ಖಲಿಸ್ತಾನ ಉಗ್ರ ಪನ್ನು ಸತ್ತಿಲ್ಲ, ಮೋದಿ-ಶಾ ಸೇರಿ ಹಲವರಿಗೆ ಕೊಲೆ ಬೆದರಿಕೆ ವಿಡಿಯೋ ಬಹಿರಂಗ!
ಸಿಖ್ ಫಾರ್ ಜಸ್ಟೀಸ್ ಸಂಘಟನೆ ಮುಖ್ಯಸ್ಥ, ಖಲಿಸ್ತಾನ ಉಗ್ರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಗುರುಪತ್ವಂತ್ ಸಿಂಗ್ ಪನ್ನು ಅಪಘಾತದಲ್ಲಿ ಮೃತಪಟ್ಟಿದ್ದಾನೆ ಅನ್ನೋ ಸುದ್ದಿ ನಡುವೆ ಇದೀಗ ಜೀವಂತವಾಗಿ ಪ್ರತ್ಯಕ್ಷವಾಗಿದ್ದಾನೆ. ಇಷ್ಟೇ ಅಲ್ಲ ಕೆನಡಾ ಪ್ರಧಾನಿ ಬಳಿ ಖಲಿಸ್ತಾನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಪ್ರಧಾನಿ ಮೋದಿ ಹಾಗೂ ಇತರ ನಾಯಕರಿಗೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೋ ಬಹಿರಂಗವಾಗಿದೆ.

ಕೆನಡಾ(ಸೆ.12) ಜಿ20 ಶೃಂಗಸಭೆಗೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆಗಿನ ದ್ವಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ ಕೆನಾಡದಲ್ಲಿ ನಡೆಯುತ್ತಿರುವ ಖಲಿಸ್ತಾನ ಹೋರಾಟ, ಮೆರವಣಿ ಆತಂಕ ಹೆಚ್ಚಿಸುತ್ತಿದೆ. ಖಲಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದ್ದರು. ಇನ್ನು ಟ್ರುಡೋ ವಿಮಾನ ತಾಂತ್ರಿಕ ಸಮಸ್ಯೆಯಿಂದ ಹೆಚ್ಚುವರಿ ಒಂದು ದಿನ ದೆಹಲಿಯಲ್ಲೇ ಉಳಿದುಕೊಂಡಿದ್ದರು. ಈ ಘಟನೆ ಬೆನ್ನಲ್ಲೇ ಕೆನಡಾದಲ್ಲಿ ಖಲಿಸ್ತಾನಿಗಳು ಮತ್ತೆ ಹೋರಾಟದ ಕಹಳೆ ಮೊಳಗಿಸಿದ್ದಾರೆ. ಇತ್ತೀಗೆ ವಾಹನ ಅಪಘಾತದಲ್ಲಿ ಜಸ್ಟೀಸ್ ಫಾರ್ ಸಿಖ್ ಸಂಘಟನೆ ಮುಖ್ಯಸ್ಥ, ಖಲಿಸ್ತಾನಿ ಉಗ್ರ ಗರುಪತ್ವಂತ್ ಸಿಂಗ್ ಪನ್ನು ಮೃತಪಟ್ಟಿದ್ದಾನೆ ಎಂದು ಸುದ್ದಿಯಾಗಿತ್ತು. ಹಲವು ದಿನಗಳ ಕಾಲ ಈತನ ಸುಳಿವು ಇರಲಿಲ್ಲ. ಇದೀಗ ಖಲಿಸ್ತಾನ ವಿರುದ್ಧ ಕ್ರಮಕ್ಕೆ ಮೋದಿ ಒತ್ತಾಯಿಸಿದ ಬೆನ್ನಲ್ಲೇ ಪನ್ನು ಪ್ರತ್ಯಕ್ಷಗೊಂಡಿದ್ದಾನೆ. ಕೆನಡಾದಲ್ಲಿ ಖಲಿಸ್ತಾನ ಉಗ್ರರು ಒಂದೆಡೆ ಸೇರಿ ಘೋಷಣೆ ಕೂಗಿದ್ದಾರೆ. ಈ ವೇಳೆ ಪನ್ನು, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್, ಡಾ.ಎಸ್ ಜೈಶಂಕರ್ ಕೊಲೆ ಬೆದರಿಕೆ ಹಾಕಿದ್ದಾನೆ.
