Asianet Suvarna News Asianet Suvarna News

ಪ್ರತಿ ತಿಂಗಳು ತನ್ನ ಎಂಜಲು ಮಾರಿ 41 ಲಕ್ಷ ಗಳಿಸುವ ಮಹಿಳೆ, ಹೊಸ ಫ್ಲ್ಯಾಟ್‌ ಕೂಡ ಖರೀದಿ!

ನಮ್ಮಲ್ಲಿ ಎಂಜಲು ಕೈಗಳಲ್ಲಿ ಕಾಗೆಯನ್ನೂ ಕೂಡ ಓಡಿಸೋದಿಲ್ಲ. ಅಂಥದ್ದರಲ್ಲಿ ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬಳು ತನ್ನ ಎಂಜಲನ್ನು ಮಾರಿಯೇ ತಿಂಗಳಿಗೆ 41 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾಳೆ. ಬಂದ ಹಣದಿಂದ ತನ್ನ ಸಾಲವನ್ನೆಲ್ಲಾ ತೀರಿಸಿಕೊಂಡಿರುವ ಆಕೆ, ಇದೇ ಹಣದಲ್ಲಿ ಹೊಸ ಫ್ಲ್ಯಾಟ್‌ ಕೂಡ ಖರೀದಿಸಿದ್ದಾಳೆ.
 

Viral News Latiesha Jones Who Earns Rs 41 Lakh A Month By Selling Bottles Of Her Spit san
Author
First Published May 23, 2023, 6:19 PM IST | Last Updated May 23, 2023, 6:19 PM IST

ನವದೆಹಲಿ (ಮೇ.23): ಕೆಲವೊಮ್ಮ ಹಳ್ಳಿಗಳಲ್ಲಿ ಮಾತನಾಡುವ ಬರದಲ್ಲಿ 'ನನ್ನ ಎಂಜಲು ಎಲೆ ಎತ್ತೋಕು ಲಾಯಕ್ಕಿಲ್ಲ' ಅನ್ನೋ ಮಾತನ್ನು ಕೇಳುತ್ತೇವೆ. ಆದರೆ, ವಿಪರ್ಯಾಸ ನೋಡಿ ಇಂಗ್ಲೆಂಡ್‌ನಲ್ಲಿ ಮಹಿಳೆಯೊಬ್ಬಳು ತನ್ನ ಎಂಜಲು ಮಾರಿಯೇ ತಿಂಗಳಿಗೆ 41 ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾಳೆ. ಇದನ್ನು ಮಾರಿದ ಬಳಿಕ ಬಂದ ಹಣದಲ್ಲಿ ತನ್ನ ಸಾಲಗಳನ್ನೆಲ್ಲಾ ತೀರಿಸಿಕೊಂಡಿರುವ ಆಕೆ, ಇತ್ತೀಚೆಗೆ ಹೊಸ ಫ್ಲ್ಯಾಟ್‌ಅನ್ನೂ ಖರೀದಿ ಮಾಡಿದ್ದಾರೆ. ಕಾಲೇಜು ಶುಲ್ಕ ಹಾಗೂ ಜೀವನೋಪಾಯಕ್ಕಾಗಿ ಮ್ಯಾಂಚೆಸ್ಟರ್‌ನ ಟೆಸ್ಕೋದಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿರುವ ಬಯೋಮೆಡಿಕಲ್‌ ಸೈನ್ಸ್‌ ವಿದ್ಯಾರ್ಥಿನಿ ಲತೀಶಾ ಜೋನ್ಸ್‌, ಈಗ ತನ್ನ ಎಂಜಲುಗಳನ್ನು ಬಾಟಲ್‌ಗಳಲ್ಲಿ ತುಂಬಿ ಮಾರುವ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾಳೆ. ಇನ್ನೂ ಅಚ್ಚರಿಯ ಸಂಗತಿಯನ್ನು ಬಹಿರಂಗ ಮಾಡಿರುವ 22 ವರ್ಷದ ಮಹಿಳೆ, ತನ್ನ ಎಂಜಲು ಮಾತ್ರವಲ್ಲ, ಕಾಲ್ಬೆರಳ ಉಗುರುಗಳು ಒಂದು ವಾರ ನಿರಂತರವಾಗಿ ಉಪಯೋಗಿಸಿದ ಬೆಡ್‌ ಶೀಟ್‌ಗಳಂಥ ವಿಚಿತ್ರ ಬೇಡಿಕೆಗಳನ್ನು ಪೂರೈಸಿದರೆ, ಜನರು 300 ಪೌಂಡ್‌ನಿಂದ (30 ಸಾವಿರ ರೂಪಾಯಿ) 1500 ಪೌಂಡ್‌ (1.5 ಲಕ್ಷ ರೂಪಾಯಿ) ಕೊಡಲು ತಯಾರಿದ್ದಾರೆ ಎಂದೂ ಹೇಳಿದ್ದಾರೆ.

