ವಿಷಪೂರಿತ ಹಾವನ್ನು ಸತತ ಒಂದು ವರ್ಷ ಬಂಧನ ಜಾರಿನ ಮುಚ್ಚಳ ತೆರೆದು ನೋಡಿದಾಗ ಅಚ್ಚರಿ, ಆಘಾತ ಆಹಾರವಿಲ್ಲದೆ ಒಂದು ವರ್ಷ ಡಬ್ಬದಲ್ಲಿತ್ತು ಹಾವು

ಬೀಜಿಂಗ್(ಮೇ.02): ಬಿಲದೊಳಗೆ ಹಾವು ಅದೆಷ್ಟು ವರ್ಷವಾದರೂ ಇರಬಲ್ಲದು. ಆದರೆ ಮುಚ್ಚಿದ ಗಾಜಿನ ಜಾರಿನೊಳಗೆ ಆಹಾರ, ಗಾಳಿ ಯಾವುದೂ ಇಲ್ಲದೆ ಇರಲು ಸಾಧ್ಯವೇ? ಸಾಧ್ಯ ಅನ್ನೋದು ಸಾಬೀತಾಗಿದೆ. ಕಳೆದ ಒಂದು ವರ್ಷದಿಂದ ವಿಷಪೂರಿತ ಹಾವನ್ನು ಗಾಜಿನ ಜಾರಿನಲ್ಲಿ ಭದ್ರವಾಗಿ ಮುಚ್ಚಿ ಇಡಲಾಗಿತ್ತು. ಒಂದು ವರ್ಷದ ಬಳಿಕ ತೆರೆದಾಗ ಆಘಾತ ಎದುರಾಗಿದೆ. ಕಾರಣ ಮುಚ್ಚಳ ತೆರೆಯುತ್ತಿದ್ದಂತೆ ಹಾವು ಆತನ ಕೈಗೆ ಕಚ್ಚಿದ ಘಟನೆ ನಡೆದಿದೆ.

ಚೀನಾದ ಹೇಲಿಯಾಂಗ್‌ಜಿಯಾಂಗ್‌ನಲ್ಲಿ ಈ ಘಟನೆ ನಡೆದಿದೆ. ತನ್ನ ಮಗನ ದೀರ್ಘಕಾಲದ ಅನಾರೋಗ್ಯದ ಚಿಕಿತ್ಸೆಗಾಗಿ ತಂದೆ ವಿಷಪೂರಿತ ಹಾವನ್ನು ಜಾರಿನೊಳಗೆ ಇಡಲಾಗಿತ್ತು. ಗಾಜಿನ ಜಾರಿನೊಳಗೆ ಮೆಡಿಸಿನಲ್ ವೈನ್ ಹಾಕಿ ಅದರೊಳಗೆ ಹಾವನ್ನು ಮುಳುಗಿಸಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗಿತ್ತು.

ಬೃಹತ್‌ ವಿಷ ಸರ್ಪವನ್ನು ಬರಿಗೈಲಿ ಹಿಡಿದ ಬಹದ್ದೂರ್‌ ಹೆಣ್ಣು: ವಿಡಿಯೋ ವೈರಲ್‌

ಈ ಹಾವಿನಿಂದ ಬೇರ್ಪಡುವ ಕೆಲ ಅಂಶಗಳನ್ನು ತೆಗೆದು ಚಿಕಿತ್ಸೆ ನೀಡಲು ಈ ರೀತಿ ಮಾಡಲಾಗಿತ್ತು. ಒಂದು ವರ್ಷದಿಂದ ಔಷಧಿಯ ನೀರಿನಲ್ಲಿ ಮುಳುಗಿ ಹಾಗೂ ಯಾವುದೇ ಗಾಳಿ, ಆಹಾರವಿಲ್ಲದೆ ಗಾಜಿನ ಜಾರಿನಲ್ಲಿದ್ದ ಹಾವು ಮಚ್ಚಳ ತೆರೆಯುತ್ತಿದ್ದಂತೆ ತನ್ನ ಒಂದು ವರ್ಷದ ಆಕ್ರೋಶವನ್ನು ಹೊರಹಾಕಿದೆ. ನೇರವಾಗಿ ಆತನ ಕೈಗೆ ಕಚ್ಚಿದೆ.

ಇದು ವಿಷಪೂರಿತ ಹಾವಾಗಿರುವ ಕಾರಣ ತಕ್ಷಣವೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ. ಮಗನ ಆರೋಗ್ಯಕ್ಕಾಗಿ ಕಸರತ್ತು ಮಾಡಿದ ತಂದೆ ಇದೀಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ಮಾಡುವಂತಾಗಿದೆ.

ಅಬ್ಬಬ್ಬಾ... ಪ್ರೇಮಿ ಮುಂದೆಯೇ ಕಾಳಿಂಗ ಸರ್ಪಕ್ಕೆ ಕಿಸ್‌ ಕೊಟ್ಟ ಗಟ್ಟಿಗಿತ್ತಿ ಮಹಿಳೆ!