ಪನ್ನು ಬಹಿರಂಗವಾಗಿ ಬೆದರಿಕೆ ಹಾಕುತ್ತಿರುವ ವಿಡಿಯೋ ಬಹಿರಂಗವಾಗಿದೆ. ನಿಮ್ಮನ್ನು ಮುಗಿಸಲು ನಾವು ಬರುತ್ತಿದ್ದೇವೆ. ಖಲಿಸ್ತಾನಿ ಉಗ್ರ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೈದ ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಈ ಹತ್ಯೆ ಹಿಂದಿರುವ ಮೋದಿ, ಶಾ, ಜೈಶಂಕರ್ ಹಾಗೂ ದೋವಲ್ ಮುಗಿಸಲು ನಾವು ಬರುತ್ತಿದ್ದೇವೆ ಎಂದು ಪನ್ನು ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಭಾರತದ ಸೇಡು..ರಸ್ತೆ ಅಪಘಾತದಲ್ಲಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಸಾವು?
ಕೆನಾಡದಲ್ಲಿ ಭಾರತ ವಿರೋಧಿ, ಕಿಲ್ ಇಂಡಿಯಾ ಪೋಸ್ಟರ್ ಹಂಚಲಾಗುತ್ತಿದೆ. ಇನ್ನು ಕೆನಡಾದಲ್ಲಿರುವ ಭಾರತೀಯ ರಾಯಭಾರ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಭಾರತೀಯ ರಾಯಭಾರ ಅಧಿಕಾರ ಫೋಟೋಗಳನ್ನು ದೊಡ್ಡ ಪೋಸ್ಟರ್ ಮಾಡಿ ಮೋಸ್ಟ್ ವಾಂಟೆಡ್ ಎಂದು ಹಾಕಲಾಗಿದೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಜಿ 20 ನೇಪಥ್ಯದಲ್ಲಿ ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೆನಡಾದಲ್ಲಿ ಖಲಿಸ್ತಾನಿ ಉಗ್ರಗಾಮಿಗಳು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆನಡಾದಲ್ಲಿರುವ ಉಗ್ರಗಾಮಿಗಳು ಪ್ರತ್ಯೇಕತಾವಾದವನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಭಾರತೀಯ ರಾಜತಾಂತ್ರಿಕರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುತ್ತಿದ್ದಾರೆ, ರಾಜತಾಂತ್ರಿಕ ಕಚೇರಿಗಳನ್ನು ಹಾನಿಗೊಳಿಸುತ್ತಿದ್ದಾರೆ. ಭಾರತೀಯ ಸಮುದಾಯ ಮತ್ತು ದೇಗುಲಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದರ ತಡೆ ಅತ್ಯಗತ್ಯ ಎಂದು ಮೋದಿ ಅವರು ಟ್ರುಡೊಗೆ ತಿಳಿಸಿದರು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಖಲಿಸ್ತಾನಿ ಕುರಿತು ಮೋದಿ ಮಾತುಗಳ ಬೆನ್ನಲ್ಲೇ ಕೆನಾಡದಲ್ಲಿ ಖಲಿಸ್ತಾನ ಉಗ್ರರ ಪಡೆ ಹೋರಾಟ ಆರಂಭಿಸಿದೆ.
ಖಲಿಸ್ತಾನಿ ಹೋರಾಟಕ್ಕೆ ತಡೆ ಇಲ್ಲ: ಭಾರತ ವಿರೋಧಿ ಖಲಿಸ್ತಾನಿಗಳ ಬಗ್ಗೆ ಕೆನಡಾ ಪ್ರಧಾನಿ ಮತ್ತದೇ ಮೃದು ನಿಲುವು