Asianet Suvarna News Asianet Suvarna News

3 ಸಿಂಹಗಳನ್ನು ವಾಕಿಂಗ್ ಕರೆದುಕೊಂಡು ಹೊರಟ ಮಹಿಳೆ: ಬೆಚ್ಚಿಬಿದ್ದ ನೆಟ್ಟಿಗರು..!

ತನ್ನ ಮುದ್ದಿನ ನಾಯಿಗಳನ್ನು ಕರೆದುಕೊಂಡು ಹೋದಂತೆ ಕಾಡಿನಲ್ಲಿ 3 ಸಿಂಹಗಳನ್ನು ಕರೆದುಕೊಂಡು ಅದರ ಹಿಂದೆ ಮಹಿಳೆ ನಡೆದುಕೊಂಡು ಹೋಗುವುದನ್ನು ಈ ವಿಡಿಯೋ ಕ್ಲಿಪ್‌ ತೋರಿಸುತ್ತದೆ.

video of woman taking three lions for a walk stuns internet ash
Author
First Published Dec 7, 2022, 11:55 AM IST

ನಗರಗಳಲ್ಲಿ ಯುವತಿಯರು ಹಾಗೂ ಮಹಿಳೆಯರು (Women) ತಮ್ಮ ಶ್ವಾನಗಳನ್ನು (Dog) ವಾಕಿಂಗ್‌ (Walking) ಕರೆದುಕೊಂಡು ಹೋಗುವುದು ಮಾಮೂಲಿ. ಕೆಲವರು ಒಂದಲ್ಲ ಎರಡಲ್ಲ 3 - 4 ನಾಯಿಗಳನ್ನು ಒಟ್ಟೊಟ್ಟಿಗೆ ವಾಕಿಂಗ್ ಕರೆದುಕೊಂಡು ಹೋಗುತ್ತಿರುತ್ತಾರೆ. ಇದು ನಗರಗಳಲ್ಲಿ ಸಾಮಾನ್ಯವಾದ ದೃಶ್ಯ. ಆದರೆ, ನಾವು ಹೇಳಲು ಹೊರಟಿರುವ ಸ್ಟೋರಿ ಸ್ವಲ್ಪ ವಿಭಿನ್ನ.  ಮಹಿಳೆಯೊಬ್ಬರು ಮೂರು ಸಿಂಹಗಳೊಂದಿಗೆ (Lion) ವಿಹಾರ ನಡೆಸುತ್ತಿರುವ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗುತ್ತಿದೆ. ಕಂಟೆಂಟ್ ಕ್ರಿಯೇಟರ್, ಜೆನ್ ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ಶೇರ್‌ ಮಾಡಿದ ಈ ವಿಡಿಯೋ ಕ್ಲಿಪ್‌ ಸಿಕ್ಕಾಪಟ್ಟೆ ವೈರಲ್‌ (Viral Video) ಆಗುತ್ತಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ, ಹಲವರು ಫೋಟೋ, ವಿಡಿಯೋ ನೋಡಿಯೇ ಬೆಚ್ಚಿ ಬಿದ್ದಿದ್ದಾರೆ. 

ತನ್ನ ಮುದ್ದಿನ ನಾಯಿಗಳನ್ನು ಕರೆದುಕೊಂಡು ಹೋದಂತೆ ಕಾಡಿನಲ್ಲಿ 3 ಸಿಂಹಗಳನ್ನು ಕರೆದುಕೊಂಡು ಅದರ ಹಿಂದೆ ಮಹಿಳೆ ನಡೆದುಕೊಂಡು ಹೋಗುವುದನ್ನು ಈ ವಿಡಿಯೋ ಕ್ಲಿಪ್‌ ತೋರಿಸುತ್ತದೆ. ಅಲ್ಲದೆ, ಈ ಸಿಂಹಗಳು ಸಹ ಆ ಮಹಿಳೆಯೊಂದಿಗೆ ಆರಾಮದಾಯಕವಾಗೇ ಇದ್ದು, ಆಕೆಯತ್ತ ಯಾವುದೇ ರೋಷ - ಆವೇಶ ತೋರಿಸುತ್ತಿಲ್ಲ. 

ಇದನ್ನು ಓದಿ: Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..!

ಇನ್ನು, ಜೆನ್‌ ಅವರ ಸಾಮಾಜಿಕ ಜಾಲತಾಣದಲ್ಲಿ ಕಾಡು ಪ್ರಾಣಿಗಳ ಫೋಟೋ ಮತ್ತು ವಿಡಿಯೋಗಳಿಂದ ತುಂಬಿದ್ದು, ಇದರೊಂದಿಗೆ ಮಹಿಳೆ ಸಹ ಇರುವುದು ಅಚ್ಚರಿಯೇ ಸರಿ. ಇತ್ತೀಚೆಗೆ ವೈರಲ್‌ ಆಗುತ್ತಿರುವ ಈ ವಿಡಿಯೋದಲ್ಲೂ ಜೆನ್‌ನೊಂದಿಗೆ 3 ದೊಡ್ಡ ಸಿಂಹಗಳು ಕಾಡಿನಲ್ಲಿ ನಡೆಯುವುದನ್ನು ತೋರಿಸುತ್ತದೆ. ಹಾಗೂ,, ಕಾಡುಮೃಗಗಳ ಕಾಟದಿಂದ ಮಹಿಳೆ ಹೆದರುವುದಿಲ್ಲ ಎನ್ನುವುದನ್ನೂ ತೋರಿಸುತ್ತದೆ.

