NASA’s 10 New Astronauts: ನಾಸಾ ಆಯ್ಕೆ ಮಾಡಿದ 10 ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್!
*ನಾಸಾದ ವಿವಿಧ ಯೋಜನೆಗಳಿಗೆ 10 ಗಗನಯಾತ್ರಿಗಳ ತರಬೇತಿ
*ಚಂದ್ರಯಾನ ಯೋಜನೆ The Artemis programಗೂ ಆಯ್ಕೆ
*ಗಗನಯಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್
ಯುಎಸ್‌ಎ(ಡಿ. 07): ಅಮೆರಿಕಾವನ್ನು (USA) ಪ್ರತಿನಿಧಿಸಲು ಮತ್ತು ನಾಸಾದ (NASA) ಭವಿಷ್ಯದ ಕಾರ್ಯಾಚರಣೆಗಳಿಗಾಗಿ ಕೆಲಸ ಮಾಡಲು 12,000 ಕ್ಕೂ ಹೆಚ್ಚು ಅರ್ಜಿದಾರರಿಂದ ಆಯ್ಕೆಯಾದ 10 ಹೊಸ ಗಗನಯಾತ್ರಿ ಅಭ್ಯರ್ಥಿಗಳನ್ನು ಸೋಮವಾರ ನಾಸಾ ಘೋಷಿಸಿದೆ. ಈ ಅಭ್ಯರ್ಥಿಗಳ ಎರಡು ವರ್ಷಗಳ ಆರಂಭಿಕ ಗಗನಯಾತ್ರಿ ತರಬೇತಿ ಜನವರಿ 2022 ಆರಂಭವಾಗಲಿದೆ. 10 ಗಗನಯಾತ್ರಿಗಳ ತರಬೇತಿ ನಂತರ, ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS),ಬಾಹ್ಯಾಕಾಶದಲ್ಲಿನ ಇತರ ಕಾರ್ಯಾಚರಣೆಗಳಿಗೆ ಅಥವಾ NASA ಚಂದ್ರಯಾನ ಯೋಜನೆ ಆರ್ಟೆಮಿಸ್ ಮಿಷನ್‌ಗೂ (The Artemis program) ಈ ಗಗನಯಾತ್ರಿಗಳನ್ನು ನಿಯೋಜಿಸಲಾಗುವುದು ಎಂದು ವರದಿ ತಿಳಿಸಿದೆ.
ಹೊಸದಾಗಿ ನೇಮಕಾತಿಯಾಗಿರುವ 10 ಗಗನಾತ್ರಿಗಳ ಪೈಕಿ ಭಾರತೀಯ ಮೂಲದ ಅನಿಲ್ ಮೆನನ್ (Anil Menon) ಕೂಡ ಒಬ್ಬರು. ಉಕ್ರೇನಿಯನ್ ಮತ್ತು ಭಾರತೀಯ ವಲಸಿಗ ದಂಪತಿಗೆ ಜನಿಸಿದ ಮೆನನ್ 2014 ರಲ್ಲಿ ನಾಸಾ ಫ್ಲೈಟ್ ಸರ್ಜನ್ (NASA Flight Surgeon) ಆಗಿ ಕೆಲಸ ಪ್ರಾರಂಭಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station) ನಾಲ್ಕು ಸಿಬ್ಬಂದಿಗಳ ಜತೆ ಡೆಪ್ಯೂಟಿ ಕ್ರೂ ಸರ್ಜನ್ ಆಗಿ ಕೆಲಸ ಮಾಡಿದ್ದಾರೆ.
2018 ರಲ್ಲಿ ಸ್ಪೇಸ್‌ಎಕ್ಸ್‌ಗೆ ಸೇರಿದ್ದ ಮೆನನ್ ಕಂಪನಿಯ ಮೊದಲ ಮಾನವ ವಿಮಾನಗಳನ್ನು ತಯಾರಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಐದು ಬಾಹ್ಯಾಕಾಶ ಉಡಾವಣೆಗ ಯೋಜನೆಗಳಿಗೆ ಪ್ರಮುಖ ವಿಮಾನ ಶಸ್ತ್ರಚಿಕಿತ್ಸಕರಾಗಿ ( lead flight surgeon) ಸೇವೆ ಸಲ್ಲಿಸಿದ್ದಾರೆ. ಅವರು ತುರ್ತು ಔಷಧ ಮತ್ತು ಬಾಹ್ಯಾಕಾಶ ಔಷಧದ ಕುರಿತು ಹಲವಾರು ವೈಜ್ಞಾನಿಕ ಪ್ರಬಂಧಗಳನ್ನು ಕೂಡ ಪ್ರಕಟಿಸಿದ್ದಾರೆ.
ನಾಸಾದ ನಿರ್ವಾಹಕರಾದ ಬಿಲ್ ನೆಲ್ಸನ್ (Bil Nelson) ಅವರು 2021 ರ ಗಗನಯಾತ್ರಿ ಬ್ಯಾಚ್‌ನ ಸದಸ್ಯರನ್ನು ಪರಿಚಯಿಸಿದರು. ಇದು ನಾಲ್ಕು ವರ್ಷಗಳಲ್ಲಿನ ಮೊದಲ ಹೊಸ ಬ್ಯಾಚ್ ಅಗಿದ್ದು ಹೂಸ್ಟನ್‌ನಲ್ಲಿರುವ NASA ದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ಬಳಿ ಇರುವ ಎಲಿಂಗ್ಟನ್ ಫೀಲ್ಡ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಹೊಸ ಬ್ಯಾಚನ ಸದಸ್ಯರನ್ನು ಪರಿಚಯಿಸಲಾಯಿತು.
