ಭಾರತದ 5 ದೊಡ್ಡ ಜನಸಂಖ್ಯೆ ನಗರಗಳಲ್ಲಿ 192500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ| 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ, ಕೇವಲ ಶೇ. 0.9 ರಷ್ಟು ಮತ್ತು ಶೇ. 1ರಷ್ಟು ಸಾವು ಸಂಭವಿಸಿದೆ|

ಬೆಂಗಳೂರು(ಜೂ.26): ಕೋವಿಡ್ ನಿರ್ವಹಣೆಯಲ್ಲಿ ಬೆಂಗಳೂರು ಅಸಾಧಾರಣ ಸಾಧನೆ ತೋರುತ್ತಿದೆ. ಜೂನ್ 25 ರಂತೆ, ಭಾರತದ 5 ದೊಡ್ಡ ಜನಸಂಖ್ಯೆ ನಗರಗಳಲ್ಲಿ 192500 ಕೋವಿಡ್ ಪ್ರಕರಣಗಳು, 7417 ಸಾವು ಸಂಭವಿಸಿವೆ. 1798 ಪ್ರಕರಣಗಳು ಮತ್ತು 78 ಸಾವುಗಳೊಂದಿಗೆ ಬೆಂಗಳೂರಿನಲ್ಲಿ, ಒಟ್ಟು ಟಾಪ್ 5 ನಗರಗಳ ಪ್ರಕರಣಗಳಿಗೆ ಹೋಲಿಸಿದರೆ, ಕೇವಲ ಶೇ. 0.9 ರಷ್ಟು ಮತ್ತು ಶೇ. 1ರಷ್ಟು ಸಾವು ಸಂಭವಿಸಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್‌ ಅವರು ಹೇಳಿದ್ದಾರೆ. 

ನಗರದಲ್ಲಿ ದಿನೇ ದಿನೆ ಮಹಾಮಾರಿ ಕೊರೋನಾ ಪ್ರಕರಣಗಳ ಹೆಚ್ಚಾಗುತ್ತಿವೆ. ಕೋವಿಡ್‌ ರೋಗಿಗಳ ಸಾವಿನಲ್ಲೂ ಕೂಡ ಹೆಚ್ಚಾಗುತ್ತಿದೆ. ಇಡೀ ಕರ್ನಾಟಕಕ್ಕೆ ಹೋಲಿಸಿದರೆ ಅರ್ಧದಷ್ಟು ಕೊರೋನಾ ರೋಗಿಗಳು ಕೇವಲ ಬೆಂಗಳೂರಿನಲ್ಲೇ ಸಾವನ್ನಪ್ಪಿದ್ದಾರೆ. 

Scroll to load tweet…

ರಾಮನಗರ: ಮಾಜಿ ಶಾಸಕ ಬಾಲಕೃಷ್ಣ ಆಪ್ತ ಸಹಾಯಕ ಸೇರಿ ಮನೆ ಕೆಲಸದವರಿಗೆ ಕೊರೋನಾ ನೆಗೆಟಿವ್‌

ಕೋವಿಡ್ ಕಂಟ್ರೋಲ್‌ನಲ್ಲಿ ಬೆಂಗಳೂರು ದೇಶಕ್ಕೆ ಮಾದರಿಯಾಗಿದ್ದೇವೆ. ಈಗ ಕೊರೋನಾ ನಿಗ್ರಹಕ್ಕೆ ಆಯಾ ಆಯಾ ಕ್ಷೇತ್ರದ ಶಾಸಕರು ವಿಶೇಷ ಗಮನ ನೀಡಿದರೆ ಮಹಾಮಾರಿ ಕೋವಿಡ್ ತಡೆಯಬಹುದು ಎನ್ನುವ ವಿಶ್ವಾಸ ಇದೆ. ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಆಗಿದ್ದನ್ನು ಬಿಟ್ಟರೆ, ಬೇರೆ ಏರಿಯಾಗಳಲ್ಲಿ ಮರು ಲಾಕ್ ಡೌನ್ ಪ್ರಶ್ನೆಯೇ ಇಲ್ಲ. ಈ ಸಂಬಂಧ ಇಂದು ಶಾಸಕರ ಅಭಿಪ್ರಾಯ ಪಡೆಯುತ್ತೇನೆ ಎಂದು ಹೇಳಿದ್ದಾರೆ.