Asianet Suvarna News Asianet Suvarna News

ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ಹೇರ್‌ ಕಟ್‌ ಹೇಗೆ ಮಾಡ್ತಾರೆ ಗೊತ್ತಾ... ಈ ವಿಡಿಯೋ ನೋಡಿ

  • ಗಗನಯಾತ್ರಿಗಳು ಹೇಗೆ ಹೇರ್‌ಕಟ್‌ ಮಾಡ್ತಾರೆ ಗೊತ್ತಾ
  • ಹೇರ್‌ ಕಟ್ಟಿಂಗ್‌ ವಿಡಿಯೋ ಶೇರ್‌ ಮಾಡಿದ ಗಗನಯಾತ್ರಿ
  • ಬಾಹ್ಯಾಕಾಶದಲ್ಲಿ ಹೇರ್‌ ಸ್ಟೈಲಿಶ್‌ ಆದ ರಾಜಾಚಾರಿ
watch video How do astronauts get haircuts in space akb
Author
Bangalore, First Published Dec 20, 2021, 7:14 PM IST

ನ್ಯೂಯಾರ್ಕ್‌(ಡಿ.20): ಭೂಮಿಯ ಮೇಲೆ ನೆಲೆಸಿರುವ ನಾವು ಸಲೂನ್‌ ಅಥವಾ ಬ್ಯೂಟಿ ಪಾರ್ಲರ್‌ಗೆ ಹೋಗಿ ತರಹೇವಾರಿ ಹೇರ್‌ ಸ್ಟೈಲ್‌ಗಳನ್ನು ಮಾಡುತ್ತೇವೆ. ಆದರೆ ಬಾಹ್ಯಾಕಾಶದಲ್ಲಿ ಇರುವ ಗಗನಯಾತ್ರಿಗಳು ಹೇಗೆ ಹೇರ್‌ ಸ್ಟೈಲ್‌ ಮಾಡುತ್ತಾರೆ ಎಂಬ ಬಗ್ಗೆ ನಿಮಗೆ ತಿಳಿದಿದೆಯೇ. ಬಾಹ್ಯಾಕಾಶದಲ್ಲಿ ಹೇಗೆ ಹೇರ್‌ಸ್ಟೈಲ್‌ ಮಾಡುತ್ತಾರೆ ಎಂಬ ಬಗ್ಗೆ ಗಗನಯಾತ್ರಿ ರಾಜ ಚಾರಿ (Raja Chari) ಅವರ ಸಹೋದ್ಯೋಗಿ ಮಥಿಯಾಸ್ ಮೌರೆರ್‌ ಅವರು ಒಂದು ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಭೂಮಿಯ ಹೊರಗೆ ಮಾನವರು ದೀರ್ಘಾವಧಿಯವರೆಗೆ ಉಳಿಯುವ ಒಂದೇ ಒಂದು ಸ್ಥಳವೆಂದರೆ ಅದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಈ ಹಿಂದೆ  2016 ರಲ್ಲಿ NASA ಗಗನಯಾತ್ರಿ ಸ್ಕಾಟ್ ಕೆಲ್ಲಿ ( Scott Kelly)ಅವರು ಒಂದು ವರ್ಷಕ್ಕೆ ಹತ್ತಿರವಿರುವಷ್ಟು ದಿನ ಅಂದರೆ  340 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಉಳಿದು ದಾಖಲೆ ನಿರ್ಮಿಸಿದ್ದರು. 

ಇಲ್ಲಿ ದೀರ್ಘಾವಧಿಯವರೆಗೆ ಇರಬೇಕಾದರೆ ಗಗನಯಾತ್ರಿಗಳು ಸಹ ನಮ್ಮಂತೆ ನಿಯಮಿತವಾದ ತಲೆ ಕೂದಲು ಕತ್ತರಿಸುವುದು  ಶೇವ್‌ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡಬೇಕಾಗುತ್ತದೆ. ಆದರೆ ಅಲ್ಲಿ ಗುರುತ್ವಾಕರ್ಷಣ ಶಕ್ತಿ ಕಡಿಮೆ ಇರುವುದರಿಂದ ಭೂಮಿಯಲ್ಲಿ ಇರುವವರು ಕೂದಲು ಕತ್ತರಿಸುವಂತೆ ಇಲ್ಲಿ ಮಾಡಲು ಸಾಧ್ಯವಿಲ್ಲ . ಕೂದಲು ಮೇಲ್ಭಾಗಕ್ಕೆ ಹಾರುವುದರಿಂದ ಈ ಕೂದಲು ಕತ್ತರಿಸುವ ಕಾರ್ಯ ಸ್ವಲ್ಪ ಟ್ರಿಕ್ಕಿ ಎನಿಸುತ್ತದೆ. ಹೀಗಾಗಿ ಇಲ್ಲಿ ಕೂದಲು ಕತ್ತರಿಸುವುದಕ್ಕಾಗಿ ವಿಶೇಷವಾದ ಸಾಧನಗಳಿವೆ. ಇಲ್ಲಿ ಕೂದಲನ್ನು ಕತ್ತರಿಸುವ ತಂತ್ರಜ್ಞಾನವು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗೆ( ISS) ಶೌಚಾಲಯಗಳನ್ನು ಬಳಸುವ ರೀತಿಯೇ ಇರುತ್ತದೆಯಂತೆ. ಕೂದಲು ಕತ್ತರಿಸುವ ಕಾರ್ಯವನ್ನು ಸ್ವಚ್ಛವಾದ ರೀತಿಯಲ್ಲಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಉಪಕರಣವು ನಿರ್ದಿಷ್ಟ ಮಾರ್ಪಾಡುಗಳನ್ನು ಹೊಂದಿದೆ.

