Asianet Suvarna News Asianet Suvarna News

Russia Ukraine Crisis: ರಷ್ಯಾ ಸೇನೆಯನ್ನು ತಡೆಯುವ ಸಲುವಾಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ!

ರಷ್ಯಾ ಸೇನೆಯನ್ನು ತಡೆಯುವ ಸಲುವಾಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ

ವಿಟಾಲಿ ಶಕುನ್ ಪರಾಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ಶಕುನ್ ಶೌರ್ಯಕ್ಕೆ ಮರಣೋತ್ತರ ಪುರಸ್ಕಾರ ಘೋಷಣೆ ಮಾಡಿದ ಉಕ್ರೇನ್

Tributes pour for Ukrainian soldier Vitaly Shakun Who blows himself up along with a bridge to stop Russian tanks san
Author
Bengaluru, First Published Feb 26, 2022, 7:35 PM IST | Last Updated Feb 26, 2022, 7:39 PM IST

ಕೈವ್ (ಫೆ.26): ರಷ್ಯಾ-ಉಕ್ರೇನ್ ಸಂಘರ್ಷದ (Russia Ukraine Crisis) ನಡುವೆ ರಷ್ಯಾದ ಟ್ಯಾಂಕ್‌ ಗಳನ್ನು (Russian tanks) ಮುನ್ನಡೆಯುವುದನ್ನು ತಡೆಯುವ ಸಲುವಾಗಿ ಖರ್ಸನ್ ಪ್ರದೇಶದ (Kherson region) ಸೇತುವೆಯ ಮೇಲೆ ತನ್ನನ್ನು ತಾನು ಸ್ಫೋಟಿಸಿಕೊಂಡ ಉಕ್ರೇನಿಯನ್ ಸೈನಿಕ ವಿಟಾಲಿ ಶಕುನ್ (Vitaly Shakun) ಅವರನ್ನು ಇಡೀ ಸಮರದ ಹಿರೋ ಎಂದು ಪರಿಗಣಿಸಿ ಪ್ರಶಂಸೆ ಮಾಡಲಾಗುತ್ತಿದೆ.

ಶಕುನ್ ಕ್ರೈಮಿಯಾ ( Crimea) ಬಳಿ ಸೇತುವೆಯ ಗಸ್ತು ನಿರ್ವಹಣೆ ಮಾಡುತ್ತಿದ್ದಾಗ ರಷ್ಯಾದ ಸೈನಿಕರು ಆ ಪ್ರದೇಶದ ಕಡೆಗೆ ಮುನ್ನಡೆದಿದ್ದು ಮಾತ್ರವಲ್ಲದೆ, ಮೈನ್ ಗಳನ್ನು ಇರಿಸುವ ಮೂಲಕ ಆತಂಕ ಹುಟ್ಟಿಸಿದ್ದರು. ಈ ವೇಳೆ ಅವರನ್ನು ತಡೆಯುವ ಏಕೈಕ ಮಾರ್ಗ ಸೇತುವೆಯನ್ನು ಸ್ಫೋಟ ಮಾಡುವುದು ಎಂದು ವಿಟಾಲಿ ಶಕುನ್ ಅರಿತಿದ್ದರು. ಇದರ ಬೆನ್ನಲ್ಲಿಯೇ ತಕ್ಷಣವೇ ತನ್ನ ಬೆಟಾಲಿಯನ್ ಗೆ ರೇಡಿಯೂ ಮೂಲಕ ಮಾಹಿತಿ ನೀಡಿದ ಸೈನಿಕ, ಸೇತುವೆಯನ್ನು ಸ್ಫೋಟ ಮಾಡುವ ಕಾರ್ಯಾಚರಣೆ ಕೈಗೊಂಡಿದ್ದ.

