ನ್ಯೂಯಾರ್ಕ್(ಜೂ.13): ಸಂಕಷ್ಟದ ಸಮಯದಲ್ಲಿ ಭಗವದ್ಗೀತೆಯಿಂದ ನೆಮ್ಮದಿ ಸಾಧ್ಯ. ಜೀವನದಲ್ಲಿ ಸೋತಾಗ, ಮತ್ತೆ ಮೇಲೆದ್ದು ನಿಲ್ಲಲು, ಧೈರ್ಯದಿಂದ ಮುನ್ನುಗ್ಗಲ್ಲು, ಸಾಧನೆ ಪಥದಲ್ಲಿ ಮುನ್ನಡೆಯಲು ಭಗವದ್ಗೀತೆ ಸಹಕಾರಿಯಾಗಿದೆ ಎಂದು ಅಮೆರಿಕದ ಹಿಂದೂ ಸಚಿವೆ ಭಾರತ ಮೂಲದ ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

ಎಂಥಾ ಕೆಟ್ಟ ಗಿಫ್ಟ್ ಕೊಟ್ರಿ'..! ಚೀನಾ ವಿರುದ್ಧ ಟ್ರಂಪ್‌ ಕಿಡಿ

ಹವಾಯಿಯ ಮಹಿಳಾ ಶಾಸಕಿ ತುಳಸಿ ಗಬ್ಬಾರ್ಡ್, ಹಿಂದೂ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಭಗವದ್ಗೀತೆ ಕುರಿತು ಹೇಳಿದ್ದಾರೆ. ಶಾಂತಿ, ಧೈರ್ಯ, ಆತ್ಮವಿಶ್ವಾಸಕ್ಕೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಭಕ್ತಿ ಯೋಗ, ಕರ್ಮ ಯೋಗ ಉಪಯುಕ್ತವಾಗಿದೆ ಎಂದು ತುಳಸಿ ಗಬ್ಬಾರ್ಡ್ ಹೇಳಿದ್ದಾರೆ.

ಜನಾಂಗೀಯ ಸಮಾನತೆಗೆ ಪಣತೊಟ್ಟ ಬಾಸ್ಕೆಟ್ ಬಾಲ್ ಪಟು ಜೋರ್ಡನ್; $100 ಮಿಲಿಯನ್ ಹಣ ದೇಣಿಗೆ!

ವರ್ಣಬೇಧ ನೀತಿ ವಿರುದ್ಧ ಅಮೆರಿಕದಲ್ಲಿ ನಡೆದ ಪ್ರತಿಭಟನೆ ಬಳಿಕ, ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಎಲ್ಲರೂ ಜೊತೆಯಾಗಿ ಸಾಗಬೇಕಿದೆ. ಇದಕ್ಕೆ ನಾವು ತಯಾರಾಗಬೇಕಿದೆ. ಶಿಸ್ತು, ಸಂಯಮಗಳನ್ನು ರೂಢಿಸಿಕೊಳ್ಳಬೇಕು ಎಂದು ತುಳಸಿ ಹೇಳಿದ್ದಾರೆ.

ಕೊರೋನಾ ವೈರಸ್ ಕಾರಣ ತುಳಸಿ, ವಿದ್ಯಾರ್ಥಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ  ಸಂವಾದ ನಡೆಸಿದರು. ಅಮಿರಿಕದಲ್ಲಿ ಕೊರೋನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಸೋಂಕಿತರ ಸಂಖ್ಯೆ 20 ಲಕ್ಷ ದಾಟಿದೆ. ಇನ್ನು 1 ಲಕ್ಷಕ್ಕೂ ಹೆಚ್ಚಿನ ಮಂದಿ ಕೊರೋನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.