'ಅಂತಾರಾಷ್ಟ್ರೀಯ ಸಂಬಂಧದಲ್ಲಿ ವೋಟ್ ಬ್ಯಾಂಕ್ ರಾಜಕಾರಣ', ಅಮೆರಿಕದ ವರದಿಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ!

ಅಮೆರಿಕ ಮಾಡಿರುವ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ವರದಿಯ ಮೌಲ್ಯಮಾಪನವು, ಪ್ರಚೋದನೆ ಮಾಡಿರುವ ಇನ್ ಪುಟ್ ಹಾಗೂ ಪಕ್ಷಪಾತದ ವಿವರಣೆಗಳನ್ನು ಆಧರಿಸಿದೆ ಎಂದು ಭಾರತ ಸರ್ಕಾರ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದೆ.

India Slams US Report on International Religious Freedom says Vote Bank Politics In International Relations san

ಅಮೆರಿಕ (ಜೂನ್. 3): ಭಾರತದಲ್ಲಿನ ಅಲ್ಪಸಂಖ್ಯಾತರ (Minorities in India) ಮೇಲಿನ ದಾಳಿಗಳ ಕುರಿತು ಅಮೆರಿಕದ (US) ವರದಿಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸರ್ಕಾರ, ಅಮೆರಿಕದ ಹಿರಿಯ ಅಧಿಕಾರಿ ಮಾಡಿರುವ "ಅಸಮರ್ಪಕ ಕಾಮೆಂಟ್‌ಗಳು" ಮತ್ತು ಅಂತರಾಷ್ಟ್ರೀಯ ಸಂಬಂಧಗಳಲ್ಲಿ "ವೋಟ್ ಬ್ಯಾಂಕ್ ರಾಜಕೀಯ" (vote bank politics) ಎಂದು ಆರೋಪಿಸಿದೆ. 

ಇಡೀ ವರದಿಯು "ಪ್ರಚೋದನೆ ಮಾಡಿರುವಂಥ ಇನ್ ಪುಟ್ ಗಳು ಮತ್ತು ಪಕ್ಷಪಾತದ ವಿವರಣೆಗಳ ಮೌಲ್ಯಮಾಪನವನ್ನು ಆಧರಿಸಿದೆ ಎಂದು ಸರ್ಕಾರ ಹೇಳಿದೆ. "ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕದ ವಿದೇಶಾಂಗ ಇಲಾಖೆಯ 2021 ರ ವರದಿಯ ಬಿಡುಗಡೆಯನ್ನು ನಾವು ಗಮನಿಸಿದ್ದೇವೆ ಮತ್ತು ಅಮೆರಿಕದ ಹಿರಿಯ ಅಧಿಕಾರಿಗಳ ಮಾಹಿತಿಯಿಲ್ಲದ ಕಾಮೆಂಟ್‌ಗಳನ್ನು ನಾವು ಗಮನಿಸಿದ್ದೇವೆ. ಅಂತರಾಷ್ಟ್ರೀಯ ಸಂಬಂಧಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯವನ್ನು ಅಭ್ಯಾಸ ಮಾಡುತ್ತಿರುವುದು ದುರದೃಷ್ಟಕರವಾಗಿದೆ. ಯಾರೋ ಹೇಳಿದ್ದನ್ನು ಕೇಳಿಕೊಂಡು ಭಾರತದಂಥ ದೇಶದ ಮೌಲ್ಯಮಾಪನ ಮಾಡುವ ಪಕ್ಷಪಾತದ ದೃಷ್ಟಿಕೋನಗಳನ್ನು ಮಾಡಬಾರದು' ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಭಾಗ್ಚಿ(foreign ministry spokesperson Arindam Bagchi)  ಹೇಳಿದ್ದಾರೆ.

ಭಾರತ ಇತ್ತೀಚೆಗೆ ಬಹುತ್ವದ ಸಮಾಜವಾಗಿ ಬೆಳೆದ ದೇಶವಲ್ಲ, ನಾವು ಮೂಲದಿಂದಲೇ ಬಹುತ್ವದ ಸಮಾಜವನ್ನು ಬೆಳೆಸಿಕೊಂಡವರು. ಈ ದೇಶವು ಧಾರ್ಮಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳಿಗೆ ಅತಿಯಾದ ಮೌಲ್ಯ ನೀಡುತ್ತದೆ. ಅಮೆರಿಕದ ಜೊತೆಗಿನ ನಮ್ಮ ಚರ್ಚೆಗಳಲ್ಲಿ, ಅಮೆರಿಕದಲ್ಲಿ ಆಗುತ್ತಿರುವ ಜನಾಂಗೀಯ ಮತ್ತು ಜನಾಂಗೀಯ ಪ್ರೇರಿತ ದಾಳಿಗಳು, ದ್ವೇಷದ ಅಪರಾಧಗಳು ಮತ್ತು ಬಂದೂಕು ಹಿಂಸಾಚಾರ ಸೇರಿದಂತೆ ಕಾಳಜಿಯ ವಿಷಯಗಳನ್ನು ನಾವು ನಿಯಮಿತವಾಗಿ ಹೈಲೈಟ್ ಮಾಡಿದ್ದೇವೆ' ಎಂದು ಹೇಳಿದ್ದಾರೆ.

ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದ 2021 ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ( The US State Department 2021 Report on International Religious Freedom ) ವರದಿಯು ಭಾರತದಲ್ಲಿ, ಹತ್ಯೆಗಳು, ಹಲ್ಲೆಗಳು ಮತ್ತು ಬೆದರಿಕೆ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಮೇಲಿನ ದಾಳಿಗಳು ವರ್ಷವಿಡೀ ಮುಂದುವರೆದಿದೆ ಎಂದು ಆರೋಪಿಸಿದೆ. ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ( Antony Blinken ) ಬಿಡುಗಡೆ ಮಾಡಿದ ವರದಿಯು ಪ್ರಪಂಚದಾದ್ಯಂತದ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿ ಮತ್ತು ಉಲ್ಲಂಘನೆಗಳ ಬಗ್ಗೆ ಪ್ರಸ್ತಾಪ ಮಾಡಿದೆ.

ಭಾರತದಲ್ಲಿ ಅಲ್ಪಸಂಖ್ಯಾತರು, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಹೆಚ್ಚಳ ಎಂದ ಅಮೆರಿಕ!

ವರದಿಯ ಭಾರತ ವಿಭಾಗದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಯಾವುದೇ ಅಭಿಪ್ರಾಯವನ್ನು ವರದಿ ನೀಡಿಲ್ಲ, ಆದರೆ ಮಾಧ್ಯಮಗಳಲ್ಲಿ ಮತ್ತು ಭಾರತ ಸರ್ಕಾರದ ವರದಿಗಳಲ್ಲಿ ಕಾಣಿಸಿಕೊಂಡದ್ದನ್ನು ವರದಿಯಲ್ಲಿ ದಾಖಲು ಮಾಡಲಾಗಿದೆ. ಇದು ವಿವಿಧ ಲಾಭೋದ್ದೇಶವಿಲ್ಲದ ಸಂಸ್ಥೆಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳ ಮೇಲಿನ ದಾಳಿಗಳ ಆರೋಪಗಳನ್ನು ಸಾಕಷ್ಟು ಉಲ್ಲೇಖ ಮಾಡಿದೆ. ಆದರೆ ಇದು ಅಧಿಕಾರಿಗಳ ತನಿಖೆಯ ಫಲಿತಾಂಶಗಳು ಮತ್ತು ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಹೆಚ್ಚಾಗಿ ಮೌನವಾಗಿದ್ದು, ತನ್ನ ವರದಿಯಲ್ಲಿ ಇದನ್ನು ದಾಖಲಿಸಿಲ್ಲ.

ಸೆಪ್ಟೆಂಬರ್‌ನಲ್ಲಿ Gen Bipin Rawat ಭೇಟಿಯಾಗಿದ್ದನ್ನು ನೆನಪಿಸಿಕೊಂಡ ಅಮೆರಿಕದ ರಕ್ಷಣಾ ಕಾರ್ಯದರ್ಶಿ!

"ವರ್ಷವಿಡೀ ಹತ್ಯೆಗಳು, ಹಲ್ಲೆಗಳು ಮತ್ತು ಬೆದರಿಕೆ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ಮೇಲೆ ದಾಳಿಗಳು ನಡೆದಿವೆ. ಇವುಗಳಲ್ಲಿ ಗೋಹತ್ಯೆ ಅಥವಾ ಗೋಮಾಂಸದ ವ್ಯಾಪಾರದ ಆರೋಪದ ಆಧಾರದ ಮೇಲೆ ಹಿಂದೂಯೇತರರ ವಿರುದ್ಧ 'ಗೋ ಜಾಗರೂಕತೆಯ' ಘಟನೆಗಳು ಸೇರಿವೆ" ಎಂದು ವರದಿಯ ಭಾರತೀಯ ವಿಭಾಗದಲ್ಲಿ ಬರೆಯಲಾಗಿದೆ. ದೇಶದಲ್ಲಿ ಸಾಂವಿಧಾನಿಕವಾಗಿ ಸಂರಕ್ಷಿತ ಹಕ್ಕುಗಳ ಸ್ಥಿತಿಯ ಬಗ್ಗೆ ಯಾವುದೇ ವಿದೇಶಿ ಸರ್ಕಾರಕ್ಕೆ ಕಾಮೆಂಟ್ ಮಾಡುವ ಹಕ್ಕಿಲ್ಲ ಎಂದು ಭಾರತ ಈಗಾಗಲೇ ಹಲವು ಬಾರಿ ತಿಳಿಸಿದೆ. 

 

Latest Videos
Follow Us:
Download App:
  • android
  • ios