Asianet Suvarna News Asianet Suvarna News

James Webb Space Telescope : ನಭಕ್ಕೆ ಚಿಮ್ಮಿದ 75 ಸಾವಿರ ಕೋಟಿ ರೂಪಾಯಿ ವೆಚ್ಚದ ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್!

ವಿಶ್ವದ ಅತ್ಯಂತ ಶಕ್ತಿಶಾಲಿ ಟೆಲಿಸ್ಕೋಪ್
ಹಬಲ್ ಟೆಲಿಸ್ಕೋಪ್ ಸ್ಥಾನವನ್ನು ತುಂಬಲಿರುವ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್
ಏಲಿಯನ್ಸ್ ಗಳ ಇರುವಿಕೆಯನ್ನು ಪತ್ತೆ ಹಚ್ಚಲಿದೆ ಈ ಟೆಲಿಸ್ಕೋಪ್
 

James Webb Space Telescope 100 times more powerful than Hubble Telescope Sets Off On A Million Mile Voyage san
Author
Bengaluru, First Published Dec 25, 2021, 9:43 PM IST

ಕೌರೌ, ಫ್ರಾನ್ಸ್ (ಡಿ. 25): ತಾಂತ್ರಿಕ ಅಡಚಣೆಗಳು, ಸಾಕಷ್ಟು ವಿಳಂಬಗಳ ಬಳಿಕ ವಿಶ್ವದ ಅತ್ಯಂತ ಶಕ್ತಿಶಾಲಿ ಬಾಹ್ಯಾಕಾಶ ದೂರದರ್ಶಕ, ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (James Webb Space Telescope) ಶನಿವಾರ ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ಕೇವಲ ಅರ್ಧಗಂಟೆಯಲ್ಲಿ ಜೇಮ್ಸ್ ವೆಬ್ ಟೆಲಿಸ್ಕೋಪ್ ಕಕ್ಷೆಗೆ ಸೇರಿದ ಸಂಕೇತ ಕೀನ್ಯಾದ ಮಲಿಂಡಿಯಲ್ಲಿರುವ (Malindi in Kenya) ಗ್ರೌಂಡ್ ಆಂಟೆನಾ ಪಡೆಯುವುದರೊಂದಿಗೆ ಭವಿಷ್ಯದಲ್ಲಿ ಬಾಹ್ಯಾಕಾಶದ ಹಲವು ಮೊದಲುಗಳನ್ನು ಪರಿಚಯಿಸಲು ಜೇಮ್ಸ್ ವೆಬ್ ಟೆಲಿಸ್ಕೋಪ್ ತನ್ನ ಪ್ರಯಾಣ ಆರಂಭಿಸಿದೆ. ಚಂದ್ರನ ಮೇಲೆ ಕಾಲಿಟ್ಟ ನಾಸಾದ ಅತ್ಯಂತ ಯಶಸ್ವಿ ಕಾರ್ಯಕ್ರಮದ ಮೂಲ ರೂವಾರಿ, 1961 ರಿಂದ 1968ರ ವರೆಗೆ ನಾಸಾದ (NASA) ಆಡಳಿತಾಧಿಕಾರಿಯಾಗಿದ್ದ ಜೇಮ್ಸ್ ವೆಬ್ (James Webb) ಅವರ ಹೆಸರನ್ನು ಈ ಟೆಲಿಸ್ಕೋಪ್ ಗೆ ಇಡಲಾಗಿದೆ.

