Asianet Suvarna News Asianet Suvarna News

ಕ್ಯಾನ್ಸರ್ ಪೀಡಿತ ಮಹಿಳೆ ಹಾಗೂ ಶ್ವಾನದ ಭಾವುಕ ಪುನರ್ಮಿಲನ: ವಿಡಿಯೋ

  • 40 ದಿನಗಳ ಬಳಿಕ ತನ್ನ ಪ್ರೀತಿಯ ಶ್ವಾನವನ್ನು ಭೇಟಿ ಮಾಡಿದ ಮಹಿಳೆ
  • ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆ ಮರಿಯಾ
  • ಒಡತಿಯನ್ನು ನೋಡುತ್ತಿದ್ದಂತೆ ಸಂತಸದಿಂದ ಮುದ್ದಾಡಿದ ಶ್ವಾನ
video of a cancer patient reuniting with her pet dog akb
Author
Bangalore, First Published Mar 11, 2022, 12:25 PM IST | Last Updated Mar 11, 2022, 12:25 PM IST

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾನ್ಸರ್‌  ಪೀಡಿತ ಮಹಿಳೆಯೊಬ್ಬರು ಧೀರ್ಘಕಾಲದ ಬಳಿಕ ತನ್ನ ಶ್ವಾನವನ್ನು ಭೇಟಿಯಾಗಿದ್ದು, ಈ ವೇಳೆ ತುಂಬಾ ದಿನಗಳ ನಂತರ ತನ್ನ ಒಡತಿಯನ್ನು ನೋಡಿದ ಶ್ವಾನದ ಸಂತಸಕ್ಕೆ ಪಾರವೇ ಇಲ್ಲದಾಗಿದೆ. ತನ್ನ ಒಡತಿಯನ್ನು ನೋಡಿದ ಕೂಡಲೇ ಶ್ವಾನ ಆಕೆಯ ಮೇಲೆ ಹತ್ತಿ ಮುಖ ಕಿವಿ ಕೆನ್ನೆಯನ್ನೆಲ್ಲಾ ನಾಲಗೆಯಿಂದ ನೆಕ್ಕಿ ತನ್ನ ಪ್ರೀತಿಯನ್ನು ತೋರಿಸುತ್ತಿದೆ. ಈ ವಿಡಿಯೋ ನೋಡುಗರ ಹೃದಯ ತುಂಬಿ ಬರುವಂತೆ ಮಾಡುತ್ತಿದೆ. 

ಪ್ರಾಣಿಗಳಿಲ್ಲದ ಜಗತ್ತು ಎಂದಿಗೂ ಅಪೂರ್ಣವೇ ಈ ಮಾತನ್ನು ಎಂದಿಗೂ ತಿರಸ್ಕರಿಸಲಾಗದು. ನೀವೇನಾದರೂ ಶ್ವಾನ ಅಥವಾ ಇತರ ಸಾಕುಪ್ರಾಣಿಗಳನ್ನು ಹೊಂದಿದ್ದರೆ ನಿಮಗೆ ಅವುಗಳ ಯಾವುದೇ ‍ಷರತ್ತು ಇಲ್ಲದ ಸ್ವಾರ್ಥವಿಲ್ಲದ ಪ್ರೀತಿಯ ಅನುಭವ ಆಗಿರಬಹುದು. ಈ ಭಾವುಕ ವಿಡಿಯೋ ಪ್ರಾಣಿ ಪ್ರೀತಿಗೆ ಒಂದು ಅತ್ಯುತ್ತಮ ನಿದರ್ಶನವಾಗಿದೆ. 

 

ಆಸ್ಪತ್ರೆಗೆ ದಾಖಲಾದ  40 ದಿನಗಳ ಬಳಿಕ ನರ್ಸ್‌ ಕ್ಯಾನ್ಸರ್ ಪೀಡಿತ ಮರಿಯಾ(Maria) ಅವರನ್ನು ವೀಲ್‌ಚೇರ್‌ನಲ್ಲಿ ಕೂರಿಸಿಕೊಂಡು ಈಗಾಗಲೇ ಆಸ್ಪತ್ರೆ ಮುಂದೆ ಆಕೆಗಾಗಿ ಕಾಯುತ್ತ ನಿಂತಿರುವ ಶ್ವಾನದ ಬಳಿ ಕರೆದುಕೊಂಡು ಬರುತ್ತಾರೆ. ಈ ವೇಳೆ ಅಮೊರಾ(Amora) ಹೆಸರಿನ ಶ್ವಾನ ಒಡತಿ ಮರಿಯಾಳತ್ತ ಬಂದು ಆಕೆಯನ್ನು ಮುದ್ದಾಡುತ್ತದೆ. ತನ್ನ ಖುಷಿಯನ್ನು ಕಂಟ್ರೋಲ್‌ ಮಾಡಲಾಗದ ಶ್ವಾನ ಆಕೆಯ ಮೇಲೇರಿ ಆಕೆಯ ಕೆನ್ನೆ, ಮೊಗ, ಕಿವಿಯನ್ನೆಲ್ಲಾ ಮೂಸಿ ನೆಕ್ಕಿ ಆಕೆಯನ್ನು ಪ್ರೀತಿ ಮಾಡುತ್ತದೆ. ಈ ವೇಳೆ ಶ್ವಾನದ ಪ್ರೀತಿಯನ್ನು ನೋಡಿ ಮರಿಯಾ ಕೂಡ ಬಿಕ್ಕಳಿಸುತ್ತಾರೆ. ಸಂತೋಷ ಹಾಗೂ ಭಾವುಕರಾಗುವ ಅವರು ಬಿಕ್ಕಳಿಸುತ್ತಾರೆ. 

