ಕೊರೋನಾ ವೈರಸ್ ವಕ್ಕರಿಸಿ ವಿಶ್ವವೇ ಅಪಾಯಕ್ಕೆ ಸಿಲುಕಿದೆ. ಜಗತ್ತಿಗೆ ಮೊದಲೇ ಎಚ್ಚರಿಸಬೇಕಿದ್ದ ವಿಶ್ವ ಆರೋಗ್ಯ ಸಂಸ್ಥೆ ಮೆಲ್ಲನೆ ಪಿಸುಗುಟ್ಟು ಸುಮ್ಮನಾಗಿತ್ತು. ಮಾರ್ಗಸೂಚಿ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿತು. ಜಾಗೃತಿ ಮೂಡಿಸುವ ಯಾವ ಕಾರ್ಯಕ್ರಮವನ್ನು ವಿಶ್ವ ಆರೋಗ್ಯ ಸಂಸ್ಥೆ ಹಮ್ಮಿಕೊಂಡಿಲ್ಲ. ಇದೀಗ ಕೊರೋನಾ ಮೀತಿ ಮೀರಿದಾಗ ನಮ್ಮಲ್ಲಿ ಔಷಧಿ ಇಲ್ಲ ಎಂಬ ಹೇಳಿಕೆ ನೀಡಿದೆ.

ಜಿನೆವಾ(ಜೂ.26):  ಕೊರೋನಾ ವೈರಸ್ ವಿಶ್ವದೆಲ್ಲೆಡೆ ಹಬ್ಬಲು ವಿಶ್ವ ಆರೋಗ್ಯ ಸಂಸ್ಥೆಯ ವೈಫಲ್ಯ ಕೂಡ ಕಾರಣ ಅನ್ನೋ ಆರೋಪಗಳಿವೆ. ಅಮೆರಿಕ ನೇರ ಆರೋಪ ಮಾಡಿದೆ. ಇನ್ನುಳಿದ ದೇಶಗಳು ಪರೋಕ್ಷವಾಗಿ ಅಸಮಧಾನ ವ್ಯಕ್ತಪಡಿಸಿದೆ. ಕೊರೋನಾ ವೈರಸ್ ಎಲ್ಲಾ ದೇಶಗಳ ಪರಿಸ್ಥಿತಿಯನ್ನು ಹದಗೆಡಿಸಿದೆ. ಪರಿಸ್ಥಿತಿ ಕೈಮೀರುತ್ತಿರುವ ಹಂತದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸುದ್ದಿಗೋಷ್ಠಿ ಮಾಡುತ್ತಲೇ ಇದೆ. ಆದರೆ ಯಾವ ಪರಿಹಾರ ಮಾತ್ರ ಸಿಗುತ್ತಿಲ್ಲ. ಇದೀಗ ವಿಶ್ವ ಆರೋಗ್ಯ ಸಂಸ್ಥೆ, ನಮ್ಮಲ್ಲಿ ಕೊರೋನಾಗೆ ಸದ್ಯ ಔಷಧಿ ಇಲ್ಲ ಎಂದಿದೆ.

 ಬೆಂಗಳೂರು ಲಾಕ್‌ಡೌನ್: ಶಾಸಕರು -ಸಚಿವರು-ಸಂಸದರು ಹೇಳೋದೇನು..?.

ಕೊರೋನಾ ವೈರಸ್‌ಗೆ ಔಷಧಿ ಇಲ್ಲ. ತಜ್ಞರು, ಸಂಶೋಧಕರು ಔಷಧಿ ಕಂಡು ಹಿಡಿಯುವ ಪ್ರಯತ್ನದಲ್ಲಿದ್ದಾರೆ. ಒಂದು ವರ್ಷದೊಳಗೆ ಲಸಿಕೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಆದರೆ ಸದ್ಯ ಪರಿಣಾಮಕಾರಿಯಾದ ಲಸಿಕೆ ಲಭ್ಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಟೆಡ್ರೋಸ್ ಅಧನಮ್ ಗೆಬ್ರೆಸಸ್ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಗೆ ಜನರು ಮನ್ನಣೆ ನೀಡುತ್ತಿಲ್ಲ. 

ಕೊರೋನಾ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ: ಸಚಿವ ಸುಧಾಕರ್‌

ಪ್ರತಿ ದೇಶದಿಂದ ಫಂಡ್ ಕಲೆಕ್ಟ್ ಮಾಡುವ ವಿಶ್ವ ಆರೋಗ್ಯ ಸಂಸ್ಥೆ ವಿಶ್ವವನ್ನೇ ಕಾಡುವ ವೈರಸ್ ಅಪ್ಪಳಿಸಿದಾಗ ಕೈಚೆಲ್ಲಿ ಕೂತಿರುವುದು ಹಲವು ದೇಶಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಜೊತೆಗೆ ವಿಶ್ವ ಆರೋಗ್ಯ ಸಂಸ್ಥೆ ಕೊರೋನಾ ವೈರಸ್ ನಿರ್ವಹಣೆ ಕುರಿತು ಅಸಮಧಾನ ಹೆಚ್ಚಾಗುತ್ತಿದೆ.