ಬ್ರಹ್ಮಾಂಡದ ರಹಸ್ಯವನ್ನು ಅರಿಯುವ ಟೈಮ್ ಮಷಿನ್, ವಿಶ್ವದ ಕನ್ನಡಿ ಎನ್ನುವ ಹೆಸರಿನಿಂದ ಗುರುತಿಸಿಕೊಂಡಿರುವ ಜೇಮ್ಸ್ ವೆಬ್ ಟೆಲಿಸ್ಕೋಪ್ ಅನ್ನು ಏರಿಯನ್-5 (Ariane) ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಹಾರಿಬಿಡಲಾಗಿದೆ. ಈ ಟೆಲಿಸ್ಕೋಪ್ ಅನ್ನು ಭೂಮಿಯಿಂದ 15 ಮಿಲಿಯನ್ ಕಿಲೋಮೀಟರ್ ಅಂದರೆ  9.30 ಲಕ್ಷ ಮೈಲಿ ದೂರದಲ್ಲಿ ಟೆಲಿಸ್ಕೋಪ್ ಅನ್ನು ಸ್ಥಿರಗೊಳಿಸಲಿದ್ದು, ಅಲ್ಲಿಂದ ಸಂಪೂರ್ಣ ಖಗೋಳದ ಅಧ್ಯಯನ ಮಾಡಲಿದೆ. 1990ರಲ್ಲಿ ನಾಸಾ ನಭಕ್ಕೆ ಬಿಟ್ಟಿದ್ದ ಹಬಲ್ ಟೆಲಿಸ್ಕೋಪ್ ಗಿಂತ (Hubble Telescope) 100ಪಟ್ಟು ಶಕ್ತಿಶಾಲಿ ಟೆಲಿಸ್ಕೋಪ್ ಇದಾಗಿದ್ದು, ನಾಸಾ ಮಾತ್ರವಲ್ಲದೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ( European Space Agency) ಹಾಗೂ ಕೆನಡಾ ಸ್ಪೇಸ್ ಏಜೆನ್ಸಿಯ (Canadian Space Agency)ಸಹಾಯದೊಂದಿಗೆ ಅಭಿವೃದ್ಧಿ ಮಾಡಲಾಗಿದೆ. ಒಟ್ಟಾರೆ ಈ ಟೆಲಿಸ್ಕೋಪ್ ಗೆ ಆಗಿರುವ ವೆಚ್ಚ 75 ಸಾವಿರ ಕೋಟಿ ರೂಪಾಯಿ!

ಈ ಟೆಲಿಸ್ಕೋಪ್ ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ, ಬಾಹ್ಯಾಕಾಶದಿಂದ ಭೂಮಿಯ ಮೇಲೆ ಹಾರುತ್ತಿರುವ ಹಕ್ಕಿಯನ್ನು ಸಹ ಗುರುತಿಸಬಲ್ಲುದು. ಭಾರತೀಯ ಕಾಲಮಾನ ಸಂಜೆ 5.30ರ ವೇಳೆಗೆ ಇದರ ಉಡ್ಡಯನ ನಡೆದಿದ್ದು, ಅಂದಾಜು 1 ತಿಂಗಳ ಪ್ರಯಾಣದ ಬಳಿಕ ನಿಗದಿತ ಸ್ಥಳವನ್ನು ತಲುಪಲಿದೆ. ಅಲ್ಲಿಂದಲೇ, ವಿಶ್ವ ಸೃಷ್ಟಿಯ ಆರಂಭಿಕ ದಿನಗಳಲ್ಲಿನ ನಕ್ಷತ್ರಗಳು, ನಕ್ಷತ್ರ ಮಂಡಲಗಳ ಹುಟ್ಟು ಅವುಗಳ ಅಂತ್ಯ ಹೇಗಾಯಿತು ಎನ್ನುವುದರ ಬಗ್ಗೆ ತಿಳಿದುಕೊಳ್ಳಲಿದೆ. ಬ್ರಹ್ಮಾಂಡದ ರಹಸ್ಯಗಳನ್ನು ತಿಳಿಯುವುದರೊಂದಿಗೆ ಏಲಿಯನ್ಸ್ ಗಳ ಇರುವಿಕೆಯ ಬಗ್ಗೆಯೂ ಪತ್ತೆ ಮಾಡಲಿದೆ. ಭೂಮಂಡಲದ ಬಗ್ಗೆ ಇನ್ನೂ ಬಗೆಹರಿಯದ ಸಾಕಷ್ಟು ಕುತೂಹಲಗಳಿಗೆ ಈ ಟೆಲಿಸ್ಕೋಪ್ ಮೂಲಕ ಉತ್ತರ ಪಡೆಯುವ ವಿಶ್ವಾಸದಲ್ಲಿ ವಿಜ್ಞಾನಿಗಳಿದ್ದಾರೆ.
 


