ಪ್ರಧಾನಿ ಮೋದಿ ಮಾತನಾಡಿಸಲು ಓಡೋಡಿ ಬಂದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ವಿಡಿಯೋ ವೈರಲ್!
- ಜರ್ಮನಿಯ ಮ್ಯೂನಿಚ್‌ನಲ್ಲಿ ನಡೆದ ಜಿ7 ಶೃಂಗಸಭೆ
- ಕೆನಡಾ ಪ್ರಧಾನಿ ಜೊತೆ ಮಾತನಾಡುತ್ತಿದ್ದ ಮೋದಿ
- ಹಿಂಬದಿಯಿಂದ ಬದು ಮೋದಿ ಕೈಕುಲುಕಿ ಶುಭಕೋರಿದ ಬೈಡೆನ್
ಮ್ಯೂನಿಚ್(ಜೂ.27): ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಜರ್ಮನಿ ಪ್ರವಾಸ ಹಲವು ವಿಶೇಷ ಘಟನೆಗಳಿಗೆ ಸಾಕ್ಷಿಯಾಗಿದೆ. ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹುಡುಕಿಕೊಂಡು ಬಂದ ಮಾತನಾಡಿಸಿದ ಘಟನೆ ನಡೆದಿದೆ.
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಹಾರ ಭದ್ರತೆ, ಭಯೋತ್ಪಾದನೆ ನಿಗ್ರಹ, ಪರಿಸರ ಮತ್ತು ಪ್ರಜಾಪ್ರಭುತ್ವ ಕುರಿತು ಮಾತನಾಡಲಿದ್ದಾರೆ. ಸಭೆಗೂ ಮುನ್ನ ಆಹ್ವಾನಿತ ದೇಶದ ನಾಯಕರ ಜೊತೆ ಪ್ರಧಾನಿ ಮೋದಿ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಜೊತೆ ಮಾತನಾಡುತ್ತಿದ್ದ ವೇಳೆ, ಜೋ ಬೈಡೆನ್ ಮೋದಿಯನ್ನು ಹುಡುಕುತ್ತಾ ಬಂದಿದ್ದಾರೆ.
ಪ್ರಜಾಪ್ರಭುತ್ವ ನಮ್ಮ ಹೆಮ್ಮೆ, ಆದರೆ ಸದ್ದಡಗಿಸುವ ಪಯತ್ನ ನಡೆದಿತ್ತು, ಜರ್ಮನಿಯಲ್ಲಿ ಮೋದಿ ಭಾಷಣ
ಮೋದಿ ಹಾಗೂ ಜಸ್ಟಿನ ಟ್ರುಡೋ ಕೈಲುಕುತ್ತಾ ಮಾತನಾಡುತ್ತಿದ್ದಂತೆ ಹಿಂಬಾಗದಿಂದ ಬಂದ ಜೋ ಬೈಡೆನ್ ಮೋದಿಯ ಹೆಗಲು ತಟ್ಟಿ ಕರೆದಿದ್ದಾರೆ. ಅತ್ತ ಜೈ ಬೈಡೆನ್ ನೋಡಿ ಮೋದಿ ಅತೀವ ಸಂತದಿಂದ ಕೈಕುಲುಕಿ ಮಾತನಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಭಾರತ ಬದಲಾಗಿದೆ. ಇದೀಗ ಅಮೆರಿಕ ಅಧ್ಯಕ್ಷರೇ ಪ್ರಧಾನಿ ಮೋದಿಯನ್ನು ಹುಡುಕಿಕೊಂಡು ಬಂದು ಮಾತನಾಡಿಸುವ ಮಟ್ಟಿಗೆ ಭಾರತ ಬದಲಾಗಿದೆ ಎಂದು ಹಲವು ಪ್ರತಿಕ್ರಿಯೆಸಿದ್ದಾರೆ. ಇನ್ನು ಕೆಲವರು ಭಾರತ ವಿಶ್ವ ಗುರು ಎಂದು ಕಮೆಂಟ್ ಮಾಡಿದ್ದಾರೆ.
ಜಿ7 ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಎರಡು ದಿನ ಜರ್ಮನಿ ಪ್ರವಾಸ ಕೈಗೊಂಡಿದ್ದಾರೆ. ಜೂನ್ 26 ಹಾಗೂ 27 ರಂದು ಜರ್ಮನಿಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿರುವ ಮೋದಿ, ಜೂನ್ 28 ಕ್ಕೆ ಯುಎಇಗೆ ಭೇಟಿ ನೀಡಲಿದ್ದಾರೆ. ಬಳಿಕ ಭಾರತಕ್ಕೆ ಹಿಂತಿರುಗಲಿದ್ದಾರೆ.
ಜರ್ಮನಿಯಲ್ಲಿನ ಮೋದಿ ಕಾರ್ಯಕ್ರಮದಲ್ಲಿ ಮೊಳಗಿತು ಕನ್ನಡ ಹಾಡು!
