Asianet Suvarna News Asianet Suvarna News

Putin's India Visit: ರಷ್ಯಾ ಅಧ್ಯಕ್ಷ ಪುಟಿನ್‌ ಇಂದು ಭಾರತಕ್ಕೆ: ಮಹತ್ವದ ಒಪ್ಪಂದಕ್ಕೆ ಸಹಿ

* ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ

* ಭಾರತ ರಷ್ಯಾ ಸ್ನೇಹದಲ್ಲಿಲ್ಲ ಒಡಕು

* ಪುಟಿನ್ ಭೇಟಿ ವೇಳೆ ಮಹತ್ವದ ಒಪ್ಪಂದಗಳಿಗೆ ಸಹಿ

Vladimir Putin To Arrive In India on Monday Hold Summit With PM Modi pod
Author
Bangalore, First Published Dec 6, 2021, 8:48 AM IST

ನವದೆಹಲಿ(ಡಿ.06): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Russia President Vladimir Putin) ಡಿಸೆಂಬರ್ 6 ರಂದು ಮಹತ್ವದ ಏಕದಿನ ಭೇಟಿಗಾಗಿ ಭಾರತಕ್ಕೆ ಬರಲಿದ್ದಾರೆ. ಅವರು ನವದೆಹಲಿಯಲ್ಲಿ (New Delhi) ನಡೆಯುತ್ತಿರುವ 21 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ (India-Russia Annual Summit) ಭಾಗವಹಿಸಲಿದ್ದಾರೆ. ಈ ವೇಳೆ ರಷ್ಯಾ ಮತ್ತು ಭಾರತ ರಕ್ಷಣಾ ಮತ್ತು ವಿದೇಶಿ ವಿಷಯಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಲಿವೆ. ಪುಟಿನ್ ಅವರ ಈ ಭೇಟಿಯ ಬಗ್ಗೆ ಚೀನಾ ಮತ್ತು ಪಾಕಿಸ್ತಾನ (China And Pakistan) ಹದ್ದಿನ ಕಣ್ಣಿಡಲಿದೆ. ಇದಕ್ಕೆ ಕಾರಣ ರಷ್ಯಾ ಮತ್ತು ಭಾರತ ನಡುವಿನ ಮಿಲಿಟರಿ ಒಪ್ಪಂದಗಳು. ಶೃಂಗಸಭೆಯಲ್ಲಿ ನರೇಂದ್ರ ಮೋದಿ (narendra Modi) ಮತ್ತು ವ್ಲಾದಿಮಿರ್ ಪುಟಿನ್ ನಡುವೆ ಮಾತುಕತೆ ನಡೆಯಲಿದೆ. ಈ ವೇಳೆ 10 ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಶೃಂಗಸಭೆಯಲ್ಲಿ ರಕ್ಷಣಾ ವಿಷಯಗಳು ಸೇರಿದಂತೆ ಹಲವು ಪ್ರಮುಖ ವಿಷಯಗಳು ಚರ್ಚೆಯಾಗಲಿವೆ. ಈ ವೇಳೆ ಭಾರತ ಮತ್ತು ರಷ್ಯಾ ನಡುವೆ ಅಸಾಲ್ಟ್ ರೈಫಲ್ ಎಕೆ-203 ತಯಾರಿಕೆಗೆ ಒಪ್ಪಂದ ನಡೆಯಲಿದೆ.