" ಇಂದು ನಾವು ನಾಸಾದ 2021 ಗಗನಯಾತ್ರಿ ಅಭ್ಯರ್ಥಿಗಳ ಬ್ಯಾಚ್‌ನ ಹೊಸ Explorers, ಆರ್ಟೆಮಿಸ್‌ನ ( The Artemis program - ನಾಸಾದ ಚಂದ್ರಯಾನ ಯೋಜನೆ) 10 ಸದಸ್ಯರುನ್ನು ಸ್ವಾಗತಿಸುತ್ತೇವೆ" ಎಂದು ನೆಲ್ಸನ್ ಹೇಳಿದರು. "ತಂಡದಲ್ಲಿ ಪ್ರತಿಯೊಬ್ಬರು ವಿವಿಧ ವಿಷಯ ಪರಿಣಿತರಿದ್ದಾರೆ ಆದರೆ ಒಟ್ಟಿಗೆ ಅವರು ನಮ್ಮ ದೇಶದ ಧರ್ಮವನ್ನು ಪ್ರತಿನಿಧಿಸುತ್ತಾರೆ: ಇ ಪ್ಲುರಿಬಸ್ ಯುನಮ್ - e pluribus unum ( ಅನೇಕರಿಂದ ಒಬ್ಬರು- ಅಮೆರಿಕಾದ ಧ್ಯೇಯವಾಕ್ಯ)." ಎಂದು ಹೇಳಿದ್ದಾರೆ. ನಾಸಾದ ಹೇಳಿಕೆಯ ಪ್ರಕಾರ, ಗಗನಯಾತ್ರಿ ಅಭ್ಯರ್ಥಿ ತರಬೇತಿಯನ್ನು ಐದು ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ
*ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಂಕೀರ್ಣ ವ್ಯವಸ್ಥೆಗಳನ್ನು ನಿರ್ವಹಿಸುವುದು ಮತ್ತು ನಿರ್ವಹಿಸುವುದು
*ಬಾಹ್ಯಾಕಾಶ ನಡಿಗೆ ತರಬೇತಿ
*ಸಂಕೀರ್ಣ ರೊಬೊಟಿಕ್ಸ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು
*T-38 ತರಬೇತಿ ಜೆಟ್ ಅನ್ನು ಸುರಕ್ಷಿತವಾಗಿ ನಿರ್ವಹಿಸುವುದು
*ರಷ್ಯನ್ ಭಾಷಾ ಕೌಶಲ್ಯ ತರಬೇತಿ
Moon Mystery House:ಚಂದ್ರನಲ್ಲಿ ವಿಚಿತ್ರ ಮಿಸ್ಟರಿ ಹೌಸ್ ಪತ್ತೆ, ವಿಜ್ಞಾನಿಗಳಿಗೆ ಅಚ್ಚರಿ ತಂದ ಫೋಟೋ!
"ನಿಮ್ಮಲ್ಲಿ ಪ್ರತಿಯೊಬ್ಬರೂ ಅದ್ಭುತ ಹಿನ್ನೆಲೆಯನ್ನು ಹೊಂದ್ದಿದ್ದೀರಿ" ಎಂದು ನಾಸಾ ಮಾಜಿ ಗಗನಯಾತ್ರಿ ಮತ್ತು ನಾಸಾದ ಉಪ ನಿರ್ವಾಹಕರಾದ ಪಾಮ್ ಮೆಲ್ರಾಯ್ (Pam Melroy) ಅಭ್ಯರ್ಥಿಗಳಿಗೆ ತಿಳಿಸಿದ್ದಾರೆ. "ನೀವು ನಮ್ಮ ಗಗನಯಾತ್ರಿ ತಂಡಕ್ಕೆ ಹಲವು ರೂಪಗಳಲ್ಲಿ ವೈವಿಧ್ಯತೆಯನ್ನು ತರುತ್ತೀರಿ ಮತ್ತು ಸಾರ್ವಜನಿಕ ಸೇವೆಯಗಳಲ್ಲಿಯೇ ಅತ್ಯುನ್ನತ ಸೇವೆಗೆ ನೀವು ಸೇರಿದ್ದೀರಿ" ಎಂದು ಅಭ್ಯರ್ಥಿಗಳಿಗೆ ಮೆಲ್ರಾಯ್ ತಿಳಿಸಿದ್ದಾರೆ.
ಆಯ್ಕೆಯಾದ 10 ಗಗನಯಾತ್ರಿ ಅಭ್ಯರ್ಥಿಗಳು
1)ನಿಕೋಲ್ ಆಯರ್ಸ್
2)ಮಾರ್ಕೋಸ್ ಬೆರಿಯೊಸ್
3)ಲ್ಯೂಕ್ ಡೆಲಾನಿ
4)ಜೆಸ್ಸಿಕಾ ವಿಟ್ನರ್
5)ಡೆನಿಜ್ ಬರ್ನ್ಹ್ಯಾಮ್
6)ಜ್ಯಾಕ್ ಹ್ಯಾಥ್ವೇ
7)ಕ್ರಿಸ್ಟೋಫರ್ ವಿಲಿಯಮ್ಸ್
8)ಕ್ರಿಸ್ಟಿನಾ ಬರ್ಚ್
9)ಆಂಡ್ರೆ ಡೌಗ್ಲಾಸ್
10)ಅನಿಲ್ ಮೆನನ್