ಇದು ಆಕೆಗೆ ಎಲ್ಲಿಯತನಕ ಲಾಭ ತಂದಿದೆ ಎಂದರೆ, ಜೋನ್ಸ್‌ ಈಗ ತನ್ನ ಕೆಲಸಕ್ಕೆ ವಿದಾಯ ಹೇಳಿದ್ದು ಮಾತ್ರವಲ್ಲದೆ, ವಿಶ್ವವಿದ್ಯಾಲಯದಿಂದಲೂ ಹೊರಬಂದಿದ್ದಾಳೆ. ತನ್ನ ಎಂಜಲನ್ನು ಬಾಟಲ್‌ನಲ್ಲಿ ಹಾಕಿ ಮಾರುವುದೇ ಆಕೆಯ ಪೂರ್ಣಪ್ರಮಾಣದ ಉದ್ಯೋಗವಾಗಿದೆ. ಇದರ ಸಹಾಯದಿಂದಾಗಿ 11 ಸಾವಿರ ಪೌಂಡ್‌ ಸಾಲವನ್ನೂ ತೀರಿಸಿದ್ದಾಗಿ ಹೇಳಿರುವ ಆಕೆ, ಇತ್ತೀಚೆಗೆ ತನ್ನ ಹೆಸರಿನಲ್ಲಿ ಆಸ್ತಿಯನ್ನೂ ಖರೀದಿಸಿದ್ದಾಗಿ ತಿಳಿಸಿದ್ದಾಳೆ. 'ಇದೆಲ್ಲವೂ ಫ್ಲೂಕ್‌ ರೀತಿಯಲ್ಲಿ ಆರಂಭವಾಗಿತ್ತು. ಆದರೆ, ಈಗ ಎಂಜಲನ್ನು ಮಾರಾಟ ಮಾಡುವ ಉದ್ಯೋಗಕ್ಕೆ ಇತ್ತೀಚೆಗೆ ನಾಲ್ಕು ವರ್ಷವಾಗಿದೆ. ಓನ್ಲಿ ಫ್ಯಾನ್ಸ್ ಆಗಿ ಇದನ್ನು ಆರಂಭಿಸಿದೆ. ಅದರ ಮೂಲಕ ನನಗೆ ವಿಚಿತ್ರ ವಿನಂತಿಗಳು ಬರುತ್ತಿದ್ದವು. ನಾನು ಸ್ನಾನ ಮಾಡಿದ ಶವರ್‌ ವಾಟರ್‌ಗೂ ಬೇಡಿಕೆಗಳು ಬಂದಿದ್ದವು. ಇದನ್ನು ಸುಲಭವಾಗಿ ಪಡೆದುಕೊಳ್ಳಬಹುದು ಎನ್ನುವುದು ಮೊದಲಿನಿಂದಲೂ ನನಗೆ ತಿಳಿದಿತ್ತು' ಎಂದು ಜೋನ್ಸ್‌ ಅವರ ಕಾಮೆಂಟ್‌ಗಳು ಮಿರರ್‌ ಪತ್ರಿಕೆ ವರದಿ ಮಾಡಿದೆ. ಅವಳು ಪಡೆದ ಅಸಾಮಾನ್ಯ ವಿನಂತಿಗಳನ್ನು ಪೂರೈಸಲು ಅವರು ಉದ್ಯಮವನ್ನು ಸಂಶೋಧಿಸಿದರು.