70 ವರ್ಷಗಳ ಹಿಂದಿನ ಸಂಬಂಧ

ಭಾರತವು ರಷ್ಯಾದಿಂದ ಸೂಪರ್ ಅಡ್ವಾನ್ಸ್ಡ್ ಮಿಸೈಲ್ ಡಿಫೆನ್ಸ್ ಸಿಸ್ಟಮ್ S-500 ಅಥವಾ S-500 SAM ಅನ್ನು ಖರೀದಿಸಲಿದೆ. ಇದು S-400 ಕ್ಷಿಪಣಿಗಿಂತ ಹೆಚ್ಚು ಅಪಾಯಕಾರಿ ಮತ್ತು ಶಕ್ತಿಶಾಲಿಯಾಗಿದೆ. ಭಾರತಕ್ಕೆ ಇದರ ವಿತರಣೆ ಆರಂಭವಾಗಿದೆ. ಭಾರತವು 2018 ರಲ್ಲಿ ರಷ್ಯಾದಿಂದ (Russia) S-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಒಪ್ಪಂದಕ್ಕೆ (Deal)  ಸಹಿ ಹಾಕಿತು. ಪ್ರಸ್ತುತ, ರಷ್ಯಾವನ್ನು ಹೊರತುಪಡಿಸಿ, ಚೀನಾ ಮತ್ತು ಟರ್ಕಿ (Turkey) ಮಾತ್ರ ಈ ಸುಧಾರಿತ ವ್ಯವಸ್ಥೆಯನ್ನು ಹೊಂದಿದೆ. ಇದರಿಂದಾಗಿ ಚೀನಾ, ಪಾಕಿಸ್ತಾನ ಬಿಡಿ, ಅಮೆರಿಕಾಗೂ (USA) ಭಾರೀ ಚಿಂತೆ ಕಾಡಿತ್ತು. 

India-Russia Annual Summit: ಡಿ.6ರಂದು ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್

ರಷ್ಯಾ ಮತ್ತು ಭಾರತ 70 ವರ್ಷಗಳ ಹಳೆಯ ಸಂಬಂಧವನ್ನು ಹೊಂದಿವೆ. 1991 ರಿಂದ, ಭಾರತವು ರಷ್ಯಾದಿಂದ 70 ಶತಕೋಟಿ ಡಾಲರ್ ಮೌಲ್ಯದ ಮಿಲಿಟರಿ ಉಪಕರಣಗಳನ್ನು ಖರೀದಿಸಿದೆ. ಮಿಲಿಟರಿ ಉಪಕರಣಗಳನ್ನು ಖರೀದಿಸುವಲ್ಲಿ ಭಾರತ ಈಗ ಅಮೆರಿಕಕ್ಕಿಂತ ರಷ್ಯಾಕ್ಕೆ ಹೆಚ್ಚಿನ ಗಮನ ನೀಡುತ್ತಿರುವುದು ಅಮೆರಿಕದ ಟೆನ್ಷನ್‌ಗೆ ಕಾರಣವಾಗಿದೆ. ಈ ಮಿಲಿಟರಿ ವಸ್ತುವು ಅಮೆರಿಕಕ್ಕಿಂತ ರಷ್ಯಾದಿಂದ ಅಗ್ಗವಾಗಿದೆ. ಮೂರು ವರ್ಷಗಳ ಹಿಂದೆ, ಮೂರು ವರ್ಷಗಳ ಹಿಂದೆ ರಷ್ಯಾ ಮತ್ತು ಭಾರತ ನಡುವೆ S-400 ಒಪ್ಪಂದ ನಡೆದಾಗ, ಪಾಕಿಸ್ತಾನ ಮತ್ತು ಚೀನಾ ಹೊರತುಪಡಿಸಿ, ಅಮೆರಿಕ ಆಕ್ಷೇಪಿಸಿತ್ತು.

ಚೀನಾ ಮತ್ತು ಪಾಕಿಸ್ತಾನ ವಿವಾದ

ಚೀನಾ ಮತ್ತು ಪಾಕಿಸ್ತಾನದೊಂದಿಗಿನ ವಿವಾದಗಳ ಮಧ್ಯೆ ರಷ್ಯಾ ಭಾರತದತ್ತ ಒಲವು ತೋರುವುದು ಒಂದು ಪ್ರಮುಖ ವಿಷಯವಾಗಿದೆ. ಚೀನಾ ವಿಚಾರ ಹಾಗೂ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ವಿಚಾರವಾಗಿ ರಷ್ಯಾ ಯಾವಾಗಲೂ ಭಾರತದ ಪರವಾಗಿಯೇ ಇದೆ. ಮಿಲಿಟರಿ ಯಂತ್ರಾಂಶದ ಹೊರತಾಗಿ, ಭಾರತವು ಸಣ್ಣ ಶಸ್ತ್ರಾಸ್ತ್ರಗಳು, ವಿಮಾನಗಳು, ಹಡಗುಗಳು, ವಾಹಕ ವಿಮಾನಗಳು (INS ವಿಕ್ರಮಾದಿತ್ಯ) ಮತ್ತು ಜಲಾಂತರ್ಗಾಮಿಗಳನ್ನು ರಷ್ಯಾದಿಂದ ಖರೀದಿಸುತ್ತದೆ. ಎರಡೂ ದೇಶಗಳು ಒಟ್ಟಾಗಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಯನ್ನು ತಯಾರಿಸುತ್ತಿವೆ.

