ನ್ಯೂಯಾರ್ಕ್(ನ.06):  ಅಮೆರಿಕ ಅಧ್ಯಕ್ಷೀಯ ಚುನಾವಣೆಯನ್ನು ವಿಶ್ವವೆ ಗಮನಿಸುತ್ತಿದೆ. ಅಮೆರಿಕ ಚುನಾವಣಾ ಫಲಿತಾಂಶ ಕೇವಲ ಅಮೆರಿಕನ್ನರಿಗೆ ಮಾತ್ರವಲ್ಲ, ಇತರ ರಾಷ್ಟ್ರಕ್ಕೂ ಮಹತ್ವದ್ದಾಗಿದೆ. ಡೋನಾಲ್ಡ್ ಟ್ರಂಪ್ ಹಾಗೂ ಜೋ ಬೈಡೆನ್ ನಡುವಿನ ಜಿದ್ದಾಜಿದ್ದಿನ ನಡುವೆ ಇದೀಗ ಅಕ್ರಮದ ವಾಸನೆ ಬಲವಾಗುತ್ತಿದೆ.  ಮತದಾನದ ಬ್ಯಾಲೆಟ್ ತಲುಪಲು ವಿಳಂಭವಾಗಿರುವ ಕುರಿತು ಬಂದ ದೂರಿನ ಮೇರೆ ನ್ಯೂಯಾರ್ಕ್ ಅಂಚೆ ಅಧಿಕಾರಿಯನ್ನು ಕೆನಡಾ ಗಡಿಯಲ್ಲಿ ಬಂಧಿಸಲಾಗಿದೆ.

ಈ ಭವಿಷ್ಯ ನಿಜವಾದರೆ ಅಮೆರಿಕಾದಲ್ಲಿ ಗೆಲ್ಲೋರ್ಯಾರು? 13 KEY ಯಲ್ಲಿ ಅಡಗಿದೆ ರಹಸ್ಯ!

ಅಂಚೆ ಟ್ರಕ್ ಮೂಲಕ ಕದ್ದ ಬ್ಯಾಲೆಟ್‌ಗಳನ್ನು ಒಯ್ಯುತ್ತಿರುವ ವೇಳೆ ಕಸ್ಟಮ್ ಹಾಗೂ ಬಾರ್ಡರ್ ಪ್ರೊಟೆಕ್ಷನ್ ಪೊಲೀಸರು ವಾಹನ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಬ್ಯಾಲೆಟ್ ಇರುವುದು ಪತ್ತೆಯಾಗಿದೆ. ಸಂಪೂರ್ಣ ವಾಹನ ಪರಿಶೀಲಿಸಿ ಕದ್ದ ಬ್ಯಾಲೆಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಎಸೆಗಿದ ಅಂಚೆ ಅಧಿಕಾರಿಯನ್ನು ನ್ಯೂಯಾರ್ಕ್‌ನ ಬಫಲೊದ ಬ್ರಾಂಡನ್ ವಿಲ್ಸನ್(27) ಎಂದು ಗುರುತಿಸಲಾಗಿದೆ.  ಅಂಚೆ ಅಧಿಕಾರಿ ಅಕ್ರಮ ಎಸೆಗಿರುವುದು ಗಂಭೀರ ಅಪರಾಧವಾಗಿದೆ. ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಎದುರಾದ ಕಂಟಕವಾಗಿದೆ ಎಂದು ಯುಎಸ್ ಆರಾರ್ನಿ ಜೇಮ್ಸ್ ಕೆನಡಿ ಹೇಳಿದ್ದಾರೆ.

ಬೈಡೆನ್‌ಗೆ ಭಾರತೀಯರದ್ದೇ ಬಲ! ಇವರಿಬ್ಬರ ಸಲಹೆ ಇಲ್ದೇ ಇದ್ರೆ ಏನೂ ನಡೆಯಲ್ಲ!..

ನವೆಂಬರ್ 3ರಂದುು ಸಂಜೆ 7ಗಂಟೆ ಬಾರ್ಡರ್ ಪೊಲೀಸರು ವಾಹನಗಳ ತಪಾಸಣೆ ಮಾಡಿದ್ದಾರೆ. ಈ ವೇಳೆ ಅಂಚೆ ಟ್ರಕ್ ವಾಹನದೊಳಗೆ ಬ್ಯಾಲೆಟ್ ಇರುವುದು ಪತ್ತೆಯಾಗಿದೆ. ಹೀಗಾಗಿ ಅಂಚೆ ಅಧಿಕಾರಿ ಬ್ರಾಂಡನ್ ವಿಲ್ಸನ್ ವಶಕ್ಕೆ ಪಡೆದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತಾನು ಅಂಚೆ ಕಚೇರಿಯಲ್ಲಿ ಬ್ಯಾಲೆಟ್ ಹಿಂತಿರುಗಿಸಲು ಮರೆತಿರುವುದಾಗಿ ಉತ್ತರ ನೀಡಿದ್ದಾರೆ. ಆದರೆ ಅನುಮಾನಗೊಂಡ ಪೊಲೀಸರು ವಿಲ್ಸನ್‌ನ್ನು ಬಂಧಿಸಿದ್ದಾರೆ.

ಅಕ್ರಮ ಸಾಬೀತಾದರೆ ಬ್ರಾಂಡನ್ ವಿಲ್ಸನ್‌ಗೆ 5 ವರ್ಷ ಜೈಲು ಹಾಗೂ 2.50 ಲಕ್ಷ ಅಮೆರಿಕನ್ ಡಾಲರ್ ದಂಢ ವಿಧಿಸುವ ಸಾಧ್ಯತೆ ಇದೆ.