ನಿಮಗೆ ಈಗಲೂ ನಂಬಿಕೆ ಬರುತ್ತಿಲ್ಲವೇ, ವಿಡಿಯೋವನ್ನು ನೀವೇ ನೋಡಿ..

 
 
 
 
 
 
 
 
 
 
 
 
 
 
 

A post shared by Jen (@girlfromparadise9)

ಈ ವೀಡಿಯೊವನ್ನು ನವೆಂಬರ್ 12 ರಂದು ಪೋಸ್ಟ್ ಮಾಡಲಾಗಿದೆ ಮತ್ತು ಅಂದಿನಿಂದ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಕ್ಲಿಪ್ 3 ಲಕ್ಷ 12 ಸಾವಿರಕ್ಕೂ ಹೆಚ್ಚು ಲೈಕ್‌ ಗಳಿಸಿದ್ದು,   6 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ.

ಇದನ್ನೂ ಓದಿ: ಕಟ್ಟಡದ ತುದಿಯಲ್ಲಿದ್ದ ಜೇನುಗೂಡಿನ ಮೇಲೆ ಹಕ್ಕಿಯ ದಾಳಿ: ವೈರಲ್ ವಿಡಿಯೋ

ಇನ್ನು, ಈ ವಿಡಿಯೋಗೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬಂದಿದೆ. ಒಬ್ಬ ಬಳಕೆದಾರರು "ಅವಳು ಈ ಮೂವರಿಗೂ ತುಂಬಾ ವಿಶೇಷವಾದ ಮಾನವನಾಗಿರಬೇಕು, ಆಕೆಯೊಂದಿಗೆ ನಡೆಯಲು ಸಿಂಹಗಳು ಅವಕಾಶ ಮಾಡಿಕೊಟ್ಟಿವೆ’’ ಎಂದು ಬರೆದಿದ್ದಾರೆ.

ಹಾಗೆ, ಇನ್ನೊಬ್ಬರು ಬಳಕೆದಾರರು ಅವು ನಿಮ್ಮನ್ನು ನಂಬುತ್ತವೆ. ನಿಮ್ಮನ್ನೂ ಅವರಲ್ಲಿ ಒಬ್ಬರಂತೆ ಪರಿಗಣಿಸಿ ಹೆಮ್ಮೆಯಿಂದ ನಡೆಯುವುದು ದೇವರಿಗೆ ಮುಂದಿನ ಹಂತವಾಗಿದೆ ಎಂದು ಕಮೆಂಟ್‌ ಮಾಡಿದ್ದಾರೆ. ಹಾಗೂ, ಮೂರನೆಯ ಬಳಕೆದಾರರು, "ಬಹಳ ಧೈರ್ಯಶಾಲಿ. ನೀವು ಸಿಂಹವನ್ನು ಪಳಗಿಸಬಹುದು. ಆದರೆ ಅವುಗಳು ಇನ್ನೂ ಪ್ರಾಣಿ ಪ್ರವೃತ್ತಿಯನ್ನು ಹೊಂದಿವೆ ಮತ್ತು ಪಳಗಿದ ಹುಲಿ ಹಾಗೂ ಅವನ ತರಬೇತುದಾರ ಮಾಂತ್ರಿಕನಂತೆ. ಯಾವುದೇ ಕ್ಷಣದಲ್ಲಿ ಆ ಸಿಂಹಗಳು ತಿರುಗಿ ಬೀಳಬಹುದು ಮತ್ತು 1 ಸೆಕೆಂಡಿನಲ್ಲಿ ನಿಮ್ಮನ್ನು ಅರ್ಧ ಸೀಳಬಹುದು. ಅರ್ಧ ಧೈರ್ಯ ಅರ್ಧ ಮೂರ್ಖತನ" ಎಂದು ಮಹಿಳೆಯ ಈ ವಿಡಿಯೋಗೆ ವಿರೋಧ ವ್ಯಕ್ತಪಡಿಸಿದ್ದಾರೆ. 

"ಒಂದು ಕಾರಣಕ್ಕಾಗಿ ಕಾಡು ಪ್ರಾಣಿಗಳು ನಮ್ಮೊಂದಿಗೆ ವಾಸಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಅವು ಪ್ರಚೋದನೆಗೆ ಒಳಗಾಗದೆಯೂ ಹಿಂಸಾತ್ಮಕವಾಗಬಹುದು" ಎಂದು ನಾಲ್ಕನೆಯವರು ಆ ಮಹಿಳೆಗೆ ಎಚ್ಚರಿಕೆ ನೀಡಿದ್ದಾರೆ. 
ಇದನ್ನೂ ಓದಿ: ಸೋನೆ ಮಳೆ ಮಧ್ಯೆ ತಾತನ ಸೈಕಲ್ ಸ್ಟಂಟ್: ಕೈ ಬಿಟ್ಟು ಸೈಕಲ್ ಓಡಿಸುವ ಅಜ್ಜ

Follow Us:
Download App:
  • android
  • ios