ಸಾವಿರಾರು ಕೋಟಿ ವಂಚಿಸಿರುವ ಮಲ್ಯ ಭಾರತಕ್ಕೆ/ ಗುಡ್ ಟೈಮ್ಸ್ ದಿ ಎಂಡ್/ ಆರ್ಥಿಕ ಅಪರಾಧಿಯಾಗಿರುವ ಮಲ್ಯ/ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಹಲವು ಬ್ಯಾಂಕ್ ಗಳಿಗೆ ವಂಚನೆ
ಲಂಡನ್(ಜೂ. 03) ಕೊರೋನಾ ಕಾಲದಲ್ಲಿ ಮತ್ತೊಂದು ಸುದ್ದಿ ಬಂದಿದೆ. ಭಾರತದ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಟೋಪಿ ಹಾಕಿ ಲಂಡನ್ ನಲ್ಲಿ ಹಾಯಾಗಿದ್ದ ಒಂದು ಕಾಲದ ಮದ್ಯದ ದೊರೆ ವಿಜಯ್ ಮಲ್ಯರನ್ನು ಭಾರತಕ್ಕೆ ವಾಪಸ್ ಕರೆತರಲಾಗುತ್ತಿದೆ.
ವರದಿ ಹೇಳಿರುವಂತೆ ಬುಧವಾರ ಮಧ್ಯರಾತ್ರಿ ಮುಂಬೈ ವಿಮಾನ ನಿಲ್ದಾಣಕ್ಕೆ ಮಲ್ಯರನ್ನು ಕರೆದು ತರಲಾಗುತ್ತಿದೆ. ಭಾರತದ ವಿದೇಶಾಂಗ ಇಲಾಖೆ ಮಾತ್ರ ಇಲ್ಲಿಯವರೆಗೆ ಯಾವುದೆ ಸ್ಪಷ್ಟನೆ ನೀಡಿಲ್ಲ.
ಕಾನೂನು ಪ್ರಕಾರ ಹೊರಡಿಸಹುದಾದ ಎಲ್ಲ ರೀತಿಯ ನೋಟಿಸ್ ಗಳನ್ನು ವಿಜಯ್ ಮಲ್ಯ ಮೇಲೆ ಈಗಾಗಲೇ ಜಾರಿ ಮಾಡಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಬ್ಯಾಂಕ್ ಗಳಿಗೆ ಮಲ್ಯ ವಂಚಿಸಿರುವುದು ಒಂಭತ್ತು ಸಾವಿರ ಕೋಟು ರೂ. ಗೂ ಅಧಿಕ!
ಬ್ರಿಟನ್ನಿನ ಪ್ರಜೆಯೂ ಆಗಿರುವ ಮಲ್ಯರನ್ನು ಭಾರತಕ್ಕೆ ಗಡೀಪಾರು ಮಾಡಬೇಕೆಂದು ಅಲ್ಲಿನ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಆಯ್ಕೆಗಳೆಲ್ಲ ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದವು. . ಹೀಗಾಗಿ ಇನ್ನು 28 ದಿನದೊಳಗೆ ಅವರನ್ನು ಗಡೀಪಾರು ಮಾಡಲಾಗುತ್ತದೆ ಎಂದೇ ಹೇಳಲಾಗಿತ್ತು. ಸಾಲ ಮಾಡಿಕೊಂಡಿರುವ ಮಲ್ಯ ಜಾರಿ ನಿರ್ದೇಶನಾಲಯ, ಸಿಬಿಐ ಎಲ್ಲರ ವಿಚಾರಣೆಗೂ ಬೇಕಾಗಿದ್ದಾರೆ.