ಕ್ಯಾನ್ಸರ್‌ ವಿರುದ್ಧ ಗೆದ್ದು 52ನೇ ವಯಸ್ಸಿನಲ್ಲಿ ಮರು ಮದುವೆ... ಅಮ್ಮನ ನಿರ್ಧಾರ ಶ್ಲಾಘಿಸಿದ ಪುತ್ರ
ಮರಿಯಾ 40 ದಿನಗಳಿಂದ ಆಸ್ಪತ್ರೆಯಲ್ಲಿ ಇದ್ದು, ಕ್ಯಾನ್ಸರ್‌ಗೆ(cancer) ಚಿಕಿತ್ಸೆಯ ಜೊತೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದಾಗಿ ಕೆಲ ದಿನಗಳ ನಂತರ ಮರಿಯಾ ತಮ್ಮ ಪ್ರೀತಿಯ ಶ್ವಾನವನ್ನು ಭೇಟಿಯಾದ ಕ್ಷಣದ ವಿಡಿಯೋ ಇದಾಗಿದೆ. ಪ್ರಸ್ತುತ ಮರಿಯಾ ಕ್ಯಾನ್ಸರ್‌ನಿಂದ ಮುಕ್ತರಾಗಿದ್ದಾರೆ. ಈ ವಿಡಿಯೋವನ್ನು 15 ಸಾವಿರಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. 

ಕುಟುಂಬದಲ್ಲಿ cancer ಇತಿಹಾಸ ಇದ್ರೆ, ಈ 5 ಆಹಾರದಿಂದ ದೂರವೇ ಇರಿ
 

ಶ್ವಾನಗಳು ಹಾಗೂ ಮನುಷ್ಯರ ನಡುವಿನ ಸಂಬಂಧ ತುಂಬಾ ಅವಿನಾಭಾವವಾಗಿದ್ದು, ಇದನ್ನು ವ್ಯಕ್ತಪಡಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ವೈರಲ್ ಆಗಿವೆ. ಅಮ್ಮನ ಸಾವಿನ ನಂತರ ಒಂಟಿಯಾದ ಅಪ್ಪನಿಗೆ ಮಕ್ಕಳು ಶ್ವಾನವೊಂದನ್ನು ಉಡುಗೊರೆ ನೀಡಿದ್ದು ಆ ಶ್ವಾನದೊಂದಿಗೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ವೃದ್ಧನ ವಿಡಿಯೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. 

ಹೌದು ವಾಸ್ತವತೆಯನ್ನು ಚೆನ್ನಾಗಿ ಅರಿತ ಮಕ್ಕಳು ಅಮ್ಮನ ಸಾವಿನ ನಂತರ ಒಂಟಿಯಾದ ಅಪ್ಪನಿಗೆ ಶ್ವಾನವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ವೃದ್ಧನ ಒಂಟಿತನವನ್ನು ನಿವಾರಿಸುವುದರ ಜೊತೆ ಮಕ್ಕಳಂತೆ ಆಟವಾಡುತ್ತಾ ಆತನನ್ನು ಖುಷಿಪಡಿಸುತ್ತಿದೆ. ವೃದ್ಧ ವ್ಯಕ್ತಿಯೂ ಕೂಡ ಶ್ವಾನದೊಂದಿಗೆ ತುಂಬಾ ಖುಷಿಯಾಗಿ ಸಮಯ ಕಳೆಯುತ್ತಿದ್ದು, ಮಕ್ಕಳಂತೆ ಶ್ವಾನದೊಂದಿಗೆ ಆಟವಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೋಡುಗರ ಕಣ್ಣಲ್ಲಿ ನೀರು ತರಿಸುತ್ತಿದೆ. 

ವೃದ್ಧಾಪ್ಯ ಎಂಬುದು ಒಡನಾಟವನ್ನು ಬಯಸುತ್ತದೆ. ಮೊದಲೆಲ್ಲಾ ಕೂಡು ಕುಟುಂಬವಿತ್ತು, ಮಕ್ಕಳು ದೊಡ್ಡವರೆಂದು ಮನೆ ತುಂಬಾ ಜನರಿರುತ್ತಿದ್ದರು. ಪತಿ ಅಥವಾ ಪತ್ನಿ ಮೊದಲೇ ತೀರಿದ್ದರೂ ಯಾರಿಗೂ ಒಂಟಿತನ ಕಾಡುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ಮನೆಗೊಬ್ಬ ಮಗನೋ ಮಗಳೋ ಇದ್ದು ಅವರು ಕೂಡ ಉದ್ಯೋಗ ಶಿಕ್ಷಣ ಎಂದು ಮಹಾನಗರಗಳಲ್ಲಿ ನೆಲೆಯಾಗುತ್ತಾ ಪೋಷಕರಿಂದ ದೂರವೇ ಇರುತ್ತಾರೆ. ಹೀಗಾಗಿ ಇಂದು ಪತಿ ಅಥವಾ ಪತ್ನಿ ಇಲ್ಲದ ಅನೇಕ ವಯೋವೃದ್ಧರಿಗೆ ಒಂಟಿತನ ಕಾಡುತ್ತಿರುತ್ತದೆ. ಇದೇ ಕಾರಣಕ್ಕೆ ಇಲ್ಲೊಂದು ಕಡೆ ಮಕ್ಕಳು ಈ ಹೊಸ ಉಪಾಯ ಮಾಡಿದ್ದಾರೆ. 

Latest Videos
Follow Us:
Download App:
  • android
  • ios