ಆಸ್ಟ್ರೇಲಿಯಾ ಪ್ರವಾಹ ನಡುವೆ ಗರ್ಭಿಣಿ ವಧು: ಫೋಟೋ ವೈರಲ್
ಪ್ರವಾಹದ ನಡುವೆಯೇ ಫೋಟೋ ಶೂಟ್ | ತುಂಬು ಗರ್ಭಿಣಿಯನ್ನು ಬಳಸಿಹಿಡಿದು ಚುಂಬಿಸಿದ ಪತಿ | ಸುತ್ತ ಮುತ್ತ ಪ್ರವಾಹದ ನೀರು
ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿ ಶತಮಾನದಲ್ಲಿ ಒಮ್ಮೆ ಸಂಭವಿಸಿರುವ ಪ್ರವಾಹದ ಮಧ್ಯೆ ತೆಗೆದ ಗರ್ಭಿಣಿ ವಧುವಿನ ವಿವಾಹದ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮದುವೆಯ ಸ್ಥಳವನ್ನು ತಲುಪಲು ಮಹಿಳೆ ಸಹಾಯಕ್ಕಾಗಿ ಮನವಿ ಮಾಡಿದ್ದರು. ನಂತರ ಹೆಲಿಕಾಪ್ಟರ್ ಸೇವೆಯು ಸ್ಥಳಕ್ಕೆ ಚಾಪರ್ ಕಳುಹಿಸಿತ್ತು. 5 ನಿಮಿಷದಲ್ಲಿ ನಗರ ಸೇರಬಹುದಾಗಿದ್ದ ಹೆದ್ದಾರಿ ನೀರಿನಿಂದ ಮುಳುಗಿತ್ತು ಎಂದು ಟ್ವೀಟ್ ಮಾಡಿದ್ದಾರೆ ವಧು.
'ಆಡು ಓಡಿ ಬಂದರೆ ಏನ್ ಮಾಡ್ತೀರಿ...' ಪ್ರಿ ವೆಡ್ಡಿಂಗ್ ಸಿಕ್ಕಾಪಟ್ಟೆ ವೈರಲ್!
ತೀವ್ರ ಪ್ರವಾಹವು ಅವಳನ್ನು ಸಿಕ್ಕಿಹಾಕಿಕೊಂಡ ನಂತರ ಗರ್ಭಿಣಿ ವಧುವಿನ ವಿವಾಹಕ್ಕೆ ಸಹಾಯಕ್ಕಾಗಿ ಮನವಿ ಮಾಡಲಾಗಿತ್ತು. ಇವರ ಮದುವೆ ಫೋಟೋ ಇದುವರೆಗಿನ ವರ್ಷದ ಅತ್ಯುತ್ತಮ ವೆಡ್ಡಿಂಗ್ ಫೋಟೋಗಳಲ್ಲಿ ಒಂದಾಗಿದೆ.
ಕೇಟ್ ಫೋಥರಿಂಗ್ಹ್ಯಾಮ್ ವೇಯ್ನ್ ಬೆಲ್ ವಿವಾಹದ ಹಿಂದಿನ ರಾತ್ರಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ನಲ್ಲಿರುವ ತನ್ನ ಹೆತ್ತವರ ಮನೆಯಲ್ಲಿ ಕಳೆದರು.
ಪ್ರೀತಿಯ ಸಾಕು ನಾಯಿಯ ಪ್ರೆಗ್ನೆನ್ಸಿ ಫೋಟೋ ಶೂಟ್!
ಇತ್ತೀಚಿನ ವಾರಗಳಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಈ ಪ್ರದೇಶವು ಧ್ವಂಸಗೊಂಡಿದ್ದು ಇದರಿಂದಾಗಿ 18,000 ಜನರನ್ನು ಸ್ಥಳಾಂತರಿಸಲಾಗಿದೆ.
ತನ್ನ ಮದುವೆ ದಿನದಂದು ಎಚ್ಚರವಾದಾಗ ಆಕೆಯ ಸ್ಥಳವೆಲ್ಲಾ ಸಂಪೂರ್ಣವಾಗಿ ಪ್ರವಾಹದ ನೀರಿನಿಂದ ಸುತ್ತುವರೆದಿತ್ತು. ಮದುವೆಯ ಸ್ಥಳವನ್ನು ತಲುಪಲು ಆಕೆಗೆ ಯಾವುದೇ ಮಾರ್ಗವಿಲ್ಲ ಎಂದು ಆಕೆಗೆ ಗೊತ್ತಾಗಿತ್ತು.
ಬಿಸಿಲಿಗೆ ಬೀದಿ ಬೀದಿಯಲ್ಲಿ ವ್ಯಾಪಾರ ಮಾಡ್ತಿದ್ದ ಫುಟ್‌ಪಾತ್ ಹುಡುಗಿಯ ಫೋಟೋಶೂಟ್ ವೈರಲ್
ಅದೃಷ್ಟವಶಾತ್,ಅಫಿನಿಟಿ ಹೆಲಿಕಾಪ್ಟರ್‌ಗಳು ಕರೆಗೆ ಉತ್ತರಿಸಿದವು ಮತ್ತು ವಧುವನ್ನು ಕರೆತರಲು ಚಾಪರ್ ಕಳುಹಿಸಿದವು. ಎಚ್ಚರಿಕಾ ಕ್ರಮಗಳೊಂದಿಗೆ ಎಚ್ಚರಿಕೆಯಿಂದ ವಧುವನ್ನು ಮತ್ತು ಅವಳ ಕುಟುಂಬವನ್ನು ಕರೆತರಲು ವಿಮಾನವು ವಧುವಿನ ಹೆತ್ತವರ ಫಾರ್ಮ್‌ನಲ್ಲಿ ಇಳಿದಿತ್ತು. ಕೆಲವೇ ನಿಮಿಷಗಳಲ್ಲಿ ವಧು ಮದುವೆ ಸ್ಥಳಕ್ಕೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗಿದೆ.