H-1B Visa: ಹೆಚ್-1 ಬಿ ಸೇರಿ ಹಲವು ವೀಸಾ ಅರ್ಜಿದಾರರ ಸಂದರ್ಶನ ಕೈಬಿಟ್ಟ ಅಮೆರಿಕ!

  • ಹೆಚ್-1 ಬಿ ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಹಲವಾರು ವೀಸಾ ಅರ್ಜಿದಾರ ಸಂದರ್ಶನ ಮಾಡದಿರಲು ತೀರ್ಮಾನ
  • 2022 ರಲ್ಲಿ ವೈಯಕ್ತಿಕ ಸಂದರ್ಶನದ  ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ ಘೋಷಣೆ
     
Interviews at US consular offices waived for H-1Bs and other work visas gow

ಅಮೆರಿಕ(ಡಿ.24): ಕೋವಿಡ್-19 (Covid 19) ಪ್ರಕರಣಗಳ ಹೆಚ್ಚಳದ ಆತಂಕದ ನಡುವೆ, ಹೆಚ್-1ಬಿ (H-1B) ಕೆಲಸಗಾರರು ಮತ್ತು ವಿದ್ಯಾರ್ಥಿಗಳು ಸೇರಿದಂತೆ  2022 ರಲ್ಲಿ ಹಲವಾರು ಬಗೆಯ ವೀಸಾ (Visa) ಅರ್ಜಿದಾರರಿಗೆ ವೈಯಕ್ತಿಕ ಸಂದರ್ಶನದ  ಅಗತ್ಯತೆಗೆ ವಿನಾಯಿತಿ ನೀಡುವುದಾಗಿ ಅಮೆರಿಕಾ (America) ಘೋಷಿಸಿದೆ.  ಹೆಚ್- 1 ಬಿ ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಭಾರತ ಮತ್ತು ಚೀನಾದಂತಹ ರಾಷ್ಟ್ರಗಳಿಂದ ಪ್ರತಿವರ್ಷ ಬರುವ ಸಹಸ್ರಾರು ನೌಕರರ ಮೇಲೆ ತಂತ್ರಜ್ಞಾನ ಕಂಪನಿಗಳು ಅವಲಂಬಿತವಾಗಿವೆ.

ವಿಶೇಷ ವೃತ್ತಿಪರರು ( ಹೆ-1ಬಿ ವೀಸಾ)  ಟ್ರೈನಿ ಅಥವಾ ವಿಶೇಷ ಶಿಕ್ಷಣಕ್ಕೆ ಆಗಮಿಸುವವರು ( ಹೆಚ್-3 ವೀಸಾ)  ಇಂಟರ್ ಕಂಪನಿ ವರ್ಗಾವಣೆದಾರರು (ಎಲ್ ವೀಸಾ) ಅಸಾಧಾರಣ ಸಾಮರ್ಥ್ಯ ಅಥವಾ ಸಾಧನೆ ಹೊಂದಿರುವವರು ( ಒ ವೀಸಾ) ಅಥ್ಲೆಟಿಕ್ಸ್ , ಕಲಾವಿದರು ಮತ್ತು ಎಂಟರ್ ಟ್ರೈನರ್ಸ್ ( ಪಿ ವೀಸಾ) ಮತ್ತು  ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ( ಕ್ಯೂ ವೀಸಾ) ಅರ್ಜಿದಾರರಿಗೆ ಡಿಸೆಂಬರ್ 31, 2022ರವರೆಗೂ ವೈಯಕ್ತಿಕ ಸಂದರ್ಶನಕ್ಕೆ ವಿನಾಯಿತಿ ನೀಡಲಾಗಿದೆ ಎಂದು ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ ಗುರುವಾರ ತಿಳಿಸಿದೆ. 

ರಾಯಭಾರ ಕಚೇರಿಗಳು ಮತ್ತು ದೂತಾವಾಸಗಳಿಗೆ ಇನ್ನೂ ವೈಯಕ್ತಿಕವಾಗಿ ಸಂದರ್ಶನದ ಅಗತ್ಯವಿರಬಹುದು ಮತ್ತು ಸ್ಥಳೀಯ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಅರ್ಜಿದಾರರು ಈ ಅಭಿವೃದ್ಧಿ ಮತ್ತು ಪ್ರಸ್ತುತ ಕಾರ್ಯಾಚರಣೆಯ ಸ್ಥಿತಿ ಮತ್ತು ಸೇವೆಗಳ ಬಗ್ಗೆ ಹೆಚ್ಚು ವಿವರವಾದ ಮಾಹಿತಿಗಾಗಿ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ವೆಬ್‌ಸೈಟ್‌ಗಳನ್ನು ಪರಿಶೀಲಿಸಬೇಕು ಎಂದು ಅದು ಹೇಳಿದೆ.

OMICRON SCARE ಲಸಿಕೆ ಪಡೆದ 10 ರಲ್ಲಿ 9 ಮಂದಿಗೆ ಓಮಿಕ್ರಾನ್ ದಾಳಿ, ಆರೋಗ್ಯ ಇಲಾಖೆ ಮಹತ್ವದ ಸಲಹೆ!

ಟ್ರಂಪ್ ನೀತಿ ಕಿತ್ತೊಗೆದ್ದಿದ್ದ ಫೆಡರಲ್ ನ್ಯಾಯಾಲಯ: ಕಳೆದ ಸಪ್ಟೆಂಬರ್ ನಲ್ಲಿ ಅಮೆರಿಕದ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆಯಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಅವಧಿಯ ಕಾನೂನು ಪ್ರಸ್ತಾವವನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ವಜಾಗೊಳಿಸಿದ್ದರು. ಅಮೆರಿಕದ ಈಗಿನ ಹೆಚ್-1 ಬಿ ಲಾಟರಿ ವ್ಯವಸ್ಥೆಯ ಬದಲಿಗೆ ವೇತನ ಮಟ್ಟವನ್ನು ಆಧರಿಸಿ ವೀಸಾ ಆಯ್ಕೆ ಪ್ರಕ್ರಿಯೆಯನ್ನು ಜಾರಿಗೆ ಟ್ರಂಪ್ ಅವಧಿಯ ಕಾನೂನು ಉದ್ದೇಶಿಸಿತ್ತು.

ಹೆಚ್-1 ಬಿ ವೀಸಾ ವಲಸೆಯೇತರ ವೀಸಾ ಆಗಿದ್ದು, ವಿದೇಶಿ ನೌಕರನನ್ನು ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳುವುದಕ್ಕೆ ಅಮೆರಿಕ ಸಂಸ್ಥೆಗಳಿಗೆ ಅನುವು ಮಾಡಿಕೊಡುವ ವೀಸಾ ಆಗಿದೆ.ಭಾರತ- ಚೀನಾದಂತಹ ರಾಷ್ಟ್ರಗಳಿಂದ ಸಾವಿರಾರು ನೌಕರರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಈ ವೀಸಾದ ಮೇಲೆ ಅನೇಕ ಅಮೆರಿಕದ ಸಂಸ್ಥೆಗಳು ಅವಲಂಬಿತವಾಗಿವೆ.

CJI NV Ramana : ಭಾರತದಲ್ಲಿ ಅಭಿವೃದ್ಧಿ ಮಾಡಿದ ಕಾರಣಕ್ಕಾಗಿ Covaxin ಲಸಿಕೆಯನ್ನ ಟೀಕಿಸ್ತಾರೆ!

ವಾರ್ಷಿಕವಾಗಿ 65,000 ಹೆಚ್-1 ಬಿ ವೀಸಾಗಳಿಗೆ ಅಮೆರಿಕ ಮಿತಿ ಹಾಕಿಕೊಂಡಿದ್ದು, ಅಮೆರಿಕದಲ್ಲೇ ಉನ್ನತ ಪದವಿಯನ್ನು ಪಡೆದ ವಿದೇಶಿಗರಿಗಾಗಿ ಹೆಚ್ಚುವರಿ 20,000 ಹೆಚ್-1 ಬಿ ವೀಸಾಗಳನ್ನು ಮೀಸಲಿಟ್ಟಿದೆ.ಹೆಚ್-1 ಬಿ ವೀಸಾ ಪಡೆಯುವುದಕ್ಕೆ ಅರ್ಜಿಯನ್ನು ಪರಿಗಣಿಸಲು ಈಗ ಮೊದಲು ಬಂದವರಿಗೆ ಮೊದಲ ಆದ್ಯತೆ ಹಾಗೂ ಲಾಟರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ.

ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲಿ ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆ (ಯುಎಸ್ ಸಿಐಎಸ್) ಹೆಚ್-1 ಬಿ ವೀಸಾ ಅರ್ಜಿಗಳನ್ನು ಆಯ್ಕೆ ಮಾಡಲು ಸಾಂಪ್ರದಾಯಿಕ ಲಾಟರಿ ವ್ಯವಸ್ಥೆಯನ್ನು ತೆಗೆದುಹಾಕುತ್ತಿರುವುದಾಗಿ ಘೋಷಿಸಿತ್ತು. ಹೊಸ ಆದೇಶದಲ್ಲಿ ಅಮೆರಿಕದ ನೌಕರರ ಹಿತಾಸಕ್ತಿಯನ್ನು ಕಾಪಾಡಲು ವೇತನ ಆಧಾರದಲ್ಲಿ ಹೆಚ್-1 ಬಿ ವೀಸಾ ಆಯ್ಕೆ ಪ್ರಕ್ರಿಯೆ ಜಾರಿಗೊಳಿಸುವುದಾಗಿ ತಿಳಿಸಿತ್ತು.

Latest Videos
Follow Us:
Download App:
  • android
  • ios