ಒಂದೆಡೆ ಪಾಕಿಸ್ತಾನದ ಸರ್ಕಾರಕ್ಕೆ ಸೇನಾ ನೆರವು ನೀಡುವ ಮೂಲಕ ಭಾರತದ ಆಕ್ರೋಶಕ್ಕೆ ತುತ್ತಾಗಿರುವ ನಡುವೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಿಕೆ ನೀಡಿದ್ದಾರೆ. 

ನವದೆಹಲಿ (ಅ.15): ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ಒಂದೆಡೆ ಪಾಕಿಸ್ತಾನದ ಸೇನೆಗೆ ಎಫ್‌16 ನಿವರ್ಹಣೆಗಳಗಾಗಿ ಮಿಲಿಯನ್‌ಗಟ್ಟಲೆ ಆರ್ಥಿಕ ನೆರವು ನೀಡಿದ್ದಕ್ಕಾಗಿಭಾರತದಿಂದ ತೀವ್ರ ಆಕ್ರೋಶಕ್ಕೆ ತುತ್ತಾಗಿರುವ ಅಮೆರಿಕ, ಈಗ ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ ಎಂದು ಹೇಳಿದೆ. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್ ಪಾಕಿಸ್ತಾನವನ್ನು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದು ಎಂದು ಹೇಳಿಕೆ ನೀಡಿದ್ದಾರೆ. ಶುಕ್ರವಾರ ನಡೆದ ಕಾಂಗ್ರೆಷನಲ್ ಕ್ಯಾಂಪೇನ್ ಕಮಿಟಿ ಸ್ವಾಗತದ ವೇಳೆ ಡೆಮಾಕ್ರಟಿಕ್ ಅಧ್ಯಕ್ಷರ ಭಾಷಣವನ್ನು ಶ್ವೇತಭವನದ ಹೇಳಿಕೆ ಉಲ್ಲೇಖಿಸಿದೆ. ನನ್ನ ಪ್ರಕಾರ ಬಹುಶಃ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೇ ಒಂದಾಗಿದೆ. ಈ ದೇಶವು ಯಾವುದೇ ಒಗ್ಗಟ್ಟು ಇಲ್ಲದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಬಿಡೆನ್‌ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ನಡೆಯುತ್ತರುವ ರಷ್ಯಾ-ಉಕ್ರೇನ್ ಸಂಘರ್ಷ ಮತ್ತು ಅದು ಜಗತ್ತಿನ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದರ ಕುರಿತು ಮಾತನಾಡುವಾಗ ಯುಎಸ್ ಅಧ್ಯಕ್ಷರು ಸ್ವಾಗತ ಸಮಾರಂಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವೇಳೆ ಅವರು ಇತರ ದೇಶಗಳೊಂದಿಗೆ ವಾಷಿಂಗ್ಟನ್‌ನ ಸಂಬಂಧಗಳ ಬಗ್ಗೆ ಮಾತನಾಡಿದ್ದರು.

Scroll to load tweet…

ಚೀನಾದೊಂದಿಗಿನ ಅವರ ಸಂಬಂಧದ ಬಗ್ಗೆ ಮಾತನಾಡಿದ ಜೋ ಬಿಡೆನ್, ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಅವರು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಸೇರಿ ಒಟ್ಟಾಗಿ ಕೆಲಸ ಮಾಡುವಂತೆ ನಿಯೋಜಿಸಿದ್ದಾರೆ ಎಂದು ಹೇಳಿದರು. "ನಾನು ಕ್ಸಿ ಜಿನ್‌ಪಿಂಗ್ ಅವರೊಂದಿಗೆ ವಿಶ್ವದ ಯಾವುದೇ ವ್ಯಕ್ತಿಗಿಂತ ಹೆಚ್ಚು ಸಮಯವನ್ನು ಕಳೆದಿದ್ದೇನೆ. ಅಮೆರಿಕದ ಯಾವುದೇ ಅಧ್ಯಕ್ಷ ಅವರೊಂದಿಗೆ ಹೆಚ್ಚಿನ ಸಮಯ ಕಳೆದಿದ್ದ. ಬಹುಶಃ ನಾನು ಅವರೊಂದಿಗೆ ಕಳೆದ ಒಟ್ಟಾರೆ ಗಂಟೆಗಳೂ ನೆನಪಿದೆ ಬಹುಶಃ 78 ಗಂಟೆಗಳು' ಎಂದು ಅವರು ಹೇಳಿದ್ದಾರೆ. ಅದರಲ್ಲಿ 68 ಬಾರಿ ವ್ಯಕ್ತಿಗತವಾಗಿ ಅವರನ್ನು ಕಳೆದ 10 ವರ್ಷದಲ್ಲಿ ಭೇಟಿಯಾಗಿದ್ದಾನೆ. ಯಾಕೆಂದರೆ ಅಧ್ಯಕ್ಷರಾಗಿ ಜಿನ್‌ಪಿಂಗ್‌ ಅವರೊಂದಿಗೆ ಮುಕ್ತ ವ್ಯವಹಾರ ಸಾಧ್ಯವಾಗುವುದಿಲ್ಲ. ಹಾಗಾಗಿ ನನಗೆ ಈ ಕೆಲಸ ನೀಡಿದ್ದರು ಎಂದು ಬಿಡೆನ್‌ ಹೇಳಿದ್ದಾರೆ.

