Asianet Suvarna News Asianet Suvarna News

India-Russia Annual Summit: ಡಿ.6ರಂದು ಭಾರತಕ್ಕೆ ಬರಲಿದ್ದಾರೆ ರಷ್ಯಾ ಅಧ್ಯಕ್ಷ ಪುಟಿನ್

  • ಡಿಸೆಂಬರ್ 6 ರಂದು ನಡೆಯಲಿರುವ ಭಾರತ ಹಾಗೂ ರಷ್ಯಾ 21ನೇ ಶೃಂಗಸಭೆ
  • ಭಾರತಕ್ಕೆ ಬರಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಮೋದಿ ಜೊತೆ ಮಾತುಕತೆ
  • ಮಹತ್ವದ ಸಭೆಯಲ್ಲಿ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಉಭಯ ನಾಯಕರು ಸಹಿ 
     
Russian president Vladimir Putin visit to India for 21st India-Russia Annual Summit
Author
Bengaluru, First Published Dec 5, 2021, 8:02 PM IST

ನವದೆಹಲಿ (ಡಿ.5): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (Vladimir Putin) ಡಿಸೆಂಬರ್ 6 ರಂದು ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾರತ ಹಾಗೂ ರಷ್ಯಾ 21ನೇ ಶೃಂಗಸಭೆಯಲ್ಲಿ (India Russia annual summit) ಪಾಲ್ಗೊಳ್ಳಲು ಸೋಮವಾರ ನವದೆಹಲಿಗೆ ಆಗಮಿಸುವ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಸೋಮವಾರ ನಡೆಯುವ ಭಾರತ-ರಷ್ಯಾ ಮಹತ್ವದ ಸಭೆಯಲ್ಲಿ ರಕ್ಷಣಾ ಕ್ಷೇತ್ರ, ಇಂಧನ, ವ್ಯಾಪಾರ, ಹೂಡಿಕೆ, ವಿಜ್ಞಾನ ತಂತ್ರಜ್ಞಾನ,  ಸೇರಿದಂತೆ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಲಿದ್ದಾರೆ.

ಪುಟಿನ್ ಜೊತೆ ರಷ್ಯಾ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವ  ಸರ್ಗೆಯೆ ಲಾವ್ರೋವ್ (Sergey Lavrov) ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ಭಾನುವಾರ ರಾತ್ರಿಯೇ ಇವರು ಭಾರತಕ್ಕೆ ಬರಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಭಾರತ ಹಾಗೂ ರಷ್ಯಾ ನಡುವಿನ ಮೊದಲ 2+2 ಮಾತುಕತೆ ಡಿಸೆಂಬರ್ 6 ರಂದು ನಡೆಯಲಿದೆ. ಮೊದಲ  2+2 ಸಭೆಯಲ್ಲಿ ಸರ್ಗೆಯೆ , ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh), ಭಾರತದ ವಿದೇಶಾಂಗ ಸಚಿವ ಜೈಶಂಕರ್ (Dr S Jaishankar) ಜೊತೆ ಮಾತುಕತೆ ನಡೆಸಲಿದ್ದಾರೆ.

21st Annual Summit: ಜಾಗತಿಕ ಮಟ್ಟದಲ್ಲಿ ಏರಿರುವ ಭಾರತದ ಘನತೆಯನ್ನು ಒಪ್ಪಿದ ರಷ್ಯಾ ಅಧ್ಯಕ್ಷ

ಭಾರತ ಹಾಗೂ ರಷ್ಯಾ ಜೊತೆಗಿನ ರಕ್ಷಣಾ ಕ್ಷೇತ್ರದ ಪಾಲುದಾರಿಕೆ ಹಾಗೂ ಒಪ್ಪಂದ ಜೊತೆಗೆ ಏಷ್ಯಾ ಫೆಸಿಪಿಕ್ ವಲಯದಲ್ಲಿನ ಪರಿಸ್ಥಿತಿ ಕೂಡ ಪ್ರಮುಖವಾಗಿ ಚರ್ಚೆಯಾಗಲಿದೆ. ಆಫ್ಘಾನಿಸ್ತಾನದಲ್ಲಿನ ಬೆಳವಣಿಗೆ, ಸಿರಿಯಾ ಆತಂಕ ಸೇರಿದಂತೆ ಹಲವು ರಕ್ಷಣೆ ಹಾಗೂ ಭದ್ರತೆ ವಿಚಾರಗಳು ಕೂಡ ಚರ್ಚೆಯಾಗಲಿದೆ ಎಂದು ಈಗಾಗಲೇ ರಷ್ಯಾ ರಾಯಭಾರ ಕಚೇರಿ ಮಾಹಿತಿ ನೀಡಿದೆ. 

India Russia Summit:ಶೃಂಗಸಭೆಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಭಾರತ ಭೇಟಿ, ಪ್ರಧಾನಿ ಮೋದಿ ಜೊತೆ ಮಹತ್ವದ ಸಭೆ!