ಆದರೆ, ಈ ಪ್ರಯತ್ನದಲ್ಲಿ ತನ್ನನ್ನೇ ತಾನು ಸ್ಫೋಟಗೊಳಿಸಿಕೊಳ್ಳುವ ಮೂಲಕ ಪ್ರಾಣತ್ಯಾಗ ಮಾಡಿದರು. ವಿಟಾಲಿ ಶಕುನ್ ಅವರ ವೀರೋಚಿತ ಸಾಹಸ ರಷ್ಯಾದ ಪ್ರಗತಿಯನ್ನು ಇನ್ನಷ್ಟು ನಿಧಾನ ಮಾಡಿತು. ಅದಲ್ಲದೆ, ಎದುರಾಳಿ ಪಡೆಯೊಂದಿಗೆ ಹೋರಾಟ ನಡೆಸಲುಯಾವ ರೀತಿಯ ಕಾರ್ಯತಂತ್ರ ನಡೆಸಬೇಕು ಎನ್ನುವ ನಿಟ್ಟಿನಲ್ಲಿ ಯೋಚನೆ ಮಾಡಲು ತನ್ನ ಸೇನೆಗೆ ಅವಕಾಶವನ್ನು ಒದಗಿಸಿಕೊಟ್ಟಿದ್ದರು.
 


ವಿಟಾಲಿ ಶಕುನ್ ಅವರ ಪರಮ ತ್ಯಾಗ!: ವಿಟಾಲಿ ಶಕುನ್, ಉಕ್ರೇನ್ ಸೇನೆಯ ನೌಕಾಸೇನಾ ವಿಭಾಗದ ಸೈನಿಕ. ಫೆಬ್ರವರಿ 24 ರಂದು, ಶಕುನ್ ಕ್ರೈಮಿಯಾ ಬಳಿಯ ಖೆರ್ಸನ್ ಪ್ರದೇಶದಲ್ಲಿ ಹೆನಿಚೆಸ್ಕ್ ಸೇತುವೆಯನ್ನು ರಕ್ಷಣೆ ಮಾಡುವ ಕಾರ್ಯಾಚರಣೆಯಲ್ಲಿದ್ದಾಗ, ಆ ಪ್ರದೇಶದ ಕಡೆಗೆ ಮುನ್ನಡೆಯುತ್ತಿರುವ ರಷ್ಯಾದ ಟ್ಯಾಂಕ್‌ಗಳ ಮೊದಲ ಸೆಟ್‌ ಅನ್ನು ಎದುರಿಸಿದ್ದರು. ಈ ವೇಳೆ ಎದುರಾಳಿ ಸೇನೆಯನ್ನು ತಡೆಯುವ ಏಕೈಕ ಮಾರ್ಗವೆಂದರೆ, ಸೇತುವೆಯನ್ನು ಸ್ಫೋಟಕ ಮಾಡುವುದು ಎಂದು ಅರಿತುಕೊಂಡಿದ್ದರು. ಆದರೆ, ರಿಮೋಟ್ ಮೂಲಕ ಸೇತುವೆ ಸ್ಪೋಟ ಮಾಡುವ ಪ್ರಯತ್ನ ವಿಫಲವಾದ ಬಳಿಕ, ತಾವೇ ಕೈಯಾರೆ ಸ್ಪೋಟ ಮಾಡುವ ನಿರ್ಧಾರಕ್ಕೆ ಬಂದಿದ್ದರು.

ಸ್ವಲ್ಪ ಸಮಯದ ನಂತರ, ಅವನು ತನ್ನ ಯೋಜನೆಗಳ ಬಗ್ಗೆ ತನ್ನ ಸಹ ಸೈನಿಕರಿಗೆ ತಿಳಿಸಿದ್ದರು. ಯೋಧ ಸ್ಫೋಟಕಗಳನ್ನು ಸಿಡಿಸುತ್ತಿದ್ದಂತೆ ಬೆಟಾಲಿಯನ್ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟದ ಸದ್ದು ಕೇಳಿಸಿತು. ಶಕುನ್ ತಪ್ಪಿಸಿಕೊಳ್ಳಲು ಸಾಕಷ್ಟು ಸಮಯವನ್ನು ಹೊಂದಿರಲಿಲ್ಲ. ತನ್ನನ್ನೇ ತಾನು ಸ್ಫೋಟಗೊಳಿಸಿಕೊಂಡು, ಸೇತುವೆಯನ್ನು ತುಂಡರಿಸಲು ಯಶಸ್ವಿಯಾಗಿದ್ದರು.

