Russia Ukraine Crisis: ವಿಮಾನದ ಟಿಕೆಟ್ ಬೇಡ, ಶಸ್ತ್ರಗಳನ್ನು ಕೊಡಿ ಸಾಕು, ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷನ ತಾಕೀತು!

ಉಕ್ರೇನ್ ನಿಂದ ಪಲಾಯನದ ಪ್ರಸ್ತಾಪ ಒಪ್ಪದ ವೊಲೊಡಿಮಿರ್ ಝೆಲೆನ್ಸ್ಕಿ

ನನಗೆ ವಿಮಾನದ ಟಿಕೆಟ್ ಬೇಡ, ಶಸ್ತ್ರಗಳನ್ನು ಪೂರೈಕೆ ಮಾಡಿ ಸಾಕು

ಕೈವ್ ನಿಂದ ಪಲಾಯನವಾಗುವ ಆಫರ್ ನಿರಾಕರಿಸಿದ ಉಕ್ರೇನ್ ಅಧ್ಯಕ್ಷ

Ukraine President Volodymyr  Zelensky turns down US offer to flee Kyiv says need ammunition not a ride san

ಕೈವ್ (ಫೆ. 26): ರಷ್ಯಾದ ಸೇನಾಪಡೆಗಳ (Russia Army) ನಂ.1 ಟಾರ್ಗೆಟ್ ಆಗಿರುವ ಉಕ್ರೇನ್ ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗೆ (Volodymyr Zelensky) ಅಮೆರಿಕ ಪಲಾಯನವಾಗುವ ಆಫರ್ (offer to evacuate) ನೀಡಿದೆ. ಆದರೆ, ದೇಶದ ಜನರೊಂದಿಗೆ ನಿಲ್ಲಬೇಕಿರುವ ಅಗತ್ಯವನ್ನು ಪರಿಗಣಿಸಿರುವ ಝೆಲೆನ್ಸ್ಕಿ, ಯಾವುದೇ ಕಾರಣಕ್ಕೂ ತಾವು ಪಲಾಯನದ ಆಫರ್ ಅನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ನನಗೆ ಅಮೆರಿಕದಿದ ವಿಮಾನದ ಟಿಕೆಟ್ ಬೇಡ, ಶಸ್ತ್ರಗಳು ಹಾಗೂ ಮದ್ದುಗುಂಡುಗಳನ್ನು (I need ammunition) ನೀಡಿದರೆ ಸಾಕು ಎಂದು ಖಡಕ್ ಆಗಿ ಹೇಳಿದ್ದಾರೆ.

ಉಕ್ರೇನ್ ದೇಶ ಇರುವವರೆಗೂ ನಾನು ಹೋರಾಟ ಮಾಡುತ್ತೇನೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ನನ್ನ ದೇಶದ ಸೇನಾಪಡೆಗಳಿಗೆ ರಷ್ಯಾ ಸೇನೆಯ ಮುಂದೆ ಶರಣಾಗಲು ಹೇಳಿದ್ದೇನೆ ಎಂದು ವರದಿಯಾಗಿದೆ. ಆದರೆ, ಅದೆಲ್ಲವೂ ಸುಳ್ಳು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

“ಈಗ ನಮ್ಮ ಅಳಿವು ಉಳಿವಿನ ಹೋರಾಟ ನಡೆಯುತ್ತಿದೆ. ನನಗೆ ಮದ್ದುಗುಂಡುಗಳು ಬೇಕು, ಜಗತ್ತನ್ನು ಸುತ್ತುವ ಸವಾರಿ ಬೇಕಿಲ್ಲ”ಎಂದು ಝೆಲೆನ್ಸ್ಕಿ ಹೇಳಿದರು. ಸಂಭಾಷಣೆಯ ನೇರ ಮಾಹಿತಿ ಹೊಂದಿರುವ ಅಮೆರಿಕದ ಹಿರಿಯ ಗುಪ್ತಚರ ಅಧಿಕಾರಿಯನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಉಕ್ರೇನ್ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ತಮ್ಮದೇ ಆದ ಆಡಳಿತದೊಂದಿಗೆ ಬದಲಾಯಿಸಲು ನಿರ್ಧರಿಸಿದ್ದಾರೆ ಎಂಬ ಗುಪ್ತಚರ ವರದಿಯ ಆಧಾರದ ಮೇಲೆ ಝೆಲೆನ್ಸ್ಕಿಗೆ ಅಮೆರಿಕ (US) ಈ ಪ್ರಸ್ತಾಪವನ್ನು ನೀಡಿದೆ.

ಝೆಲೆನ್ಸ್ಕಿ ಅವರು ತಾವು ಮಾಸ್ಕೋದ (Mascow) "ನಂ. 1 ಟಾರ್ಗೆಟ್” ಮತ್ತು ರಷ್ಯಾದ "ವಿಧ್ವಂಸಕ ಪಡೆಗಳು" ಕೈವ್‌ನಲ್ಲಿವೆ ಮತ್ತು ಅವನ ಮತ್ತು ಅವನ ಕುಟುಂಬಕ್ಕಾಗಿ ಬೇಟೆಯಾಡುತ್ತಿವೆ ಎಂದು ಹೇಳಿದ್ದಾರೆ. ಗುರುವಾರ ಯುರೋಪಿಯನ್ ಯೂನಿಯನ್ (ಇಯು) ( European Union) ನಾಯಕರೊಂದಿಗಿನ ವೀಡಿಯೊ ಕಾನ್ಫರೆನ್ಸ್ ಸಮಯದಲ್ಲಿ, ಉಕ್ರೇನಿಯನ್ ಪ್ರಧಾನ ಮಂತ್ರಿ ಅವರು "ನೀವು ನನ್ನನ್ನು ಜೀವಂತವಾಗಿ ನೋಡುತ್ತಿರುವ ಕೊನೆಯ ಸಮಯ" ಎಂದು ಹೇಳಿದರು ಎಂದು ವರದಿಯಾಗಿದೆ.