ಜೂನ್ 26 ರಂದು ಪ್ರಧಾನಿ ಮೋದಿ ಮ್ಯೂನಿಚ್‌ನಲ್ಲಿ ಭಾರತೀಯ ಸಮುದಾಯವನ್ನುದ್ದೇಶಿ ಮಾತನಾಡಿದ್ದರು. ಈ ವೇಳೆ ತುರ್ತು ಪರಿಸ್ಥಿತಿ, ಪ್ರಜಾಪ್ರಭುತ್ವ ಹಾಗೂ ಭಾರತದ ಈಗಿನ ಅಭಿವೃದ್ಧಿ ಕುರಿತು ಮಾತನಾಡಿದ್ದರು.
ಇಂದು ಜೂ.26. 47 ವರ್ಷಗಳ ಹಿಂದೆ ಇದೇ ದಿನ ಭಾರತದ ಪ್ರಜಾಪ್ರಭುತ್ವವನ್ನು ದಮನ ಮಾಡುವ ಕೆಲಸ ಮಾಡಲಾಗಿತ್ತು. ಇದು ಭಾರತದ ಇತಿಹಾಸಕ್ಕೇ ಒಂದು ಕಪ್ಪುಚುಕ್ಕೆ. ಆದರೆ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ನಡೆಸಿದ ಎಲ್ಲ ಸಂಚುಗಳಿಗೂ ದೇಶದ ಜನರು ಪ್ರಜಾಪ್ರಭುತ್ವದ ಮಾರ್ಗದಲ್ಲಿಯೇ ಉತ್ತರಿಸಿದ್ದಾರೆ. ನಾವು ಭಾರತೀಯರು. ನಾವೆಲ್ಲಿದ್ದರೂ ನಮ್ಮ ಪ್ರಜಾಪ್ರಭುತ್ವದ ಬಗ್ಗೆ ಹೆಮ್ಮೆ ಪಡುತ್ತೇವೆ. ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ನಾವು ಹೆಮ್ಮೆಯಿಂದ ಹೇಳಬಹುದು. ಸಂಸ್ಕೃತಿ, ಆಹಾರ, ವಸ್ತ್ರ, ಸಂಗೀತ ಹಾಗೂ ಸಂಪ್ರದಾಯದ ವಿಭಿನ್ನತೆ ದೇಶದ ಪ್ರಜಾಪ್ರಭುತ್ವವನ್ನು ಇನ್ನಷ್ಟುರೋಮಾಂಚಕವಾಗಿದೆ’ ಎಂದು ಮೋದಿ ಬಣ್ಣಿಸಿದರು.
ಇದೇ ವೇಳೆ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಕಳೆದ ಶತಮಾನದಲ್ಲಿ ನಡೆದ 3ನೇ ಕೈಗಾರಿಕಾ ಕ್ರಾಂತಿಯ ಲಾಭವನ್ನು ಜರ್ಮನಿ ಮತ್ತಿತರೆ ದೇಶಗಳು ಪಡೆದುಕೊಂಡವು. ಆದರೆ ನಾವಾಗ ಗುಲಾಮರಾಗಿದ್ದ ಕಾರಣ ಅದರ ಲಾಭವನ್ನು ಪಡೆಯಲಾಗಲಿಲ್ಲ. ಆದರೆ 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಭಾರತವು ಹಿಂದುಳಿದಿಲ್ಲ. ಈ ವಿಷಯದಲ್ಲಿ ನಾವು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದೇವೆ’ ಎಂದು ಬಣ್ಣಿಸಿದರು.
‘ಭಾರತದ ಪ್ರತಿ ಹಳ್ಳಿಯೂ ಬಯಲು ಶೌಚ ಮುಕ್ತವಾಗಿದೆ. ಶೇ. 99 ಗ್ರಾಮಗಳಿಗೆ ವಿದ್ಯುತ್ ಹಾಗೂ ಅಡುಗೆ ಅನಿಲ ಸೌಲಭ್ಯ ಲಭಿಸಿದೆ. ಕಳೆದ 2 ವರ್ಷಗಳಲ್ಲಿ 80 ಕೋಟಿಗಿಂತ ಅಧಿಕ ಬಡ ಜನರಿಗೆ ಉಚಿತವಾಗಿ ಸರ್ಕಾರ ಪಡಿತರ ವಿತರಿಸಿದೆ. ಹೀಗೆ ಸಾಧನೆಯ ಪಟ್ಟಿಬಹಳ ಉದ್ದವಾಗಿದೆ. ಸರಿಯಾದ ವೇಳೆಯಲ್ಲಿ ಸರಿಯಾದ ಉದ್ದೇಶದಿಂದ ಒಳ್ಳೆಯ ನಿರ್ಧಾರಗಳನ್ನು ಕೈಗೊಂಡಾಗ ದೇಶ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತದೆ’ ಎಂದರು.