಠಾತ್ ಸಾವಿಗೀಡಾಗಿದ್ದಾರೆ. 37ರ ಹರೆಯದಲ್ಲೇ  ಗೇಬ್ರಿಯಲ್  ಫ್ರೀಟಾಸ್ ಅವರ ಹಠಾತ್ ಸಾವು ಅವರ ಲಕ್ಷಾಂತರ ಅಭಿಮಾನಿಗಳನ್ನು ದಿಗ್ಭ್ರಾಂತರನ್ನಾಗಿಸಿದೆ. ಬ್ರೆಜಿಲಿಯನ್ ರಿಯಾಲಿಟಿ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಟಿವಿತಾರೆ ಎನಿಸಿದ್ದ ಹಾಗೂ ಫಿಟ್ನೆಸ್  ಇನ್‌ಫ್ಲುಯೆನ್ಸರ್ ಆಗಿದ್ದ ಗೇಬ್ರಿಯಲ್ ಫ್ರೀಟಾಸ್ ಅವರು ತಮ್ಮ 174 ಕೆಜಿ ತೂಕ  ಇಳಿಕೆಯ ಮೂಲಕ ಅಂತರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದ್ದರು.  ಆದರೆ ತಂದೆ ಹಾಗೂ ಸೋದರನ ಸಾವಿನ ನಂತರ ಅವರ ತೂಕ ಮತ್ತೆ ಹೆಚ್ಚಾಗಿತ್ತು. ಆದರೆ ಡಿಸೆಂಬರ್ 30 ರಂದು ನಿದ್ರೆಯಲ್ಲಿರುವಾಗಲೇ ಅವರಿಗೆ  ಹೃದಯಾಘಾತವಾಗಿದ್ದು, ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಆಪ್ತ ಸ್ನೇಹಿತ ರಿಕಾರ್ಡೊ ಗೌವಿಯಾ ಅವರು ದೃಢಪಡಿಸಿದ್ದಾರೆ. 

ಗೇಬ್ರಿಯಲ್  ಮಲಗಿದ್ದಾಗಲೇ ನಿಧನರಾದರು, ಅವರು ಬಳಲಲಿಲ್ಲ, ಅವರು ಪ್ರಯತ್ನಿಸಿದರು  ಅವರು ಪ್ರಯತ್ನಿಸುತ್ತಲೇ ಮೃತರಾದರು. ಅವರು ತುಂಬಾ ಬಲಶಾಲಿಯಾಗಿದ್ದರು ಮತ್ತು ನನಗೆ ಅವರ ಬಗ್ಗೆ ಸಾಕಷ್ಟು ಗೌರವವಿದೆ. ತುಂಬಾ ಒಳ್ಳೆಯ ಹೃದಯ ಹೊಂದಿದ್ದ ಒಳ್ಳೆಯ ವ್ಯಕ್ತಿಯಾಗಿದ್ದರು ಎಂದು ಗೇಬ್ರಿಯಲ್ ಹೇಳಿದ್ದಾರೆ. 

ಫ್ರೀಟಾಸ್ ತೂಕ ಇಳಕೆ ಮಾಡುವ ಮೂಲಕ ತನ್ನ ಗಮನಾರ್ಹವಾದ ರೂಪಾಂತರದಿಂದ ಸಾವಿರಾರು ಜನರನ್ನು ಪ್ರೇರೇಪಿಸಿದ್ದರು.  ಅವರ ತೂಕ ನಷ್ಟ ಹೋರಾಟದ ಪಯಣವನ್ನು ಹಾಗೂ ಅದರಲ್ಲಿ ಸಾಧಿಸಿದ ಯಶಸ್ಸನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಹಂಚಿಕೊಂಡು ಅನೇಕರನ್ನು ಪ್ರೇರೆಪಿಸಿದ್ದರು. ಅವರ ಈ ತೂಕ ಇಳಿಕೆಯ ಪ್ರಯಾಣವು ಅವರ ವೈಯಕ್ತಿಕ ಶಿಸ್ತು ಮತ್ತು ನಿರ್ಧಾರವನ್ನು ಎತ್ತಿ ತೋರಿಸುತ್ತದೆ.  ಜೊತೆಗೆ ಸ್ಥೂಲ ದೇಹದವರು ಹೊಂದಿರುವ  ಸವಾಲುಗಳು ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಅವರ ಈ ತೂಕ ಇಳಿಕೆಯ ಪ್ರಯಾಣವೂ ಗಮನ ಸೆಳೆಯಿತು. 

