Asianet Suvarna News Asianet Suvarna News

Imran Khan Indian Puppet: ನಾನು ಇಮ್ರಾನ್ ಖಾನ್ ಆತ್ಮಹತ್ಯೆ ನೋಡಲು ಕಾಯುತ್ತಿದ್ದೇನೆ ಎಂದ ನವಾಜ್ ಷರೀಫ್

  • ಭಾರತದಲ್ಲಿ ಇಮ್ರಾನ್ ಖಾನ್ ರನ್ನು ಕೀಲಿಗೊಂಬೆಯಂತೆ ನೋಡಲಾಗುತ್ತಿದೆ ಎಂದ ನವಾಜ್ ಷರೀಫ್
  • ಇಮ್ರಾನ್ ಖಾನ್  ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದು ಕಾಯುತ್ತಿದ್ದೇನೆ ಎಂದ ನವಾಜ್
  • ಸಾಲ ಮಾಡಿ ದೇಶವನ್ನು ಹಾಳು ಮಾಡಿದ್ದಾರೆ ಇಮ್ರಾನ್ ಎಂದ ಷರೀಫ್
we are waiting to see when Imran Khan will commit suicide says Pak deposed Prime Minister Nawaz Sharif gow
Author
Bengaluru, First Published Dec 25, 2021, 10:29 PM IST

ಇಸ್ಲಾಮಾಬಾದ್ (ಡಿ.25): ಬ್ರಿಟನ್ ರಾಜಧಾನಿ ಲಂಡನ್ (London)ನಲ್ಲಿರುವ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ (Nawaz Sharif ) ಹಾಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ (Imran Khan) ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ಷರೀಫ್ ಗುರುವಾರ ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಸಾಮಾನ್ಯ ಸಭೆಯಲ್ಲಿ ಆನ್‌ಲೈನ್‌ ಮೂಲಕ ಪಾಲ್ಗೊಂಡು ಮಾತನಾಡಿದರು. ಭಾರತದಲ್ಲಿ ಇಮ್ರಾನ್ ಖಾನ್ ಅವರನ್ನು 'ಕೀಲುಗೊಂಬೆ' (Puppet) ಎಂದು ಲೇವಡಿ ಮಾಡಲಾಗುತ್ತಿದೆ. ಅಮೆರಿಕಾದಲ್ಲಿ ಇಮ್ರಾನ್ ಖಾನ್ ಗಿಂತ ಅಲ್ಲಿನ ಮೇಯರ್ ಗೆ ಹೆಚ್ಚಿನ ಅಧಿಕಾರವಿದೆ   ಎಂದು ವ್ಯಂಗ್ಯವಾಡಿದ್ದಾರೆ.

ದೇಶದಲ್ಲಿ ಇಮ್ರಾನ್‌ ಖಾನ್‌ ಹೇಗೆ ಅಧಿಕಾರಕ್ಕೆ ಬಂದಿದ್ದಾರೆ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ಇಮ್ರಾನ್ ಜನರ ಮತಗಳ ಬದಲು ಸೇನಾ ನೆರವಿನಿಂದ ಅಧಿಕಾರಕ್ಕೆ ಬಂದಿದ್ದಾರೆ ಎಂದು ಷರೀಫ್ ಹೇಳಿದರು. ಅಂತಾರಾಷ್ಟ್ರೀಯ ಹಣಕಾಸು ನಿಧಿ (International Monetary Fund) ಬಳಿ ನೆರವಿಗೆ ಹೋಗುವ ಬದಲು ಆತ್ಮಹತ್ಯೆ ಮಾಡಿಕೊಳ್ಳಲು ಇಷ್ಟಪಡುವುದುದಾಗಿ ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಇಮ್ರಾನ್ ಖಾನ್ ಯಾವಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬುದನ್ನು ಎದುರು ನೋಡುತ್ತಿರುವೆ ಎಂದು ಷರೀಫ್ ಸಂಚಲನ ಹೇಳಿಕೆ ನೀಡಿದ್ದಾರೆ.

ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಅಂದಿನ ಸರ್ಕಾರಗಳು ಸಾಲ ಪಡೆದಿರುವುದನ್ನು ಇಮ್ರಾನ್ ಖಾನ್ ಕಟುವಾಗಿ ಟೀಕಿಸಿದ್ದಾರೆ. ಹೀಗಿರುವಾಗ ಇದೀಗ ಅವರೇ ದೇಶವನ್ನು ಸಾಲದ ಸುಳಿಯಲ್ಲಿ ಮುಳುಗಿಸಿರುವ ಹಿನ್ನೆಲೆಯಲ್ಲಿ ವಿಪಕ್ಷಗಳಿಗೆ ಟಾರ್ಗೆಟ್ ಮಾಡುವ ಅವಕಾಶ ಸಿಕ್ಕಿದೆ.  2018ರಲ್ಲಿ ಸೇನೆಯ ನೆರವಿನಿಂದ ಅಧಿಕಾರಕ್ಕೆ ಬಂದ ಇಮ್ರಾನ್ ಸರಕಾರ ಮೊದಲ ಮೂರು ವರ್ಷಗಳಲ್ಲಿ ವಿದೇಶಿ ಸರಕಾರಗಳು ಹಾಗೂ ಹಣಕಾಸು ಸಂಸ್ಥೆಗಳಿಂದ 34 ಬಿಲಿಯನ್ ಡಾಲರ್ ಗೂ ಹೆಚ್ಚು ಸಾಲ ಪಡೆದಿದೆ ಎಂದು ಷರೀಫ್ ಹೇಳಿದ್ದಾರೆ.

JAMES WEBB SPACE TELESCOPE : ನಭಕ್ಕೆ ಚಿಮ್ಮಿದ 75 ಸಾವಿರ ಕೋಟಿ ರೂಪಾಯಿ ವೆಚ್ಚದ ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್!

ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ದೋಷಿಯಾಗಿರುವ 71 ವರ್ಷದ ನವಾಜ್‌ ಷರೀಫ್, ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ ವೈದ್ಯಕೀಯ ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಪ್ರಯಾಣಿಸಿದ್ದು, ನವೆಂಬರ್ 2019 ರಿಂದ ಲಂಡನ್‌ನಲ್ಲಿ ವಾಸವಾಗಿದ್ದಾರೆ. ಚಿಕಿತ್ಸೆಗಾಗಿ 4 ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್(Lahore High Court) ಅವರಿಗೆ ಅನುಮತಿ ನೀಡಿತ್ತು, ಆದರೆ ಅವರು ಹಿಂತಿರುಗಲಿಲ್ಲ. ಹೀಗಾಗಿ ಷರೀಪ್ ಲಂಡನ್ ನಲ್ಲಿ ಕೂತು ಇಮ್ರಾನ್ ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

H-1B Visa: ಹೆಚ್-1 ಬಿ ಸೇರಿ ಹಲವು ವೀಸಾ ಅರ್ಜಿದಾರರ ಸಂದರ್ಶನ ಕೈಬಿಟ್ಟ ಅಮೆರಿಕ!