100 ಹಾವು ಸಾಕಿದ್ದ ವ್ಯಕ್ತಿ ಹಾವಿನ ಕಡಿತದಿಂದಲೇ ಸಾವು!
100ಕ್ಕೂ ಹೆಚ್ಚು ಹಾವುಗಳನ್ನು ಮನೆಯಲ್ಲಿ ಸಾಕಿಕೊಂಡಿದ್ದ ಮೇರಿಲ್ಯಾಂಡ್‌ನ ವ್ಯಕ್ತಿಯೋರ್ವ ತಾನು ಸಾಕಿದ್ದ ವಿಷಪೂರಿತ ಹಾವು ಕಚ್ಚಿದ್ದರಿಂದಲೇ ಮೃತಪಟ್ಟಘಟನೆ ಅಮೆರಿಕದಲ್ಲಿ ನಡೆದಿದೆ. ಈತ ವಿಷಪೂರಿತ ಹಾವುಗಳಾದ ನಾಗರಹಾವು, ಕಪ್ಪು ಮಾಂಬಾ, ರಾರ‍ಯಟ್‌ ಸ್ನೇಕ್‌ಗಳು ಸೇರಿದಂತೆ ಸುಮಾರು 124 ಹಾವುಗಳನ್ನು ಮನೆಯಲ್ಲೇ ಸಾಕಿಕೊಂಡಿದ್ದ. ಈತ ಹಾವು ಕಚ್ಚಿದ್ದರಿಂದಲೇ ಮೃತಪಟ್ಟಿದ್ದಾನೆ ಎಂದು ಚಾರ್ಲ್ಸ್ನ ವೈದ್ಯಾಧಿಕಾರಿಗಳು ಖಚಿತ ಪಡಿಸಿದ್ದಾರೆ. ಶವ ಪರೀಕ್ಷೆಯ ಸಮಯದಲ್ಲಿ ಮನೆಯ ತುಂಬಾ ಹಾವುಗಳಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಾವಿನೊಂದಿಗೆ ಮದುವೆ ಮನೇಲಿ ನಾಗೀನ್‌ ಡ್ಯಾನ್ಸ್‌: ಐವರ ಬಂಧನ
ಮದುವೆ ಮೆರವಣಿಗೆ ಸಮಯದಲ್ಲಿ ‘ಮೈ ನಾಗಿನ್‌’ ಹಾಡಿಗೆ ನೃತ್ಯ ಮಾಡಲು, ನಿಜವಾದ ಹಾವು ಬಳಕೆ ಮಾಡಿದ ಘಟನೆ ಒಡಿಶಾದ ಮಯೂರ್‌ಭಂಜ್‌ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ 5 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಲ್ಲಿ ಭಾಗವಹಿದ್ದ ಕೆಲವರು ನಾಗರಹಾವನ್ನು ಹಿಡಿದುಕೊಂಡು ರಸ್ತೆಯಲ್ಲೆಲ್ಲಾ ನರ್ತಿಸಿದ್ದಾರೆ. ಇದು ನೋಡುಗರನ್ನು ಅಚ್ಚರಿಗೊಳಿಸಿದೆ. ಈ ಕುರಿತಾಗಿ ಸ್ಥಳೀಯರು ಅರಣ್ಯ ಇಲಾಖೆಗೆ ದೂರು ನೀಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.

ಏರ್‌ ಏಷ್ಯಾ ವಿಮಾನದಲ್ಲಿ ಹಾವು: ಪ್ರಯಾಣಿಕರು ಕಕ್ಕಾಬಿಕ್ಕಿ!
ಮಲೇಷ್ಯಾದ ಕೌಲಾಲಂಪುರದಿಂದ ತÊೌಕ್ಕೆ ಹೊರಟ ಏರ್‌ ಏಷ್ಯಾ ವಿಮಾನದ ಓವರ್‌ಹೆಡ್‌ ಲೈಟ್‌ಗಳಲ್ಲಿ ಹಾವು ಹರಿದಾಡುತ್ತಿದ್ದು ಕಂಡುಬಂದಿದೆ. ಕೂಡಲೇ ವಿಮಾನದ ಮಾರ್ಗವನ್ನು ಬದಲಾಯಿಸಿ ಕುಚಿಂಗ್‌ನಲ್ಲಿ ತುರ್ತಾಗಿ ಇಳಿಸಲಾಗಿದೆ. ವಿಮಾನದಲ್ಲಿರುವ ಎಲ್ಲ ಪ್ರಯಾಣಿಕರೂ ಸುರಕ್ಷಿತವಾಗಿದ್ದಾರೆ. ಹಾವು ಎಲ್ಲಿಂದ ಬಂದಿದೆ ಎಂದು ನಿಖರವಾಗಿ ಹೇಳಲಾಗದಿದ್ದರೂ ಪ್ರಯಾಣಿಕರ ಬ್ಯಾಗ್‌ಗಳಿಂದಲೇ ಬಂದಿರಬೇಕು ಎಂದು ವಿಮಾನ ಸಿಬ್ಬಂದಿ ಶಂಕಿಸಿದ್ದಾರೆ. ವಿಮಾನದಲ್ಲಿ ಹಾವು ಹರಿದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.