NASA’s 10 New Astronauts: ನಾಸಾ ಆಯ್ಕೆ ಮಾಡಿದ 10 ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್!

ಟ್ವಿಟ್ಟರ್‌ನಲ್ಲಿ ಶೇರ್‌ ಆಗಿರುವ ಈ ವಿಡಿಯೋದಲ್ಲಿ ನಾಸಾ ಗಗನಯಾತ್ರಿ ರಾಜಾ ಚಾರಿ ಅವರು ತಮ್ಮ ಸಹ ಗಗನಯಾತ್ರಿ ಮಥಿಯಾಸ್ ಮೌರೆರ್‌ (Matthias Maurer) ಅವರಿಗೆ ಹೊಸ ಹೊಸ ಹೇರ್‌ಸ್ಟೈಲ್‌ ಮಾಡುತ್ತಿರುವ ಚಿತ್ರಣವಿದೆ.  ಇದರಲ್ಲಿ ಈ ಕೂದಲು ಕತ್ತರಿಸುವ ಉಪಕರಣವನ್ನು ನೀವು ನೋಡಬಹುದು.  ಒಂದು ಟ್ರಿಮರ್‌ ಜೊತೆ  ಕನೆಕ್ಟ್‌ ಆಗಿರುವ ಒಂದು ವ್ಯಾಕ್ಯೂಮ್‌ ಕ್ಲೀನರ್‌ ಇದೆ. ಈ ಉಪಕರಣದ ಹೊರತಾಗಿಯೂ ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದೊಳಗೆ ಗುರುತ್ವಾಕರ್ಷಣ ಬಲವಿಲ್ಲದೇ ತೇಲುವ ಪರಿಸರ ಇರುವುದರಿಂದ ಕೆಲಸವನ್ನು ಮತ್ತಷ್ಟು ಟ್ರಿಕ್ಕಿಯಾಗಿಸುತ್ತದೆ. 

Sound from Ganymede: ಸೌರವ್ಯೂಹದ ಅತಿದೊಡ್ಡ ಚಂದ್ರನ ಶಬ್ದ ಸೆರೆಹಿಡಿದ ನಾಸಾದ ಜುನೋ ಮಿಷನ್: ಇಲ್ಲಿದೆ ಆಡಿಯೋ

ಶುಚಿಗೊಳಿಸುವ ಉಪಕರಣಗಳಿಗೆ ಕನೆಕ್ಟ್‌ ಆಗಿರುವ ವಿಶೇಷ ಉಪಕರಣವು ಕೂದಲನ್ನು ಹಾರಲು ಬಿಡುವುದಿಲ್ಲ. ಅಲ್ಲದೇ ಕೂದಲು ಕಣ್ಣಿಗೆ ಬೀಳುವುದಿಲ್ಲ. ಉಗುರುಗಳನ್ನು ಕತ್ತರಿಸಲು ಕೂಡ ಇದೇ ಉಪಾಯವನ್ನು ಬಳಸಲಾಗುತ್ತದೆ. ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿ(European Space Agency)ಯ ಜರ್ಮನ್ (German) ಗಗನಯಾತ್ರಿ ಮಥಿಯಾಸ್ ಮೌರೆರ್ ಅವರು ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಬಾರ್ಬರ್‌ ಅಂದರೆ ಕ್ಷೌರಿಕ  @astro_raja ಹಲವು ಪ್ರತಿಭೆಗಳನ್ನು ಹೊಂದಿರುವ ವ್ಯಕ್ತಿ. ಯಾಕೆಂದರೆ ನಾವು ಯಾರು ನಮ್ಮ ಕಣ್ಣಿಗೆ ಕೂದಲು ಬೀಳುವುದನ್ನು ಬಯಸುವುದಿಲ್ಲ. ಅಥವಾ ಬಾಹ್ಯಾಕಾಶ  ಕೇಂದ್ರದ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಲು ಬಯಸುವುದಿಲ್ಲ. ನಮ್ಮ ಹೇರ್‌ ಕ್ಲಿಪರ್‌ಗಳು ವ್ಯಾಕ್ಯೂಮ್‌ ಅಟ್ಯಾಚ್‌ ಆಗಿ ಬಂದಿದೆ. ಸೇವೆಯಲ್ಲಿ ಈ ಬಾಹ್ಯಾಕಾಶದ ಹೇರ್‌ ಸ್ಟೈಲಿಸ್ಟ್‌ಗೆ ಫೈವ್‌ಸ್ಟಾರ್‌ಗಳನ್ನು ನೀಡಬಹುದು ಎಂದು ಅವರು ಬರೆದಿದ್ದಾರೆ. 

 

ರಾಜಾ ಚಾರಿ ಮತ್ತು ಮಥಿಯಾಸ್ ಮೌರೆರ್ ಇಬ್ಬರೂ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನ ಕ್ರ್ಯೂ-3 ಮಿಷನ್‌ನ ಭಾಗವಾಗಿ  ಆರು ತಿಂಗಳು ವಾಸ್ತವ್ಯ ಇರಲು ಬಾಹ್ಯಾಕಾಶ ಕೇಂದ್ರಕ್ಕೆ  ಆಗಮಿಸಿದವರಾಗಿದ್ದಾರೆ. 

Follow Us:
Download App:
  • android
  • ios