Asianet Suvarna News Asianet Suvarna News

ಕೊರೋನಾ ಬಳಿಕ ಚೀನಾ- ಅಮೆರಿಕ ಸಮುದ್ರ ಸಮರ!

ಕೊರೋನಾ ಬಳಿಕ ಚೀನಾ- ಅಮೆರಿಕ ಸಮುದ್ರ ಸಮರ| ದಕ್ಷಿಣ ಚೀನಾ ಸಮುದ್ರದ ಮೇಲೆ ಹಕ್ಕು ಸಾಧಿಸುವ ಚೀನಾ ಯತ್ನಕ್ಕೆ ಅಮೆರಿಕ ಗರಂ| ವಿವಾದಿತ ಪ್ರದೇಶಕ್ಕೆ 3 ಯುದ್ಧ ವಿಮಾನ ರವಾನಿಸಿದ ಅಮೆರಿಕ

US Sends Warships on Patrol Near South China Sea Standoff
Author
Bangalore, First Published May 11, 2020, 8:49 AM IST

ನ್ಯೂಯಾರ್ಕ್(ಮೇ.11): ಇಡೀ ವಿಶ್ವ ಕೊರೋನಾ ಸೋಂಕಿನ ಹೋರಾಡುತ್ತಿರುವಾಗಲೇ, ಇತ್ತ ವ್ಯಾಧಿಯಿಂದ ಚೇತರಿಸಿಕೊಂಡಿರುವ ಚೀನಾ, ದಕ್ಷಿಣ ಚೀನಾ ಸಮುದ್ರದ ಮೇಲಿನ ತನ್ನ ಹಕ್ಕು ಸ್ಥಾಪಿಸುವ ಯತ್ನವನ್ನು ಬಲಗೊಳಿಸಿದೆ. ಆದರೆ ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಮೆರಿಕ, ವಿವಾದಿತ ಪ್ರದೇಶಕ್ಕೆ 3 ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ ಚೀನಾಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಕೊರೋನಾ ವೈರಸ್‌ ಉಗಮವಾದ ಸ್ಥಳಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವೆ ತೀವ್ರ ವಾಕ್ಸಮರ, ತೆರಿಗೆ ಸಮರ ಆರಂಭವಾಗಿರುವ ಹೊತ್ತಿನಲ್ಲೇ ಈ ಹೊಸ ಜಟಾಪಟಿ ಆರಂಭವಾಗಿರುವುದು ಕಳವಳಕ್ಕೆ ಕಾರಣವಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಚೀನಾದ ಕೈಗೊಂಬೆ; ಮತ್ತೊಂದು ಶಾಕ್‌ನೀಡಲು ಸಜ್ಜಾದ ಟ್ರಂಪ್

ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದವಾದ ದಕ್ಷಿಣ ಚೀನಾ ತನಗೆ ಸೇರಿದ್ದು ಎಂಬುದು ಚೀನಾ ವಾದ. ಆದರೆ ಇದಕ್ಕೆ ಈ ವಲಯವನ್ನು ಸರಕು ಸಂಚಾರಕ್ಕೆ ನಂಬಿಕೊಂಡಿರುವ ಬಹುತೇಕ ದೇಶಗಳು ವಿರೋಧಿಸುತ್ತಿವೆ. ಇದರ ಹೊರತಾಗಿಯೂ ಚೀನಾ ಆ ಪ್ರದೇಶದ ಮೇಲೆ ಹಕ್ಕು ಸಾಧಿಸುವ ತನ್ನ ಯತ್ನ ಬಿಟ್ಟಿಲ್ಲ. ಜೊತೆಗೆ ಇತ್ತೀಚೆಗೆ ವಿವಾದಿತ ಪ್ರದೇಶದಲ್ಲಿ 2 ಆಡಳಿತಾತ್ಮಕ ಜಿಲ್ಲೆಗಳನ್ನು ಘೋಷಿಸಿದೆ. ಈ ಮೂಲಕ ತೈಲ ಸಂಪದ್ಭರಿತ, ಖನಿಜ ಸಂಪದ್ಭರಿತ ಪ್ರದೇಶಗಳ ಮೇಲೆ ಹಕ್ಕು ಸಾಧಿಸುವ ಯತ್ನ ಮಾಡಿದೆ. ಇದಕ್ಕೆ ಫಿಲಿಪ್ಪೀನ್ಸ್‌, ವಿಯೆಟ್ನಾಂ, ತೈವಾನ್‌ ಸೇರಿದಂತೆ ಹಲವು ದೇಶಗಳು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿವೆ.

ಅಮೆರಿಕ ವಿರುದ್ಧ ಚೀನಾ ಕರೆನ್ಸಿ ವಾರ್‌!

ಈ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರವು ತಕ್ಷಣವೇ ವಿವಾದಿತ ಪ್ರದೇಶಕ್ಕೆ ಮೂರು ಯುದ್ಧ ವಿಮಾನಗಳನ್ನು ರವಾನಿಸುವ ಮೂಲಕ, ಚೀನಾದ ಯತ್ನಕ್ಕೆ ತಡೆಯೊಡ್ಡುವ ಯತ್ನ ಮಾಡಿದೆ. ಒಂದು ವೇಳೆ ಈ ಬಿಕ್ಕಟ್ಟು ಇತ್ಯರ್ಥವಾಗದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಇದು ಯುದ್ಧಕ್ಕೆ ಕಾರಣವಾದರೂ ಅಚ್ಚರಿ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ.

Follow Us:
Download App:
  • android
  • ios