ಒಟ್ಟು ನಾಲ್ಕು ಪ್ರಮುಖ ವೈಜ್ಞಾನಿಕ ಉಪಕರಣಗಳು ಟೆಲಿಸ್ಕೋಪ್ ನಲ್ಲಿದೆ. ನಿಯರ್ ಇನ್ ಫ್ರಾರೆಡ್ ಕ್ಯಾಮೆರಾ, ಮಿಡ್ ಇನ್ ಫ್ರಾರೆಡ್, ನಿಯರ್ ಇನ್ ಫ್ರಾರೆಡ್ ಸ್ಪೆಕ್ಟೋಗ್ರಾಫ್ ಮತ್ತು ನಿಯರ್ ಇನ್ ಫ್ರಾರೆಡ್ ಇಮೇಜರ್ ಮತ್ತು ಸ್ಲಿಟ್ ಲೆಸ್ ಸ್ಪೆಕ್ಟೋಗ್ರಾಫ್ ಗಳು ಈ ಟೆಲಿಸ್ಕೋಪ್ ನಲ್ಲಿದೆ. ಅದರೊಂದಿಗೆ ಟೆಲಿಸ್ಕೋಪ್ ನ ಕನ್ನಡಿಗಳ ಮೇಲೆ ಚಿನ್ನದ ಅತ್ಯುತ್ತಮ ಲೇಪನವಿದ್ದು, ಇನ್ ಫ್ರಾರೆಡ್ ಬೆಳಕನ್ನು ಇದು ಒಳಬಿಡದೇ ಇರುವ ಮೂಲಕ ಟೆಲಿಸ್ಕೋಪ್ ತಂಪಾಗಿ ಇರುವಂತೆ ಮಾಡುತ್ತದೆ. ಸೂರ್ಯನ ಬಿಸಿಯಿಂದ ಟೆಲಿಸ್ಕೋಪ್ ಅತಿಯಾಗಿ ಬಿಸಿಯಾಗುವುದನ್ನೂ ತಡೆಯುತ್ತದೆ. ಟೆನಿಸ್ ಕೋರ್ಟ್ ನಷ್ಟು ದೊಡ್ಡದಾದ 5 ಲೇಯರ್ ಗಳ ಸನ್ ಶೀಲ್ಡ್ ಅನ್ನೂ ಅಳವಡಿಸಲಾಗಿದೆ.

Sound from Ganymede: ಸೌರವ್ಯೂಹದ ಅತಿದೊಡ್ಡ ಚಂದ್ರನ ಶಬ್ದ ಸೆರೆಹಿಡಿದ ನಾಸಾದ ಜುನೋ ಮಿಷನ್: ಇಲ್ಲಿದೆ ಆಡಿಯೋ!
ಇದು ಅಮೆರಿಕ ಇತಿಹಾಸದ ಅತ್ಯಂತ ದೊಡ್ಡ ಸ್ಪೇಸ್ ಪ್ರಾಜೆಕ್ಟ್ ಎಂದು ಹೇಳಲಾಗುತ್ತಿದೆ. ಇದು ಹಬಲ್ ಟೆಲಿಸ್ಕೋಪ್ ನ ಸ್ಥಾನವನ್ನು ತುಂಬಲಿದೆ, ಎನ್ನುವುದಾಗಿದ್ದರೂ, ಹಬಲ್ ಗಿಂತ ಹೆಚ್ಚಿನ ಕಾರ್ಯಗಳನ್ನು ಹೊಸ ಟೆಲಿಸ್ಕೋಪ್ ಮಾಡಲಿದೆ. 1990ರಲ್ಲಿ ಹಬಲ್ ಟೆಲಿಸ್ಕೋಪ್ ಅನ್ನು ಉಡ್ಡಯನ ಮಾಡಲಾಗಿತ್ತು. ಭೂಮಿಯ ಹತ್ತಿರದಲ್ಲಿಯೇ ಇದ್ದ ಹಬಲ್ ಟೆಲಿಸ್ಕೋಪ್ ನಿಂದ ನಮ್ಮ ಭೂಮಿಯ 13 ಅಥವಾ 14 ಬಿಲಿಯನ್ ವರ್ಷಗಳ ಹಿಂದೆ ರಚನೆಯಾಗಿದ್ದು ಎನ್ನುವುದನ್ನು ತಿಳಿದುಕೊಂಡಿದ್ದೆವು. ಆದರೆ, 6 ತಿಂಗಳ ಹಿಂದೆ ಹಬಲ್ ಟೆಲಿಸ್ಕೋಪ್ ತನ್ನ ಕಾರ್ಯವನ್ನು ನಿಲ್ಲಿಸಿಬಿಟ್ಟಿರುವ ಕಾರಣ ಜೇಮ್ಸ್ ವೆಬ್ ಟೆಲಿಸ್ಕೋಪ್ ಮಾತ್ರ ಬಹಳ ಪ್ರಮುಖವಾಗಲಿದೆ.

 

Follow Us:
Download App:
  • android
  • ios