2020ರ ಡಿಸೆಂಬರ್ ವೇಳೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಆಗಮಿಸಬೇಕಿತ್ತು. 2020ರಲ್ಲಿ ಭಾರತ - ರಷ್ಯಾ ಶೃಂಗಸಭೆ ನಡೆಯಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಎಲ್ಲಾ ಸಭೆಗಳನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ 21ನೇ ಭಾರತ-ರಷ್ಯಾ ಶೃಂಗಸಭೆಯನ್ನು ಮುಂದೂಡಲಾಗಿತ್ತು. ಇದೀಗ ಈ ಸಭೆ ಡಿಸೆಂಬರ್ 6 ರಂದು  ನಡೆಯುತ್ತಿದೆ.

AK-203 assault rifles: ರಷ್ಯಾ ನಿರ್ಮಿತ ಎಕೆ-203 ರೈಫಲ್ ಭಾರತದಲ್ಲಿ ತಯಾರಿಸಲು ಕೇಂದ್ರದ ಒಪ್ಪಿಗೆ

ಈ ಹಿಂದೆ ನಡೆದಿರುವ ಭಾರತ ಹಾಗೂ ರಷ್ಯಾ ನಡುವಿನ 20 ದ್ವಿಪಕ್ಷೀಯ ಸಭೆಗಳು ಯಶಸ್ವಿಯಾಗಿದೆ.  ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ರಷ್ಯಾ ನಡುವಿನ ಪಾಲುದಾರಿಕೆ ಹಾಗೂ ಒಪ್ಪಂದ ಹೆಚ್ಚಾಗಿದೆ. ಅದರಲ್ಲೂ ರಕ್ಷಣಾ ಕ್ಷೇತ್ರ, ವ್ಯಾಪಾರ ವಹಿವಾಟು ಸೇರಿದಂತೆ ಹಲವು ಪಾಲುದಾರಿಕೆ ಗಟ್ಟಿಯಾಗಿದೆ. ಇದರಿಂದ ಈ ಬಾರಿಯ ಸಭೆ ಭಾರಿ ಮಹತ್ವ ಪಡೆದುಕೊಂಡಿದೆ.  ಕೊರೋನಾ ಸಂದರ್ಭದಲ್ಲಿ ಭಾರತ ಹಾಗೂ ರಷ್ಯಾ ಪರಸ್ಪರ ಸ್ಪಂದಿಸಿದೆ. ಭಾರತದ ಸಂಕಷ್ಟದಲ್ಲಿ ರಷ್ಯಾ ಸ್ಫುಟ್ನಿಕ್ ಲಸಿಕೆ ನೀಡುವ ಮೂಲಕ ಭಾರತಕ್ಕೆ ನೆರವಾಗಿದೆ. 

Aiyar comments:ಅಮೆರಿಕದ ಗುಲಾಮನಂತೆ ವರ್ತಿಸುತ್ತಿರೋ ಭಾರತ: ಮಣಿಶಂಕರ್ ಐಯ್ಯರ್ ಆರೋಪ

S400 ಏರ್ ಡಿಫೆನ್ಸ್ ಸಿಸ್ಟಮ್‌ನ ಮೊದಲ ಬ್ಯಾಚ್ ಈ ವರ್ಷದ ಅಂತ್ಯದ ವೇಳೆಗೆ ಭಾರತ ತಲುಪಲಿದ್ದು ಈ ಕುರಿತು ಸೋಮವಾರ ನಡೆಯಲಿರುವ ಭಾರತ-ರಷ್ಯಾ ಶೃಂಗಸಭೆಯಲ್ಲಿ ಮಾತುಕತೆ ನಡೆಯಲಿದೆ ಎಂದು ತಿಳಿದುಬಂದಿದೆ. ವಾರ್ಷಿಕ ಶೃಂಗಸಭೆಗಾಗಿ ಪುಟಿನ್ (Vladimir Putin) ಕೊನೆಯ ಬಾರಿ ಭಾರತಕ್ಕೆ  2018 ರಲ್ಲಿ ಭೇಟಿ ನೀಡಿದ್ದರು. ಈ  ಭೇಟಿಯ ಸಮಯದಲ್ಲಿ ಭಾರತ ಮತ್ತು ರಷ್ಯಾ ನಡುವೆ S400 ಸಿಸ್ಟಮ್‌ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಕೊರೊನಾ ಬಳಿಕ ಪುಟಿನ್ ಭೇಟಿ ನೀಡುತ್ತಿರುವ 2ನೇ ದೇಶ ಭಾರತ. ಇದಕ್ಕೂ ಮೊದಲು ಅವರು ಜಿನೆವಾದಲ್ಲಿ ನಡೆದ ಶೃಂಗಸಭೆಯಲ್ಲಿ  ಪಾಲ್ಗೊಂಡಿದ್ದರು. 

Follow Us:
Download App:
  • android
  • ios