"ಅವರು ತನಗೆ ಬೇಕಾದುದನ್ನು ಮಾತ್ರ ಅರ್ಥಮಾಡಿಕೊಳ್ಳುವ ವ್ಯಕ್ತಿ. ಆದರೆ ಅಲ್ಲಿ ಅಗಾಧವಾದ, ಅಗಾಧವಾದ ಸಮಸ್ಯೆಗಳನ್ನು ಹೊಂದಿದೆ" ಎಂದು ಜೋ ಬಿಡೆನ್ ಕ್ಸಿ ಜಿನ್‌ಪಿಂಗ್ ಬಗ್ಗೆ ಮಾತನಾಡಿದ್ದಾರೆ. ಉಕ್ರೇನ್ ಮೇಲಿನ ರಷ್ಯಾದ (Russia) ಆಕ್ರಮಣದ ಕುರಿತು ಮಾತನಾಡಿದ ಅವರು, ವ್ಲಾಡಿಮಿರ್ ಪುಟಿನ್ ( Vladimir Putin) ಯುದ್ಧತಂತ್ರವಾಗಿ ಪರಮಾಣು ಅಸ್ತ್ರವನ್ನು ಬಳಸಿದರೆ ಜಗತ್ತು "ಆರ್ಮಗೆಡ್ಡೋನ್" ಅನ್ನು ಎದುರಿಸಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಷ್ಯಾ, ಉಕ್ರೇನ್‌ಅನ್ನು (Ukraine) ಪಡೆದುಕೊಳ್ಳುವ ನಿಟ್ಟಿನಲ್ಲಿ ಈ ಆಕ್ರಮಣಗಳನ್ನು ಮಾಡುತ್ತಿಲ್ಲ. ಅವರ ಉದ್ದೇಶ, ನಾರ್ಥ್‌ ಅಟ್ಲಾಂಟಿಕ್ ಒಪ್ಪಂದ ಸಂಸ್ಥೆಯನ್ನು (ನ್ಯಾಟೋ) ವಿಭಜಿಸುವುದು ಎಂದು ಹೇಳಿದ್ದಾರೆ.

Russia Ukraine War: ಉಕ್ರೇನಿಯನ್ನರಿಗೆ 18 ತಿಂಗಳ ಅವಧಿಗೆ ಅಮೆರಿಕಾದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅವಕಾಶ

"ಪುಟಿನ್ ನಿರ್ಧರಿಸಿದ ಒಂದು ವಿಷಯವೆಂದರೆ ನಾವು ನ್ಯಾಟೋವನ್ನು ವಿಭಜಿಸುವುದು. ಇದು ತಮಾಷೆಯಾಗಿ ಹೇಳುತ್ತಿಲ್ಲ. ನ್ಯಾಟೋವನ್ನು (NATO) ವಿಭಜಿಸುವುದು ಅವರ ತಂತ್ರ, ಅದರಲ್ಲಿ ಅವರು ಯಶಸ್ವಿಯೂ ಆಗುತ್ತಿರುವಂತೆ ಕಾಣುತ್ತಿದೆ. ನ್ಯಾಟೋದ ಪೂರ್ವ ಮುಂಭಾಗದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ" ಎಂದು ಜೋ ಬಿಡೆನ್ (Joe Biden) ಕಳವಳ ವ್ಯಕ್ತಪಡಿಸಿದ್ದಾರೆ.

Russia Ukraine War: ಸರ್ವಾಧಿಕಾರಿಗಳು ಬೆಲೆ ತೆರಲಿದ್ದಾರೆ: ಪುಟಿನ್‌ಗೆ ಬೈಡೆನ್‌ ಎಚ್ಚರಿಕೆ!

ಈ ವಾರದ ಆರಂಭದಲ್ಲಿ ಪಾಕಿಸ್ತಾನವನ್ನು ಅಮೆರಿಕದ ಅತ್ಯಂತ ಪ್ರಮುಖ ಮಿತ್ರರಾಷ್ಟ್ರ ಎಂದು ಹೇಳಿದ್ದರೂ, ಯುಎಸ್ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರ 2022 ರಲ್ಲಿ(US National Security Strategy 2022) ಪಾಕಿಸ್ತಾನದ (Pakistan, ) ಹೆಸರು ಇದ್ದಿರಲಿಲ್ಲ.ಭದ್ರತಾ ಕಾರ್ಯತಂತ್ರದಲ್ಲಿ ಚೀನಾವನ್ನು (China) ಅಮೆರಿಕದ ಅತ್ಯಂತ ಪರಿಣಾಮಕಾರಿ ಭೌಗೋಳಿಕ ರಾಜಕೀಯ ಸವಾಲು ಎಂದು ಹೇಳಲಾಗಿತ್ತು.