ನಡುವೆ ಸ್ವಲ್ಪ ಅಂತರವಿತ್ತು

ಪುಟಿನ್ ಅವರು ಡಿಸೆಂಬರ್ 2019 ರಲ್ಲಿ ಭಾರತಕ್ಕೆ ಭೇಟಿ ನೀಡಬೇಕಿತ್ತು, ಆದರೆ ಭೇಟಿಯನ್ನು ಮುಂದೂಡಲಾಯಿತು. ಆಗ ಭಾರತ-ರಷ್ಯಾ ನಡುವಿನ ಸ್ನೇಹ ಪ್ರಶ್ನೆಯಾಗಿ ಉಳಿದಿತ್ತು. ಅಲ್ಲದೇ ಪಾಕಿಸ್ತಾನ ಮತ್ತು ಚೀನಾದ ಬಗ್ಗೆ ರಷ್ಯಾದ ಮೃದು ಧೋರಣೆ ಮುನ್ನೆಲೆಗೆ ಬಂದಿತ್ತು. ಆಗ ಭಾರತ ಹಾಗೂ ರಷ್ಯಾ ನಡುವಿನ ಗೆಳೆತನ ಮೊದಲಿನಂತಿಲ್ಲ ಎನ್ನಲಾಯಿತು. ಆದರೆ, ಮತ್ತೆ ಕೆಲ ಕಾಲದಲ್ಲೇ ಉಭಯ ದೇಶಗಳ ನಡುವಿನ ಸ್ನೇಹ ಮತ್ತಷ್ಟು ಗಟ್ಟಿಗೊಂಡಿದೆ.

AK-203 assault rifles: ರಷ್ಯಾ ನಿರ್ಮಿತ ಎಕೆ-203 ರೈಫಲ್ ಭಾರತದಲ್ಲಿ ತಯಾರಿಸಲು ಕೇಂದ್ರದ ಒಪ್ಪಿಗೆ

ರಷ್ಯಾ ಈ ಹಿಂದಿನಿಂದಲೂ ಸಹಾಯ ಮಾಡುತ್ತಿದೆ

ಭಾರತದಲ್ಲಿ ಕೈಗಾರಿಕಾ ಕ್ರಾಂತಿಯ ಹಿಂದೆ ರಷ್ಯಾದ ಸಹಾಯವಿದೆ. ಭಾರತದಲ್ಲಿ ಉಕ್ಕಿನ ಕಾರ್ಖಾನೆಗಳನ್ನು ನಿರ್ಮಿಸಲು ರಷ್ಯಾ ಸಹಾಯ ಮಾಡಿತು. 1971 ರ ಯುದ್ಧದ ಸಮಯದಲ್ಲಿ US ನೌಕಾಪಡೆಯು ಭಾರತದ ಮೇಲೆ ದಾಳಿ ಮಾಡಲು ಯೋಚಿಸುತ್ತಿತ್ತು, ಆದರೆ ಭಾರತಕ್ಕೆ ಸಹಾಯ ಮಾಡಲು ರಷ್ಯಾ ತನ್ನ ಯುದ್ಧನೌಕೆಯನ್ನು ಕಳುಹಿಸಿತ್ತು. ಇದರಿಂದ ಅಮೆರಿಕ ಹಿಂದೆ ಸರಿಯಬೇಕಾಯಿತು. ಭಾರತದ ಬಾಹ್ಯಾಕಾಶ ಯಾತ್ರಿ ರಾಕೇಶ್ ಶರ್ಮಾ ರಷ್ಯಾದ ನೆರವಿನೊಂದಿಗೆ ಬಾಹ್ಯಾಕಾಶ ನಡಿಗೆ ನಡೆಸಿದರು.

Follow Us:
Download App:
  • android
  • ios