ಇನ್ಸ್ಟಾಗ್ರಾಮ್‌ನಲ್ಲಿ ಅವರು 7 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಹೊಂದಿದ್ದರು. ಅಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಅವರ ತೂಕ ಇಳಿಕೆಯ ಪ್ರಯಾಣವೂ ಸಂಪೂರ್ಣವಾಗಿ ಡಾಕ್ಯುಮೆಂಟ್ ಆಗಿತ್ತು.  ಇವರ ಕತೆ ಮೊದಲ ಬಾರಿ 2017ರಲ್ಲಿ ಬ್ರೆಜಿಲಿಯನ್ ಟಿವಿ ಶೋ ಪ್ರೊಗ್ರಾಮ ಡು ಗುಗುದಲ್ಲಿ ಪ್ರಸಾರವಾಗಿತ್ತು. ಈ ಶೋದಲ್ಲಿ ಅವು ತಮ್ಮ ಹೋರಾಟ ಹಾಗೂ ಯಶಸ್ಸಿನ ಬಗ್ಗೆ ಮಾತನಾಡಿದ್ದರು. 

ನನ್ನ ಹೆಸರು ಗೇಬ್ರಿಯಲ್ ಫ್ರೀಟಾಸ್, ನನಗೆ 29 ವರ್ಷ, ನಾನು 1.94 ಮೀಟರ್ ಎತ್ತರವಿದ್ದೇನೆ. ನಾನು ನನ್ನ ತೂಕ ಇಳಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದಾಗ ನನ್ನ ತೂಕ 320 ಕೆಜಿ  ಇತ್ತು. ಯಾವುದೇ ಸರ್ಜರಿ ಹಾಗೂ ಔಷಧಿ ಇಲ್ಲದೆಯೂ ತೂಕ ಇಳಿಕೆ ಮಾಡಬಹುದು ಎಂದು ತೂಕ ಇಳಿಕೆ ಮಾಡಲು ಬಯಸುವ ಅನೇಕರಿಗೆ ತೋರಿಸುವ ಸಲುವಾಗಿ ನಾನು ನನ್ನ ಪ್ರಯಾಣವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದ ಎಂದು ಗೇಬ್ರಿಯಲ್ ಈ ಶೋದಲ್ಲಿ ತಮ್ಮನ್ನು ಪರಿಚಯಿಸಿಕೊಂಡಿದ್ದರು.  

ಧೃಡ ಸಂಕಲ್ಪ ಹಾಗೂ ಕಠಿಣ ಜೀವನಶೈಲಿಯಿ ಮೂಲಕ ಅವರು ಕೇವಲ ಒಂದೂವರೆ ವರ್ಷದಲ್ಲಿ 203 ಕೆಜಿಯಷ್ಟು ತೂಕ ಇಳಿಕೆ ಮಾಡಿಕೊಂಡಿದ್ದರು. ಆದರೆ ಅವರ ತಂದೆ ಹಾಗೂ ಸಹೋದರನ ಸಾವಿನ ನಂತರ ಗೇಬ್ರಿಯಲ್‌ ಅವರು ತೀವ್ರ ದುಃಖಕ್ಕೆ ಒಳಾಗಿದ್ದು, ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ  ಗಂಭೀರ ಪರಿಣಾಮ ಬೀರಿತ್ತು. ಹೀಗಾಗಿ ಅವರ ತೂಕ ಮತ್ತೆ ಏರಿಕೆಯಾಗಿ  ಮತ್ತೆ 380 ಕೇಜಿಗೆ ಏರಿಕೆಯಾಗಿದ್ದರು.

 

Latest Videos
Follow Us:
Download App:
  • android
  • ios