Russia Ukraine Crisis: ಉದ್ಯಮ ವಲಯಕ್ಕೆ ಆಘಾತ; ರಷ್ಯಾ, ಉಕ್ರೇನ್ ಗೆ ಕಾರ್ಗೋ ಬುಕ್ಕಿಂಗ್ ನಿಲ್ಲಿಸಿದ ಶಿಪ್ಪಿಂಗ್ ಸಂಸ್ಥೆಗಳು!
ಅವರ ತ್ಯಾಗದ ವೀರಗಾಥೆಯನ್ನು ಬಳಿಕ ಉಕ್ರೇನ್‌ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಕ್ರಿಮಿಯನ್ ಇಸ್ತಮಸ್‌ನಲ್ಲಿ ಉಕ್ರೇನಿಯನ್ ಸೈನ್ಯ ಎದುರಿಸಿದ ಮೊದಲ ಶತ್ರುಗಳನ್ನು ಭೇಟಿಯಾದ  ನೌಕಾಪಡೆಗಳ ಪ್ರತ್ಯೇಕ ಬೆಟಾಲಿಯನ್‌ಗಳಲ್ಲಿ ಶಕುನ್ ಒಬ್ಬ ಎಂದು ಪೋಸ್ಟ್ ಉಲ್ಲೇಖಿಸಿದೆ. ಈ ಪ್ರದೇಶವನ್ನು ಈ ಸಮಯದಲ್ಲಿ "ಉಕ್ರೇನ್ ನಕ್ಷೆಯಲ್ಲಿ ಅತ್ಯಂತ ಕಷ್ಟಕರವಾದ ಸ್ಥಳಗಳಲ್ಲಿ ಒಂದಾಗಿದೆ" ಎಂದು ವ್ಯಾಖ್ಯಾನಿಸಲಾಗಿದೆ.

Ukraine For Indian Students: ರಾಜ್ಯದ ವಿದ್ಯಾರ್ಥಿಗಳು ಉಕ್ರೇನ್‌ಗೆ ತೆರಳಲು ಪ್ರೇರಣೆ ಏನು?
ರಷ್ಯಾದ ಟ್ಯಾಂಕ್ ಟೀಮ್ ಪ್ರಗತಿಯನ್ನು ತಡೆಯಲು ಜೆನಿಚೆಸ್ಕೆ ರಸ್ತೆಯಲ್ಲಿರುವ ಸೇತುವೆಯನ್ನು ಸ್ಫೋಟಿಸಬೇಕೆಂದು ಅಧಿಕಾರಿಗಳು ಉಲ್ಲೇಖಿಸಿದ್ದರು. ಶಕುನ್ ಈ ಕಾರ್ಯವನ್ನು ನಿರ್ವಹಿಸಲು ಸ್ವಯಂಪ್ರೇರಿತರಾಗಿ ಇಳಿದಿದ್ದರು ಎಂದು ಸೇನೆ ತಿಳಿಸಿದೆ. ವಿಟಾಲಿ ಶಕುನ್ ಸಾಹಸದ ಬೆನ್ನಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ಅವರ ಸಾಹಸವನ್ನು ವಿಶ್ವದ ಹಲವರು ಕೊಂಡಾಡಿದ್ದಾರೆ. ಶಕುನ್‌ನ ಶೌರ್ಯ ಸಾಹಸವು ರಷ್ಯಾದ ಸೈನ್ಯದ ಮುನ್ನಡೆಯನ್ನು ನಿಧಾನ ಮಾಡಿತ್ತು ಮತ್ತು ಉಕ್ರೇನಿಯನ್ ಸೇನೆಯು ರಕ್ಷಣೆಯನ್ನು ಪುನಃ ನಿಯೋಜಿಸಲು ಮತ್ತು ಯೋಜಿಸಲು ಅವಕಾಶ ಮಾಡಿಕೊಟ್ಟಿತು. ಶಕುನ್ ಅವರ ನಿಧನದ ನಂತರ, ಹಲವಾರು ಜನರು ತಮ್ಮ ದೇಶಕ್ಕಾಗಿ ಅವರ ತ್ಯಾಗವನ್ನು ಸ್ಮರಿಸಿಕೊಂಡಿದ್ದಾರೆ.

 

Latest Videos
Follow Us:
Download App:
  • android
  • ios