Russia Ukraine Crisis: ರಷ್ಯಾ ಸೇನೆಯನ್ನು ತಡೆಯುವ ಸಲುವಾಗಿ ತನ್ನನ್ನು ತಾನೇ ಸ್ಫೋಟಿಸಿಕೊಂಡ ಉಕ್ರೇನ್ ಸೈನಿಕ!
ಮಿಲಿಟರಿ ಬಲಶಾಲಿಯಾದ ರಷ್ಯಾದಿಂದ ನಿರಂತರ ಆಕ್ರಮಣದ ಹೊರತಾಗಿಯೂ, ಉಕ್ರೇನಿಯನ್ ಪಡೆಗಳು ಕೈವ್‌ಗೆ ರಷ್ಯಾದ ಸೈನ್ಯದ ಮುನ್ನಡೆಯನ್ನು ವಿರೋಧಿಸುವುದನ್ನು ಮುಂದುವರೆಸಿದೆ. ಎರಡೂ ಕಡೆಗಳಲ್ಲಿ ಸಾವುನೋವುಗಳು ಹೆಚ್ಚಾಗುತ್ತಿದ್ದರೂ ಸಹ, ಝೆಲೆನ್ಸ್ಕಿ ತನ್ನ ರಾಷ್ಟ್ರದ ರಾಜಧಾನಿಯಲ್ಲಿಯೇ ಉಳಿದುಕೊಂಡಿದ್ದಾರೆ. ಉಕ್ರೇನ್ ನ ಭವಿಷ್ಯವನ್ನು ಉಕ್ರೇನ್ ನ ಪ್ರಜೆಗಳೇ ನಿರ್ಧರಿಸಲಿದ್ದಾರೆ ಹಾಗಾಗಿ ಇಲ್ಲಿನ ಜನ ಎಲ್ಲಿಗೂ ಹೋಗುವುದು ಬೇಡ ಎಂದು ಹೇಳಿದ್ದಾರೆ.

Russia Ukraine war ಉಕ್ರೇನ್ ಅಧ್ಯಕ್ಷರ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ, ಮತ್ತೆ ಭಾರತದ ನೆರವು ಕೇಳಿದ ಝೆಲೆನ್ಸ್ಕಿ!
ರಷ್ಯಾದ ಪಡೆಗಳು ಶನಿವಾರ ರಾಜಧಾನಿ ಕೈವ್ ಸೇರಿದಂತೆ ಉಕ್ರೇನಿಯನ್ ನಗರಗಳ ಮೇಲೆ ಸಂಘಟಿತ ಕ್ಷಿಪಣಿ ಮತ್ತು ಫಿರಂಗಿ ದಾಳಿಗಳನ್ನು ಪ್ರಾರಂಭಿಸಿದವು, ಅಲ್ಲಿ ನಗರದ ಮಧ್ಯಭಾಗದಲ್ಲಿರುವ ಸರ್ಕಾರಿ ಕಟ್ಟಡಗಳ ಮೇಲರ ಗುಂಡಿನ ದಾಳಿ ನಡೆದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ರಷ್ಯಾದ ಪಡೆಗಳ ಮುನ್ನಡೆ ತಡೆದು,  ಕೈವ್ ಅನ್ನು ರಕ್ಷಿಸಲು ಸಹಾಯ ಮಾಡಲು ಉಕ್ರೇನಿಯನ್ ಅಧಿಕಾರಿಗಳು ನಾಗರಿಕರನ್ನು ಒತ್ತಾಯಿಸಿದ್ದಾರೆ. ದಾಳಿಕೋರರನ್ನು ಹಿಮ್ಮೆಟ್ಟಿಸಲು ಪೆಟ್ರೋಲ್ ಬಾಂಬ್‌ಗಳನ್ನು ತಯಾರಿಸುವಂತೆ ರಕ್ಷಣಾ ಸಚಿವಾಲಯವು ರಾಜಧಾನಿಯ ನಿವಾಸಿಗಳಿಗೆ ಹೇಳಿತು. ವ್ಲಾಡಿಮಿರ್ ಪುಟಿನ್ ಅವರು ಕೈವ್‌ನಲ್ಲಿ ದೇಶದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕತ್ವವನ್ನು ಉರುಳಿಸಲು ಉಕ್ರೇನಿಯನ್ ಸೇನೆಗೆ ಕರೆ ನೀಡಿದ್ದಾರೆ. ರಷ್ಯಾದ ಅಧ್ಯಕ್ಷರು ಉಕ್ರೇನಿಯನ್ ನಾಯಕತ್ವವನ್ನು "ಭಯೋತ್ಪಾದಕರು" ಮತ್ತು "ಮಾದಕ ವ್ಯಸನಿಗಳು ಮತ್ತು ನವ-ನಾಜಿಗಳ ಗುಂಪು" ಎಂದು ಉಲ್ಲೇಖಿಸಿದ್ದಾರೆ.

Latest Videos
Follow Us:
Download App:
  • android
  • ios