'ಒಂದು ಬಾಟಲ್‌ ಎಂಜಲು ಸಿಗಬಹುದೇ ಎಂದು ನನಗೆ ಮೊದಲಿಗೆ ಪ್ರಶ್ನಿಸಲಾಗಿತ್ತು. ಮೊದಲಿಗೆ ಇದನ್ನು ತಮಾಷೆಗಾಗಿ ಹೇಳುತ್ತಿದ್ದಾರೆ ಎಂದು ಅಂದುಕೊಂಡಿದ್ದೆ. ಕೊನೆಗೆ ಅದು ನಿಜ ಎಂದು ಗೊತ್ತಾಯಿತು' ಎಂದು ಹೇಳಿದ್ದಾರೆ. ಜೋನ್ಸ್‌ ತಮ್ಮ ಮೊದಲ ಒಂದು ಬಾಟಲ್‌ ಎಂಜಲನ್ನು 30 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದರು.

ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!

ಒಂದು ವಾರಗಳ ಕಾಲ ನಾನು ಮಲಗಿದ್ದ ಬೆಡ್‌ ಶೀಟ್‌, ಜಿಮ್‌ಗೆ ಬಳಸಿ ಸಂಪೂರ್ಣವಾಗಿ ಬೆವರಿನಿಂದ ಒದ್ದೆಯಾಗಿರುವ ಬಟ್ಟೆಗಳು, ಇನ್ನೂ ಹೇಳಬೇಕೆಂದರೆ ಸ್ನಾನ ಮಾಡಿದ ನೀರು, ಟೂತ್‌ಬ್ರಶ್‌, ಟೂತ್‌ಪೇಸ್ಟ್‌ ಉಗಿದಿದ್ದು.. ನೀವು ಛೀ.. ಎಂದು ಹೇಳುವಂಥ ಎಲ್ಲಾ ವಸ್ತುಗಳು ಬೇಕು ಎನ್ನುವ ಬೇಡಿಕೆ ನನಗೆ ಬಂದಿತ್ತು ಎಂದು ಲತೀಶಾ ಜೋನ್ಸ್‌ ಹೇಳಿದ್ದಾರೆ.

ಅಯ್ಯೋ ಪಾಪಿ: ನಮ್ಮ ರಾಷ್ಟ್ರಪಕ್ಷಿಯ ಗರಿಗಳನ್ನು ಕಿತ್ತು ಹಿಂಸೆ ನೀಡಿ ಕೊಂದೇ ಹಾಕ್ದ! ವಿಡಿಯೋ ವೈರಲ್‌

ಒಂದು ಬಾಟಲ್‌ ಎಂಜಲಿನಿಂದ ಒಂದೇ ಸಮಯಕ್ಕೆ ನಾನಿ ಗಳಿಸಿದ ಗರಿಷ್ಠ ಮೊತ್ತ ಎಷ್ಟೆಂದರೆ 1.5 ಲಕ್ಷ ರೂಪಾಯಿ. ನನಗೆ ಆ ವ್ಯಕ್ತಿಯ ಬಳಿ ಹಣ ಇತ್ತು ಅನ್ನೋದು ಗೊತ್ತಿತ್ತು. ಆತ ಹಣ ನೀಡಲು ಒಪ್ಪಿಕೊಂಡಿದ್ದಕ್ಕೆ ಖುಷಿಯಾಗಿತ್ತು. ಇದು ನನ್ನ ಜೀವನವಾಗಬಹುದೆಂದು ಎಂದಿಗೂ ಯೋಚನೆ ಮಾಡಿರಲಿಲ್ಲ. ಆದರೆ, ಈಗ ಖುಷಿ ಇದೆ ಎಂದು ಹೇಳುತ್ತಾಳೆ.

Latest Videos
Follow Us:
Download App:
  • android
  • ios