ಪಾಕ್ ನ ಆರ್ಥಿಕ ಸ್ಥಿತಿ ಚಿಂತಾಜನಕ: ಪಾಕಿಸ್ತಾನವನ್ನು (Pakistan) ‘ನಯಾ ಪಾಕಿಸ್ತಾನ’ ಮಾಡುತ್ತೇನೆಂದು ಭರವಸೆ ನೀಡಿ ಪ್ರಧಾನಿ ಪಟ್ಟಕ್ಕೇರಿದವರು ಇಮ್ರಾನ್‌ ಖಾನ್‌(Imran Khan). ಆದರೆ ಖಾನ್‌ ಪ್ರಧಾನಿಯಾದ ಬಳಿಕ ಉಗ್ರರ ಸ್ವರ್ಗ ಪಾಕಿಸ್ತಾನದ ಬೊಕ್ಕಸ ಬರಿದಾಗುತ್ತಲೇ ಇದೆ. ಸದ್ಯ ಪಾಕ್‌ನಲ್ಲಿ ಹಣದುಬ್ಬರ (Inflamation In Pakistan) ಮಿತಿ ಮೀರುತ್ತಿದ್ದು, ಶೇ.9.2ರಿಂದ ಶೇ.11.5ಕ್ಕೇರಿದೆ. ಈ ಮೂಲಕ 20 ತಿಂಗಳ ಗರಿಷ್ಠಕ್ಕೆ ಏರಿಕೆಯಾಗಿದೆ. ಹಣದುಬ್ಬರ ತಗ್ಗಿಸಲು ಪಾಕ್‌ ರಿಸರ್ವ್ ಬ್ಯಾಂಕ್‌ (Pakistan Reserve Bank) ಬಡ್ಡಿದರ ಏರಿಸಿದೆ. ಸರ್ಕಾರಿ ನೌಕರರು ಮೂರು ತಿಂಗಳಿಂದ ವೇತನವಾಗಿಲ್ಲ ಎಂದು ಬಹಿರಂಗವಾಗಿ ಅಂಗಲಾಚುತ್ತಿದ್ದಾರೆ.

Fact Check: 1999 ರಲ್ಲೇ 'ಒಮಿಕ್ರೋನ್' ವಿಡಿಯೋ ಗೇಮ್ ರಚಿಸಿದ್ರಾ ಬಿಲ್ ಗೇಟ್ಸ್?

ಈ ನಡುವೆ ಪಾಕಿಸ್ತಾನಕ್ಕೆ ಮುಂದಿನ ಎರಡು ವರ್ಷದಲ್ಲಿ 51.6 ಬಿಲಿಯನ್‌ ಡಾಲರ್‌ (3.83 ಲಕ್ಷ ಕೋಟಿ) ಮೌಲ್ಯದ ವಿದೇಶಿ ನೆರವು ತೀರಾ ಅಗತ್ಯವಿದೆ. 2021-22ರಲ್ಲಿ 23.6 ಬಿಲಿಯನ್‌ ಡಾಲರ್‌ (1.77 ಲಕ್ಷ ಕೋಟಿ ರು.) ಮತ್ತು 2022-23ರಲ್ಲಿ 28 ಬಿಲಿಯನ್‌ ಡಾಲರ್‌ (2.10 ಲಕ್ಷ ಕೋಟಿ) ನಷ್ಟು ಹಣಕಾಸಿನ ನೆರವು ಅಗತ್ಯವಿದೆ ಎಂದು ವಿಶ್ವ ಹಣಕಾಸು ಸಂಸ್ಥೆ ಅಂದಾಜಿಸಿದೆ. ಇತ್ತೀಚೆಗೆ ವಿಶ್ವ ಬ್ಯಾಂಕ್‌ (World Bank) ಅಂತಾರಾಷ್ಟ್ರೀಯ ಸಾಲದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಅದರ ಪ್ರಕಾರ ಅತಿ ಹೆಚ್ಚು ವಿದೇಶಿ ಸಾಲ ಪಡೆದ ಟಾಪ್‌ 10 ದೇಶಗಳ ಪೈಕಿ ಪಾಕಿಸ್ತಾನವೂ ಒಂದು. ಅಂದರೆ ದ್ವಿಪಕ್ಷೀಯ ಸಾಲಗಾರರು ಸೀಮಿತ ಅವಧಿಯಲ್ಲಿ, ಸಾಲ ಸೇವೆಗಳನ್ನು ಸ್ಥಗಿತಗೊಳಿಸಲು ಪಾಕಿಸ್ತಾನ ಅರ್ಹವಾಗಿದೆ.

Follow Us:
Download App:
  • android
  • ios